World Toilet Day 2024: ಬಯಲು ಮಲವಿಸರ್ಜನೆಯು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು, ಶೌಚಾಲಯಗಳನ್ನು ಹೇಗೆ ಸ್ವಚ್ಛವಾಗಿಡುವುದು?

ವಿಶ್ವ ಶೌಚಾಲಯ ದಿನವನ್ನು ವಿಶ್ವ ಶೌಚಾಲಯ ಸಂಸ್ಥೆ 2001 ರಲ್ಲಿ ಜಾರಿಗೆ ತಂದಿತು. ಅಂದಿನಿಂದ ಹನ್ನೆರಡು ವರ್ಷಗಳ ನಂತರ, 2013 ರಲ್ಲಿ, ಯುಎನ್ ಜನರಲ್ ಅಸೆಂಬ್ಲಿ ವಿಶ್ವ ಶೌಚಾಲಯ ದಿನವನ್ನು ಅಧಿಕೃತವಾಗಿ ಘೋಷಿಸಿತು. ಬಳಿಕ ಈ ದಿನವನ್ನು ಪ್ರತಿವರ್ಷ ನ. 19 ರಂದು ಆಚರಣೆ ಮಾಡಲಾಗುತ್ತಿದೆ. 2001ರಲ್ಲಿ ವಿಶ್ವ ಶೌಚಾಲಯ ಸಂಘಟನೆ ಆರಂಭಿಸಿದ ಈ ದಿನವನ್ನು ವಿಶ್ವಸಂಸ್ಥೆ 2013ರಲ್ಲಿ ವಿಶ್ವ ದಿನದ ಮಾನ್ಯತೆ ನೀಡಿತು. ಒಂದು ಘೋಷ ವಾಕ್ಯದೊಂದಿಗೆ ವಿಶ್ವಸಂಸ್ಥೆ ಜಲ ಕಾರ್ಯ ಪಡೆ ಪ್ರತೀ ವರ್ಷವೂ ಈ ದಿನದಂದು ಶೌಚಕ್ಕೆ ಸಂಬಂಧಿ ಅಭಿಯಾನ ನಡೆಸುತ್ತದೆ. ಸರಿಯಾದ ನೈರ್ಮಲ್ಯ ಪಡೆಯುವುದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕಾಗಿರುವುದರಿಂದ ಈ ಬಗ್ಗೆ ತಿಳಿದು ಎಲ್ಲರ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬ ವ್ಯಕ್ತಿಯ ಆದ್ಯ ಕರ್ತವ್ಯವಾಗಿದೆ.

World Toilet Day 2024: ಬಯಲು ಮಲವಿಸರ್ಜನೆಯು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು, ಶೌಚಾಲಯಗಳನ್ನು ಹೇಗೆ ಸ್ವಚ್ಛವಾಗಿಡುವುದು?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 19, 2024 | 9:37 AM

ಮನುಷ್ಯ ವಿಸರ್ಜಿಸುವ ಮಲ, ಸಾವು ತರಬಹುದಾದ ಕಾಯಿಲೆಗಳನ್ನು ಹರಡುತ್ತದೆ. ಇದು ಈಗ ಹಲವರಿಗೆ ತಿಳಿದಿರಬಹುದು ಆದರೆ ಹಿಂದೆ ಈ ಬಗ್ಗೆ ಜನರಿಗೆ ಹೆಚ್ಚಿನ ತಿಳುವಳಿಕೆ ಇರಲಿಲ್ಲ. ಆದರೆ ನೈರ್ಮಲ್ಯಕ್ಕೆ ಹೆಚ್ಚು ಆದ್ಯತೆ ನೀಡಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ವಿಶ್ವ ಸಂಸ್ಥೆಯೂ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಶೌಚಾಲಯದ ಮಹತ್ವ, ಜಾಗೃತಿ, ಅರಿವು ಮೂಡಿಸುವ ನಿಟ್ಟಿನಲ್ಲಿ ಭಾರತದ ಸಾಧನೆ 2014 ರ ಬಳಿಕ ಪ್ರಶಂಸನೀಯವಾಗಿದೆ. ‘ಸ್ವಚ್ಛ ಭಾರತ ಅಭಿಯಾನ’ದಡಿ ಶೌಚಾಲಯದ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದಲ್ಲದೆ, ಶೌಚಾಲಯ ನಿರ್ಮಿಸಿಕೊಳ್ಳಲು ಕೇಂದ್ರ ಸರ್ಕಾರ ಧನಸಹಾಯವನ್ನೂ ನೀಡುತ್ತಿದೆ.

ವಿಶ್ವ ಶೌಚಾಲಯ ದಿನವನ್ನು ವಿಶ್ವ ಶೌಚಾಲಯ ಸಂಸ್ಥೆ 2001 ರಲ್ಲಿ ಜಾರಿಗೆ ತಂದಿತು. ಅಂದಿನಿಂದ ಹನ್ನೆರಡು ವರ್ಷಗಳ ನಂತರ, 2013 ರಲ್ಲಿ, ಯುಎನ್ ಜನರಲ್ ಅಸೆಂಬ್ಲಿ ವಿಶ್ವ ಶೌಚಾಲಯ ದಿನವನ್ನು ಅಧಿಕೃತವಾಗಿ ಘೋಷಿಸಿತು. ಬಳಿಕ ಈ ದಿನವನ್ನು ಪ್ರತಿವರ್ಷ ನ. 19 ರಂದು ಆಚರಣೆ ಮಾಡಲಾಗುತ್ತಿದೆ. 2001ರಲ್ಲಿ ವಿಶ್ವ ಶೌಚಾಲಯ ಸಂಘಟನೆ ಆರಂಭಿಸಿದ ಈ ದಿನವನ್ನು ವಿಶ್ವಸಂಸ್ಥೆ 2013ರಲ್ಲಿ ವಿಶ್ವ ದಿನದ ಮಾನ್ಯತೆ ನೀಡಿತು. ಒಂದು ಘೋಷ ವಾಕ್ಯದೊಂದಿಗೆ ವಿಶ್ವಸಂಸ್ಥೆ ಜಲ ಕಾರ್ಯ ಪಡೆ ಪ್ರತೀ ವರ್ಷವೂ ಈ ದಿನದಂದು ಶೌಚಕ್ಕೆ ಸಂಬಂಧಿ ಅಭಿಯಾನ ನಡೆಸುತ್ತದೆ. ಸರಿಯಾದ ನೈರ್ಮಲ್ಯ ಪಡೆಯುವುದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕಾಗಿರುವುದರಿಂದ ಈ ಬಗ್ಗೆ ತಿಳಿದು ಎಲ್ಲರ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬ ವ್ಯಕ್ತಿಯ ಆದ್ಯ ಕರ್ತವ್ಯವಾಗಿದೆ.

ಬಯಲು ಮಲವಿಸರ್ಜನೆಯು ಲಕ್ಷಾಂತರ ಜನರ ಜೀವನದ ಮೇಲೆ ಪರಿಣಾಮ ಬೀರುವ ಮತ್ತು ಅನೇಕ ರೋಗಗಳಿಗೆ ಕಾರಣವಾಗುವ ಗಂಭೀರ ಸಮಸ್ಯೆಯಾಗಿದೆ. ಈ ಕಾರಣದಿಂದಾಗಿ ಮಹಿಳೆಯರು ಹೆಚ್ಚು ತೊಂದರೆ ಅನುಭವಿಸಬೇಕಾಗುತ್ತದೆ, ಇದರಿಂದಾಗಿ ಅವರು ದೈಹಿಕವಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದಲ್ಲದೆ ಬಯಲು ಮಲವಿಸರ್ಜನೆಯು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು, ಹಾಗಾಗಿ ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದಲ್ಲದೆ ಶೌಚಾಲಯಗಳನ್ನು ಹೇಗೆ ಸ್ವಚ್ಛವಾಗಿಡುವುದು ಎಂದು ತಿಳಿಯಿರಿ.

ಇದನ್ನೂ ಓದಿ: ಮಧುಮೇಹ ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತದೆ; ಸಂಶೋಧನೆ

ಬಯಲು ಮಲವಿಸರ್ಜನೆಯ ಅಪಾಯಗಳು

ಅತಿಸಾರ: ಮಕ್ಕಳಲ್ಲಿ ಅಪೌಷ್ಟಿಕತೆಗೆ ಅತಿಸಾರವು ಒಂದು ಪ್ರಮುಖ ಕಾರಣವಾಗಿದೆ ಮತ್ತು ಸಾವಿಗೆ ಕಾರಣವಾಗಬಹುದು.

ಕಾಲರಾ: ಕಾಲರಾ ಒಂದು ಗಂಭೀರ ಸೋಂಕು, ಇದು ಕಲುಷಿತ ನೀರು ಅಥವಾ ಆಹಾರದ ಸೇವನೆಯಿಂದ ಉಂಟಾಗುತ್ತದೆ.

ಟೈಫಾಯಿಡ್: ಟೈಫಾಯಿಡ್ ಎಂಬುದು ಬ್ಯಾಕ್ಟೀರಿಯಾದಿಂದ ಉಂಟಾಗುವ ಜ್ವರವಾಗಿದ್ದು, ಇದು ಕಲುಷಿತ ಆಹಾರ ಅಥವಾ ನೀರಿನ ಸೇವನೆಯಿಂದ ಹರಡುತ್ತದೆ.

ಹೆಪಟೈಟಿಸ್ ಎ: ಹೆಪಟೈಟಿಸ್ ಎ ಎಂಬುದು ಕಲುಷಿತ ಆಹಾರ ಅಥವಾ ನೀರಿನ ಸೇವನೆಯಿಂದ ಉಂಟಾಗುವ ಸಾಂಕ್ರಾಮಿಕ ಯಕೃತ್ತಿನ ಕಾಯಿಲೆಯಾಗಿದೆ.

ಶೌಚಾಲಯವನ್ನು ಸ್ವಚ್ಛವಾಗಿಡುವುದು ಹೇಗೆ?

ನಿಯಮಿತವಾಗಿ ಸ್ವಚ್ಛಗೊಳಿಸಿ: ಶೌಚಾಲಯವನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಇದಕ್ಕೆ ನೀವು ಟಾಯ್ಲೆಟ್ ಕ್ಲೀನರ್ ಅನ್ನು ಬಳಸಬಹುದು ಅಥವಾ ನಿಂಬೆ ಮತ್ತು ಉಪ್ಪಿನ ದ್ರಾವಣವನ್ನು ತಯಾರಿಸಿ ಸ್ವಚ್ಛಗೊಳಿಸಬಹುದು.

ಫ್ಲಶ್ ಮಾಡಿದ ನಂತರ ಸೀಟ್ ಅನ್ನು ಮುಚ್ಚಿ: ಶೌಚಾಲಯವನ್ನು ಬಳಸಿದ ನಂತರ ಯಾವಾಗಲೂ ಸೀಟನ್ನು ಮುಚ್ಚಿ ಫ್ಲಶ್ ಮಾಡಿ.

ಟಾಯ್ಲೆಟ್ ಪೇಪರ್ ಬಳಸಿ: ಟಾಯ್ಲೆಟ್ ಪೇಪರ್ ಬಳಸಿ ಮತ್ತು ಅದನ್ನು ಶೌಚಾಲಯದಲ್ಲೇ ಫ್ಲಶ್ ಮಾಡಿ.

ಶೌಚಾಲಯದಲ್ಲಿ ಬೇರೆ ಯಾವುದೇ ವಸ್ತುಗಳನ್ನು ಇಡಬೇಡಿ: ಎಣ್ಣೆ, ಬಣ್ಣ ಅಥವಾ ಯಾವುದೇ ರಾಸಾಯನಿಕಗಳಂತಹ ಇತರ ಯಾವುದೇ ವಸ್ತುಗಳನ್ನು ಶೌಚಾಲಯದಲ್ಲಿ ಇಡಬೇಡಿ.

ಶೌಚಾಲಯದ ಸುತ್ತಲಿನ ಸ್ಥಳವನ್ನು ಸ್ವಚ್ಛವಾಗಿರಿಸಿಕೊಳ್ಳಿ: ಶೌಚಾಲಯದ ಸುತ್ತಲಿನ ಸ್ಥಳವನ್ನು ಸಹ ಸ್ವಚ್ಛವಾಗಿಡುವುದು ಬಹಳ ಮುಖ್ಯ.

ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಯಾವುದೇ ಮಾಹಿತಿಯನ್ನು ಅನುಸರಿಸುವ ಮೊದಲು ತಜ್ಞರನ್ನು ಸಂಪರ್ಕಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ