ಋತುಚಕ್ರ ತಡವಾಗಲು ಇದೆ ಕಾರಣ! ಯಾವ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು

ಋತುಚಕ್ರ ಅಥವಾ ಮುಟ್ಟು ತಡವಾಗುತ್ತಿರುವುದು ಕೂಡ ಒಂದು ಸಮಸ್ಯೆಯಾಗಿದೆ. ಕೆಲವೊಮ್ಮೆ ಇದು ಗರ್ಭಧಾರಣೆಯ ಸಂಕೇತವಾಗಿರಬಹುದು. ಅದರ ಹೊರತಾಗಿ ಅನೇಕ ಮಹಿಳೆಯರಿಗೆ, ಬೇರೆ ಬೇರೆ ಕಾರಣಗಳಿಗೆ ಮುಟ್ಟು ಮುಂದೆ ಹೋಗಬಹುದು. ಹೆಚ್ಚಿನ ಋತುಚಕ್ರಗಳು 28 ದಿನಗಳವರೆಗೆ ಇದ್ದರೂ, 21- 35 ದಿನಗಳ ವರೆಗಿನ ಮುಟ್ಟನ್ನು ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಮಹಿಳೆಯ ದೇಹವು ಸಾಕಷ್ಟು ಬದಲಾವಣೆಗಳಿಗೆ ಒಳಗಾಗಬಹುದು. ಇದು ಆಕೆಯ ಮುಟ್ಟಿನ ಮೇಲೆ ಪ್ರಭಾವ ಬೀರಬಹುದು. ಆದರೆ ಋತುಚಕ್ರ 35 ದಿನಗಳಿಗಿಂತ ಹೆಚ್ಚು ದಿನಗಳ ಕಾಲ ಮುಂದೆ ಹೋದರೆ ಅಥವಾ ತಪ್ಪಿದರೆ ಅದಕ್ಕೆ ಕಾರಣವೇನು? ಈ ಬಗ್ಗೆ ಯಾವ ರೀತಿ ಎಚ್ಚರಿಕೆ ವಹಿಸಬೇಕು? ಇಲ್ಲಿದೆ ಮಾಹಿತಿ.

ಋತುಚಕ್ರ ತಡವಾಗಲು ಇದೆ ಕಾರಣ! ಯಾವ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 18, 2024 | 3:10 PM

ಇತ್ತೀಚಿನ ಜೀವನಶೈಲಿ, ಆಹಾರದಲ್ಲಿ ಮಾಡಿಕೊಂಡ ಬದಲಾವಣೆಗಳಿಂದಾಗಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಯುವ ಜನತೆಯನ್ನು ಕಾಡುತ್ತಿದೆ. ಅದರಲ್ಲಿ ಋತುಚಕ್ರ ಅಥವಾ ಮುಟ್ಟು ತಡವಾಗುತ್ತಿರುವುದು ಕೂಡ ಒಂದು ಸಮಸ್ಯೆಯಾಗಿದೆ. ಕೆಲವೊಮ್ಮೆ ಇದು ಗರ್ಭಧಾರಣೆಯ ಸಂಕೇತವಾಗಿರಬಹುದು. ಅದರ ಹೊರತಾಗಿ ಅನೇಕ ಮಹಿಳೆಯರಿಗೆ, ಬೇರೆ ಬೇರೆ ಕಾರಣಗಳಿಗೆ ಮುಟ್ಟು ಮುಂದೆ ಹೋಗಬಹುದು. ಹೆಚ್ಚಿನ ಋತುಚಕ್ರಗಳು 28 ದಿನಗಳವರೆಗೆ ಇದ್ದರೂ, 21- 35 ದಿನಗಳ ವರೆಗಿನ ಮುಟ್ಟನ್ನು ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಮಹಿಳೆಯ ದೇಹವು ಸಾಕಷ್ಟು ಬದಲಾವಣೆಗಳಿಗೆ ಒಳಗಾಗಬಹುದು. ಇದು ಆಕೆಯ ಮುಟ್ಟಿನ ಮೇಲೆ ಪ್ರಭಾವ ಬೀರಬಹುದು. ಆದರೆ ಋತುಚಕ್ರ 35 ದಿನಗಳಿಗಿಂತ ಹೆಚ್ಚು ದಿನಗಳ ಕಾಲ ಮುಂದೆ ಹೋದರೆ ಅಥವಾ ತಪ್ಪಿದರೆ ಅದಕ್ಕೆ ಕಾರಣವೇನು? ಈ ಬಗ್ಗೆ ಯಾವ ರೀತಿ ಎಚ್ಚರಿಕೆ ವಹಿಸಬೇಕು? ಇಲ್ಲಿದೆ ಮಾಹಿತಿ.

1. ಹಾರ್ಮೋನುಗಳ ಬದಲಾವಣೆಗಳು

ಋತುಚಕ್ರವು ಸಾಮಾನ್ಯವಾಗಿ ತಡವಾಗುವುದಕ್ಕೆ ಮುಖ್ಯ ಕಾರಣ, ಹಾರ್ಮೋನುಗಳ ಬದಲಾವಣೆಗಳು. ಪಾಲಿಸಿಸ್ಟಿಕ್ ಓವರಿ ಡಿಸಾರ್ಡರ್ (ಪಿಸಿಒಡಿ) ಮತ್ತು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್, ಮಹಿಳೆಗೆ ಮಾಸಿಕ ಋತುಚಕ್ರ ಸರಾಸರಿಗಿಂತ ದೀರ್ಘ ಕಾಲ ತಪ್ಪಲು ಅಥವಾ ಮುಂದೆ ಹೋಗಲು ಮುಖ್ಯ ಕಾರಣವಾಗಿದೆ. ಹಾರ್ಮೋನುಗಳ ಅಸಮತೋಲನದ ಪರಿಣಾಮವಾಗಿ ಅಂಡಾಶಯಗಳ ಮೇಲೆ ಸಿಸ್ಟ್ ಗಳು ರೂಪುಗೊಂಡಾಗ ಪಿಸಿಒಎಸ್ ಮತ್ತು ಪಿಸಿಒಡಿಯಂತಹ ಹಾರ್ಮೋನುಗಳ ಸಮಸ್ಯೆಗಳು ಕಂಡುಬರುತ್ತದೆ. ಕೆಲವು ಮಹಿಳೆಯರು ಪುರುಷ ಹಾರ್ಮೋನ್ ಆಂಡ್ರೊಜೆನ್ ಅನ್ನು ಅತಿಯಾಗಿ ಉತ್ಪಾದಿಸಬಹುದು, ಇದು ಋತುಸ್ರಾವವನ್ನು ಅಡ್ಡಿಪಡಿಸುತ್ತದೆ ಮತ್ತು ಫಲವತ್ತತೆ ಸಮಸ್ಯೆಗಳನ್ನು ಸಹ ತರುತ್ತದೆ. ಜೀವನಶೈಲಿ ಬದಲಾವಣೆಗಳು, ಅವಶ್ಯಕ ಔಷಧಿಗಳನ್ನು ಅನುಸರಿಸುವುದರಿಂದ ನಿಮ್ಮ ಋತುಚಕ್ರವನ್ನು ಮತ್ತೆ ಹಳಿಗೆ ತರಬಹುದು.

2. ಒತ್ತಡ

ನಿಮ್ಮ ನಿಯಮಿತ ಋತುಚಕ್ರಕ್ಕೆ ಒತ್ತಡ ಅಡ್ಡಿಯಾಗಬಹುದು. ಕೆಲವು ಸಂದರ್ಭಗಳಲ್ಲಿ ಮಹಿಳೆ ತೀವ್ರ ಒತ್ತಡಕ್ಕೆ ಒಳಗಾದಾಗ, ಅವಳಿಗೆ 2 ತಿಂಗಳ ವರೆಗೆ ಋತುಚಕ್ರ ಆಗದೆಯೇ ಹೋಗಬಹುದು. ಈ ರೀತಿಯಾಗಲು ಒತ್ತಡದ ಹಾರ್ಮೋನುಗಳು ಕಾರಣ ಇದು ಅಧಿಕ ಬೊಜ್ಜಿಗೂ ಕಾರಣವಾಗಬಹುದು.

3. ರಕ್ತಹೀನತೆ ಮತ್ತು ಕಬ್ಬಿಣದ ಕೊರತೆ

ಮಹಿಳೆಯರಲ್ಲಿ ರಕ್ತಹೀನತೆ ಮತ್ತು ಕಬ್ಬಿಣದ ಕೊರತೆ ಸಾಮಾನ್ಯವಾಗಿ ಕಂಡು ಬರುತ್ತದೆ. ಈ ರೀತಿಯ ಸಮಸ್ಯೆ ದೇಹದಲ್ಲಿ ರಕ್ತದ ಹರಿವಿನ ಮೇಲೆ ಪರಿಣಾಮ ಬೀರಬಹುದು, ಇದು ಋತುಚಕ್ರಕ್ಕೆ ಅಡ್ಡಿಯಾಗಬಹುದು.

4. ಕಡಿಮೆ ದೇಹದ ತೂಕ

ನಿಮ್ಮ ವಯಸ್ಸಿಗೆ ಸಾಮಾನ್ಯವಾಗಿ ಇರಬೇಕಾದ ದೇಹದ ತೂಕಕ್ಕಿಂತ ಕಡಿಮೆ ಇದ್ದಾಗ ಅಂಡೋತ್ಪತ್ತಿ ಸೇರಿದಂತೆ ದೇಹದ ಪ್ರಮುಖ ಕಾರ್ಯನಿರ್ವಹಣೆಯಲ್ಲಿ ಬದಲಾವಣೆಗಳು ಆಗಬಹುದು. ಹೀಗಾಗಿ, ಕಡಿಮೆ ತೂಕ ಮಹಿಳೆಯರಿಗೆ ಆಗಾಗ ಮುಟ್ಟಿನ ಸಮಸ್ಯೆಗಳಿಂದ ಬಳಲುವಂತೆ ಮಾಡಬಹುದು.

ಇದನ್ನೂ ಓದಿ: ಮಧುಮೇಹ ರೋಗಿಗಳಿಗೆ ನಸುಕಂದು ಮಚ್ಚೆಗಳು ಏಕೆ ಬರುತ್ತವೆ?

6. ದೀರ್ಘಕಾಲದ ಕಾಯಿಲೆಗಳು ಅಥವಾ ಆಘಾತ

ಮಧುಮೇಹ, ಸೀಲಿಯಾಕ್ ಕಾಯಿಲೆಗಳು ಮತ್ತು ಕೆಲವು ರೀತಿಯ ಕರುಳಿನ ಸಮಸ್ಯೆಗಳಿಂದ ಬಳಲುತ್ತಿರುವವರಲ್ಲಿ ಹಾರ್ಮೋನುಗಳ ಅಸಮತೋಲನದಿಂದಾಗಿ ಮುಟ್ಟಿನ ಸಮಸ್ಯೆಗಳು ಅಧಿಕವಾಗಬಹುದು. ಆಘಾತ, ಅಥವಾ ತೀವ್ರವಾದ ಒತ್ತಡವೂ ಕೂಡ ಋತುಚಕ್ರದ ವಿಳಂಬಕ್ಕೆ ಕಾರಣವಾಗಬಹುದು.

5. ಪೆರಿ-ಮೆನೋಪಾಸ್

ಇದು ದೇಹವು ಋತುಬಂಧಕ್ಕೆ ಪರಿವರ್ತನೆಯಾಗಲು ಪ್ರಾರಂಭಿಸುವ ಸಮಯವನ್ನು ಸೂಚಿಸುತ್ತದೆ, ಅಂದರೆ ಮುಟ್ಟಿನ ಅಂತ್ಯ. ಹೆಚ್ಚಿನ ಮಹಿಳೆಯರು ಇದನ್ನು 40- 55ನೇ ವಯಸ್ಸಿನ ನಡುವೆ ಅನುಭವಿಸಿದರೆ, ಕೆಲವು ಮಹಿಳೆಯರು 40 ವರ್ಷಕ್ಕಿಂತ ಮುಂಚಿತವಾಗಿ ಪೆರಿಮೆನೊಪಾಸಲ್ ರೋಗಲಕ್ಷಣಗಳನ್ನು ಎದುರಿಸುತ್ತಾರೆ. ಹಾಗಾಗಿ ಈ ಸಮಯದಲ್ಲಿ ಋತುಚಕ್ರದ ದಿನಗಳು ಬದಲಾಗುತ್ತದೆ. ಇದು ಸಾಮಾನ್ಯವಾಗಿ ನಿಮ್ಮ ಫಲವತ್ತತೆ ಕ್ಷೀಣಿಸುತ್ತಿದೆ ಎಂಬುದರ ಸಂಕೇತವಾಗಿದೆ, ಮತ್ತು ನಿಮ್ಮ ಅಂಡಾಣುಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವುದರ ಸೂಚಕವಾಗಿದೆ.

7.ಥೈರಾಯ್ಡ್

ದೇಹದ ಥೈರಾಯ್ಡ್ ಗ್ರಂಥಿಯು ಚಯಾಪಚಯ, ಹಾರ್ಮೋನುಗಳ ಪ್ರಚೋದನೆ ಮತ್ತು ಸಂತಾನೋತ್ಪತ್ತಿಯನ್ನು ನಿಯಂತ್ರಿಸುತ್ತದೆ. ನಿಷ್ಕ್ರಿಯ ಅಥವಾ ಅತಿಯಾದ ಥೈರಾಯ್ಡ್ ಗ್ರಂಥಿಯು ಸಮಸ್ಯೆಗಳನ್ನು ಉಂಟುಮಾಡಬಹುದು ಜೊತೆಗೆ ಋತುಚಕ್ರದ ವಿಳಂಬಕ್ಕೆ ಕಾರಣವಾಗಬಹುದು. ಥೈರಾಯ್ಡ್ ಗೆ ಸಂಬಂಧಿಸಿದ ಔಷಧಿಗಳು ಸಾಮಾನ್ಯವಾಗಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆಯಾದರೂ, ಥೈರಾಯ್ಡ್ ಮಟ್ಟ ಮತ್ತು ರೋಗಲಕ್ಷಣಗಳನ್ನು ನಿಯಮಿತವಾಗಿ ಪರೀಕ್ಷಿಸಬೇಕು ಮತ್ತು ಕಾಳಜಿ ವಹಿಸಬೇಕು.

8. ಅತಿಯಾದ ವ್ಯಾಯಾಮ

ಕ್ರೀಡಾಪಟುಗಳು ಮತ್ತು ತರಬೇತಿ ಪಡೆದ ಕ್ರೀಡಾಪಟುಗಳು, ಅತಿ ಹೆಚ್ಚು ವ್ಯಾಯಾಮ ಮಾಡುತ್ತಾರೆ ಜೊತೆಗೆ ಕಡಿಮೆ ಕ್ಯಾಲೊರಿ ಇರುವ ಆಹಾರವನ್ನು ಸೇವನೆ ಮಾಡುತ್ತಾರೆ ಇದು ನಿಯಮಿತ ಋತುಚಕ್ರಕ್ಕೆ ಅಡ್ಡಿಯಾಗಬಹುದು.

9. ಬೊಜ್ಜು

ಕಡಿಮೆ ದೇಹದ ತೂಕವು ದೇಹದ ಕಾರ್ಯನಿರ್ವಹಣೆ ಮತ್ತು ಋತುಸ್ರಾವಕ್ಕೆ ಅಡ್ಡಿಪಡಿಸುವಂತೆಯೇ, ಅಧಿಕ ತೂಕ ಅಥವಾ ಬೊಜ್ಜು ಸಹ ಹಾರ್ಮೋನುಗಳ ಬದಲಾವಣೆಗೆ ಕಾರಣವಾಗಬಹುದು. ಹೆಚ್ಚುವರಿ ದೇಹದ ತೂಕವು ದೇಹದಲ್ಲಿ ಉರಿಯೂತವನ್ನು ಪ್ರಚೋದಿಸುತ್ತದೆ, ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ ಈಸ್ಟ್ರೊಜೆನ್ ನ ಅತಿಯಾದ ಉತ್ಪಾದನೆಗೆ ಕಾರಣವಾಗುತ್ತದೆ.

ಎಷ್ಟು ತಡವಾಗಿದೆ? ಯಾವಾಗ ಚಿಂತಿಸಬೇಕು?

ವೈಜ್ಞಾನಿಕವಾಗಿ, ನಿಮ್ಮ ಕೊನೆಯ ಋತುಚಕ್ರವು ಕೊನೆಗೊಂಡು 30 ದಿನಗಳಿಗಿಂತ ಹೆಚ್ಚು ಸಮಯವಾಗಿದ್ದರೆ, ಮತ್ತು ನಿಮ್ಮ ಋತುಚಕ್ರದ ಮೇಲೆ ಪರಿಣಾಮ ಬೀರುವ ಆರೋಗ್ಯ ಸ್ಥಿತಿ ನಿಮ್ಮದಲ್ಲದಿದ್ದರೆ ಋತುಚಕ್ರವನ್ನು ತಡ ಅಥವಾ ವಿಳಂಬವೆಂದು ಪರಿಗಣಿಸಲಾಗುತ್ತದೆ. ನಿಮಗೆ ಆರು ವಾರಗಳ ವರೆಗೆ ಋತುಚಕ್ರ ಆಗದಿದ್ದರೆ ಅದನ್ನು ತಪ್ಪಿದ ಅವಧಿ ಎಂದು ಹೇಳಲಾಗುತ್ತದೆ ಸಾಮಾನ್ಯವಾಗಿ, ಇದು ಕಳವಳಕ್ಕೆ ಕಾರಣವಾಗುತ್ತದೆ. ಜಡ ಜೀವನಶೈಲಿ ಸಮಸ್ಯೆಗಳು ಮತ್ತು ಆಹಾರ ಪದ್ಧತಿಗಳು ನಿಮ್ಮ ಅನಿಯಮಿತ ಋತುಚಕ್ರದ ಹಿಂದಿನ ಕಾರಣಗಳಾಗಿದ್ದರೂ, ಈ ಸಮಯದಲ್ಲಿ ನೀವು ವೈದ್ಯರನ್ನು ಭೇಟಿ ಮಾಡಬೇಕು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕುಮಾರಸ್ವಾಮಿ ವಿರುದ್ಧ ಸಾವಿರಾರು ಕೋಟಿ ರೂ. ಗಿಫ್ಟ್​ ಆರೋಪ
ಕುಮಾರಸ್ವಾಮಿ ವಿರುದ್ಧ ಸಾವಿರಾರು ಕೋಟಿ ರೂ. ಗಿಫ್ಟ್​ ಆರೋಪ
ಚನ್ನಪಟ್ಟಣ ಜೊತೆ ದೇವೇಗೌಡರ ನಂಟು, ಮತ್ತೊಮ್ಮೆ ಇಸವಿ ತಪ್ಪು ಹೇಳಿದ ನಿಖಿಲ್
ಚನ್ನಪಟ್ಟಣ ಜೊತೆ ದೇವೇಗೌಡರ ನಂಟು, ಮತ್ತೊಮ್ಮೆ ಇಸವಿ ತಪ್ಪು ಹೇಳಿದ ನಿಖಿಲ್
ಪತ್ನಿ ರೇವತಿಯವರ ಇಚ್ಛೆಯ ಮೇರೆಗೆ ಹರದನಹಳ್ಳಿಗೆ ಭೇಟಿ ನೀಡಿದ ನಿಖಿಲ್
ಪತ್ನಿ ರೇವತಿಯವರ ಇಚ್ಛೆಯ ಮೇರೆಗೆ ಹರದನಹಳ್ಳಿಗೆ ಭೇಟಿ ನೀಡಿದ ನಿಖಿಲ್
ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಜೊತೆ 'ಲೆಜೆಂಡ್' ಸಿರಾಜ್ ಹುಡುಗಾಟ
ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಜೊತೆ 'ಲೆಜೆಂಡ್' ಸಿರಾಜ್ ಹುಡುಗಾಟ
ಸ್ವಂತ ವಾಹನಗಳಿಗೆ ಪೆಟ್ರೋಲ್, ಬೇಕಾಬಿಟ್ಟಿ ಮದ್ಯದಂಗಡಿಗಳಿಗೆ ಲೈಸೆನ್ಸ್ ಆರೋಪ
ಸ್ವಂತ ವಾಹನಗಳಿಗೆ ಪೆಟ್ರೋಲ್, ಬೇಕಾಬಿಟ್ಟಿ ಮದ್ಯದಂಗಡಿಗಳಿಗೆ ಲೈಸೆನ್ಸ್ ಆರೋಪ
ಸಿದ್ದರಾಮಯ್ಯ, ಸೋಮಣ್ಣ ಮುಖಾಮುಖಿ: ಮುಡಾ ಬಗ್ಗೆ ನಡೀತು ಸ್ವಾರಸ್ಯಕರ ಚರ್ಚೆ!
ಸಿದ್ದರಾಮಯ್ಯ, ಸೋಮಣ್ಣ ಮುಖಾಮುಖಿ: ಮುಡಾ ಬಗ್ಗೆ ನಡೀತು ಸ್ವಾರಸ್ಯಕರ ಚರ್ಚೆ!
ನೂರು ಕೋಟಿ ಆಫರ್: ಮತ್ತೊಬ್ಬ ಕಾಂಗ್ರೆಸ್ ಶಾಸಕ ಹೇಳಿದ್ದೇನು ನೋಡಿ!
ನೂರು ಕೋಟಿ ಆಫರ್: ಮತ್ತೊಬ್ಬ ಕಾಂಗ್ರೆಸ್ ಶಾಸಕ ಹೇಳಿದ್ದೇನು ನೋಡಿ!
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಯಾಕೆ ಜನಪರ ಯೋಜನೆಗಳಿಲ್ಲ? ಸಿದ್ದರಾಮಯ್ಯ
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಯಾಕೆ ಜನಪರ ಯೋಜನೆಗಳಿಲ್ಲ? ಸಿದ್ದರಾಮಯ್ಯ
ಪೆಟ್ರೋಲ್ ಬಂಕ್​ಗೆ ನುಗ್ಗಿ ಸಿಬ್ಬಂದಿಗೆ ಥಳಿಸಿದ ಯುವಕರು
ಪೆಟ್ರೋಲ್ ಬಂಕ್​ಗೆ ನುಗ್ಗಿ ಸಿಬ್ಬಂದಿಗೆ ಥಳಿಸಿದ ಯುವಕರು
ಯೋಗೇಶ್ವರ್ ಮಾತಿಗೆ ವಿಪರೀತ ಅರ್ಥ ಕಲ್ಪಿಸುವುದು ಬೇಡ: ಪರಮೇಶ್ವರ್
ಯೋಗೇಶ್ವರ್ ಮಾತಿಗೆ ವಿಪರೀತ ಅರ್ಥ ಕಲ್ಪಿಸುವುದು ಬೇಡ: ಪರಮೇಶ್ವರ್