ಬೆಂಗಳೂರು ಸಂಚಾರ ನಿಯಮ ಉಲ್ಲಂಘನೆ: ಕೇವಲ 5 ಗಂಟೆಯಲ್ಲಿ ಸಂಗ್ರಹವಾಯ್ತು 7.62 ಲಕ್ಷ ರೂ. ದಂಡ

ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಶನಿವಾರ 5 ಗಂಟೆಗಳ ಕಾರ್ಯಾಚರಣೆ ನಡೆಸಿದ ಟ್ರಾಫಿಕ್ ಪೊಲೀಸರು, 7.62 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದ್ದಾರೆ. ಒಟ್ಟು 1507 ಪ್ರಕರಣಗಳನ್ನು ದಾಖಲಿಸಲಾಗಿದೆ, ಇದರಲ್ಲಿ ನೋ ಎಂಟ್ರಿ ಮತ್ತು ಒನ್ ವೇ ಉಲ್ಲಂಘನೆಗಳು ಹೆಚ್ಚಾಗಿವೆ.

ಬೆಂಗಳೂರು ಸಂಚಾರ ನಿಯಮ ಉಲ್ಲಂಘನೆ: ಕೇವಲ 5 ಗಂಟೆಯಲ್ಲಿ ಸಂಗ್ರಹವಾಯ್ತು 7.62 ಲಕ್ಷ ರೂ. ದಂಡ
ಚಿತ್ರ ಕೃಪೆ: ಬೆಂಗಳೂರು ಸಂಚಾರ ಪೊಲೀಸ್
Follow us
ಗಣಪತಿ ಶರ್ಮ
|

Updated on: Nov 18, 2024 | 2:48 PM

ಬೆಂಗಳೂರು, ನವೆಂಬರ್ 18: ಕಳೆದ ಕೆಲವು ದಿನಗಳಿಂದ ಬೆಂಗಳೂರು ನಗರದಾದ್ಯಂತ ಸಂಚಾರ ನಿಯಮಗಳ ಉಲ್ಲಂಘನೆ ವಿರುದ್ಧದ ಕಾರ್ಯಾಚರಣೆಯನ್ನು ಟ್ರಾಫಿಕ್ ಪೊಲೀಸರು ತೀವ್ರಗೊಳಿಸಿದ್ದಾರೆ. ಅದರಂತೆ, ಶನಿವಾರ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಕೇವಲ 5 ಗಂಟೆಗಳಲ್ಲಿ 7.62 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ. ಶನಿವಾರ ಬೆಳಗ್ಗೆ 11ರಿಂದ ಸಂಜೆ 4 ಗಂಟೆ ವರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು.

ಅಕ್ರಮ ಪಾರ್ಕಿಂಗ್, ನೋ ಎಂಟ್ರಿ ಉಲ್ಲಂಘನೆ, ಫುಟ್‌ಪಾತ್ ರೈಡಿಂಗ್ ಮತ್ತು ಒನ್​ ವೇ ಉಲ್ಲಂಘನೆ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ಒಟ್ಟು 1,507 ಪ್ರಕರಣಗಳನ್ನು ದಾಖಲಿಸಿ, 7.62 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ.

ಒಟ್ಟು ಪ್ರಕರಣಗಳ ಪೈಕಿ 722 ನೋ ಎಂಟ್ರಿ ಕೇಸ್‌, 590 ಒನ್​ ವೇ ಉಲ್ಲಂಘನೆ ಪ್ರಕರಣಗಳಿದ್ದವು. ಒಟ್ಟು ದಾಖಲಾದ ಪ್ರಕರಣಗಳಲ್ಲಿ 1,312 ರಷ್ಟು ನೋ ಎಂಟ್ರಿ, ಒನ್​ ವೇ ಉಲ್ಲಂಘನೆಯೇ ಇದ್ದವು.

  • ಅಕ್ರಮ ಪಾರ್ಕಿಂಗ್: 127 ಪ್ರಕರಣಗಳನ್ನು ದಾಖಲಿಸಿ 64,500 ರೂ. ದಂಡ ಸಂಗ್ರಹಿಸಲಾಗಿದೆ.
  • ನೋ ಎಂಟ್ರಿ: 722 ಪ್ರಕರಣಗಳನ್ನು ದಾಖಲಿಸಿ 3,66,500 ರೂ. ದಂಡ ಸಂಗ್ರಹಿಸಲಾಗಿದೆ.
  • ಫುಟ್ ಪಾತ್ ರೈಡಿಂಗ್: 68 ಪ್ರಕರಣಗಳನ್ನು ದಾಖಲಿಸಿ 34,000 ರೂ. ದಂಡ ವಿಧಿಸಿದ್ದಾರೆ.
  • ಒನ್ ವೇ ಉಲ್ಲಂಘನೆ: 590 ಪ್ರಕರಣಗಳನ್ನು ದಾಖಲಿಸಿ 2,97,000 ರೂ. ದಂಡ ಸಂಗ್ರಹಿಸಲಾಗಿದೆ.

ಸಂಚಾರ ನಿಯಮ ಜಾಗೃತಿ

ಬೆಂಗಳೂರು ನಗರದಾದ್ಯಂತ ಸಂಚಾರ ನಿಯಮಗಳ ಬಗ್ಗೆ ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಟ್ರಾಫಿಕ್ ಪೊಲೀಸರು ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿಮ ಜಾಗೃತಿ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಮಾತ್ರವಲ್ಲದೆ, ವಿವಿಧ ಸ್ಥಳಗಳಿಗೆ ತೆರಳಿಯೂ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

“ಒಂದು ‘ಕ್ಷಿಪ್ರ ಕರೆ’ ನಿಮ್ಮ ಕೊನೆಯ ತಪ್ಪಾಗಲು ಬಿಡಬೇಡಿ. ನಿಮ್ಮ ಜೀವನ ಮತ್ತು ಇತರರದ್ದು ಸಹ—ಅಪಾಯದಲ್ಲಿದೆ ಎಂಬ ಅರಿವಿರಲಿ. ಈಗ ವಾಹನ ಚಲಾಯಿಸಿ, ನಂತರ ಕರೆ ಮಾಡಿ.” ಎಂದು ವಾಹನ ಚಾಲನೆ ವೇಳೆ ಮೊಬೈಲ್ ಬಳಸುವವರನ್ನು ಟ್ರಾಫಿಕ್ ಪೊಲೀಸರು ಎಚ್ಚರಿಸಿದ್ದಾರೆ.

ಟ್ರಾಫಿಕ್ ಪೊಲೀಸ್ ಎಕ್ಸ್​ ಸಂದೇಶ

ಮತ್ತೊಂದೆಡೆ, ಕೆಆರ್ ಪುರ ಸಂಚಾರ ಠಾಣೆಯ ವ್ಯಾಪ್ತಿಯ ಕೆಆರ್ ಪುರ ಬಿಬಿಎಂಪಿ ಕಚೇರಿ ಮುಂಭಾಗದಲ್ಲಿ ಪ್ಯಾಸೆಂಜರ್ ಆಟೋ ಚಾಲಕರಿಗೆ ಸಂಚಾರ ನಿಯಮಗಳ ಪಾಲನೆಯ ಮಹತ್ವದ ಬಗ್ಗೆ ಮತ್ತು ಅವುಗಳ ಉಲ್ಲಂಘನೆಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ತಿಳಿವಳಿಕೆ ನೀಡಲಾಯಿತು.

ಇದನ್ನೂ ಓದಿ: ಪೀಣ್ಯ ಇಂಡಸ್ಟ್ರಿಗೆ ಮೂಲಸೌಕರ್ಯಗಳ ಕೊರತೆ: ಹೂಡಿಕೆಗೆ ವಿದೇಶಿ ಹೂಡಿಕೆದಾರರ ಹಿಂದೇಟು

ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಾಲನೆಯ ಮಹತ್ವವನ್ನೂ ಟ್ವಿಟರ್​ ಸಂದೇಶದ ಮೂಲಕ ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಜೊತೆ 'ಲೆಜೆಂಡ್' ಸಿರಾಜ್ ಹುಡುಗಾಟ
ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಜೊತೆ 'ಲೆಜೆಂಡ್' ಸಿರಾಜ್ ಹುಡುಗಾಟ
ಸ್ವಂತ ವಾಹನಗಳಿಗೆ ಪೆಟ್ರೋಲ್, ಬೇಕಾಬಿಟ್ಟಿ ಮದ್ಯದಂಗಡಿಗಳಿಗೆ ಲೈಸೆನ್ಸ್ ಆರೋಪ
ಸ್ವಂತ ವಾಹನಗಳಿಗೆ ಪೆಟ್ರೋಲ್, ಬೇಕಾಬಿಟ್ಟಿ ಮದ್ಯದಂಗಡಿಗಳಿಗೆ ಲೈಸೆನ್ಸ್ ಆರೋಪ
ಸಿದ್ದರಾಮಯ್ಯ, ಸೋಮಣ್ಣ ಮುಖಾಮುಖಿ: ಮುಡಾ ಬಗ್ಗೆ ನಡೀತು ಸ್ವಾರಸ್ಯಕರ ಚರ್ಚೆ!
ಸಿದ್ದರಾಮಯ್ಯ, ಸೋಮಣ್ಣ ಮುಖಾಮುಖಿ: ಮುಡಾ ಬಗ್ಗೆ ನಡೀತು ಸ್ವಾರಸ್ಯಕರ ಚರ್ಚೆ!
ನೂರು ಕೋಟಿ ಆಫರ್: ಮತ್ತೊಬ್ಬ ಕಾಂಗ್ರೆಸ್ ಶಾಸಕ ಹೇಳಿದ್ದೇನು ನೋಡಿ!
ನೂರು ಕೋಟಿ ಆಫರ್: ಮತ್ತೊಬ್ಬ ಕಾಂಗ್ರೆಸ್ ಶಾಸಕ ಹೇಳಿದ್ದೇನು ನೋಡಿ!
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಯಾಕೆ ಜನಪರ ಯೋಜನೆಗಳಿಲ್ಲ? ಸಿದ್ದರಾಮಯ್ಯ
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಯಾಕೆ ಜನಪರ ಯೋಜನೆಗಳಿಲ್ಲ? ಸಿದ್ದರಾಮಯ್ಯ
ಪೆಟ್ರೋಲ್ ಬಂಕ್​ಗೆ ನುಗ್ಗಿ ಸಿಬ್ಬಂದಿಗೆ ಥಳಿಸಿದ ಯುವಕರು
ಪೆಟ್ರೋಲ್ ಬಂಕ್​ಗೆ ನುಗ್ಗಿ ಸಿಬ್ಬಂದಿಗೆ ಥಳಿಸಿದ ಯುವಕರು
ಯೋಗೇಶ್ವರ್ ಮಾತಿಗೆ ವಿಪರೀತ ಅರ್ಥ ಕಲ್ಪಿಸುವುದು ಬೇಡ: ಪರಮೇಶ್ವರ್
ಯೋಗೇಶ್ವರ್ ಮಾತಿಗೆ ವಿಪರೀತ ಅರ್ಥ ಕಲ್ಪಿಸುವುದು ಬೇಡ: ಪರಮೇಶ್ವರ್
ಬಿಜೆಪಿಗೆ ಹಣದ ಕೊರತೆಯಿಲ್ಲ, ಹಣ ಚೆಲ್ಲಿ ಶಾಸಕರನ್ನು ಖರೀದಿಸುತ್ತಾರೆ: ಗಾಣಿಗ
ಬಿಜೆಪಿಗೆ ಹಣದ ಕೊರತೆಯಿಲ್ಲ, ಹಣ ಚೆಲ್ಲಿ ಶಾಸಕರನ್ನು ಖರೀದಿಸುತ್ತಾರೆ: ಗಾಣಿಗ
ಬ್ರೆಜಿಲ್​ನಲ್ಲಿ ಮಂತ್ರ-ಘೋಷಗಳೊಂದಿಗೆ ಪ್ರಧಾನಿ ಮೋದಿಗೆ ಸ್ವಾಗತ
ಬ್ರೆಜಿಲ್​ನಲ್ಲಿ ಮಂತ್ರ-ಘೋಷಗಳೊಂದಿಗೆ ಪ್ರಧಾನಿ ಮೋದಿಗೆ ಸ್ವಾಗತ
ಡಬಲ್ ವೈಲ್ಡ್ ಕಾರ್ಡ್​ ಎಂಟ್ರಿಗೆ ಬಿಗ್ ಬಾಸ್ ಮನೆ ಶೇಕ್; ಪ್ರಬಲರೇ ಟಾರ್ಗೆಟ್
ಡಬಲ್ ವೈಲ್ಡ್ ಕಾರ್ಡ್​ ಎಂಟ್ರಿಗೆ ಬಿಗ್ ಬಾಸ್ ಮನೆ ಶೇಕ್; ಪ್ರಬಲರೇ ಟಾರ್ಗೆಟ್