AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೀಣ್ಯ ಇಂಡಸ್ಟ್ರಿಗೆ ಮೂಲಸೌಕರ್ಯಗಳ ಕೊರತೆ: ಹೂಡಿಕೆಗೆ ವಿದೇಶಿ ಹೂಡಿಕೆದಾರರ ಹಿಂದೇಟು

ಒಂದು ಕಾಲದಲ್ಲಿ ದೇಶ ವಿದೇಶಗಳಲ್ಲಿ ಹೆಸರು ಮಾಡಿದ್ದ, ಪೀಣ್ಯ ಇಂಡಸ್ಟ್ರಿಯಲ್ ಏರಿಯಾ ಇದೀಗ ಎಲ್ಲರಿಗೂ ಬೇಡವಾಗುತ್ತಿದೆ. ವಿದೇಶಿ ಹೂಡಿಕೆದಾರರು ಪೀಣ್ಯ ಅಂದರೆ, ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಅಷ್ಟಕ್ಕೂ ಏನಾಯ್ತು ಪೀಣ್ಯ ಇಂಡಸ್ಟ್ರಿಗೆ, ಸಮಸ್ಯೆ ಏನು? ವಿವರ ಇಲ್ಲಿದೆ.

ಪೀಣ್ಯ ಇಂಡಸ್ಟ್ರಿಗೆ ಮೂಲಸೌಕರ್ಯಗಳ ಕೊರತೆ: ಹೂಡಿಕೆಗೆ ವಿದೇಶಿ ಹೂಡಿಕೆದಾರರ ಹಿಂದೇಟು
ಪೀಣ್ಯ ಕೈಗಾರಿಕಾ ಪ್ರದೇಶದ ರಸ್ತೆ
Vinay Kashappanavar
| Edited By: |

Updated on: Nov 18, 2024 | 7:31 AM

Share

ಬೆಂಗಳೂರು, ನವೆಂಬರ್ 18: ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಮೂಲಸೌಕರ್ಯ ಇಲ್ಲದ ಕಾರಣ ಶೇ 30 ರಷ್ಟು ಆರ್ಥಿಕ ಕುಸಿತ ಕಂಡು ಬಂದಿದೆ ಎನ್ನಲಾಗಿದೆ. ಒಂದು ಕಾಲದಲ್ಲಿ ದೇಶ ವಿದೇಶಗಳಲ್ಲಿ ಹೆಸರು ಮಾಡಿದ್ದ ಪೀಣ್ಯ ಇಂಡಸ್ಟ್ರಿಯಲ್ ಏರಿಯಾ ಇದೀಗ ಯಾರಿಗೂ ಬೇಡವಾಗಿದೆ! ಮೂಲಭೂತ ಸೌಕರ್ಯಗಳ ಕೊರತೆ ಎದುರಾಗಿದ್ದು, ಇದರ ಪರಿಣಾಮವಾಗಿ ಹೂಡಿಕೆದಾರರು ಬರದೆ ಕೈಗಾರಿಕೆಗಳಿಗೆ ಆರ್ಥಿಕ ನಷ್ಟ ಎದುರಾದೆ ಎಂದು ಪೀಣ್ಯ ಇಂಡಸ್ಟ್ರಿ ಅಸೋಸಿಯೇಷನ್ ಬೇಸರ ಹೊರ ಹಾಕಿದೆ.

ಕೋಟ್ಯಂತರ ರೂ. ತೆರಿಗೆ ಪಾವತಿಸಿದ್ರೂ ಮೂಲಸೌಕರ್ಯ ಇಲ್ಲ!

ಪೀಣ್ಯ ಕೈಗಾರಿಕಾ ಪ್ರದೇಶದ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ಇವೆ. ರಸ್ತೆ ವ್ಯವಸ್ಥೆ ಸರಿ ಇಲ್ಲ. ಇಷ್ಟೇ ಅಲ್ಲದೇ ಇನ್ನೂ ಅನೇಕ ಸಮಸ್ಯೆಗಳಿವೆ. ಹೀಗಾಗಿ ಅನೇಕ ವಿದೇಶಿ ಹೂಡಿಕೆದಾರರು ಈಗ ಪೀಣ್ಯ ಕಡೆ ಮುಖಮಾಡುತ್ತಿಲ್ಲ. ಇದರಿಂದ ಸಾಕಷ್ಟು ಆರ್ಥಿಕ ನಷ್ಟ ಕೈಗಾರಿಕೆಗಳಿಗೆ ಎದುರಾಗಿದೆ. ಪ್ರತಿ ವರ್ಷ ಪೀಣ್ಯದಿಂದ 3000 ಕೋಟಿ ರೂ. ತೆರಿಗೆ ಪಾವತಿಯಾಗುತ್ತಿದೆ. ಬೆಸ್ಕಾಂನಿಂದ 5000 ಕೋಟಿ ರೂ. ಬಿಲ್ ಪಾವತಿಯಾಗುತ್ತಿದೆ. ಆದರೆ, ಸರ್ಕಾರದಿಂದ ಸಮರ್ಪಕವಾದ ರಸ್ತೆ ಭಾಗ್ಯ ಇಲ್ಲದಿರುವುದು, ಅಭಿವೃದ್ಧಿ ಮಾಡದಿರುವುದು ವಿದೇಶಿ ಹೂಡಿಕೆದಾರರ ಆಕರ್ಷಣೆ ಕಳೆದುಕೊಳ್ಳಲು ಕಾರಣವಾಗಿದೆ. ಇದರಿಂದಾಗಿ ಅಂತಾ ಸಣ್ಣ ಕೈಗಾರಿಗಳ ಮಾಲೀಕರು ಪರದಾಡುವಂತಾಗಿದೆ.

ಪೀಣ್ಯದಲ್ಲಿವೆ 16000 ಕೈಗಾರಿಕಾ ಘಟಕಗಳು

ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸುಮಾರು 16 ಸಾವಿರ ಕೈಗಾರಿಕಾ ಘಟಕಗಳಿವೆ. ಮೊದಲೆಲ್ಲಾ ವಿದೇಶಿ ಗ್ರಾಹಕರು ಇಲ್ಲಿಗೆ ಹೆಚ್ಚಾಗಿದ್ದರು. ಆದರೆ, ಈಗ ಇಲ್ಲಿ ರಸ್ತೆ ಸರಿ ಇಲ್ಲದೆ ಇರುವ ಕಾರಣದಿಂದ ಗ್ರಾಹಕರು ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ರಸ್ತೆ ಸರಿಯಿಲ್ಲ, ಗುಂಡಿ, ಒಳಚಂಡಿ ವ್ಯವಸ್ಥೆ ಇಲ್ಲ. ಮಳೆ ಬಂದಾಗ ನೀರು ತುಂಬಿಕೊಂಡು ಇಂಡಸ್ಟ್ರಿಯ ರಸ್ತೆಗಳು, ಮೂಲಭೂತ ಸೌಕರ್ಯ ಇಲ್ಲದೆ ಇಂಡಸ್ಟ್ರಿಯತ್ತ ಗ್ರಾಹಕರು ಬರುತ್ತಿಲ್ಲ ಎಂಬ ಕೂಗು ಕೇಳಿಬಂದಿದೆ.

ಇದನ್ನೂ ಓದಿ: ಖಾಸಗಿ ಕಂಪನಿಗೆ ಇ-ಖಾತಾ ಹೊಣೆ: ಪಾಸ್​ಪೋರ್ಟ್ ಕಚೇರಿ ಮಾದರಿಯಲ್ಲಿ ತಾತ್ಕಾಲಿಕ ಆಫೀಸ್ ತೆರೆಯಲು ಬಿಬಿಎಂಪಿ ಚಿಂತನೆ

ISRO, HAL, DRDO ಗೆ ಬೇಕಾದ ವಸ್ತುಗಳನ್ನು ಪೂರೈಸುತ್ತಿದ್ದ ಪೀಣ್ಯ ಇಂಡಸ್ಟ್ರಿ‌ ಈಗ ಧೂಳು ಹಿಡಿಯುತ್ತಿದೆ. ಹೀಗಾಗಿ ಪೀಣ್ಯಾ ಕೈಗಾರಿಕಾ ಸಂಘದ ಅಧ್ಯಕ್ಷ ಶಿವಕುಮಾರ್, ಮೂಲಭೂತ ಸೌಕರ್ಯಕ್ಕೆ ಒದಗಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಪೀಣ್ಯ ಇಂಡಸ್ಟ್ರಿ ಇದೀಗ ಮೂಲಸೌಕರ್ಯಗಳಿಲ್ಲದೆ, ಬ್ರ್ಯಾಂಡ್ ಕಳೆದುಕೊಳ್ಳುತ್ತಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ