
Nail polish and health factors: ನೀಳ ಕೈಗಳು, ಸುಂದರ ಉಗುರುಗಳು – ಇದರ ಕಾಂಬಿನೇಶನ್ನೇ ಎಷ್ಟು ಚೆನ್ನಾಗಿರುತ್ತದೆ ಅಲ್ಲವಾ!? ಇನ್ನು ಇದಕ್ಕೆ ರಂಗುರಂಗಿನ ಬಣ್ಣ ಅಂದರೆ ನೈಲ್ ಪಾಲಿಶ್ ಹಚ್ಚಿದರಂತೂ ಎಂತಹವರನ್ನು ಮಂತ್ರಮುಗ್ಧರಾಗಿ ಸೆಳೆದುಬಿಡುತ್ತದೆ. ಅಂತಹ ಚಿತ್ಚೋರ್ ಕೈಗಳ ಅಂದ ಹೆಚ್ಚಿಸಲೆಂದೇ ಹೆಂಗಳೆಯರು ಸಾವಿರಾರು ರೂಪಾಯಿ ಖರ್ಚು ಮಾಡಿ ಬಣ್ಣ ಬಣ್ಣದ ನೈಲ್ ಪಾಲಿಶ್ಗಳನ್ನು ಹಚ್ಚುತ್ತಾರೆ. ಅದಾದ ಮೇಲೆ ಹಮ್ಮುಬಿಮ್ಮಿನಿಂದ ಪ್ರದರ್ಶಿಸುತ್ತಾರೆ. ಆದರೆ ಹಾಗೆ ಉಗುರುಗಳಿಗೆ ಹಚ್ಚುವ ಈ ನೈಲ್ ಪಾಲಿಶ್ ಎಂಬ ಮಾರಕ ರಸಾಯನಿಕವು ಅವರ ಜೀವವನ್ನೇ ಹಾಳು ಮಾಡುವಷ್ಟು ವಿಷ ತುಂಬಿದಿಂದ ಕೂಡಿದೆ ಎಂಬುದನ್ನು ಅರಿತುಕೊಳ್ಳುವ ಜರೂರತ್ತುಇದೆ. ನೈಲ್ ಪಾಲಿಶ್, ಜೆಲ್ ಪಾಲಿಶ್, ನಕಲಿ ಉಗುರುಗಳು ಹಾಗೂ ಇತರೆ ಉಗುರು ಸೌಂದರ್ಯೋತ್ಪನ್ನಗಳನ್ನು ತಯಾರಿಸಲು ಬಳಸುವ ರಾಸಾಯನಿಕ ಪದಾರ್ಥಗಳು ಆರೋಗ್ಯಕ್ಕೆ ಕಂಟಕಪ್ರಾಯವಾಗಿವೆ. ನೋಡುಗರಿಗೆ ಕೈಗಳು ಸುಂದರವಾಗಿ ಕಾಣಬೇಕೆಂದು ಉಗುರಿನ ಆರೋಗ್ಯದ ಬಗ್ಗೆ ಗಮನ ಹರಿಸುವವರ ಸಂಖ್ಯೆ ಸದಾ ಏರುಮುಖದಲ್ಲೇ ಇರುತ್ತದೆ. ಅಂದರೆ ಉಗುರು ಸ್ನಿಗ್ಧ ಸೌಂದರ್ಯದಿಂದ ಅದರಪಾಡಿಗೆ ಅದು ಇರಲಿ ಎಂದು ಬಯಸುವ ಹೆಂಗೆಳೆಯರ ಸಂಖ್ಯೆ ಸದಾ ಕೆಳಮುಖವಾಗಿಯೇ ಇರುತ್ತದೆ. ಹೆಂಗೆಳೆಯರ ಗುಣವೇ ಅಂತಹುದು… ಮೆನಿಕ್ಯೂರ್, ಪೆಡಿಕ್ಯೂರ್ ಎಂದು ಉಗುರುಗಳ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ನೀಡುತ್ತಾರೆ. ಇದರ ಜೊತೆಗೆ ಬಣ್ಣ ಬಣ್ಣದ ನೈಲ್ ಪಾಲಿಶ್ಗಳನ್ನು ಹಚ್ಚಿ ಅಂದವಾಗಿ ಕಾಣಿಸಿಕೊಳ್ಳುವ ಬಗ್ಗೆ ಹೆಚ್ಚು ಯೋಚಿಸುವವರಿದ್ದಾರೆ. ಆದರೆ ಈ ಉಗುರಿನ ಬಣ್ಣಕ್ಕೆ ಬಳಸುವ ರಾಸಾಯನಿಕಗಳು ನಾನಾ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಈ ಉಗುರುಗಳಿಗೆ ಹಚ್ಚುವ ಬಣ್ಣ ಕ್ರಮೇಣವಾಗಿ ಆಹಾರದ ಜೊತೆ ಸೇರಿ ಹೊಟ್ಟೆಗೆ ಸೇರುತ್ತದೆ. ಇದರಿಂದ...