AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Champagne Day 2022: ಶಾಂಪೇನ್ ಕುಡಿಯುವುದರಿಂದ ಆರೋಗ್ಯ ಪ್ರಯೋಜನಗಳೇನು?

ಯೂನಿವರ್ಸಿಟಿ ಆಫ್ ರೀಡಿಂಗ್‌ನ ಅಧ್ಯಯನವು ಪ್ರತಿ ವಾರ ಒಂದರಿಂದ ಮೂರು ಗ್ಲಾಸ್ ಶಾಂಪೇನ್ ಕುಡಿಯುವುದರಿಂದ ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ.

National Champagne Day 2022: ಶಾಂಪೇನ್ ಕುಡಿಯುವುದರಿಂದ ಆರೋಗ್ಯ ಪ್ರಯೋಜನಗಳೇನು?
ಸಾಂದರ್ಭಿಕ ಚಿತ್ರImage Credit source: iStock
TV9 Web
| Edited By: |

Updated on:Dec 31, 2022 | 10:05 AM

Share

ಪ್ರತಿ ವರ್ಷ ಡಿಸೆಂಬರ್ 31 ರಂದು ಅನೌಪಚಾರಿಕವಾಗಿ ರಾಷ್ಟ್ರೀಯ ಶಾಂಪೇನ್ ದಿನ(National Champagne Day) ವನ್ನು ಆಚರಿಸಲಾಗುತ್ತದೆ. ವರ್ಷದ ಕೊನೆಯ ದಿನದಂದು ಸ್ನೇಹಿತರು, ಬಂಧು, ಬಳಗ ಎಲ್ಲಾ ಒಟ್ಟಾಗಿ ಸೇರಿ ಶಾಂಪೇನ್ ಕುಡಿದು ಸಂಭ್ರಮದಿಂದ ಆಚರಿಸಲಾಗುತ್ತದೆ. ಶಾಂಪೇನ್ ಎಂದರೆ ಸ್ಪಾರ್ಕ್ಲ್ ವೈನ್ ಎಂದರ್ಥ. ಅಂದರೆ, ಸರಳ ಪದಗಳಲ್ಲಿ ಹೇಳುವುದಾದರೆ ಶಾಂಪೇನ್ ಬಾಟಲಿಯನ್ನು ವೈನ್‌ನಿಂದ ತುಂಬಿಸಲಾಗುತ್ತದೆ ಮತ್ತು ಈ ವೈನ್ ಸ್ಪಾರ್ಕ್ಲ್ ವೈನ್ ಆಗಿದೆ. ಇದನ್ನು ವಿಶೇಷವಾಗಿ ತಯಾರಿಸಲಾಗುತ್ತದೆ. ಈ ಕಾರಣದಿಂದಾಗಿ, ಉದಾಹರಣೆಗೆ ಸಮಾರಂಭಗಳಲ್ಲಿ ಶಾಂಪೇನ್‌ ಬಾಟಲಿಯನ್ನು ಅಲುಗಾಡಿಸಿದಾಗ ಮತ್ತು ತೆರೆದಾಗ ಸಾಕಷ್ಟು ನೊರೆಗಳು ಬರುತ್ತದೆ.

ಶಾಂಪೇನ್​ ಫ್ರಾನ್ಸ್, ಪ್ಯಾರಿಸ್‌ನ ಈಶಾನ್ಯದ ಮೂಲ ಸ್ಥಳವಾಗಿದೆ. ಯಾಕೆಂದರೆ ಶಾಂಪೇನ್​ಗೆ ಬೇಕಾಗುವ ದ್ರಾಕ್ಷಿಯನ್ನು ಉತ್ಪಾದಿಸಲು ಸೂಕ್ತವಾದ ತಾಪಮಾನ ಮತ್ತು ಮಣ್ಣನ್ನು ಈ ಪ್ರದೇಶ ಹೊಂದಿದೆ. ಸ್ಪಾರ್ಕ್ಲ್ ವೈನ್ ತಯಾರಿಸಲು, ಮೊದಲು ವಿವಿಧ ರೀತಿಯ ದ್ರಾಕ್ಷಿಗಳ ರಸವನ್ನು ಹೊರತೆಗೆಯಲಾಗುತ್ತದೆ ಮತ್ತು ಅದಕ್ಕೆ ಕೆಲವು ಪದಾರ್ಥಗಳನ್ನು ಬೆರೆಸುವ ಮೂಲಕ ಹುದುಗಿಸಿ ಇಡಲಾಗುತ್ತದೆ. ಷಾಂಪೇನ್ ಪ್ರದೇಶದಲ್ಲಿ ಶಾಂಪೇನ್ ಉತ್ಪಾದನೆಗೆ ಫ್ರೆಂಚ್ ಕಾನೂನು ಕೇವಲ ಎಂಟು ವಿಧದ ದ್ರಾಕ್ಷಿಯನ್ನು ಬಳಸಲು ಮಾತ್ರ ಅನುಮತಿ ನೀಡಿದೆ. ಪ್ರಾಥಮಿಕವಾಗಿ, ಶಾಂಪೇನ್​​ಗೆ ಮೂರು ದ್ರಾಕ್ಷಿಗಳನ್ನು ಬಳಸಲಾಗುತ್ತದೆ ಚಾರ್ಡೋನ್ನೆ, ಪಿನೋಟ್ ನಾಯ್ರ್ ಮತ್ತು ಪಿನೋಟ್ ಮೆಯುನಿಯರ್.

ಇದನ್ನೂ ಓದಿ: ರೆಡ್ ವೈನ್ ಕುಡಿಯುವುದು ಆರೋಗ್ಯಕ್ಕೆ ನಿಜವಾಗಿಯೂ ಪ್ರಯೋಜನಕಾರಿಯೇ? ಇಲ್ಲಿದೆ ಮಾಹಿತಿ

ಶಾಂಪೇನ್ ಕುಡಿಯುವುದರಿಂದ ಯಾವೆಲ್ಲ ಆರೋಗ್ಯ ಪ್ರಯೋಜನಗಳಿವೆ?

ಶಾಂಪೇನ್ ಪಾಲಿಫಿನಾಲ್ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ. ರಕ್ತದಿಂದ ನೈಟ್ರಿಕ್ ಆಮ್ಲವನ್ನು ತೆಗೆದುಹಾಕುವುದನ್ನು ನಿಧಾನಗೊಳಿಸುವ ಮೂಲಕ ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಜೊತೆಗೆ ಪಾರ್ಶ್ವವಾಯುವಿನ ಅಪಾಯದಿಂದ ನಿಮ್ಮನ್ನು ಕಾಪಾಡುತ್ತದೆ.

ಕಡಿಮೆ ಕ್ಯಾಲೋರಿಯನ್ನು ಹೊಂದಿದೆ:

ಸಾಮಾನ್ಯವಾಗಿ ಒಂದು ಲೋಟ ಕೆಂಪು ಅಥವಾ ಬಿಳಿ ವೈನ್ 135 ರಿಂದ 200 ಕ್ಯಾಲೋರಿಗಳನ್ನು ಹೊಂದಿದ್ದರೆ, ಇದು ಪ್ರತಿ ಗ್ಲಾಸ್‌ಗೆ ಕೇವಲ 65 ಕ್ಯಾಲೊರಿಗಳನ್ನು ಹೊಂದಿದೆ.

ಬುದ್ಧಿಮಾಂದ್ಯತೆ ಮತ್ತು ಮತಿ ಭ್ರಮಣೆಯನ್ನು ತಡೆಯಲು ಸಾಹಾಯಕ:

ಯೂನಿವರ್ಸಿಟಿ ಆಫ್ ರೀಡಿಂಗ್‌ನ ಅಧ್ಯಯನವು ಪ್ರತಿ ವಾರ ಒಂದರಿಂದ ಮೂರು ಗ್ಲಾಸ್ ಶಾಂಪೇನ್ ಕುಡಿಯುವುದರಿಂದ ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ.

ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಾಹಾಯಕ:

ಶಾಂಪೇನ್ ಉತ್ಕರ್ಷಣ ನಿರೋಧಕಗಳೊಂದಿಗೆ ಚರ್ಮವನ್ನು ಕಾಂತಿಯುತಗೊಳಿಸುತ್ತದೆ. ಜೊತೆಗೆ ಇದರಲ್ಲಿನ ಟಾರ್ಟಾರಿಕ್ ಆಮ್ಲವು ಚರ್ಮದ ಟೋನ್ ಹೊರಹಾಕಲು ಸಹಾಯ ಮಾಡುತ್ತದೆ ಎಂದು ಚರ್ಮರೋಗ ತಜ್ಞ ಮರಿನಾ ಪೆರೆಡೊ ಹೇಳುತ್ತಾರೆ.

ಹೃದಯದ ಆರೋಗ್ಯ ಕಾಪಾಡುವಲ್ಲಿ ಸಹಾಯಕ:

ವಾಸ್ತವವಾಗಿ, ಇದು ಕೆಂಪು ವೈನ್‌ನಂತೆಯೇ ನಿಮ್ಮ ಹೃದಯಕ್ಕೆ ಒಳ್ಳೆಯದು. ಯೂನಿವರ್ಸಿಟಿ ಆಫ್ ರೀಡಿಂಗ್ ಅಧ್ಯಯನವು ದಿನಕ್ಕೆ ಎರಡು ಗ್ಲಾಸ್ ಶಾಂಪೇನ್ ನಿಮ್ಮ ಹೃದಯ ಮತ್ತು ರಕ್ತಪರಿಚಲನೆಗೆ ಸಹಾಯಕ ಮತ್ತು ಹೃದಯರಕ್ತನಾಳದ ಕಾಯಿಲೆ ಮತ್ತು ಸ್ಟ್ರೋಕ್‌ನಿಂದ ಬಳಲುತ್ತಿರುವವರ ಅಪಾಯಗಳನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 10:05 am, Sat, 31 December 22

Follow Us
TV9 Web
TV9 Web

TV9 Kannada

Read More
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?