Bagalkot News: ಆಕ್ರಮ ಅಸ್ತಿ ಗಳಿಕೆ ಆರೋಪ: ಆಸ್ತಿ ಬಗ್ಗೆ ಪ್ರತಿ ವರ್ಷ ಲೋಕಾಯುಕ್ತಕ್ಕೆ ಲೆಕ್ಕ ಕೊಡುತ್ತೇನೆ ಎಂದ ಶಾಸಕ ಸಿದ್ದು ಸವದಿ

ನನ್ನ ಮಗ ಬೆಳಗಾವಿಯಲ್ಲಿ ಟೆನ್ನಿಸ್ ಅಕಾಡೆಮಿ ಮಾಡಲು ಮುಂದಾಗಿದ್ದಾನೆ. ಆದ ಕಾರಣ ಬೆಳಗಾವಿಯಲ್ಲಿ ಲ್ಯಾಂಡ್ ಖರೀದಿ ಮಾಡಿದ್ದೇವೆ. ಸಾಲ ಪಡೆದು ಟೆನ್ನಿಸ್ ಅಕಾಡೆಮಿ ಮಾಡಲಿದ್ದಾನೆ ಎಂದು ಶಾಸಕ ಸಿದ್ದು ಸವದಿ ಹೇಳಿದ್ದಾರೆ.

Bagalkot News: ಆಕ್ರಮ ಅಸ್ತಿ ಗಳಿಕೆ ಆರೋಪ: ಆಸ್ತಿ ಬಗ್ಗೆ ಪ್ರತಿ ವರ್ಷ ಲೋಕಾಯುಕ್ತಕ್ಕೆ ಲೆಕ್ಕ ಕೊಡುತ್ತೇನೆ ಎಂದ ಶಾಸಕ ಸಿದ್ದು ಸವದಿ
ತೇರದಾಳ ಶಾಸಕ ಸಿದ್ದು ಸವದಿ
Follow us
TV9 Web
| Updated By: Digi Tech Desk

Updated on:Dec 27, 2022 | 2:55 PM

ಬಾಗಲಕೋಟೆ: ನೂರಾರು ಎಕರೆ ಆಸ್ತಿ ಮಾಡಿದ್ದಾರೆ ಎಂದು ನನ್ನ ವಿರುದ್ಧ ಕಾಂಗ್ರೆಸ್ (Congress) ನಾಯಕರು ಆರೋಪ ಮಾಡುತ್ತಿದ್ದಾರೆ. ನಾನು ಏನು ಆಸ್ತಿ ಮಾಡಿದ್ದೇನೋ ಇಲ್ವೋ ಎಂಬುದರ ಬಗ್ಗೆ ಪ್ರತಿ ವರ್ಷ ನಾನು ಲೋಕಾಯುಕ್ತ (Lokayukta)ಕ್ಕೆ ಲೆಕ್ಕ ಕೊಡುತ್ತೇನೆ ಎಂದು ತೇರದಾಳ ಶಾಸಕ ಬಿಜೆಪಿ ಶಾಸಕ ಸಿದ್ದು ಸವದಿ (Siddu Savadi) ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲದಕ್ಕೂ ಆದಾಯದ ಮೂಲ ಇದೆ. ಬ್ಯಾಂಕ್ ಸಾಲಗಳಿವೆ, ನನ್ನ ಪಾಲಿಗೆ ಬಂದ 25 ಎಕರೆ ಆಸ್ತಿಯಲ್ಲಿ ಅನೇಕ ಆರ್ಥಿಕ ಬೆಳೆಗಳನ್ನು ಬೆಳೆಯುವ ಮೂಲಕ ಆದಾಯ ಬರುತ್ತಿದೆ ಎಂದರು.

ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ. ಕೊನೆ ಅಸ್ತ್ರ ತೇಜೋವಧೆ ಎನ್ನುವಂತೆ ಹೇಡಿಗಳು ನಿರಾಶರಾಗಿ ಅರೋಪ ಮಾಡುತ್ತಿದ್ದಾರೆ. ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು. ನಮ್ಮ ಸಹೋದರರು ಎಲ್ಲರೂ ವಿಭಾಗವಾಗಿದ್ದಾರೆ. ಮೊದಲು ಎಲ್ಲರೂ ಕೂಡಿ ಇದ್ದಾಗ ನೂರಕ್ಕೂ ಅಧಿಕ ಎಕರೆ ಇತ್ತು. 20 ವರ್ಷಗಳಿಂದ ಬ್ಯುಸಿನೆಸ್ ಮೂಲಕ ಖರೀದಿ ಮಾಡಿದ ಆಸ್ತಿ ಸೇರಿ 130 ಎಕರೆ ಇತ್ತು. ಆಸ್ತಿ ವಿಭಾಗವಾದ ನಂತರ ನನಗೆ 25 ಎಕರೆ ಬಂತು ಎಂದರು.

ಇದನ್ನೂ ಓದಿ: Hubballi News: ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಟಿಕೆಟ್‌ಗಾಗಿ ಕಾಂಗ್ರೆಸ್ ಕಚೇರಿಯಲ್ಲಿ ಕಿತ್ತಾಟ, ಜಯಘೋಷ

ನಮ್ಮ ಎಲ್​​ಐಸಿ ಕೃಷಿ ಮೂಲ, ನನ್ನ ವೇತನ ಸೇರಿ ಎಷ್ಟು ಅವಕಾಶವಿದೆಯೋ ಅಷ್ಟು ಭೂಮಿ ಖರೀದಿ ಮಾಡಿದ್ದೇವೆ. ನನ್ನ ಮಗ ಬೆಳಗಾವಿಯಲ್ಲಿ ಟೆನ್ನಿಸ್ ಅಕಾಡೆಮಿ ಮಾಡಲು ಮುಂದಾಗಿದ್ದಾನೆ. ಆದ ಕಾರಣ ಬೆಳಗಾವಿಯಲ್ಲಿ ಲ್ಯಾಂಡ್ ಖರೀದಿ ಮಾಡಿದ್ದೇವೆ. ಸಾಲ ಪಡೆದು ಟೆನ್ನಿಸ್ ಅಕಾಡೆಮಿ ಮಾಡಲಿದ್ದಾನೆ. ಇದು ನಮ್ಮ ವ್ಯಯಕ್ತಿಕ ವಿಚಾರವಾಗಿದೆ. ಈ ಬಗ್ಗೆ ಆರೋಪ ಮಾಡಿ ಹೆಸರಿಗೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ವ್ಯಾಪಾರಸ್ಥರಿಂದ GST ವಂಚನೆ ಆರೋಪ: ಬಾಗಲಕೋಟೆಯಲ್ಲಿ ಮೂರು ಕಡೆ ಲೋಕಾಯುಕ್ತ ದಾಳಿ

ವ್ಯಾಪಾರಸ್ಥರಿಂದ ಜಿಎಸ್​ಟಿ ವಂಚನೆ (GST fraud) ಆರೋಪ ಸಂಬಂಧ ಬಾಗಲಕೋಟೆಯಲ್ಲಿ ಮೂರು ಕಡೆ ಲೋಕಾಯುಕ್ತ ಪೊಲೀಸರು ದಾಳಿ (Lokayukta Raid In Bagalakote) ನಡೆಸಿದ್ದಾರೆ. ಎರಡು ಅಂಗಡಿ ಸೇರಿ ಮೂರು ಕಡೆ ದಾಳಿ ನಡೆಸಲಾಗಿದೆ. ಬಾಗಲಕೋಟೆ ವಲ್ಲಭಭಾಯಿ ವೃತ್ತದ ವಿಜಯ ಮಹಾಂತೇಶ್ ಸ್ಟೋರ್ಸ್, ಮೋಹನ ಟ್ರೇಡರ್ಸ್, ನವನಗರದ ವಾಣಿಜ್ಯ ತೆರಿಗೆ ಇಲಾಖೆ ಕಚೇರಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ. ಲೋಕಾಯುಕ್ತ ಎಸ್​​ಪಿ ಅನಿತಾ ಹರ್ದಣ್ಣವರ ನೇತೃತ್ವದಲ್ಲಿ ಡಿವೈಎಸ್​​ಪಿ ಅರುಣ ನಾಯಕ, ಸಿಪಿಐ ಎಂ.ಎಚ್.ಬಿದರಿ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಮೋಹನ್ ಟ್ರೇಡರ್ಸ್ ಹಾಗೂ ವಿಜಯ ಮಹಾಂತೇಶ್ ಟ್ರೇಡರ್ಸ್ ತಂಬಾಕು ಉತ್ಪನ್ನಗಳ ಮಾರಾಟದ ಹೋಲ್ ಸೇಲ್ ಅಂಗಡಿಗಳಾಗಿವೆ. ವಿಜಯ ಮಹಾಂತೇಶ್ ಸ್ಟೋರ್ ಶಿವಕುಮಾರ ಹಿರೆಮಠ ಎಂಬುವರಿಗೆ ಸೇರಿದ ಹಾಗೂ ಮೋಹನ್ ಟ್ರೇಡರ್ಸ್ ಧ್ವಾರಕಾನಾಥ ಬಂದಶೇಟ್ ಎಂಬುವರಿಗೆ ಸೇರಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Tue, 27 December 22