Viral Video: ಹುಡುಗಾಟದ ವಯಸ್ಕರು ರಸ್ತೆ ಮೇಲೆ ಶೇಖರಗೊಂಡಿದ್ದ ನೀರು ತಮ್ಮ ಮೇಲೆ ಚಿಮ್ಮಿಸಿ ಅಂತ ವಾಹನ ಚಾಲಕರನ್ನು ಗೋಗರೆದರು!

ಈ ವಿಡಿಯೋವನ್ನು ಡಂಕನ್ ಕುಕರ್ಡ್ ಎನ್ನುವವರು ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಕಾರುಗಳು ಅವರ ಮೇಲೆ ನೀರು ಸಿಡಿಸುವಾಗ ಅವರಿಬ್ಬರು ಮತ್ತು ಬಾಲಕಿಯ ಮುಖದಲ್ಲಿ ಕಾಣುವ ಸಂತೋಷ ವರ್ಣಿಸಲಾಗದ್ದು.

Viral Video: ಹುಡುಗಾಟದ ವಯಸ್ಕರು ರಸ್ತೆ ಮೇಲೆ ಶೇಖರಗೊಂಡಿದ್ದ ನೀರು ತಮ್ಮ ಮೇಲೆ ಚಿಮ್ಮಿಸಿ ಅಂತ ವಾಹನ ಚಾಲಕರನ್ನು ಗೋಗರೆದರು!
ಹುಡುಗಾಟದ ವಯಸ್ಕರು!Image Credit source: NDTV
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 13, 2022 | 2:30 PM

ನಮ್ಮೊಳಗಿನ ಹುಡುಗಾಟಿಕೆ, ಹುಡುಗುತನ ವಯಸ್ಸು ಎಪ್ಪತ್ತಾದರೂ ಮಾಯವಾಗದು ಮಾರಾಯ್ರೇ. ಒಳಗಿನ ಮಗುವನನ್ನು ಕೊನೇವರೆಗೂ ಜೀವಂತವಾಗಿಡುತ್ತೇವೆ. ಇಬ್ಬರು ವ್ಯಕ್ತಿಗಳು ಈ ವಾದವನ್ನು ಅಕ್ಷರಶಃ ನಿಜವಾಗಿಸುವ ವಿಡಿಯೋವೊಂದು ಇಂಟರ್ನೆಟ್ನಲ್ಲಿ (internet) ಹರಿದಾಡುತ್ತಿದೆ. ಅವರೇನು ಮಾಡುತ್ತಿದ್ದಾರೆ ಅಂತ ನೋಡಿ. ನೀರು ಶೇಖರಗೊಂಡಿರುವ ರಸ್ತೆಯ ಒಂದು ಭಾಗದಲ್ಲಿ ನಿಂತುಕೊಂಡು ತಮ್ಮ ಬಲಭಾಗದಿಂದ ಬರುತ್ತಿರುವ ಕಾರುಗಳ (cars) ಚಾಲಕರಿಗೆ ತಮ್ಮ ನೀರು ಸಿಡಿಯುವಂತೆ (splash) ನೀರಿನ ಮೇಲೆ ಕಾರು ಓಡಿಸಿ ಅಂತ ಗೋಗರೆಯುತ್ತಿದ್ದಾರೆ! ನೀರು ತಮ್ಮ ಮೇಲೆ ಸಿಡಿದಾಗ ಮಕ್ಕಳ ಹಾಗೆ ಸಂಭ್ರಮಿಸುತ್ತಾರೆ!! ಅಂದಹಾಗೆ ಅವರೊಂದಿಗೆ ಒಬ್ಬ ಬಾಲಕಿ ಕೂಡ ಇದ್ದಾಳೆ.

ಈ ವಿಡಿಯೋವನ್ನು ಡಂಕನ್ ಕುಕರ್ಡ್ ಎನ್ನುವವರು ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಕಾರುಗಳು ಅವರ ಮೇಲೆ ನೀರು ಸಿಡಿಸುವಾಗ ಅವರಿಬ್ಬರು ಮತ್ತು ಬಾಲಕಿಯ ಮುಖದಲ್ಲಿ ಕಾಣುವ ಸಂತೋಷವನ್ನು ಗಮನಿಸಿ. ಹಿನ್ನೆಲೆಯಲ್ಲಿ ನಿಮಗೆ ಬಾಬ್ಬಿ ಡಾರಿನ್ ಸ್ಪ್ಲಿಷ್ ಸ್ಪ್ಯಾಷ್ ಹಾಡನ್ನು ಡಂಕನ್ ಬಳಸಿದ್ದಾರೆ. ವಿಡಿಯೋ ಯಾವ ದೇಶದಲ್ಲಿ ಶೂಟ್ ಅನ್ನೋದು ಮಾತ್ರ ಗೊತ್ತಾಗಿಲ್ಲ.

ಈ ಚಿಕ್ಕ ವಿಡಿಯೋ ಕ್ಲಿಪ್ ಗೆ, ‘ಲಿಟ್ಲ್ ಮ್ಯಾನ್ಲೀಯಲ್ಲಿ ನಿನ್ನೆಯ ಈಜಾಟ ಜೋರಾಗಿತ್ತು…ನಂತರ ಟ್ರಾಫಿಕ್ ನಲ್ಲಿ @bellakukard ಜೊತೆ ನಿಂತು ಮಸ್ತ್ ಮಜಾ ಮಾಡಿದೆ…ನಾವು ಅನುಭವಿಸಿದ ಆನಂದ ಹೇಳಲಸಾಧ್ಯ, ಎಂದು ಕ್ಯಾಪ್ಷನ್ ನೀಡಲಾಗಿದೆ. ಈ ರೀಲನ್ನು ಮೂರು ವಾರಗಳ ಹಿಂದೆ ಶೇರ್ ಮಾಡಲಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸುಮಾರು ಎರಡು ಕೋಟಿ ವ್ಯೂಸ್ ಪಡೆದುಕೊಂಡಿದೆ ಮತ್ತು 8 ಲಕ್ಷ ಜನ ಅದನ್ನು ಇಷ್ಟಪಟ್ಟಿದ್ದಾರೆ.

ಒಬ್ಬರು, ‘ನಾನು ಇತ್ತೀಚಿಗೆ ವೀಕ್ಷಿಸಿರುವ ರೀಲ್ ಗಳಲ್ಲಿ ಅತ್ಯುತ್ತಮವಾದದ್ದು,’ ಎಂದು ಕಾಮೆಂಟ್ ಮಾಡಿದ್ದಾರೆ.

‘ಮುಂದೊಂದು ದಿನ ಅವರು ದೊಡ್ಡವರಾಗಬಹುದು, ಆಗದಿರುವುದೇ ಒಳ್ಳೆಯದು,’ ಅಂತ ಮತ್ತೊಬ್ಬರು ಬರೆದಿದ್ದಾರೆ.

‘ನೀರು ಕೊಳಕಾಗಿರದಿದ್ದರೆ ಇದು ನಿಜಕ್ಕೂ ಮೋಜು!’ ಅಂತ ಮೂರನೇಯವರು ಪ್ರತಿಕ್ರಿಯಿಸಿದ್ದಾರೆ. ಹಲವಾರು ಜನ ನಿಂತ ನೀರು ಹೊಲಸಾಗಿದ್ದರೆ ಅದು ಹಲವಾರು ರೋಗಗಳಿಗೆ ಮೂಲವಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಕಳೆದ ವರ್ಷ ಮೂವರು ವ್ಯಕ್ತಿಗಳು ಇದೇ ರೀತಿಯಾಗಿ ರೋಡ್ ಪಕ್ಕ ಕೂತು ತಮ್ಮ ಮುಂದಿದ್ದ ಸಾಗುತ್ತಿದ್ದ ಕಾರುಗಳಿಗೆ ತಮ್ಮ ಮೇಲೆ ನೀರು ಚಿಮ್ಮಿಸುವಂತೆ ಹೇಳುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ರಸ್ತೆ ಬದಿ ‘ನಮ್ಮ ಮೇಲೆ ನೀರು ಸಿಡಿಸಿ’ ಅಂತ ಕಾರ್ಡ್ ಬೋರ್ಡ್ ಫಲಕ ನೆಟ್ಟು ಅದರಿಂದ ಕೊಂಚ ದೂರದಲ್ಲಿ ಅವರು ಕೂತಿದ್ದರು. ತಮ್ಮ ಈ ವಿನೂತನ ಆಟವನ್ನು ಅವರ ಎಷ್ಟು ಆನಂದಿಸಿದರೆಂದರೆ, ಶಾಂಪೇನ್ ಮೂಲಕ ಅದನ್ನು ಆಚರಿಸಿದ್ದರು!

ಮತ್ತಷ್ಟು ವೈರಲ್ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ