Viral Video: ಮದುವೆ ಮನೆಯಲ್ಲಿ ಜನಕ್ಕೆ ಕುಣಿಯಲು ಬಾಜಾ ಬಜಂತ್ರಿ ಬೇಕಿಲ್ಲ, ಪಾತ್ರೆ-ಪಗಡೆ, ಕುರ್ಚಿಗಳಿದ್ದರೂ ಸಾಕು!

ವಾದ್ಯಮೇಳಕ್ಕೆ ಅವರು ಪಾತ್ರೆ ಮತ್ತು ಕುರ್ಚಿಗಳನ್ನು ಬಳಸಿದ್ದಾರೆ. ಖಾಲಿ ಟೇಬಲ್ ಗಳು ಢೋಲಕ್ ಮತ್ತು ತಬಲಾಗಳಾಗಿ ಮಾರ್ಪಟ್ಟಿವೆ. ಒಂದು ಕ್ಷಿಪ್ರಗತಿಯ ಟ್ಯೂನ್ ಇರುವ ಹಾಡಿಗೆ ಅವರು ಕುಣಿಯುತ್ತಿದ್ದಾರೆ.

Viral Video: ಮದುವೆ ಮನೆಯಲ್ಲಿ ಜನಕ್ಕೆ ಕುಣಿಯಲು ಬಾಜಾ ಬಜಂತ್ರಿ ಬೇಕಿಲ್ಲ, ಪಾತ್ರೆ-ಪಗಡೆ, ಕುರ್ಚಿಗಳಿದ್ದರೂ ಸಾಕು!
ಪಾತ್ರೆ ಪಗಡೆಗಳೊಂದಿಗೆ ಕುಣಿತ!Image Credit source: Twitter@imoriginalankit
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 13, 2022 | 5:24 PM

ಪಾದಗಳ (feet) ಕೆಲಸ ಚಲಿಸುವುದು ಅಂತ ಹೇಳುವುದನ್ನು ನಾವು ಕೇಳಿದ್ದೇವೆ ಆದರೆ ಅವುಗಳ ಹವ್ಯಾಸ ಅಥವಾ ಅಭ್ಯಾಸ ಮಾತ್ರ ಕುಣಿಯುವುದು! ಈ ಮಾತಿಗೆ ಅತ್ಯಂತ ಸೂಕ್ತವಾಗಿ ಸೂಟ್ ಆಗುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (social media) ಬಿರುಗಾಳಿಯೆಬ್ಬಿಸಿದೆ. ವಿಡಿಯೋದಲ್ಲಿ ನಮಗೆ ಕಾಣೋದು ವಿವಾಹ (wedding venue) ನಡೆಯತ್ತಿರುವ ಸ್ಥಳವೊಂದರಲ್ಲಿ ಒಂದಷ್ಟು ಜನ ಪಾತ್ರೆಗಳನ್ನು ಮತ್ತು ಕುರ್ಚಿಗಳನ್ನು ಬಾರಿಸುತ್ತಾ ಕುಣಿಯುತ್ತಿರುವುದು! ಅಂಕಿತ್ ಹೆಸರಿನ ವ್ಯಕ್ತಿಯೊಬ್ಬರು ಟ್ವಿಟರ್ ಮೈಕ್ರೊಬ್ಲಾಗಿಂಗ್ ಸೈಟ್ ನಲ್ಲಿ ಡಿಸೆಂಬರ್ 6, 2022 ರಂದು ಪೋಸ್ಟ್ ಮಾಡಿದ್ದಾರೆ. ಹುಚ್ಚುಕುಣಿತದ ವಿಡಿಯೋವನ್ನು ಇದುವರೆಗೆ 15,000 ಕ್ಕೂ ಹೆಚ್ಚು ವೀಕ್ಷಿಸಿದ್ದಾರೆ ಮತ್ತು ನೂರಾರು ಜನ ಕಾಮೆಂಟ್ ಮಾಡಿದ್ದಾರೆ.

ಊಟ ಮಾಡುವ ಸ್ಥಳದಲ್ಲಿ ಕೆಲ ಪುರುಷರು ಮೈಮೇಲೆ ಆವೇಶ ಬಂದವರಂತೆ ಕುಣಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವಾದ್ಯಮೇಳಕ್ಕೆ ಅವರು ಪಾತ್ರೆ ಮತ್ತು ಕುರ್ಚಿಗಳನ್ನು ಬಳಸಿದ್ದಾರೆ. ಖಾಲಿ ಟೇಬಲ್ ಗಳು ಢೋಲಕ್ ಮತ್ತು ತಬಲಾಗಳಾಗಿ ಮಾರ್ಪಟ್ಟಿವೆ. ಒಂದು ಕ್ಷಿಪ್ರಗತಿಯ ಟ್ಯೂನ್ ಇರುವ ಹಾಡಿಗೆ ಅವರು ಕುಣಿಯುತ್ತಿದ್ದಾರೆ.

ವಿಡಿಯೋ ಶೇರ್ ಆದ ಕೂಡಲೇ ನೆಟ್ಟಿಗರು ಬಗೆಬಗೆಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ‘ಒಮ್ಮೆ ಗುಂಡು ಹೊಟ್ಟೆಗೆ ಸೇರಿದರೆ ಸಾಕು ಹುಡುಗರು ಜನರೇಟರ್ ಸದ್ದಿಗೂ ಡ್ಯಾನ್ಸ್ ಮಾಡುತ್ತಾರೆ,’ ಅಂತ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ‘ಇವರ ವೈಬ್ ಬೇರೆಯೇ ತೆರನಾಗಿದೆ,’ ಅಂತ ಹೇಳಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ