ಪ್ರತಿ ವರ್ಷ ನವೆಂಬರ್ 17 ರಂದು ರಾಷ್ಟ್ರೀಯ ಅಪಸ್ಮಾರ ದಿನ ಅಥವಾ ಮೂರ್ಛೆ ರೋಗ ದಿನವನ್ನು ಆಚರಿಸಲಾಗುತ್ತದೆ. ಇದು ಮೆದುಳಿಗೆ ಸಂಬಂಧಪಟ್ಟ ಕಾಯಿಲೆಯಾಗಿದ್ದು, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಆಚರಿಸಲಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಎಪಿಲೆಪ್ಸಿ(Epilepsy) ಎಂದು ಕರೆಯಲಾಗುತ್ತದೆ. ಜೊತೆಗೆ ಫಿಟ್ಸ್ ಎಂದು ಕೂಡ ಇದನ್ನು ಕರೆಯಲಾಗುತ್ತದೆ.
ಯಾವುದೇ ಸ್ಪಷ್ಟ ಕಾರಣವಿಲ್ಲದೆ ನೀವು ಇದ್ದಕ್ಕಿದ್ದಂತೆ ಬೀಳುತ್ತೀರಾ ಅಥವಾ ಪ್ರಜ್ಞಾಹೀನರಾಗುತ್ತೀರಾ? ಬಾಯಿಯಿಂದ ನೊರೆಯುಂಟಾಗುತ್ತಿದೆಯೇ? ಇದು ಮೂರ್ಛೆ ರೋಗದ ಪ್ರಮುಖ ಲಕ್ಷಣವಾಗಿದ್ದು ಪ್ರಾರಂಭದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯವಾಗಿದೆ.
ಮೂರ್ಛೆರೋಗದಿಂದ ಬಳಲುತ್ತಿರುವವ ವ್ಯಕ್ತಿ ಹೆಚ್ಚಾಗಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಾನೆ. ಯಾಕೆಂದರೆ ಯಾವುದೇ ಕಾರಣಗಳಿಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಪ್ರಜ್ಞಾಹೀನನಾಗಿ ಬೀಳುವುದರಿಂದ ತನ್ನಿಂದ ಇತರರಿಗೂ ತೊಂದರೆಯನ್ನುಂಟು ಮಾಡಿದೆ ಎಂಬ ಚಿಂತೆ ಆತನಲ್ಲಿ ಕಾಡುತ್ತಿರುತ್ತದೆ. ಆದ್ದರಿಂದ ಮೂರ್ಛೆರೋಗದ ಜೊತೆಗೆ ಸಾಕಷ್ಟು ಮಾನಸಿಕ ಖಿನ್ನತೆಗೆ ಒಳಗಾಗುತ್ತಾನೆ ಎಂದು ಸಂಶೋಧನೆಯ ಮೂಲಕ ತಿಳಿದು ಬಂದಿದೆ.
ಮಕ್ಕಳಲ್ಲಿ ಈ ಕಾಯಿಲೆಯು ಜನ್ಮ ಗಾಯಗಳು, ಜ್ವರ, ಸೋಂಕು ಮತ್ತು ತಲೆಗೆ ಆಘಾತ ಮುಂತಾದವುಳಿಂದ ಕಂಡುಬರುತ್ತದೆ. ವಯಸ್ಕರಲ್ಲಿ ತಲೆಗೆ ಗಾಯ, ಆಲ್ಕೋಹಾಲ್, ಡ್ರಗ್ಸ್, ಜೆನೆಟಿಕ್ ಅಂಶಗಳು, ಪಾರ್ಶ್ವವಾಯು ಮತ್ತು ಪೆರಿನಾಟಲ್ ಅಸ್ವಸ್ಥತೆಗಳು ಕಾರಣವಾಗಬಹುದು.
ಆದರೆ ಸಾಕಷ್ಟು ಜನರಲ್ಲಿ ಇದು ಯಾವ ಕಾರಣಕ್ಕೆ ಸಂಭವಿಸುತ್ತದೆ ಎಂಬುದರ ಎಂಬುದರ ಕುರಿತು ತಿಳಿದಿಲ್ಲ. ನಿಮ್ಮನ್ನು ದುರ್ಬಲರನ್ನಾಗಿಸುವ ಈ ರೋಗದ ಕುರಿತು ನೀವು ತಿಳಿದುಕೊಂಡು ಸರಿಯಾದ ಚಿಕಿತ್ಸೆಯನ್ನು ಪಡೆಯುವುದು ಅತ್ಯಂತ ಅಗತ್ಯವಾಗಿದೆ.
ಸಾಮಾನ್ಯವಾಗಿ ಈ ಕಾಯಿಲೆಯಿಂದಾಗಿ ಮೂರ್ಛೆ ಬಿದ್ದವರಿಗೆ ಕಬ್ಬಿಣದ ವಸ್ತುಗಳು, ಹಾಗೂ ಹೆಚ್ಚಾಗಿ ಕೀಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಕೊಡಲಾಗುತ್ತದೆ. ಇದ್ದರಿಂದ ಆ ಕ್ಷಣಕ್ಕೆ ಪರಿಹಾರ ಸಿಗಬಹುದೇ ವಿನಹ ಇದುವೇ ಶಾಶ್ವತ ಪರಿಹಾರವಲ್ಲ. ಆದ್ದರಿಂದ ಆದಷ್ಟು ಇದಕ್ಕೆ ಸಂಬಂಧಿಸಿದ ತಜ್ಞರನ್ನು ಭೇಟಿ ಮಾಡಿ. ಈ ಕಾಯಿಲೆಗೆ ಪ್ರಾರಂಭದಲ್ಲೇ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ.
ಈ ಕಾಯಿಲೆಯ ಪ್ರಮುಖ ಲಕ್ಷಣವೆಂದರೆ:
ಯಾವುದೇ ಕಾರಣವಿಲ್ಲದೆ ಆಕಸ್ಮಿಕವಾಗಿ ನೀವು ಕುಸಿದು ಬಿದ್ದರೆ ಇದು ಈ ಕಾಯಿಲೆಯ ಲಕ್ಷಣವಾಗಿರಬಹುದು. ಯಾವುದೇ ಸಂಕ್ಷಿಪ್ತ ಅವಧಿಗೆ ಶಬ್ದ ಅಥವಾ ಪದಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಾಗದಿರುವುದು.
ಇದನ್ನು ಓದಿ: ಬಾಯಿ ಹುಣ್ಣು ನಿಮಗೆ ಸಾಕಷ್ಟು ತೊಂದರೆಯನ್ನುಂಟು ಮಾಡುತ್ತಿದೆಯೇ? ಆಯುರ್ವೇದ ತಜ್ಞರ ಸಲಹೆಯನ್ನು ಪಾಲಿಸಿ
ನೀವು ಈಕಾಯಿಲೆಗೆ ಪ್ರಾರಂಭದಲ್ಲಿಯೇ ಸೂಕ್ತ ಚಿಕಿತ್ಸೆ ನೀಡದ್ದಿದ್ದರೆ ಕಾಲ ನಂತರದಲ್ಲಿ ಶಸ್ತ್ರ ಕ್ರಿಯೆಯ ವರೆಗೆ ತಲುಪುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಯಾವುದೇ ಕಾಯಿಲೆಯನ್ನು ನಿರ್ಲಕ್ಷಿಸಲು ಹೋಗದಿರಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: