ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳಿಗೂ ಎದೆ ನೋವು ತಪ್ಪಿದ್ದಲ್ಲ. ಹಾಗಾಗಿ ಇದರಿಂದ ಪರಿಹಾರ ಕಂಡುಕೊಳ್ಳಲು ಆಯುರ್ವೇದದ ಶಕ್ತಿಯನ್ನು ಬಲಿಸಿಕೊಳ್ಳಬಹುದು. ಇವು ಅಸ್ವಸ್ಥತೆಯನ್ನು ಕಡಿಮೆ ಮಾಡಲು ಪ್ರಾಚೀನ ಕಾಲದಿಂದ ಮಾಡಿಕೊಂಡು ಬಂದ ನೈಸರ್ಗಿಕ ಪರಿಹಾರಗಳಾಗಿವೆ. ಹೃದಯ, ಶ್ವಾಸಕೋಶಗಳು, ಸ್ನಾಯು ಅಸ್ಥಿಪಂಜರ ವ್ಯವಸ್ಥೆ, ಪ್ಯಾನಿಕ್ ಅಸ್ವಸ್ಥತೆಗಳು ಮತ್ತು ಅಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳಂತಹ ಹಲವಾರು ಕಾರಣಗಳಿಂದಾಗಿ ಎದೆ ನೋವು ಉಂಟಾಗಬಹುದು. ಅದಕ್ಕೆ ಅನುಗುಣವಾಗಿ ಕ್ರಮ ತೆಗೆದುಕೊಳ್ಳಲು ಆ ಯುರ್ವೇದದ ಚಿಕಿತ್ಸೆ ನಿಮಗೆ ಸಹಾಯ ಮಾಡುತ್ತದೆ ಎಂದು ಆಯುರ್ವೇದ ಮತ್ತು ಕರುಳಿನ ಆರೋಗ್ಯ ತರಬೇತುದಾರ ಡಾ.ಡಿಂಪಲ್ ಜಂಗ್ಡಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಎದೆ ನೋವನ್ನು ಹಿಡಿತದಲ್ಲಿಟ್ಟುಕೊಳ್ಳಲು ಕೆಲವು ಪರಿಣಾಮಕಾರಿ ಆಯುರ್ವೇದ ಪರಿಹಾರಗಳನ್ನು ಅವರು ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಅಲೋವೆರಾ: ಇದು ಅದ್ಭುತ ಮೂಲಿಕೆಯಾಗಿದ್ದು, ದೇಹಕ್ಕೆ ವ್ಯಾಪಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದು ನಿಮ್ಮ ಹೃದಯರಕ್ತನಾಳದ ವ್ಯವಸ್ಥೆಯನ್ನು ಬಲಪಡಿಸಲು, ಉತ್ತಮ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು, ಟ್ರೈಗ್ಲಿ ಸರೈಡ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇವೆಲ್ಲವೂ ಎದೆ ನೋವನ್ನು ನಿವಾರಿಸಲು ಸಹಾಯ ಮಾಡುವುದರಿಂದ, ಅಲೋವೆರಾ ರಸವನ್ನು ದಿನಕ್ಕೆ 1 ರಿಂದ 2 ಬಾರಿ ಕುಡಿಯುವುದು ಉತ್ತಮ.
ಬಿಸಿ ಪಾನೀಯಗಳು: ಬಿಸಿಯಾದ ನೀರು ಅಥವಾ ಪಾನೀಯಗಳನ್ನು ಕುಡಿಯುವುದು ತುಂಬಾ ಒಳ್ಳೆಯದು. ಅದು ಒಂದು ಲೋಟ ಬಿಸಿ ನೀರು ಅಥವಾ ತಾಜಾ ಕಪ್ ಗಿಡಮೂಲಿಕೆ ಚಹಾವಾಗಿರಲಿ, ಅಥವಾ ಬೇರೆ ಬಿಸಿಯಾದ ಪಾನೀಯವಾಗಿರಲಿ ಇವು ಉಬ್ಬರ ಅಥವಾ ಅಜೀರ್ಣದಿಂದ ಉಂಟಾಗುವ ಎದೆ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಬಿಸಿ ಪಾನೀಯಗಳು ಹೊಟ್ಟೆಯುಬ್ಬರವನ್ನು ಕಡಿಮೆ ಮಾಡಲು ತುಂಬಾ ಸಹಕಾರಿಯಾಗಿದೆ ಎಂಬುದು ತಜ್ಞರ ಅಭಿಪ್ರಾಯ.
ಇದನ್ನೂ ಓದಿ:Home Remedies: ಕೆಮ್ಮಿ ಕೆಮ್ಮಿ ಸಾಕಾಯ್ತಾ? ಹಾಗಿದ್ರೆ ಈ ಮನೆಮದ್ದನ್ನು ಪ್ರಯತ್ನಿಸಿ ನೋಡಿ
ತುಳಸಿ: ತುಳಸಿಯಲ್ಲಿ ಹೆಚ್ಚಿನ ಮಟ್ಟದ ವಿಟಮಿನ್ ಕೆ ಇದ್ದು ಮೆಗ್ನೀಸಿಯಮ್ ಗುಣವನ್ನು ಹೆಚ್ಚಾಗಿ ಹೊಂದಿದೆ. ಮೆಗ್ನೀಸಿಯಮ್ ಹೃದಯಕ್ಕೆ ರಕ್ತದ ಹರಿವನ್ನು ಉತ್ತೇಜಿಸುತ್ತದೆ ಮತ್ತು ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ, ವಿಟಮಿನ್ ಕೆ ನಿಮ್ಮ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ನಿರ್ಮಾಣವಾಗುವುದನ್ನು ತಡೆಯುತ್ತದೆ. ಅಲ್ಲದೆ ಹೃದಯದ ಅಸ್ವಸ್ಥತೆಗಳು ಮತ್ತು ಎದೆ ನೋವಿನ ಚಿಕಿತ್ಸೆಗೆ ಸಹಾಯ ಮಾಡುತ್ತದೆ. ಇನ್ನು ಹೆಚ್ಚಿನ ಪರಿಹಾರಕ್ಕಾಗಿ 8-10 ತುಳಸಿ ಎಲೆಗಳನ್ನು ಜಗಿಯುವುದು, ತುಳಸಿ ಚಹಾವನ್ನು ಕುಡಿಯುವುದು, ಅಥವಾ ಒಂದು ಟೀಸ್ಪೂನ್ ತುಳಸಿ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸುವುದರಿಂದ ದೇಹಕ್ಕೂ ಹಾಗೂ ಎದೆ ನೋವಿನಿಂದ ಮುಕ್ತಿ ಪಡೆಯಲು ಸಹಕಾರಿಯಾಗಿದೆ. ಇವೆಲ್ಲವನ್ನೂ ನೀವು ಮನೆಯಲ್ಲಿಯೇ ಮಾಡಿಕೊಳ್ಳಬಹುದಾಗಿದ್ದು ದೇಹಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ.
ನಿಮ್ಮ ದೇಹದಲ್ಲಿ ಎದೆ ನೋವು, ಅಜೀರ್ಣ ಅಥವಾ ತೀವ್ರವಾದ ದೈಹಿಕ ಚಟುವಟಿಕೆಗೆ ಸಂಬಂಧಿಸಿದ್ದರೆ ಮೇಲೆ ಚರ್ಚಿಸಿದ ಆಯುರ್ವೇದ ಪರಿಹಾರಗಳು ಪರಿಣಾಮಕಾರಿಯಾಗಿದೆ ಆದರೆ ಇವುಗಳನ್ನು ಮಾಡಿದ ನಂತರವೂ ನಿರಂತರ ಎದೆ ನೋವು ಕಾಣಿಸಿಕೊಳ್ಳುತ್ತಿದ್ದರೆ ತಕ್ಷಣ ವೈದ್ಯಕೀಯ ಆರೈಕೆಯ ಅಗತ್ಯವಿದೆ, ಏಕೆಂದರೆ ಇದು ಗಂಭೀರ ಸ್ಥಿತಿ ನಿರ್ಲಕ್ಷ ಮಾಡದೇ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: