Home Remedies: ಕೆಮ್ಮಿ ಕೆಮ್ಮಿ ಸಾಕಾಯ್ತಾ? ಹಾಗಿದ್ರೆ ಈ ಮನೆಮದ್ದನ್ನು ಪ್ರಯತ್ನಿಸಿ ನೋಡಿ
Health Tips in kannada: ದೀರ್ಘಕಾಲದವರೆಗಿನ ಕೆಮ್ಮಿನ ಸಮಸ್ಯೆಯಿದ್ದರೆ ವೈದ್ಯರನ್ನು ಭೇಟಿಯಾಗುವುದು ಉತ್ತಮ. ಇದಾಗ್ಯೂ ಕೆಲವೊಮ್ಮೆ ಕಾಡುವ ಒಣ ಕೆಮ್ಮಿನ ಸಮಸ್ಯೆಯನ್ನು ಕೆಲ ಮನೆಮದ್ದುಗಳ ಪರಿಹಾರ ಕಾಣಬಹುದು. ಅಂತಹ ಕೆಲ ಮದ್ದುಗಳನ್ನು ಇಲ್ಲಿ ತಿಳಿಸಲಾಗಿದೆ.
Home Remedies For Dry Cough: ಕೆಮ್ಮು ಎಂಬುದು ಸಾಮಾನ್ಯ ಸಮಸ್ಯೆ. ಆದರೆ ಇದನ್ನು ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಅದರಲ್ಲೂ ಒಣ ಕೆಮ್ಮು ಕಾಣಿಸಿಕೊಂಡರಂತೂ ಕೆಮ್ಮಿ ಕೆಮ್ಮಿನೇ ಸಾಕಾಗಿ ಬಿಡುತ್ತದೆ. ಇದೀಗ ಹವಮಾನ ಬದಲಾವಣೆ ಮತ್ತು ಮಳೆಗಾಲದಿಂದಾಗಿ ಒಣ ಕೆಮ್ಮಿನ ಸಮಸ್ಯೆ ಸ್ವಲ್ಪ ಹೆಚ್ಚೇ ಕಾಡುತ್ತದೆ. ಪದೇ ಪದೇ ಕೆಮ್ಮುದರಿಂದ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ, ಸತತವಾಗಿ ಕೆಮ್ಮಿದರೆ ಸೋಂಕಿ ಭಯ ಕೂಡ ಕಾಡುತ್ತದೆ. ಹೀಗಾಗಿ ದೀರ್ಘಕಾಲದವರೆಗಿನ ಕೆಮ್ಮಿನ ಸಮಸ್ಯೆಯಿದ್ದರೆ ವೈದ್ಯರನ್ನು ಭೇಟಿಯಾಗುವುದು ಉತ್ತಮ. ಇದಾಗ್ಯೂ ಕೆಲವೊಮ್ಮೆ ಕಾಡುವ ಒಣ ಕೆಮ್ಮಿನ ಸಮಸ್ಯೆಯನ್ನು ಕೆಲ ಮನೆಮದ್ದುಗಳ ಪರಿಹಾರ ಕಾಣಬಹುದು. ಅಂತಹ ಕೆಲ ಮದ್ದುಗಳನ್ನು ಇಲ್ಲಿ ತಿಳಿಸಲಾಗಿದೆ.
ಜೇನುತುಪ್ಪ: ನೀವು ಒಣ ಕೆಮ್ಮಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ಜೇನುತುಪ್ಪ ನಿಮ್ಮ ಮೊದಲ ಮನೆಮದ್ದು. ಏಕೆಂದರೆ ಜೇನುತುಪ್ಪದಲ್ಲಿ ಅನೇಕ ಔಷಧೀಯ ಗುಣಗಳಿವೆ. ಇದರ ಉತ್ಕರ್ಷಣ ನಿರೋಧಕ ಗುಣಗಳು ಕೆಮ್ಮು ಮೊದಲಾದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದರ ಹೊರತಾಗಿ, ಗಂಟಲಿನ ನೋವನ್ನು ನಿವಾರಿಸುವಲ್ಲಿ ಜೇನು ಸಹಕಾರಿಯಾಗಿದೆ. ಇದಕ್ಕಾಗಿ ಎರಡು ಚಮಚ ಜೇನುತುಪ್ಪವನ್ನು ಹರ್ಬಲ್ ಟೀ ಅಥವಾ ಲಿಂಬೆರಸದಲ್ಲಿ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಿದರೆ ನಿಮಗೆ ಪರಿಹಾರ ಸಿಗುತ್ತದೆ.
ಉಪ್ಪುನೀರು: ಬೆಚ್ಚಗಿನ ಉಪ್ಪುನೀರಿನೊಂದಿಗೆ ಮುಕ್ಕಳಿಸಿದರೆ ಕೆಮ್ಮಿನ ಸಮಸ್ಯೆಯನ್ನು ದೂರ ಮಾಡಬಹುದು. ಉಪ್ಪುನೀರಿನೊಂದಿಗೆ ಗಾರ್ಗ್ಲಿಂಗ್ ಮಾಡುವುದರಿಂದ ಶ್ವಾಸಕೋಶದಲ್ಲಿ ಸಂಗ್ರಹವಾಗಿರುವ ಲೋಳೆಯೂ ಕಡಿಮೆಯಾಗುತ್ತದೆ. ಇದಕ್ಕಾಗಿ, ಒಂದು ಕಪ್ ಉಗುರುಬೆಚ್ಚನೆಯ ನೀರಿನಲ್ಲಿ ಕಾಲು ಭಾಗದಷ್ಟು ಉಪ್ಪನ್ನು ಬೆರೆಸಿ ಮತ್ತು ದಿನಕ್ಕೆ ಹಲವಾರು ಬಾರಿ ಬಾಯಿ ಮುಕ್ಕಳಿಸಿ.
ಶುಂಠಿ: ಶುಂಠಿಯಲ್ಲಿ ಹಲವು ಔಷಧೀಯ ಗುಣಗಳಿವೆ. ಇದು ಕೆಮ್ಮಿನ ಸಮಸ್ಯೆಗೂ ಪರಿಹಾರ ನೀಡುತ್ತದೆ. ಕರಿಮೆಣಸು ಮತ್ತು ಶುಂಠಿಯ ಚಹಾ ಕುಡಿಯುವುದರಿಂದ ಕೆಮ್ಮಿನ ಸಮಸ್ಯೆ ಉಪಶಮನವಾಗುತ್ತದೆ. ಆದಾಗ್ಯೂ, ಇದನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸುವುದು ಮಾತ್ರ ಉತ್ತಮ.
ನೀಲಗಿರಿ ಎಣ್ಣೆ: ಕೆಮ್ಮು ನಿವಾರಣೆಗೆ, ಕೆಲವು ಹನಿ ನೀಲಗಿರಿ ಎಣ್ಣೆಯನ್ನು ತೆಂಗಿನ ಎಣ್ಣೆಯಲ್ಲಿ ಬೆರೆಸಿ. ಬಳಿಕ ಅದನ್ನು ಎದೆಗೆ ಮಸಾಜ್ ಮಾಡಿ. ಹಾಗೆಯೇ ನೀಲಗಿರಿ ಎಣ್ಣೆಯ ಹನಿಗಳನ್ನು ಬಿಸಿನೀರಿನಲ್ಲಿ ಸೇರಿಸಿ ಹಬೆಯನ್ನೂ ತೆಗೆದುಕೊಳ್ಳಿ. ಇದು ಎದೆಯನ್ನು ಹಗುರಗೊಳಿಸುತ್ತದೆ ಮತ್ತು ಉಸಿರಾಟವನ್ನು ಸುಲಭಗೊಳಿಸಿ ಕೆಮ್ಮಿನ ಸಮಸ್ಯೆಯನ್ನು ದೂರ ಮಾಡುತ್ತದೆ.
ಪುದೀನಾ ಚಹಾ: ಗಂಟಲಿನ ಕಿರಿಕಿರಿ ಮತ್ತು ನೋವನ್ನು ನಿವಾರಿಸಲು ಪುದೀನಾ ಎಲೆಗಳು ಕೂಡ ಸಹಕಾರಿ. ಇದಕ್ಕಾಗಿ, ಪುದೀನಾ ಚಹಾವನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯಿರಿ. ಇದರಿಂದ ಕೆಮ್ಮಿನ ಸಮಸ್ಯೆಯಿಂದ ನಿಮಗೆ ಶೀಘ್ರ ಪರಿಹಾರ ಸಿಗುತ್ತದೆ.
ಕರಿಮೆಣಸು: ಒಣ ಕೆಮ್ಮಿನ ಸಮಸ್ಯೆ ಜಾಸ್ತಿಯಾಗಿದ್ದರೆ, ಎರಡು ಚಿಟಿಕೆಯಷ್ಟು ಕರಿಮೆಣಸಿನ ಪುಡಿಗೆ ಅರ್ಧ ಚಮಚ ಚಮಚ ಜೇನುತುಪ್ಪ ಸೇರಿಸಿ. ಈ ಮಿಶ್ರಣವನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸೇವಿಸುವುದರಿಂದ ಒಣಕೆಮ್ಮನ್ನು ನಿವಾರಣೆ ಮಾಡಬಹುದು.
ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ
ಇದನ್ನೂ ಓದಿ: ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ
ಇದನ್ನೂ ಓದಿ: Kl Rahul: ಪೂಜಾರ, ರಹಾನೆ ಕಳಪೆ ಫಾರ್ಮ್ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?
(6 Natural Home Remedies For Dry Cough)