ಕಳೆದೊಂದು ದಶಕದಲ್ಲಿ ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿರುವ ವಯಸ್ಕರ ಸಂಖ್ಯೆ ದ್ವಿಗುಣಗೊಂಡಿದೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 07, 2022 | 4:47 PM

ಈಗ ವೈದ್ಯಕೀಯ ವಿಜ್ಞಾನ ಸಾಕಷ್ಟು ಮುಂದುವರಿದಿರುವುದರಿಂದ ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಪರಿಹಾರ ಸಿಗುತ್ತಿದೆ ಮತ್ತು ಕಾಯಿಲೆ ಉಲ್ಬಣಗೊಳ್ಳದಂತೆ ತಡೆಯುವುದು ಸಾಧ್ಯವಾಗುತ್ತಿದೆ. ಸಾಮಾನ್ಯವಾಗಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಕಿಡ್ನಿ ಕಾಯಿಲೆಗಳಿಗೆ ಈಡಾಗುವ ಅಪಾಯ ಜಾಸ್ತಿ.

ಕಳೆದೊಂದು ದಶಕದಲ್ಲಿ ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿರುವ ವಯಸ್ಕರ ಸಂಖ್ಯೆ ದ್ವಿಗುಣಗೊಂಡಿದೆ!
ರೋಗಗ್ರಸ್ತ ಮೂತ್ರಪಿಂಡ
Follow us on

ಮೂತ್ರಪಿಂಡ ನಮ್ಮ ದೇಹದ ಬಹು ಮುಖ್ಯ ಅಂಗ (vital organ) ಮಾರಾಯ್ರೇ. ನಮ್ಮಲ್ಲಿ ಇತ್ತೀಚಿಗೆ ಕಿಡ್ನಿಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತಿವೆ. ರಕ್ತದಲ್ಲಿನ ಕಲ್ಮಶವನ್ನು ಸೋಸಿ ರಕ್ತವನ್ನು ಶುದ್ಧೀಕರಿಸುವ ಸಾಮರ್ಥ್ಯವನ್ನು ಕಿಡ್ನಿ ಕಳೆದುಕೊಂಡಾಗ ಅದಕ್ಕೆ ಸಂಬಂಧಿಸಿದ ಕಾಯಿಲೆಗಳು ಶುರುವಿಟ್ಟುಕೊಳ್ಳುತ್ತವೆ. ನಮ್ಮ ದೇಶದಲ್ಲಿ ಕಿಡ್ನಿ ಸಮಸ್ಯೆಯಿಂದ (kidney ailments) ಬಳಲುತ್ತಿರುವ ವಯಸ್ಕರ (elderly people) ಸಂಖ್ಯೆ ಕಳೆದೊಂದು ದಶಕದಲ್ಲಿ ದ್ವಿಗುಣಗೊಂಡಿದೆ. ವೈದ್ಯಕೀಯ ಮೂಲಗಳ ಪ್ರಕಾರ ನಮ್ಮ ಜನಸಂಖ್ಯೆಯ ಶೇಕಡಾ 8-10 ಭಾಗದಷ್ಟು ಹಿರಿಯ ನಾಗರಿಕರು ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ಈಗ ವೈದ್ಯಕೀಯ ವಿಜ್ಞಾನ ಸಾಕಷ್ಟು ಮುಂದುವರಿದಿರುವುದರಿಂದ ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಪರಿಹಾರ ಸಿಗುತ್ತಿದೆ ಮತ್ತು ಕಾಯಿಲೆ ಉಲ್ಬಣಗೊಳ್ಳದಂತೆ ತಡೆಯುವುದು ಸಾಧ್ಯವಾಗುತ್ತಿದೆ. ಸಾಮಾನ್ಯವಾಗಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಕಿಡ್ನಿ ಕಾಯಿಲೆಗಳಿಗೆ ಈಡಾಗುವ ಅಪಾಯ ಜಾಸ್ತಿ. ಹಾಗಾಗಿ ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿರುವವರು ತಮ್ಮ ಆಹಾರ ಕ್ರಮದ ಬಗ್ಗೆ ಎಚ್ಚರವಹಿಸುವುದು ಮತ್ತು ಅರೋಗ್ಯಕರ ಜೀವನಶೈಲಿಯನ್ನು ನಡೆಸುವುದು ಅತ್ಯವಶ್ಯಕವಾಗಿದೆ.

ಕೆಲವು ಆಹಾರಗಳು ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಉತ್ತಮ (ಸೂಪರ್ ಪುಡ್) ಎಂದು ಹೇಳಲಾಗಿದೆ. ಅವು ಕೆಳಗಿನಂತಿವೆ.

ಕ್ಯಾಬೇಜ್

ಸಿಫೆರಸ್ ಪ್ರಭೇಧಕ್ಕೆ ಸೇರಿದ ತರಕಾರಿ ಎನಿಸಿಕೊಂಡಿರುವ ಕ್ಯಾಬೇಜ್ (ಎಲೆಕೋಸು) ಹೇರಳವಾಗಿ ವಿಟಮಿನ್, ಲವಣಾಂಶಗಳಿಂದ ಕೂಡಿರುವ ಜೊತೆಗೆ ಯಥೇಚ್ಛ ಪ್ರಮಾಣದಲ್ಲಿ ಕೆ, ಸಿ ಮತ್ತು ಬಿ ಜೀವಸತ್ವಗಳಿಂದ ಕೂಡಿದೆ. ಎಲೆಕೋಸು ಕರಗದ ನಾರಿನಾಶವನ್ನು ಹೊಂದಿರುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ನೆರವಾಗುತ್ತದೆ ಮತ್ತು ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಎಲೆಕೋಸಿನಲ್ಲಿ ಪೊಟ್ಯಾಸಿಯಮ್, ರಂಜಕ ಮತ್ತು ಸೋಡಿಯಂ ಕಡಿಮೆ ಪ್ರಮಾಣದಲ್ಲಿದ್ದು, ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಅತ್ಯುತ್ತಮ ಎಂದು ಹೇಳಲಾಗಿದೆ.

ಎಲೆಕೋಸು

ಅನೇಕ ಪೋಷಕಾಂಶಗಳ ಮೂಲವಾಗಿರುವ ತರಕಾರಿ ಎಂದರೆ ಹೂಕೋಸು. ಇದು ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಬಿ ವಿಟಮಿನ್ ಫೋಲೇಟ್ ಅನ್ನು ಒಳಗೊಂಡಿದೆ. ಹೂಕೋಸು ದೇಹದಲ್ಲಿರುಬಹುದಾದ ವಿಷಕಾರಿ ಅಂಶಗಳನ್ನು ಫ್ಲಶ್ ಮಾಡಲು ಸಹಾಯ ಮಾಡುತ್ತದೆ. ಈ ತರಕಾರಿಯನ್ನು ಕಚ್ಚಾ ರೂಪದಲ್ಲಿ ಸೇವಿಸಬಹುದು, ಆವಿಯಲ್ಲಿ ಬೇಯಿಸಬಹುದು ಅಥವಾ ಸೂಪ್ ತಯಾರಿಸಿ ಸೇವಿಸಬಹುದು. ಒಂದು ಕಪ್ ಬೇಯಿಸಿದ ಹೂಕೋಸುವಿನ ದ್ರವದಲ್ಲಿ 19 ಮಿಗ್ರಾಂ ಸೋಡಿಯಂ, 176 ಮಿಗ್ರಾಂ ಪೊಟ್ಯಾಸಿಯಮ್ ಮತ್ತು 40 ಮಿಗ್ರಾಂ ರಂಜಕ ಇರುತ್ತವೆ.

ಬೆಳ್ಳುಳ್ಳಿ

ಮೂತ್ರಪಿಂಡದ ಸಮಸ್ಯೆ ಇರುವವರು ಆಹಾರದಲ್ಲಿ ಕಡಿಮೆ ಪ್ರಮಾಣದ ಸೋಡಿಯಂ (ಉಪ್ಪು) ಬಳಸಲು ಸಲಹೆ ನೀಡಲಾಗುತ್ತದೆ. ಬೆಳ್ಳುಳ್ಳಿಯು ಮ್ಯಾಂಗನೀಸ್, ವಿಟಮಿನ್ ಸಿ ಮತ್ತು ವಿಟಮಿನ್ ಬಿ 6 ಗಳನ್ನು ಒಳಗೊಂಡಿದೆ. ಇದು ಉಪ್ಪಿಗೆ ರುಚಿಕರವಾದ ಪರ್ಯಾಯವಾಗಿದೆ, ಮತ್ತು ನಾವು ತಯಾರಿಸುವ ಭಕ್ಷ್ಯಗಳಿಗೆ ಆಹ್ಲಾದಕರ ಪರಿಮಳ ನೀಡುತ್ತದಲ್ಲದೆ ಸಾಕಷ್ಟು ಪೌಷ್ಟಿಕತೆಯಿಂದ ಕೂಡಿದೆ. 9 ಗ್ರಾಂ ಬೆಳ್ಳುಳ್ಳಿಯಲ್ಲಿ 1.5 ಮಿಗ್ರಾಂ ಸೋಡಿಯಂ, 36 ಮಿಗ್ರಾಂ ಪೊಟ್ಯಾಸಿಯಮ್ ಮತ್ತು 14 ಮಿಗ್ರಾಂ ರಂಜಕವಿದೆ.

ಕೆಂಪು ದ್ರಾಕ್ಷಿ

ಈ ಸಿಹಿ ಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಫ್ಲೇವನಾಯ್ಡ್ ಎಂಬ ಉತ್ಕರ್ಷಣ ನಿರೋಧಕಗಳು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಅವು ಸಾಕಷ್ಟು ಪ್ರಮಾಣದ ಪೌಷ್ಟಿಕಾಂಶವನ್ನು ಹೊಂದಿರುತ್ತವೆ ಮತ್ತು ಮೂತ್ರಪಿಂಡದ ಅರೋಗ್ಯಕ್ಕೆ ಅನುಕೂಲಕರವಾಗಿವೆ. 75 ಗ್ರಾಂ ಕೆಂಪು ದ್ರಾಕ್ಷಿಹಣ್ಣಿನಲ್ಲಿ 1.5 ಮಿಗ್ರಾಂ ಸೋಡಿಯಂ, 144 ಮಿಗ್ರಾಂ ಪೊಟ್ಯಾಸಿಯಮ್ ಮತ್ತು 15 ಮಿಗ್ರಾಂ ರಂಜಕ ಇರುತ್ತವೆ. ದ್ರಾಕ್ಷಿಯನ್ನು ಲಘು ಉಪಹಾರವಾಗಿ ಸೇವಿಸಿರಿ, ಆಥವಾ ಹಣ್ಣು ಇಲ್ಲವೇ ಚಿಕನ್ ಸಲಾಡ್‌ಗೆ ಸೇರಿಸಿ ತಿನ್ನಿರಿ. ಕೆಂಪು ದ್ರಾಕ್ಷಿ ಜ್ಯೂಸ್ ಮಾಡಿಕೊಂಡು ಕುಡಿದರೆ ಇನ್ನೂ ಉತ್ತಮ.

ಮೊಟ್ಟೆಯ ಬಿಳಿಭಾಗ

ಮೊಟ್ಟೆಯ ಬಿಳಿಭಾಗವು ಉತ್ತಮ ಗುಣಮಟ್ಟದ, ಮೂತ್ರಪಿಂಡ ಸ್ನೇಹಿ ಪ್ರೋಟೀನ್‌ ಅನ್ನು ಒದಗಿಸುತ್ತದೆ. ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗುವ ಜನರಿಗೆ ಇದು ಅತ್ಯುತ್ತಮ. ಇದರಲ್ಲಿ ರಂಜಕದ ಪ್ರಮಾಣ ಸೀಮಿತವಾಗಿದೆ. 66 ಗ್ರಾಂ ಮೊಟ್ಟೆಯ ಬಿಳಿಭಾಗವು 110 ಮಿಗ್ರಾಂ ಸೋಡಿಯಂ, 108 ಮಿಗ್ರಾಂ ಪೊಟ್ಯಾಸಿಯಮ್ ಮತ್ತು 10 ಮಿಗ್ರಾಂ ರಂಜಕವನ್ನು ಹೊಂದಿರುತ್ತದೆ. ಆಮ್ಲೆಟ್ ಅಥವಾ ಸ್ಯಾಂಡ್‌ವಿಚ್‌ಗಳಿಗೆ ಮೊಟ್ಟೆಯ ಬಿಳಿಭಾಗವನ್ನು ಬಳಸಿ. ಮೊಟ್ಟೆಗಳನ್ನು ಗಟ್ಟಿಯಾಗಿ ಕುದಿಸಿದ ಬಳಿಕ ಟ್ಯೂನ್ ಅಥವಾ ಹಸಿರು ಸಲಾಡ್‌ಗಳಲ್ಲಿ ಬಳಸಲು ಬಿಳಿಭಾಗವನ್ನು ಬಳಸಿ.

ಇದನ್ನೂ ಓದಿ: ಆತಂಕದ ಹಾಗೆ ಒತ್ತಡ ಕೂಡ ನಿಮ್ಮ ದೇಹ ಮತ್ತು ಆರೋಗ್ಯದ ಮೇಲೆ ಅನೇಕು ದುಷ್ಪರಿಣಾಮಗಳನ್ನು ಬೀರುತ್ತದೆ