ಮಧುಮೇಹದಿಂದ ಬಳಲುತ್ತಿರುವಿರೇ? ನಿಮ್ಮ ಆಹಾರ ಕ್ರಮ ಬದಲಿಸಿಕೊಳ್ಳಿ ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞೆ ಅಂಜಲಿ ಮುಖರ್ಜಿ

Health Tips | Diabetes: ತಿನ್ನುವ ಆಹಾರದಲ್ಲಿ ನಾರಿನಂಶದ ಪದಾರ್ಥಗಳ ಪ್ರಮಾಣ ಹೆಚ್ಚಿಸಬೇಕು. ಮಧುಮೇಹವನ್ನು ನಿಯಂತ್ರಣಕ್ಕೆ ತರಲು ಧಾನ್ಯಗಳು, ದ್ವಿದಳ ಧಾನ್ಯಗಳು, ಡ್ರೈಫ್ರುಟ್ಸ್ , ಹಣ್ಣು ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು ಅಂತ ಅಂಜಲಿ ಹೇಳುತ್ತಾರೆ.

ಮಧುಮೇಹದಿಂದ ಬಳಲುತ್ತಿರುವಿರೇ? ನಿಮ್ಮ ಆಹಾರ ಕ್ರಮ ಬದಲಿಸಿಕೊಳ್ಳಿ ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞೆ ಅಂಜಲಿ ಮುಖರ್ಜಿ
ಮಧುಮೇಹವನ್ನು ನಿಯಂತ್ರಣದಲ್ಲಿಡುವುದು
Follow us
TV9 Web
| Updated By: shivaprasad.hs

Updated on:Apr 28, 2022 | 8:57 AM

ನಮ್ಮ ದೇಹದಲ್ಲಿ ಹರಿದಾಡುವ ರಕ್ತದಲ್ಲಿ ಸಕ್ಕರೆಯ ಪ್ರಮಾನ ಜಾಸ್ತಿಯಾದಾಗ ಅದು ಮಧುಮೇಹ (ಡಯಾಬಿಟೀಸ್) (Diabetes) ಅಂತ ಕರೆಸಿಕೊಳ್ಳುತ್ತದೆ. ಹಾಗೆ ನೋಡಿದರೆ ಡಯಾಬಿಟೀಸ್ ಅನ್ನೋದು ಒಂದು ರೋಗ ಮಾತ್ರ, ಆದರೆ ದೇಹದಲ್ಲಿ ಹಲವಾರು ರೋಗಳನ್ನು ಉಂಟು ಮಾಡುತ್ತದೆ. ಪದೇಪದೆ ಮೂತ್ರ ವಿಸರ್ಜನೆಗೆ (frequent urination) ಹೋಗುವುದು, ಹೆಚ್ಚೆಚ್ಚು ಬಾಯಾರಿಕೆ (thirst) ಮತ್ತು ಮೇಲಿಂದ ಮೇಲೆ ಹಸಿವಾಗೋದು ಡಯಾಬಿಟೀಸ್ ರೋಗ ಲಕ್ಷಣಗಳಾಗಿವೆ ಮಾರಾಯ್ರೇ. ರಕ್ತದಲ್ಲಿರುವ ಸಕ್ಕರೆ ಅಂಶವೇ ನಮ್ಮ ದೇಹದ ಶಕ್ತಿ ಮೂಲವಾಗಿದ್ದರೂ ಅದು ಹೆಚ್ಚಾದರೆ ಡಯಾಬಿಟೀಸ್ ಉಂಟಾಗುತ್ತದೆ. ಅದರೆ ನಿಮ್ಮ ಜೀವನ ಶೈಲಿಯಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡರೆ ಡಯಾಬಿಟೀಸ್ ಅನ್ನು ನಿಯಂತ್ರಣದಲ್ಲಿಡಬಹುದು ಅಂತ ಪೌಷ್ಟಿಕ ತಜ್ಞೆ ಅಂಜಲಿ ಮುಖರ್ಜೀ (Anjali Mukherjee) ಹೇಳುತ್ತಾರೆ.

‘ನೀವು ಡಯಾಬಿಟೀಸ್ ನಿಂದ ಬಳಲುತ್ತಿದ್ದರೆ ಅದನ್ನು ನಿಯಂತ್ರಣದಲ್ಲಿಡೋದು ಮೊದಲ ಗುರಿಯಾಗಿರಬೇಕು. ಮಧುಮೇಹ ಬಳಲುತ್ತಿರುವವರಿಗೆಲ್ಲ ಕಾಮನ್ ಅನಿಸುವ ಆಹಾರ ಕ್ರಮ ಅಂತ ಇಲ್ಲವಾದರೂ, ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಿರುವುದು ಮುಖ್ಯವಾಗಿದೆ,’ ಎಂದು ಅಂಜಲಿ ಹೇಳುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸಲಹೆ ಮತ್ತು ಉಪಾಯಗಳನ್ನು ಅಂಜಲಿ ಪ್ರತಿದಿನ ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ಶೇರ್ ಮಾಡುತ್ತಿರುತ್ತಾರೆ. ಮಂಗಳವಾರದಂದು ಅವರು ಡಯಾಬಿಟೀಸ್ ಕುರಿತು ಮಹತ್ವದ ಟಿಪ್ಸ್ ಶೇರ್ ಮಾಡಿದ್ದಾರೆ ಮತ್ತು ನಮ್ಮ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಅದನ್ನು ಹೇಗೆ ನಿಯಂತ್ರಣದಲ್ಲಿಡಬಹುದು ಅಂತ ತಿಳಿಸಿದ್ದಾರೆ.

ನಾರಿನಂಶದ ಪದಾರ್ಥಗಳ ಸೇವನೆ ಹೆಚ್ಚಿಸುವುದು: ತಿನ್ನುವ ಆಹಾರದಲ್ಲಿ ನಾರಿನಂಶದ ಪದಾರ್ಥಗಳ ಪ್ರಮಾಣ ಹೆಚ್ಚಿಸಬೇಕು. ಮಧುಮೇಹವನ್ನು ನಿಯಂತ್ರಣಕ್ಕೆ ತರಲು ಧಾನ್ಯಗಳು, ದ್ವಿದಳ ಧಾನ್ಯಗಳು, ಡ್ರೈಫ್ರುಟ್ಸ್ , ಹಣ್ಣು ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು ಅಂತ ಅಂಜಲಿ ಹೇಳುತ್ತಾರೆ.

ಕಾರ್ಬೋಹೈಡ್ರೇಟ್ ಸೇವನೆ: ಪ್ರತಿದಿನ ಕಾರ್ಬೋಹೈಡ್ರೇಟ್ ಸೇವಿಸಬೇಕು, ನಿಗದಿತ ಅಂತರದಲ್ಲಿ ಕಾರ್ಬೋಹೈಡ್ರೇಟ್ ಸೇವನೆ ಜಾರಿಯಲ್ಲಿರಬೇಕು ಮತ್ತು ಸೇವನೆಯ ಪ್ರಮಾಣ ಹೆಚ್ಚಾಗಬಾರದು ಎಂದು ಅವರು ಹೇಳುತ್ತಾರೆ.

ಊಟಗಳ ಸಂಖ್ಯೆ ಹೆಚ್ಚಿಸಬೇಕು: ದಿನದಲ್ಲಿ 3 ಬಾರಿ ಹೊಟ್ಟೆ ತುಂಬಾ ಊಟ ಮಾಡುವ ಬದಲು, ಅಲ್ಪ ಪ್ರಮಾಣದಲ್ಲಿ 4-5 ಬಾರಿ ಆಹಾರ ಸೇವಿಸಿ ಮಧುಮೇಹವನ್ನು ನಿಯಂತ್ರಿಸಬಹುದೆಂದು ಎಂದು ಅಂಜಲಿ ಸಲಹೆ ನೀಡಿದ್ದಾರೆ.

ಸಂಸ್ಕರಿಸಿದ ಆಹಾರ: ಬಿಳಿ ಅಕ್ಕಿ, ಮೈದಾ, ಸಿಹಿತಿಂಡಿ, ತಂಪು ಪಾನೀಯಗಳು, ಚಾಕೊಲೇಟ್, ಸಕ್ಕರೆ ಮತ್ತು ಕೊಬ್ಬಿನಂಶವಿರುವ ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ತ್ಯಜಿಸಬೇಕು ಎಂದು ಅಂಜಲಿ ಹೇಳುತ್ತಾರೆ.

ಸಕ್ಕರೆ ಅಂಶ ಕಡಿಮೆಯಿರುವ ಹಣ್ಣುಗಳ ಸೇವನೆ: ರಕ್ತದಲ್ಲಿರುವ ಸಕ್ಕರೆ ನಿಯಂತ್ರಣದಲ್ಲಿಡಲು ಕಡಿಮೆ ಸಕ್ಕರೆ ಅಂಶವಿರುವ ನೇರಳೆ ಹಣ್ಣು, ಸ್ಟ್ರಾಬೆರ್ರಿ, ದಾಳಿಂಬೆ, ಸೀಬೆ ಮತ್ತು ಶೂ ಬೆರ್ರಿ ಹಣ್ಣುಗಳನ್ನು ಆಗಾಗ ಸೇವಿಸುತ್ತಿರಬೇಕು.

ಮೊಳಕೆಗಳು: ಮೊಳಕೆಗಳಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳು ಇರುತ್ತವೆ. ಪ್ರತಿದಿನ ಮೊಳಕೆಕಾಳು ಸೇವಿಸಬೇಕು ಎಂದು ಅಂಜಲಿ ಸಲಹೆ ನೀಡುತ್ತಾರೆ.

ಮೊನೊಸಾಚುರೇಟೆಡ್ ಕೊಬ್ಬು: ತೆಂಗಿನ ಎಣ್ಣೆ ಮತ್ತು ಹಸುವಿನ ತುಪ್ಪದಂತಹ ಸ್ಯಾಚುರೇಟೆಡ್ ಕೊಬ್ಬಿನ ಪದಾರ್ಥಗಳ ಕಡಿಮೆ ಸೇವನೆಯನ್ನು ಅಂಜಲಿ ಶಿಫಾರಸು ಮಾಡುತ್ತಾದರೂ, ಟ್ರಾನ್ಸ್-ಫ್ಯಾಟ್ ನಿಂದ ಸಂಪೂರ್ಣ ಅಂತರ ಕಾಯ್ದುಕೊಳ್ಳುವಂತೆ ಹೇಳುತ್ತಾರೆ. ಆಲಿವ್ ಎಣ್ಣೆ, ಸಾಸಿವೆ ಎಣ್ಣೆ, ಟಿಲ್ ಆಯಿಲ್, ರೈಸ್ ಬ್ರಾನ್ ಆಯಿಲ್, ಆಲಿವ್ ಎಣ್ಣೆ ಅಥವಾ ಕ್ಯಾನೋಲಾ ಎಣ್ಣೆಯಂತಹ ಮೊನೊಸಾಚುರೇಟೆಡ್ ಕೊಬ್ಬನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು ಎಂದು ಅವರು ಸೂಚಿಸಿದ್ದಾರೆ.

ಌಂಟಿ ಆಕ್ಸಿಡೆಂಟ್​ಗಳು: ಖನಿಜಗಳಾದ ಸತು, ಕ್ರೋಮಿಯಂ, ಸೆಲೆನಿಯಿಮ್ ಮತ್ತು ಮೆಗ್ನೀಸಿಯಮ್ ರಕ್ತದಲ್ಲಿನ ಸಕ್ಕರೆಯ ಪ್ರಮಾಣದ ಅಸಮತೋಲನ ನಿಯಂತ್ರಿಸಲು ಸಹಾಯ ಮಾಡುತ್ತವೆ. ಮತ್ತೊಂದೆಡೆ, ವಿಟಮಿನ್ ಎ, ಸಿ ಮತ್ತು ಇ ಯಂತಹ ಌಂಟಿ ಆಕ್ಸಿಡೆಂಟ್ಗಳನ್ನು ಆಹಾರದಲ್ಲಿ ಸೇರಿಸಲು ಅವರ ಸೂಚಿಸುತ್ತಾರೆ.

ಗಿಡಮೂಲಿಕೆಗಳು: ಗಿಡಮೂಲಿಕೆಗಳು ಮತ್ತು ಹಣ್ಣುಗಳಿಂದ ತಯಾರಿಸಿದ ಸಿರಪ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ವ್ಯಾಯಾಮ-ಆಹಾರದಲ್ಲಿ ಬದಲಾವಣೆಗಳನ್ನು ಜಾರಿಗೆ ತಂದುಕೊಂಡು ದಿನಕ್ಕೆ ಕನಿಷ್ಟ 30-40 ನಿಮಿಷಗಳ ಕಾಲ ವ್ಯಾಯಾಮ, ಜಾಗಿಂಗ್ ಮತ್ತು ದೇಹಕ್ಕೆ ಕಸರತ್ತು ನೀಡುವ ಚಟುವಟಿಕೆಗಳಲ್ಲಿ ತೊಡಗಬೇಕು ಎಂದು ಅಂಜಲಿ ಮುಖರ್ಜೀ ಹೇಳಿದ್ದಾರೆ.

ಇದನ್ನೂ ಓದಿ:  ಪುರುಷರು ಪ್ರತಿದಿನ ಚಿಟ್ಟೆ ಭಂಗಿಯನ್ನು ಮಾಡುವುದರಿಂದ ಈ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು..!

Published On - 8:57 am, Thu, 28 April 22

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು