Women’s Health: ಮಹಿಳೆಯರಲ್ಲಿ ಈ ಲಕ್ಷಣಗಳು ಕ್ಯಾನ್ಸರ್​​​ನ ಆರಂಭಿಕ ಚಿಹ್ನೆಗಳಾಗಿರಬಹುದು

|

Updated on: Mar 12, 2023 | 4:07 PM

ಅಂಡಾಶಯದ ಕ್ಯಾನ್ಸರ್​​ನ ಆರಂಭದ ಹಂತದಲ್ಲಿ ಹಸಿವು ಕಡಿಮೆಯಾಗುವುದು, ಬೇಗನೆ ಹೊಟ್ಟೆ ತುಂಬಿದ ಅನುಭವ. ಆದ್ದರಿಂದ ಯಾವುದೇ ಚಿಕ್ಕ ಚಿಕ್ಕ ಸಮಸ್ಯೆಗಳು ಬಂದರೂ ಕೂಡ ನಿರ್ಲಕ್ಷ್ಯ ಬೇಡ.

Womens Health: ಮಹಿಳೆಯರಲ್ಲಿ ಈ ಲಕ್ಷಣಗಳು ಕ್ಯಾನ್ಸರ್​​​ನ ಆರಂಭಿಕ ಚಿಹ್ನೆಗಳಾಗಿರಬಹುದು
ಅಂಡಾಶಯದ ಕ್ಯಾನ್ಸರ್
Image Credit source: Mayo Clinic
Follow us on

ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಎರಡು ಅಂಡಾಶಯಗಳಿವೆ. ಈ ಅಂಡಾಶಯದಲ್ಲಿ ಪ್ರೊಜೆಸ್ಟರಾನ್ ಮತ್ತು ಈಸ್ಟ್ರೊಜೆನ್ ಹಾರ್ಮೋನುಗಳು ಉತ್ಪತ್ತಿಯಾಗುತ್ತವೆ, ಪ್ರತಿಯೊಂದೂ ಸರಿಸುಮಾರು ಬಾದಾಮಿ ಗಾತ್ರವನ್ನು ಹೊಂದಿರುತ್ತದೆ. ನಿಮ್ಮ ಅಂಡಾಶಯದಲ್ಲಿ ಕೆಲವೊಂದು ಲಕ್ಷಣಗಳು ಕಂಡುಬಂದರೆ ಎಂದಿಗೂ ನಿರ್ಲಕ್ಷ್ಯಿಸದಿರಿ. ನೀವು ನಿರ್ಲಕ್ಷ್ಯಿಸುತ್ತಾ ಹೋದ ಹಾಗೆ ಕಾಲಕ್ರಮೇಣ ಇದು ಕ್ಯಾನ್ಸರ್​​ಗೆ ಕಾರಣವಾಗಬಹುದು.

ನೀವು ಗಮನಿಸಬೇಕಾದ ಅಂಡಾಶಯದ ಕ್ಯಾನ್ಸರ್ ಎಚ್ಚರಿಕೆ ಚಿಹ್ನೆಗಳು:

ಮಲಬದ್ಧತೆ:

ಕರುಳಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಂಡಾಶಯದ ಕ್ಯಾನ್ಸರ್​​​ನ ಒಂದು ಸಾಮಾನ್ಯ ಲಕ್ಷಣವೆಂದರೆ ಮಲಬದ್ಧತೆ. ಜೀವನಶೈಲಿಯ ಬದಲಾವಣೆ ಮತ್ತು ಔಷಧಿಯ ನಂತರವೂ ಮಲಬದ್ಧತೆ ನಿರಂತರವಾಗಿದ್ದರೆ, ವೈದ್ಯರನ್ನು ಭೇಟಿಯಾವುದು ಅಗತ್ಯವಾಗಿದೆ.

ನಿರಂತರ ನೋವು:

ಒಂದರಿಂದ ಮೂರು ವಾರಗಳವರೆಗೆ ಅಥವಾ ಹೊಟ್ಟೆ ಮತ್ತು ಸೊಂಟದಲ್ಲಿನ ನಿರಂತರ ಒತ್ತಡದಿಂದ ಬೆನ್ನುನೋವಿನ ಲಕ್ಷಣಗಳು ಕಂಡುಬರಬಹುದು. ಇಂತಹ ಸಮಸ್ಯೆಗಳು ಬಿಟ್ಟು ಬಿಟ್ಟು ಕಾಡುತ್ತಿದ್ದರೆ ಇದು ಅಂಡಾಶಯದ ಕ್ಯಾನ್ಸರ್ ಎಚ್ಚರಿಕೆ ಚಿಹ್ನೆಗಳಾಗಿರಬಹುದು. ಆದ್ದರಿಂದ ಬೆನ್ನು ನೋವಿನಂತಹ ಲಕ್ಷಣ ಕಂಡುಬಂದರೆ ನಿರ್ಲಕ್ಷ್ಯಿಸದಿರಿ.

ಇದನ್ನೂ ಓದಿ: ನಿದ್ದೆ ಹೃದಯದ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿದಿದೆಯೇ?

ಕಳಪೆ ಹಸಿವು:

ಅಂಡಾಶಯದ ಕ್ಯಾನ್ಸರ್​​​ನ ಒಂದು ಸಾಮಾನ್ಯ ಲಕ್ಷಣವೆಂದರೆ ಹಸಿವಾಗದೇ ಇರುವುದು . ಅಂಡಾಶಯದ ಕ್ಯಾನ್ಸರ್​​ನ ಆರಂಭದ ಹಂತದಲ್ಲಿ ಹಸಿವು ಕಡಿಮೆಯಾಗುವುದು, ಬೇಗನೆ ಹೊಟ್ಟೆ ತುಂಬಿದ ಅನುಭವ. ಆದ್ದರಿಂದ ಯಾವುದೇ ಚಿಕ್ಕ ಚಿಕ್ಕ ಸಮಸ್ಯೆಗಳು ಬಂದರೂ ಕೂಡ ನಿರ್ಲಕ್ಷ್ಯ ಬೇಡ.

ಗಾಳಿಗುಳ್ಳೆಯ ಸಮಸ್ಯೆಗಳು:

ಮೂತ್ರ ವಿಸರ್ಜಿಸುವಾಗ ಅಸ್ವಸ್ಥತೆ ಅಥವಾ ತುರ್ತು ಮೂತ್ರ ವಿಸರ್ಜನೆಯಂತಹ ತೊಂದರೆಗಳನ್ನು ಹೊಂದಿರುವಾಗ ಮೂತ್ರನಾಳದ ಸೋಂಕು ಮಹಿಳೆಯರಲ್ಲಿ ಆಗಾಗ ಕಂಡುಬರುತ್ತದೆ. ಆದರೆ, ಗಾಳಿಗುಳ್ಳೆಯೊಂದಿಗಿನ ಸಮಸ್ಯೆಗಳು ಅಂಡಾಶಯದ ಕ್ಯಾನ್ಸರ್​​​ನಂತಹ ಸ್ತ್ರೀರೋಗ ಅಥವಾ ಸಂತಾನೋತ್ಪತ್ತಿ ಸ್ಥಿತಿಯ ಸೂಚನೆಯಾಗಿರಬಹುದು. ಮೂತ್ರಕೋಶದಲ್ಲಿ ನೋವು ಅಥವಾ ಒತ್ತಡವನ್ನು ಅನುಭವಿಸುವುದು, ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವುದು ಇತ್ಯಾದಿಗಳು ಅಂಡಾಶಯದ ಕ್ಯಾನ್ಸರ್​​ನ ಚಿಹ್ನೆಗಳಾಗಿರಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: