Exam Diet: ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ಆರೋಗ್ಯಕರ ಡಯಟ್ ಪ್ಲಾನ್

ಮಕ್ಕಳ ಮೆದುಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಆಹಾರದಿಂದ ಸಿಗುವ ಶಕ್ತಿಯ ಅಗತ್ಯವಿರುತ್ತದೆ ಮತ್ತು ಪರೀಕ್ಷೆಯ ಮೊದಲು ಆಹಾರ ಸೇವನೆಯಿಂದ ನಿಮ್ಮ ಮಗುವಿನ ಮಾನಸಿಕ ಗಮನವನ್ನು ಪರೀಕ್ಷೆಯ ಮೇಲೆ ಇರಿಸುತ್ತದೆ.

Exam Diet: ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ಆರೋಗ್ಯಕರ ಡಯಟ್ ಪ್ಲಾನ್
Exam foodImage Credit source: NDTV
Follow us
ನಯನಾ ಎಸ್​ಪಿ
|

Updated on:Mar 12, 2023 | 5:50 PM

ಪರೀಕ್ಷೆಗಳು (Exams) ಪ್ರತಿ ವಿದ್ಯಾರ್ಥಿಯ (Students) ಶೈಕ್ಷಣಿಕ ಪ್ರಯಾಣದ ಅನಿವಾರ್ಯ ಭಾಗವಾಗಿದೆ. ಈ ಪರೀಕ್ಷೆಯ ಸಮಯದಲ್ಲಿ ನಿಯಮಿತವಾದ ಮತ್ತು ಆರೋಗ್ಯಕರವಾದ ಊಟ ಮತ್ತು ತಿಂಡಿಗಳನ್ನು(Food)  ತಿನ್ನುವುದು ನಿಮ್ಮ ಮಕ್ಕಳು ಓದುವಾಗ ಹೆಚ್ಚು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಬೆಳಗಿನ ಉಪಾಹಾರವು ಆಹಾರದ ಅತ್ಯಗತ್ಯ ಅಂಶವಾಗಿದೆ. ಬೆಳಗಿನ ತಿಂದಿವನ್ನು ಸೇವಿಸದೇ ಇರುವುದು ದೇಹಕ್ಕೆ ಹಾನಿಕರ. ಹೆಚ್ಚು ಹೊತ್ತು ಉಪವಾಸವಿದ್ದರೆ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಇಳಿಕೆಗೆ ಕಾರಣವಾಗುತ್ತದೆ. ಇದು ನಿಮ್ಮ ಮಗುವಿನ ಗಮನದ ಮೇಲೆ ಪರಿಣಾಮ ಬೀರುತ್ತದೆ.

ಎಕ್ಸಾಂ ಸ್ಟ್ರೆಸ್ ಇದ್ದರೆ ನಿಮ್ಮ ಮಗುವಿಗೆ ವಾಕರಿಕೆ ಬಂದಂತೆ ಅನಿಸಬಹುದು. ಪರೀಕ್ಷೆಯ ಮೊದಲು ಆರೋಗ್ಯಕರ ಆಹಾರವನ್ನು ಹೊಟ್ಟೆ ತುಂಬ ತಿನ್ನುವುದು ಮುಖ್ಯ. ಮಕ್ಕಳ ಮೆದುಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಆಹಾರದಿಂದ ಸಿಗುವ ಶಕ್ತಿಯ ಅಗತ್ಯವಿರುತ್ತದೆ ಮತ್ತು ಪರೀಕ್ಷೆಯ ಮೊದಲು ಆಹಾರ ಸೇವನೆಯಿಂದ ನಿಮ್ಮ ಮಗುವಿನ ಮಾನಸಿಕ ಗಮನವನ್ನು ಪರೀಕ್ಷೆಯ ಮೇಲೆ ಇರಿಸುತ್ತದೆ.

ಇದನ್ನೂ ಓದಿ: ಚಿಪ್ಸ್, ನೂಡಲ್ಸ್, ಸಂಸ್ಕರಿಸಿದ ಆಹಾರದಿಂದ ಅಕಾಲಿಕ ಮರಣಕ್ಕೆ ಆಹ್ವಾನ; ವಿಶ್ವ ಆರೋಗ್ಯ ಸಂಘಟನೆ ವರದಿ

ಪರೀಕ್ಷಾ ಸಮಯದಲ್ಲಿ ಮಕ್ಕಳ ಡಯಟ್​ನಲ್ಲಿ ಪೋಷಕರು ಸೇರಿಸಬೇಕಾದ ಆರೋಗ್ಯಕರ ಆಹಾರದ ಪಟ್ಟಿ ಇಲ್ಲಿದೆ:

  1. ನಿಮ್ಮ ಮಕ್ಕಳು ಹೈಡ್ರೇಟೆಡ್ ಆಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿರ್ಜಲೀಕರಣ ಸ್ನಾಯುವಿನ ಆಯಾಸಕ್ಕೆ ಕಾರಣವಾಗಿ ಪರೀಕ್ಷೆ ಬರೆಯಲು ಅಡ್ಡಿ ಉಂಟು ಮಾಡಬಹುದು.
  2. ಜೀರ್ಣಿಸಿಕೊಳ್ಳಲು ಸುಲಭವಾಗಲು ಸಣ್ಣ ಪ್ರಮಾಣದ ಆಹಾರವನ್ನು ಹಲವು ಬಾರಿ ಮಕ್ಕಳು ತಿನ್ನುವುದು ಉತ್ತಮ.
  3. ಪ್ರೋಟೀನ್ ಭರಿತ ಆಹಾರಗಳನ್ನು ಮಕ್ಕಳ ಡಯಟ್​ಗೆ ಸೇರಿಸಿ
  4. ಸಕ್ಕರೆ ಮತ್ತು ಉಪ್ಪನ್ನು ತಪ್ಪಿಸಿ ಏಕೆಂದರೆ ಅವು ವ್ಯಸನಕಾರಿ ಮತ್ತು ತೂಕ ಹೆಚ್ಚಾಗಲು ಕಾರಣವಾಗುತ್ತದೆ.
  5. ಪಿಜ್ಜಾ, ಬರ್ಗರ್, ವಡಾ ಪಾವ್, ಸಮೋಸಾ ಮುಂತಾದ ಬೀದಿ ತಿಂಡಿ ಮತ್ತು ಚಿಪ್ಸ್, ಚಾಕಲೇಟ್ ಅಂತಹ ಪ್ಯಾಕೇಜ್ ಆದ ಆಹಾರವನ್ನು ಸೇವಿಸದಂತೆ ನೋಡಿಕೊಳ್ಳಿ.
  6. ಕೆಫೀನ್ ಅನ್ನು ತಪ್ಪಿಸಿ. ಏರೇಟೆಡ್ ಡ್ರಿಂಕ್ಸ್ (Fizzy Drinks) ಮತ್ತು ಹಣ್ಣಿನ ರಸವನ್ನು (Fruit Juice) ತಪ್ಪಿಸಿ. ಅದರ ಬದಲು ತಾಜಾ ಹಣ್ಣನ್ನು ಸೇವಿಸುವುದು ಉತ್ತಮ.
  7. ಅಜೀರ್ಣ ಮತ್ತು ಕಿಬ್ಬೊಟ್ಟೆಯ ಉಬ್ಬುವಿಕೆಯನ್ನು ತಡೆಯುವ ಹೆಚ್ಚಿನ ಫೈಬರ್ ಆಹಾರವನ್ನು ನೀಡಿ
  8. ಬಾಳೆಹಣ್ಣು ಶಕ್ತಿಯ ಉತ್ತಮ ಮೂಲವಾಗಿದೆ ಮತ್ತು ಸಂಪೂರ್ಣ ಪೋಷಕಾಂಶಗಳನ್ನು ಒದಗಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು, ಮಾನಸಿಕ ಗೊಂದಲ ಮತ್ತು ಅವ್ಯವಸ್ಥೆಯನ್ನು ತಡೆಯಲು ಪರೀಕ್ಷೆಯ ಮೊದಲು ಬಾಳೆಹಣ್ಣನ್ನು ಸೇವಿಸಬಹುದು.

Published On - 3:01 pm, Sun, 12 March 23

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ