Nightmare Disorder: ಕೆಟ್ಟ ಕನಸುಗಳು ಬೀಳುವುದರ ಹಿಂದಿದೆ ಕಾರಣ! ಇದನ್ನು ತಡೆಯಲು ಇಲ್ಲಿದೆ ಸಿಂಪಲ್ ಉಪಾಯ

Nightmare Disorder Side effects: ಕೆಲವೊಮ್ಮೆ, ರಾತ್ರಿ ಮಲಗಿರುವಾಗ, ವಿಚಿತ್ರ ಕನಸುಗಳು ಬೀಳುತ್ತದೆ. ಇದು ಆಗೊಮ್ಮೆ ಈಗೊಮ್ಮೆ ಅಲ್ಲ ಕೆಲವರಿಗೆ ಪ್ರತಿನಿತ್ಯ ಕಾಣಿಸುತ್ತದೆ. ಇದು ಆಗಾಗ ಕಂಡುಬಂದು ನಿಮ್ಮ ನಿದ್ರೆಗೆ ಭಂಗ ತಂದರೆ ಅದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಹಗಲಿನಲ್ಲಿ ನಿಮ್ಮ ಮನಸ್ಥಿತಿ, ಏಕಾಗ್ರತೆ ಮತ್ತು ಶಕ್ತಿಯ ಮಟ್ಟಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ಇದರಿಂದ ಪರಿಹಾರ ಕಂಡುಕೊಳ್ಳುವುದು ಹೇಗೆ, ಈ ರೀತಿಯ ಡಿಸಾರ್ಡರ್ ಯಾಕೆ ಕಂಡು ಬರುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

Nightmare Disorder: ಕೆಟ್ಟ ಕನಸುಗಳು ಬೀಳುವುದರ ಹಿಂದಿದೆ ಕಾರಣ! ಇದನ್ನು ತಡೆಯಲು ಇಲ್ಲಿದೆ ಸಿಂಪಲ್ ಉಪಾಯ
Nightmare Disorder

Updated on: Nov 03, 2025 | 6:32 PM

ಕೆಟ್ಟ ಕನಸುಗಳು ಬೀಳುವುದು ಸಹಜ. ಅದರಲ್ಲಿಯೂ ಕೆಲವು ಕನಸುಗಳು ನಮ್ಮನ್ನು ಬೆಚ್ಚಿಬೀಳಿಸುತ್ತದೆ. ಎಷ್ಟು ದಿನಗಳು ಕಳೆದರೂ ಆ ಭಯ ಹೋಗುವುದಿಲ್ಲ. ಇನ್ನು ಕೆಲವು ಕನಸು ಭಯ ಹುಟ್ಟಿಸುತ್ತದೆ ಆದರೆ ಅದರ ಬಗ್ಗೆ ಸರಿಯಾಗಿ ನೆನಪಿರುವುದಿಲ್ಲ. ಈ ರೀತಿ ಒಂದಿಲ್ಲೊಂದು ಬಾರಿ ಎಲ್ಲರ ಅನುಭವಕ್ಕೂ ಬಂದಿರುತ್ತದೆ. ಆದರೆ ಇದು ಆಗಾಗ ಕಂಡುಬಂದರೆ, ನಿಮ್ಮ ನಿದ್ರೆಗೆ ಭಂಗ ತಂದರೆ ಅದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಹಗಲಿನಲ್ಲಿ ನಿಮ್ಮ ಮನಸ್ಥಿತಿ, ಏಕಾಗ್ರತೆ ಮತ್ತು ಶಕ್ತಿಯ ಮಟ್ಟಗಳ ಮೇಲೆ ಪರಿಣಾಮ ಬೀರುತ್ತದೆ. ಇದನ್ನೇ ವೈದ್ಯಕೀಯ ಭಾಷೆಯಲ್ಲಿ ದುಃಸ್ವಪ್ನ ಅಸ್ವಸ್ಥತೆ ಅಥವಾ ನೈಟ್ಮೇರ್ ಡಿಸಾರ್ಡರ್ (Nightmare Disorder) ಎಂದು ಕರೆಯಲಾಗುತ್ತದೆ. ಹಾಗಾದರೆ ಇದರಿಂದ ಪರಿಹಾರ ಕಂಡುಕೊಳ್ಳುವುದು ಹೇಗೆ, ಈ ರೀತಿಯ ಡಿಸಾರ್ಡರ್ ಯಾಕೆ ಕಂಡು ಬರುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನೈಟ್ಮೇರ್ ಡಿಸಾರ್ಡರ್ ಅಥವಾ ದುಃಸ್ವಪ್ನ ಅಸ್ವಸ್ಥತೆಯು ಗಾಢ ನಿದ್ರೆ ಮಾಡುವಂತಹ ಸಮಯದಲ್ಲಿ ಭಯಾನಕ ಕನಸುಗಳು ಬೀಳುವಂತಹ ಸ್ಥಿತಿಯಾಗಿದೆ. ಇದು ನಿಮ್ಮನ್ನು ನಿದ್ರೆಯಿಂದ ಎಚ್ಚರಗೊಳಿಸಿ ನಿಮ್ಮ ದೈನಂದಿನ ದಿನಚರಿಗೆ ಅಡಚಣೆ ಉಂಟುಮಾಡುತ್ತದೆ. ಅಮೇರಿಕನ್ ಅಕಾಡೆಮಿ ಆಫ್ ಸ್ಲೀಪ್ ಮೆಡಿಸಿನ್ ಪ್ರಕಾರ, ಸುಮಾರು 4 ಪ್ರತಿಶತ ವಯಸ್ಕರಲ್ಲಿ ಈ ಸ್ಥಿತಿ ಕಂಡುಬರುತ್ತಿದೆ. ಸಾಮಾನ್ಯವಾಗಿ ಎಲ್ಲರಲ್ಲಿಯೂ ರಾತ್ರಿ ಕಂಡು ಬರುವ ಕನಸುಗಳು ಭಿನ್ನವಾಗಿರುತ್ತದೆ. ಆಳವಾಗಿ ನಿದ್ರಿಸುವ ಸಮಯದಲ್ಲಿ ಈ ರೀತಿಯಾಗುತ್ತದೆ. ಆಗ ವ್ಯಕ್ತಿ ಕಿರುಚಬಹುದು, ಎದ್ದು ಕುಳಿತು ಆ ಕನಸಿನ ಬಗ್ಗೆ ಯೋಚಿಸಬಹುದು. ಆದರೆ ಕೆಲವರಿಗೆ ಇಂತಹ ಕೆಟ್ಟ ಕನಸುಗಳು ನೆನಪಿರುತ್ತದೆ. ಇನ್ನು ಕೆಲವರು ಅದನ್ನು ಸಂಪೂರ್ಣವಾಗಿ ಮರೆತಿರುತ್ತಾರೆ. ಎಷ್ಟೇ ನೆನಪಿಸಿಕೊಳ್ಳುವುದಕ್ಕೆ ಪ್ರಯತ್ನ ಪಟ್ಟರೂ ಅದು ಸಾಧ್ಯವಾಗುವುದಿಲ್ಲ.

ನೈಟ್ಮೇರ್ ಡಿಸಾರ್ಡರ್ ಕಂಡುಬರುವುದಕ್ಕೆ ಕಾರಣವೇನು?

ಈ ರೀತಿ ಕೆಟ್ಟ ಕನಸುಗಳು ಬಿದ್ದು ಎಚ್ಚರವಾಗುವ ಸ್ಥಿತಿ ಅಂದರೆ ನೈಟ್ಮೇರ್ ಡಿಸಾರ್ಡರ್, ನಿಮ್ಮ ಒತ್ತಡ, ಆಘಾತ, ಪಿಟಿಎಸ್‌ಡಿ, ಖಿನ್ನತೆ, ಆತಂಕ, ಕೆಲವು ಔಷಧಿಗಳು ಅಥವಾ ಅನಿಯಮಿತ ನಿದ್ರೆಯಿಂದ ಉಂಟಾಗಬಹುದು. ಮದ್ಯಪಾನ ಮತ್ತು ನಿದ್ರೆ ಸರಿಯಾಗಿ ಮಾಡದಿರುವುದು ಕೂಡ ಇದಕ್ಕೆ ಕಾರಣವಾಗಿರಬಹುದು. ಈ ರೀತಿ ಪದೇ ಪದೇ ಕಂಡುಬರುವ ದುಃಸ್ವಪ್ನಗಳು ನೇರವಾಗಿ ಹಾನಿಯನ್ನುಂಟುಮಾಡುವುದಿಲ್ಲ, ಆದರೆ ಅವು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಮತ್ತು ಕೆಟ್ಟ ಆಲೋಚನೆಗಳನ್ನು ಹೆಚ್ಚಿಸುತ್ತವೆ. ಇಂತಹ ಸಂದರ್ಭಗಳಲ್ಲಿ, ವೈದ್ಯಕೀಯ ಸಹಾಯ ಪಡೆಯುವುದು ಬಹಳ ಮುಖ್ಯ.

ಇದನ್ನೂ ಓದಿ: ರಾತ್ರಿ ಚೆನ್ನಾಗಿ ನಿದ್ರೆ ಬರಲು ಈ ಒಂದು ಕೆಲಸ ಮಾಡಿ ಸಾಕು

ನೈಟ್ಮೇರ್ ಡಿಸಾರ್ಡರ್ ತಡೆಗಟ್ಟುವುದು ಹೇಗೆ?

ಈ ರೀತಿಯ ಲಕ್ಷಣಗಳನ್ನು ಕಡಿಮೆ ಮಾಡಲು, ಸ್ಥಿರವಾದ ನಿದ್ರೆಯ ವೇಳಾಪಟ್ಟಿಯನ್ನು ಪಾಲನೆ ಮಾಡಬೇಕು, ಸಾಕಷ್ಟು ವಿಶ್ರಾಂತಿ ಪಡೆಯುವುದು ಬಹಳ ಒಳ್ಳೆಯದು ಮತ್ತು ತಡರಾತ್ರಿಯಲ್ಲಿ ಭಾರೀ ಊಟ, ಮದ್ಯಪಾನ ಅಥವಾ ಭಯಾನಕ ವಿಷಯಗಳ ನೆನಪು ಮಾಡಿಕೊಳ್ಳುವುದನ್ನು ತಪ್ಪಿಸಬೇಕು. ಮಾತ್ರವಲ್ಲ ಇಮೇಜ್ ರಿಹರ್ಸಲ್ ಅನ್ನು ಅಭ್ಯಾಸ ಮಾಡುವುದು ಸಹ ಪ್ರಯೋಜನಕಾರಿಯಾಗಿದೆ. ಒಂದು ವೇಳೆ ಕೆಟ್ಟ ಕನಸುಗಳು ಕಿರುಚಾಟ, ಒದೆಯುವಿಕೆ ಅಥವಾ ಉಸಿರಾಟದ ತೊಂದರೆಯೊಂದಿಗೆ ಬಂದರೆ, ಅದು ಚಿಕಿತ್ಸೆಯ ಅಗತ್ಯವಿರುವ ಮತ್ತೊಂದು ನಿದ್ರಾಹೀನತೆಯ ಸಂಕೇತವಾಗಿರಬಹುದು. ವಾರದಲ್ಲಿ ಆಗಾಗ ಕೆಟ್ಟ ಕನಸುಗಳು ಬೀಳುತ್ತಿದ್ದರೆ, ದೀರ್ಘಕಾಲದ ವರೆಗೆ ಇದ್ದರೆ, ಆಘಾತಕ್ಕೆ ಸಂಬಂಧಿಸಿದ್ದಾದರೆ ಅಥವಾ ಆತ್ಮಹತ್ಯೆಯ ಆಲೋಚನೆಗಳನ್ನು ತಂದರೆ, ವೈದ್ಯರನ್ನು ಭೇಟಿ ಮಾಡಿ. ಆರಂಭಿಕ ಗುರುತಿಸುವಿಕೆ ಸಮಸ್ಯೆಯನ್ನು ತಡೆಗಟ್ಟಲು ನೆರವಾಗಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ