ರಾತ್ರಿ ಚೆನ್ನಾಗಿ ನಿದ್ರೆ ಬರಲು ಈ ಒಂದು ಕೆಲಸ ಮಾಡಿ ಸಾಕು
ಇಂದಿನ ಈ ಬಿಡುವಿಲ್ಲದ ದಿನಗಳಲ್ಲಿ ಅನೇಕ ಜನ ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದಿನವಿಡೀ ಕೆಲಸ ಮಾಡಿದ ನಂತರ ಆ ಒತ್ತಡ, ಆಯಾಸ, ದೇಹದ ನೋವಿನ ಕಾರಣದಿಂದ ಅನೇಕರಿಗೆ ರಾತ್ರಿ ಕಣ್ಣು ಮುಚ್ಚಿದರೂ ನಿದ್ರೆ ಬರುವುದಿಲ್ಲ. ನಿಮಗೂ ಕೂಡ ಈ ಸಮಸ್ಯೆ ಕಾಡುತ್ತಿದೆಯೇ? ಹಾಗಿದ್ರೆ ರಾತ್ರಿ ಮಲಗುವ ಮುನ್ನ ಈ ಒಂದು ಕೆಲಸವನ್ನು ಮಾಡಿ ಸಾಕು, ನಿಮ್ಮ ಆಯಾಸವೆಲ್ಲಾ ದೂರವಾಗಿ ಸುಖ ನಿದ್ರೆಗೆ ಜಾರುವಿರಿ.

ಒಬ್ಬ ಮನುಷ್ಯನಿಗೆ ಊಟ, ನೀರು ಎಷ್ಟು ಮುಖ್ಯವೋ ನಿದ್ರೆಯೂ (sleep) ಕೂಡ ಅಷ್ಟೇ ಮುಖ್ಯ. ಹೌದು ಉತ್ತಮ ನಿದ್ರೆ ನಮ್ಮ ಮನಸ್ಸನ್ನು ಉಲ್ಲಾಸಗೊಳಿಸುವುದಲ್ಲದೆ ನಮ್ಮ ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಆದ್ರೆ ಇಂದಿನ ಈ ಒತ್ತಡದ ಜೀವನಶೈಲಿಯ ಕಾರಣದಿಂದ ಅನೇಕರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲಸದ ಒತ್ತಡ, ಆಯಾಸ, ದೇಹ ನೋವು ಈ ಎಲ್ಲಾ ಕಾರಣದಿಂದ ಅನೇಕರಿಗೆ ರಾತ್ರಿ ಕಣ್ಣು ಮುಚ್ಚಿದರೂ ನಿದ್ರೆ ಬರುವುದಿಲ್ಲ. ನೀವು ಕೂಡ ರಾತ್ರಿ ಸರಿಯಾಗಿ ನಿದ್ರೆ ಬರುತ್ತಿಲ್ಲವೇ, ಆಯಾಸವಾಗುತ್ತಿದೆಯೇ? ಹಾಗಿದ್ರೆ ರಾತ್ರಿ ಮಲಗುವ ಮುನ್ನ ಈ ಒಂದು ಕೆಲಸವನ್ನು ಮಾಡಿ, ಖಂಡಿತವಾಗಿಯೂ ನೀವು ಉತ್ತಮ ನಿದ್ರೆ ಪಡೆಯುವಿರಿ.
ರಾತ್ರಿ ಸರಿಯಾಗಿ ನಿದ್ರೆ ಬರಲು ಏನು ಮಾಡಬೇಕು?
ಕೆಲಸದ ಒತ್ತಡ, ಆಯಾಸ ಈ ಎಲ್ಲಾ ಕಾರಣಗಳಿಂದ ಅನೇಕರಿಗೆ ಸರಿಯಾಗಿ ನಿದ್ರೆ ಬರುವುದಿಲ್ಲ. ನಿಮಗೂ ಸಹ ಈ ಸಮಸ್ಯೆಯಿದ್ದರೆ ರಾತ್ರಿ ಮಲಗುವ ಮುನ್ನ ಪಾದಗಳಿಗೆ ಎಣ್ಣೆಯಿಂದ ಮಸಾಜ್ ಮಾಡಿ. ಈ ಪಾದಭ್ಯಂಗ ನಿಮಗೆ ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ. ದೇಹಕ್ಕೆ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಸ್ನಾಯು ನೋವು, ಬಾಡಿ ಪೈನ್, ಸೆಳೆತದಂತಹ ಸಮಸ್ಯೆಗಳು ಕಡಿಮೆ ಆಗುತ್ತದೆ ಅಲ್ವಾ. ಅದೇ ರೀತಿ ಪಾದಗಳಿಗೆ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ರಾತ್ರಿ ಚೆನ್ನಾಗಿ ನಿದ್ರೆ ಸಹ ಬರುತ್ತದಂತೆ. ಅದಕ್ಕಾಗಿ ರಾತ್ರಿ ಮಲಗುವ ಮುನ್ನ ಸಾಸಿವೆ ಎಣ್ಣೆ ಅಥವಾ ಎಳ್ಳೆಣ್ಣೆಯಿಂದ ಪಾದಗಳಿಗೆ ಮಸಾಜ್ ಮಾಡಿ. ಇದು ಹಳೆಯ ಆಯುರ್ವೇದ ಸಂಪ್ರದಾಯವಾಗಿದ್ದು, ಇದು ನಿಮಿಷಗಳಲ್ಲಿ ದೇಹ ನೋವು ಮತ್ತು ಆಯಾಸವನ್ನು ನಿವಾರಿಸುತ್ತದೆ. ಈ ಆಯುರ್ವೇದ ಪದ್ಧತಿಯನ್ನು ‘ಪಾದಭ್ಯಂಗ’ ಎಂದು ಕರೆಯಲಾಗುತ್ತದೆ.
ಆಯುರ್ವೇದದ ಪ್ರಕಾರ, ‘ಪಾದಭ್ಯಂಗ’ ದೇಹದ ನರಗಳನ್ನು ಶಾಂತಗೊಳಿಸುತ್ತದೆ ಮತ್ತು ಆಳವಾದ ನಿದ್ರೆಯನ್ನು ಪ್ರೇರೇಪಿಸುತ್ತದೆ. ಪಾದಗಳ ಅಡಿಭಾಗದಲ್ಲಿ ಸುಮಾರು 72,000 ನರಗಳಿದ್ದು, ಅವು ಹೃದಯ, ಶ್ವಾಸಕೋಶ, ಜೀರ್ಣಾಂಗ ವ್ಯವಸ್ಥೆ ಮತ್ತು ಮೆದುಳಿನಂತಹ ವಿವಿಧ ಅಂಗಗಳಿಗೆ ಸಂಪರ್ಕ ಹೊಂದಿವೆ. ಹೀಗಿರುವಾಗ ಈ ಬಿಂದುಗಳನ್ನು ಎಣ್ಣೆಯಿಂದ ಮಸಾಜ್ ಮಾಡಿದಾಗ, ದೇಹದ ಆಯಾಸ ದೂರವಾಗಿ ನೀವು ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಡೋಪಮೈನ್ ಮತ್ತು ಸಿರೊಟೋನಿನ್‌ನಂತಹ ಹಾರ್ಮೋನುಗಳನ್ನು ಸಕ್ರಿಯಗೊಳಿಸುತ್ತದೆ. ಇದು ನಿದ್ರೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ.
ಪಾದಗಳಿಗೆ ಮಸಾಜ್ ಮಾಡಲು ಯಾವ ಎಣ್ಣೆ ಉತ್ತಮ?
ಪಾದಗಳಿಗೆ ಮಸಾಜ್ ಮಾಡಲು ಎಳ್ಳೆಣ್ಣೆಯನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು ವಾತವನ್ನು ಶಾಂತಗೊಳಿಸುತ್ತದೆ, ಚರ್ಮವನ್ನು ಪೋಷಿಸುತ್ತದೆ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಸಾಸಿವೆ ಎಣ್ಣೆ ಕೂಡ ಉತ್ತಮ. ಈ ಸಾಸಿವೆ ಎಣ್ಣೆ ಶೀತ ಮತ್ತು ಜ್ವರದಿಂದ ದೇಹವನ್ನು ರಕ್ಷಿಸುತ್ತದೆ, ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಸ್ನಾಯು ನೋವನ್ನು ನಿವಾರಿಸುತ್ತದೆ.
ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಈ 5 ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ ಒತ್ತಡದಿಂದ ಮುಕ್ತರಾಗಿ
ಪಾದಗಳನ್ನು ಮಸಾಜ್ ಮಾಡುವ ಸರಿಯಾದ ವಿಧಾನ:
ರಾತ್ರಿಯ ಸಮಯವು ನಿಮ್ಮ ಪಾದಗಳಿಗೆ ಮಸಾಜ್ ಮಾಡಲು ಒಳ್ಳೆಯ ಸಮಯ, ಏಕೆಂದರೆ ಮಲಗುವ ಮುನ್ನ ಪಾದಗಳಿಗೆ ಮಸಾಜ್ ಮಾಡುವುದರಿಂದ ನಿಮ್ಮ ಎಲ್ಲಾ ಆಯಾಸ ತಕ್ಷಣವೇ ನಿವಾರಣೆಯಾಗುತ್ತದೆ. ಮತ್ತು ಇದು ಆಳವಾದ ನಿದ್ರೆಯನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಇದಕ್ಕಾಗಿ ಮಲಗುವ ಮೊದಲು, ನಿಮ್ಮ ಪಾದಗಳನ್ನು ಚೆನ್ನಾಗಿ ತೊಳೆದು ಬಳಿಕ ಬಿಸಿ ಮಾಡಿದ ಎಳ್ಳು ಅಥವಾ ಸಾಸಿವೆ ಎಣ್ಣೆಯನ್ನು ನಿಮ್ಮ ಪಾದದ ಅಡಿಭಾಗ, ಕಣಕಾಲುಗಳಿಗೆ ಹಚ್ಚಿ 5 ರಿಂದ 10 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ. ನಂತರ, ಸಾಕ್ಸ್ ಧರಿಸಿ ಮಲಗಿ, ಇದು ದೇಹದ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








