Personality Test: ನಿಮ್ಗೊತ್ತಾ ನಿಮ್ಮಿಷ್ಟದ ಹಣ್ಣು ನೀವೆಂಥಾ ವ್ಯಕ್ತಿ ಎಂಬುದನ್ನು ಬಹಿರಂಗಪಡಿಸುತ್ತದೆ
ದೇಹಕಾರ, ಆಪ್ಟಿಕಲ್ ಇಲ್ಯೂಷನ್, ಮೊಬೈಲ್ ಹಿಡಿದಿಟ್ಟುಕೊಳ್ಳುವ ಶೈಲಿ, ಕೈ ಕಟ್ಟಿ ನಿಲ್ಲುವ ರೀತಿ, ಕುಳಿತುಕೊಳ್ಳುವ ಶೈಲಿ ಸೇರಿದಂತೆ ಹತ್ತು ಹಲವು ವಿಧಾನಗಳ ಮೂಲಕ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದಲ್ವಾ. ಅದೇ ರೀತಿ ಒಬ್ಬ ವ್ಯಕ್ತಿ ಆತ ಇಷ್ಟಪಡುವಂತಹ ಹಣ್ಣಿನ ಮೂಲಕವೂ ಆತನ ಗುಪ್ತ ಗುಣ ಸ್ವಭಾವ, ಭಾವನೆ ಹೇಗಿವೆ ಎಂಬುದನ್ನು ತಿಳಿಯಬಹುದಂತೆ. ಹಾಗಿದ್ರೆ ಇಂದಿನ ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಿಮ್ಮಿಷ್ಟದ ಹಣ್ಣಿನ ಮೂಲಕ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಿರಿ.

ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿರುವಂತಹ ಹಣ್ಣುಗಳೆಂದರೆ (Fruit Personality Test) ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರಿಗೂ ಹಣ್ಣುಗಳೆಂದರೆ ಇಷ್ಟ. ಅದರಲ್ಲಿ ಕೆಲವರಿಗೆ ಮಾವಿನ ಹಣ್ಣು ಅಂದ್ರೆ ಸಖತ್ ಇಷ್ಟವಾದ್ರೆ, ಕೆಲವರಿಗೆ ಸೇಬು ಹಣ್ಣು ಇಷ್ಟವಾಗುತ್ತದೆ. ಇನ್ನೂ ಕೆಲವರು ಹಲಸಿನ ಹಣ್ಣನ್ನು ಇಷ್ಟಪಟ್ಟು ತಿನ್ನುತ್ತಾರೆ. ಹೀಗೆ ಒಬ್ಬಬ್ಬರಿಗೆ ಒಂದೊಂದು ಫ್ರೂಟ್ ಇಷ್ಟವಾಗುತ್ತದೆ. ಈ ಇಷ್ಟದ ಹಣ್ಣಿನ ಮೂಲಕವೂ ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ರಹಸ್ಯವನ್ನು ತಿಳಿಯಬಹುದಂತೆ. ಹೌದು ದೇಹಕಾರ, ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್, ಮೊಬೈಲ್ ಹಿಡಿದಿಟ್ಟುಕೊಳ್ಳುವ ರೀತಿಯ ಮೂಲಕ ನಿಗೂಢ ವ್ಯಕ್ತಿತ್ವವನ್ನು ಪರೀಕ್ಷಿಸುವಂತೆ ಇಷ್ಟದ ಹಣ್ಣಿನ ಮೂಲಕವೂ ನೀವೆಂಥಾ ವ್ಯಕ್ತಿ ಎಂಬುದನ್ನು ತಿಳಿದುಕೊಳ್ಳಬಹುದು.
ನಿಮ್ಮ ಇಷ್ಟದ ಹಣ್ಣು ಯಾವುದು?
ಸೇಬು: ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಸೇಬು ಹಣ್ಣನ್ನು ಇಷ್ಟಪಡುವವರು ಆರೋಗ್ಯ ಪ್ರಜ್ಞೆಯುಳ್ಳಂತಹ ವ್ಯಕ್ತಿಗಳಾಗಿರುತ್ತಾರೆ. ಇವರು ಫಿಟ್ ಆಗಿರಲು ಇಷ್ಟಪಡುತ್ತಾರೆ. ಶಿಸ್ತು ಬದ್ಧ ಜೀವನವನ್ನು ನಡೆಸುತ್ತಾರೆ. ಒಟ್ಟಾಗಿ ಮನಸ್ಸು ಮತ್ತು ದೇಹ ಎರಡನ್ನು ಚೆನ್ನಾಗಿಡಲು ಇಷ್ಟಪಡುವ ಇವರು ಮುಕ್ತವಾಗಿ ಎಲ್ಲರೊಂದಿಗೂ ಮಾತನಾಡುವ ಬಹಿರ್ಮುಖಿ ವ್ಯಕ್ತಿಗಳು.
ಕಿತ್ತಳೆ: ನಿಮಗೆ ಕಿತ್ತಳೆ ಹಣ್ಣನ್ನು ಇಷ್ಟಪಡುವವರಾಗಿದ್ದರೆ ನೀವು ತಾಳ್ಮೆ ಮತ್ತು ದೃಢ ನಿಶ್ಚಯವನ್ನು ಹೊಂದಿರುವ ವ್ಯಕ್ತಿ. ನೀವು ನಿಮ್ಮ ಪ್ರಯತ್ನಗಳಲ್ಲಿ ಗಂಭೀರರಾಗಿರುತ್ತೀರಿ, ಭರವಸೆಯಿಂದ ಕೆಲಸಗಳನ್ನು ಮಾಡುತ್ತೀರಿ. ಅಲ್ಲದೆ ನೀವು ಸುಳ್ಳು ಹೇಳಲು ಇಷ್ಟಪಡದ ವಿಶ್ವಾಸಾರ್ಹ ವ್ಯಕ್ತಿಗಳೂ ಹೌದು.
ಮಾವು: ಹಣ್ಣಿನ ರಾಜ ಮಾವು ಎಂದರೆ ಬಹುತೇಕ ಹೆಚ್ಚಿನವರು ಸಖತ್ ಇಷ್ಟಪಟ್ಟು ತಿನ್ನುತ್ತಾರೆ. ಈ ಹಣ್ಣನ್ನು ಇಷ್ಟಪಡುವವರು ಸ್ವಲ್ಪ ಹಠಮಾರಿ ಸ್ವಭಾವದವರು ಆಗಿರಬಹುದು. ಪ್ರತಿಯೊಂದು ವಿಷಯಗಳ ಬಗ್ಗೆ ಬಲವಾದ ಅಭಿಪ್ರಾಯಗಳನ್ನು ಹೊಂದಿರುವ ಇವರು ತಾರ್ಕಿಕ ಚಿಂತಕರಾಗಿದ್ದಾರೆ. ಇವರು ಯಾವಾಗಲೂ ಭಾವನೆಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳವ ಬದಲು ವಾಸ್ತವ ಸ್ಥಿತಿಗತಿಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿಗಳಾಗಿರುತ್ತಾರೆ.
ಕಲ್ಲಂಗಡಿ: ಕಲ್ಲಂಗಡಿ ಹಣ್ಣನ್ನು ಇಷ್ಟಪಡುವವರು ಸಖತ್ ಬುದ್ಧಿವಂತ ವ್ಯಕ್ತಿಗಳಂತೆ. ಇವರು ಪ್ರತಿಯೊಂದು ಕೆಲಸಗಳನ್ನು ಬುದ್ಧಿವಂತಿಕೆಯಿಂದಲೇ ಮಾಡುತ್ತಾರೆ. ಅಲ್ಲದೆ ಕಲ್ಲಂಗಡಿ ಹಣ್ಣನ್ನು ಇಷ್ಟಪಡುವ ಜನರು ತುಂಬಾ ಶ್ರಮಶೀಲರು, ಬಲವಾದ ಸೃಜನಶೀಲ ಪ್ರಜ್ಞೆಯನ್ನು ಹೊಂದಿರುತ್ತಾರೆ.
ಪಿಯರ್: ಪಿಯರ್ ಹಣ್ಣುಗಳನ್ನು ಇಷ್ಟಪಡುವ ಜನರು ತುಂಬಾ ಉತ್ಸಾಹಭರಿತರು. ಅವರು ಯಾವಾಗಲೂ ಎಲ್ಲಾದರೂ ಪ್ರಯಾಣಿಸಲು ಇಷ್ಟಪಡುವಂತಹ ವ್ಯಕ್ತಿಗಳು. ಜೊತೆಗೆ ಇವರು ಸುಲಭವಾಗಿ ಕೋಪಗೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಮುಂಗೋಪ ಮಾತ್ರವಲ್ಲದೆ ಸಹಾನುಭೂತಿ, ಸೂಕ್ಷ್ಮತೆ ಮತ್ತು ಹರ್ಷಚಿತ್ತದಿಂದ ಕೂಡಿರುವ ವ್ಯಕ್ತಿಗಳೂ ಹೌದು.
ಇದನ್ನೂ ಓದಿ: ಫೋನ್‌ನಲ್ಲಿ ಟೈಪಿಂಗ್ ಮಾಡಲು ಒಂದೇ ಒಂದು ಬೆರಳನ್ನು ಬಳಸುವ ಜನರ ವ್ಯಕ್ತಿತ್ವ ಹೇಗಿರುತ್ತೆ ಗೊತ್ತಾ?
ಚೆರ್ರಿ: ಚೆರ್ರಿ ಪ್ರಿಯರು ಸಾಮಾನ್ಯವಾಗಿ ಅಂತರ್ಮುಖಿಗಳಾಗಿರುತ್ತಾರೆ. ಅವರು ತುಂಬಾ ನಾಚಿಕೆ ಸ್ವಭಾವದವರು ಮತ್ತು ತಮ್ಮ ಬಗ್ಗೆ ಬಹಿರಂಗವಾಗಿ ಮಾತನಾಡಲು ಇಷ್ಟಪಡುವುದಿಲ್ಲ. ಬದಲಿಗೆ ಅವರು ತಮ್ಮವರು ಹಾಗೂ ತಮಗೆ ನಿಷ್ಠರಾಗಿರುವ ಜನರೊಂದಿಗೆ ಮಾತ್ರ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಚೆರ್ರಿ ಪ್ರಿಯರು ಸರಳ ಸ್ವಭಾವದವರು, ಸುಲಭವಾಗಿ ಅವರು ಕ್ಷಮಿಸುವವರು ಮತ್ತು ಯಾರನ್ನೂ ಎಂದಿಗೂ ಅನುಮಾನಿಸುವುದಿಲ್ಲ.
ಬಾಳೆಹಣ್ಣು: ಬಾಳೆಹಣ್ಣನ್ನು ಇಷ್ಟಪಡುವ ಜನರು ಅತ್ಯಂತ ಸೂಕ್ಷ್ಮ ಮತ್ತು ಸಿಹಿಯಾದ ಸ್ವಭಾವವನ್ನು ಹೊಂದಿರುವ ವ್ಯಕ್ತಿಗಳು. ಅವರು ಎಲ್ಲರೊಂದಿಗೂ ಸ್ನೇಹಪರರಾಗಿರುತ್ತಾರೆ. ಸಭ್ಯ ರೀತಿಯಿಂದ ವರ್ತಿಸುತ್ತಾರೆ. ಅಲ್ಲದೆ ಇವರು ದಯಾಳು ಸ್ವಭಾವದವರೂ ಹೌದು. ಬಾಳೆಹಣ್ಣನ್ನು ಇಷ್ಟಪಡುವವರಿಗೆ ಆತ್ಮವಿಶ್ವಾಸದ ಕೊರತೆಯಿರಬಹುದು, ಆದರೆ ಅವರು ತಮ್ಮ ತಪ್ಪುಗಳನ್ನು ಪುನರಾವರ್ತಿಸುವ ಬದಲು ಅವುಗಳಿಂದ ಕಲಿಯುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








