AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ಕೈ ಬೆರಳಿನ ಆಕಾರದಿಂದ ತಿಳಿಯಬಹುದು ನಿಮ್ಮ ವ್ಯಕ್ತಿತ್ವದ ಗುಟ್ಟು

ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಕೈರೇಖೆ ನೋಡಿ ವ್ಯಕ್ತಿಯ ಭವಿಷ್ಯ, ಆತನ ಗುಣ ಸ್ವಭಾವ, ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಹುದಲ್ವಾ. ಅದೇ ರೀತಿ ಕೈ ಬೆರಳುಗಳ ಆಕಾರದಿಂದಲೂ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಬಹುದಂತೆ. ಇಂದಿನ ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಿಮ್ಮ ಬೆರಳಿನ ಆಕಾರ ಹೇಗಿದೆ ಎಂಬುದನ್ನು ನೋಡಿ, ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿ.

Personality Test: ಕೈ ಬೆರಳಿನ ಆಕಾರದಿಂದ ತಿಳಿಯಬಹುದು ನಿಮ್ಮ ವ್ಯಕ್ತಿತ್ವದ ಗುಟ್ಟು
ವ್ಯಕ್ತಿತ್ವ ಪರೀಕ್ಷೆImage Credit source: Jagran Josh
ಮಾಲಾಶ್ರೀ ಅಂಚನ್​
|

Updated on: Oct 21, 2025 | 3:07 PM

Share

ಪ್ರತಿಯೊಬ್ಬರ ಆಸೆ ಆಕಾಂಕ್ಷೆಗಳು, ಹವ್ಯಾಸ, ಗುಣ ನಡತೆ, ವ್ಯಕ್ತಿತ್ವ (Personality) ಭಿನ್ನವಾಗಿರುತ್ತದೆ. ಅದೇ ಪ್ರತಿಯೊಬ್ಬರ ದೇಹಕಾರವು ಸಹ ಭಿನ್ನವಾಗಿರುತ್ತವೆ. ಹೌದು ಉದಾಹರಣೆಗೆ ಕೆಲವರ ಕಣ್ಣು ತುಂಬಾ ದೊಡ್ಡದಾಗಿದ್ರೆ ಕೆಲವರ ಕಣ್ಣು ತುಂಬಾ ಚಿಕ್ಕದಾಗಿರುತ್ತೆ, ಅದೇ ರೀತಿ ಮೂಗು ಪಾದ, ಕೂದಲು, ಕೈ ಬೆರಳಿನ ಆಕಾರ  ಇವೆಲ್ಲದರಲ್ಲೂ ಸಾಕಷ್ಟು ವ್ಯತ್ಯಾಗಳಿರುತ್ತವೆ. ಈ ದೇಹಕಾರದ ಮೂಲಕ ಒಬ್ಬ ವ್ಯಕ್ತಿಯ ನಡವಳಿಕೆ, ಭಾವನಾತ್ಮಕ ನಿಲುವು, ಚಿಂತನೆ, ಗುಣ ಸ್ವಭಾವ ಇವೆಲ್ಲವನ್ನು ಅಳೆಯಬಹುದು. ನೀವು ಕೂಡ ನಿಮ್ಮ ಮೂಗು, ಪಾದ, ಕಣ್ಣಿನ ಆಕಾರದ ಮೂಲಕ ನಿಮ್ಮ ನಿಗೂಢ ಗುಣ ಸ್ವಭಾವ ಹೇಗಿದೆ ಎಂಬುದನ್ನು ಪರೀಕ್ಷೆ ಮಾಡಿರುತ್ತೀರಿ ಅಲ್ವಾ. ಅದೇ ರೀತಿ ಇಂದಿನ ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಿಮ್ಮ ಕೈ ಬೆರಳಿನ ಆಕಾರದ ಮೂಲಕ ನಿಮ್ಮ ವ್ಯಕ್ತಿತ್ವದ ಗುಟ್ಟನ್ನು ತಿಳಿದುಕೊಳ್ಳಿ.

ನಿಮ್ಮ ಕೈಬೆರಳಿನ ಆಕಾರವೇ ತಿಳಿಸುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ:

ನೇರ ಬೆರಳು: ನಿಮ್ಮ ಬೆರಳುಗಳು ಉದ್ದವಾಗಿದ್ದು, ನೇರವಾಗಿದ್ದರೆ ನೀವು ಗೌಪ್ಯತೆಗೆ ಹೆಚ್ಚಿನ ಮಹತ್ವ ನೀಡುವವರಾಗಿರುತ್ತೀರಿ. ನೀವು ನಿಮ್ಮ ಭಾವನೆಗಳನ್ನು ಮತ್ತು ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳದೆ ನಿಮ್ಮ ಮನಸ್ಸಿನಲ್ಲಿಯೇ ಇಟ್ಟುಕೊಂಡಿರುತ್ತೀರಿ. ನಂಬಿಕೆಯನ್ನು ಬಹಳಷ್ಟು ಗೌರವಿಸುವ ನೀವು ಯಾರನ್ನೂ ಅಷ್ಟು ಬೇಗ ನಂಬುವುದಿಲ್ಲ, ಆದರೆ ಒಮ್ಮೆ ನೀವು ಯಾರನ್ನಾದರೂ ನಂಬಿದರೆ ಅವರನ್ನು ಯಾವತ್ತೂ ಬಿಟ್ಟುಕೊಡುವುದಿಲ್ಲ. ಇನ್ನೂ ನೀವು ನಿಮ್ಮ ಭಾವನೆಗಳನ್ನು ಮರೆಮಾಡುವಲ್ಲಿ ನಿಪುಣರು, ಒಳಗೆ ತೀವ್ರವಾದ ಭಾವನೆ ಇದ್ದರೂ ಸಹ ಶಾಂತ ಮತ್ತು ಸ್ವತಂತ್ರರಾಗಿ ಕಾಣಿಸಿಕೊಳ್ಳುತ್ತೀರಿ. ಇದಲ್ಲದೆ ಒಂಟಿಯಾಗಿರಲು ಇಷ್ಟಪಡುವ ನೀವು ಪ್ರಾಯೋಗಿಕ ಜೀವನವನ್ನು ನಡೆಸುತ್ತೀರಿ. ನಿಮಗೆ ನಾಟಕ ಮತ್ತು ಗಾಸಿಪ್ ಇಷ್ಟವಿಲ್ಲ. ನೀವು ನಿಮ್ಮ ಜೀವನವನ್ನು ಎಚ್ಚರಿಕೆಯಿಂದ ಮತ್ತು ಖಾಸಗಿಯಾಗಿ ಇಟ್ಟುಕೊಳ್ಳಲು ಬಯಸುತ್ತೀರಿ. ಅಲ್ಲದೆ ಸ್ಟ್ರೈಟ್‌ ಫಾರ್ವರ್ಡ್‌ ಆಗಿರುವ ನೀವು ಸುಳ್ಳು  ಹೇಳುವುದನ್ನು ಇಷ್ಟಪಡುವುದಿಲ್ಲ, ನಂಬಿಕೆ ದ್ರೋಹವನ್ನು ಸಹಿಸುವುದಿಲ್ಲ. ಒಟ್ಟಿನಲ್ಲಿ ಜನರಿಗೆ ನಿಮ್ಮನ್ನು ಅರ್ಥಮಾಡಿಕೊಳ್ಳುದೇ ದೊಡ್ಡ ಸವಾಲಾಗಿರುತ್ತದೆ.

ಮೊನಚಾದ ಬೆರಳು: ನಿಮ್ಮ ಬೆರಳಿನ ಆಕಾರ ಮೊನಚಾಗಿದ್ದರೆ,  ನೀವು ಬಹುಶಃ ಬೇಗನೆ ಪ್ರೀತಿಯಲ್ಲಿ ಬೀಳುವ ನಿಷ್ಠಾವಂತ ಮತ್ತು ಪ್ರೀತಿಯ ವ್ಯಕ್ತಿಯಾಗಿರಬಹುದು. ನೀವು ನಿಜವಾದ ಪ್ರೀತಿಯಲ್ಲಿ ನಂಬಿಕೆ ಇಡುತ್ತೀರಿ. ಅಲ್ಲದೆ ಸೃಜನಶೀಲ ಮತ್ತು ಅಂತಃಪ್ರಜ್ಞೆಯನ್ನು ಹೊಂದಿರುವ ನೀವು ಏನೇ ಅಡೆತಡೆಗಳು ಬಂದರೂ ದೃಢ ನಿಶ್ಚಯದಿಂದ ಕನಸನ್ನು ನನಸಾಗಿಸುತ್ತೀರಿ. ಹೊಸ ಪರಿಕಲ್ಪನೆಗಳನ್ನು ಅನ್ವೇಷಿಸುವಲ್ಲಿ ಮತ್ತು ಕಲಿಯುವಲ್ಲಿ ನೀವು ತುಂಬಾ ಆಸಕ್ತಿಯನ್ನು ಹೊಂದಿದ್ದೀರಿ. ನೀವು ಉತ್ಸಾಹಭರಿತರು ಮತ್ತು ನಿಮ್ಮ ಗುರಿಗಳು, ಕನಸುಗಳನ್ನು ಆಳವಾಗಿ ನಂಬುತ್ತೀರಿ. ಮತ್ತು ಅವುಗಳನ್ನು ನನಸಾಗಿಸಲು ದೃಢನಿಶ್ಚಯ ಹೊಂದಿದ್ದೀರಿ.

ಇದನ್ನೂ ಓದಿ
Image
ನೀವೆಷ್ಟು ಎಮೋಷನಲ್‌ ಎಂಬುದನ್ನು ಈ ಚಿತ್ರವೇ ಹೇಳುತ್ತೆ
Image
ಕೈ ಮುಷ್ಟಿ ಹಿಡಿದುಕೊಳ್ಳವ ಶೈಲಿಯಿಂದ ತಿಳಿಯಬಹುದು ವ್ಯಕ್ತಿತ್ವದ ರಹಸ್ಯ
Image
ಕುತ್ತಿಗೆಯ ಉದ್ದ ವ್ಯಕ್ತಿಯ ಗುಪ್ತ ವ್ಯಕ್ತಿತ್ವ ಲಕ್ಷಣಗಳನ್ನು ತಿಳಿಸುತ್ತದೆ
Image
ನೀವು ಎಂತಹ ವ್ಯಕ್ತಿಯೆಂದು ಬಹಿರಂಗಪಡಿಸುತ್ತದೆ ನಿಮ್ಮ ಕಂಗಳ ಬಣ್ಣ

ಇದನ್ನೂ ಓದಿ: ನೀವೆಷ್ಟು ಎಮೋಷನಲ್‌ ಎಂಬುದನ್ನು ಆಪ್ಟಿಕಲ್‌ ಇಲ್ಯೂಷನ್ ಚಿತ್ರವೇ ಹೇಳುತ್ತೆ

ಅಂಕುಡೊಂಕಾದ ಬೆರಳು:  ನಿಮ್ಮ ಬೆರಳಿನ ಆಕಾರ ಅಂಕುಡೊಂಕಾಗಿದ್ದರೆ, ನೀವು ಕಠಿಣ ಸ್ವಭಾವದ, ಎಂತಹದ್ದೇ ಸವಾಲನ್ನು ಎದುರಿಸುವ ದಿಟ್ಟತನದ ವ್ಯಕ್ತಿಗಳೆಂದು ಅರ್ಥ. ನಿಮ್ಮ ಧೈರ್ಯವು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಿಮಗೆ ಶಕ್ತಿಯನ್ನು ನೀಡುತ್ತದೆ. ನಿಮ್ಮ ಗುರಿಗಳನ್ನು ಸಾಧಿಸಲು ನೀವು ಎಲ್ಲವನ್ನೂ ಮಾಡಲು ಸಿದ್ಧರಿದ್ದೀರಿ. ಇದಲ್ಲದೆ ನೀವು ಸುಲಭವಾಗಿ ಬಾಂಧವ್ಯಗಳನ್ನು ರೂಪಿಸುತ್ತೀರಿ, ಸಂಘರ್ಷಗಳನ್ನು ತಪ್ಪಿಸುತ್ತೀರಿ ಮತ್ತು ಶಾಂತವಾಗಿರಲು ಬಯಸುತ್ತೀರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ