ಮನೆ ತುಂಬಾ ಜಿರಳೆಗಳ ಕಾಟವೇ? ಕಾಕ್ರೋಜ್‌ಗಳನ್ನು ಓಡಿಸಲು ಇಲ್ಲಿವೆ ಸಿಂಪಲ್ ಟ್ರಿಕ್ಸ್
ಬಹುತೇಕ ಹೆಚ್ಚಿನ ಮನೆಗಳಲ್ಲಿ ಜಿರಳೆಗಳ ಸಮಸ್ಯೆ ಇದ್ದಿದ್ದೆ. ಅದರಲ್ಲೂ ಇವುಗಳು ಯಾವಾಗ ನೋಡಿದ್ರೂ ಅಡುಗೆ ಮನೆಯ ಸುತ್ತವೇ ಸುಳಿಯುತ್ತಿರುತ್ತವೆ. ಹೀಗಿರುವಾಗ ಇವುಗಳನ್ನು ಓಡಿಸಲು ಕೆಮಿಕಲ್‌ಯುಕ್ತ ಸ್ಪ್ರೇಗಳನ್ನು ಬಳಸುವುದು ಸೂಕ್ತವಲ್ಲ. ಏಕೆಂದರೆ ನಮ್ಮ ಆರೋಗ್ಯಕ್ಕೂ ಹಾನಿಕಾರಕ. ಹಾಗಾಗಿ ಈ ಮನೆಮದ್ದುಗಳನ್ನು ಟ್ರೈ ಮಾಡಿ, ಖಂಡಿತವಾಗಿಯೂ ಕಾಕ್ರೋಚ್‌ಗಳು ಇನ್ನೆಂದು ನಿಮ್ಮ ಮನೆ ಕಡೆ ಸುಳಿಯೋ ಪ್ರಯತ್ನ ಕೂಡ ಮಾಡುವುದಿಲ್ಲ.

ಜಿರಳೆಗಳ (cockroaches) ಕಾಟ ಯಾರ ಮನೆಯಲ್ಲಿ ಇಲ್ಲ ಹೇಳಿ, ಬಹುತೇಕ ಹೆಚ್ಚಿನವರ ಮನೆಯಲ್ಲಿ ಜಿರಳೆಗಳ ಕಾಟ ಇದ್ದಿದ್ದೆ. ಅದರಲ್ಲೂ ಅಡುಗೆ ಮನೆಗಳಲ್ಲಿ ಇವುಗಳ ಹಾರಾಟ ತುಸು ಹೆಚ್ಚೇ ಇರುತ್ತದೆ. ಅಡುಗೆಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟುಕೊಂಡರೂ ಜಿರಳೆ ಮಾತ್ರ ಅಲ್ಲೇ ಓಡಾಡುತ್ತಿರುತ್ತವೆ, ಇಷ್ಟೇ ಅಲ್ಲದೆ ಕಿಚನ್‌ನಲ್ಲಿ ಇಟ್ಟಿರುವಂತಹ ಆಹಾರದ ಮೇಲೂ ಓಡಾಡುತ್ತವೆ. ಜಿರಳೆ ಸ್ಪರ್ಶಿಸಿದಂತಹ ಆಹಾರವನ್ನು ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದಕ್ಕಾಗಿ ಹೆಚ್ಚಿನವರು ಜಿರಳೆಗಳನ್ನು ಓಡಿಸಲು ಮಾರುಕಟ್ಟೆಯಲ್ಲಿ ಸಿಗುವಂತಹ ಕೆಮಿಕಲ್‌ಯುಕ್ತ ಸ್ಪ್ರೇಗಳನ್ನು ಬಳಸುತ್ತಾರೆ. ಇದರಿಂದಲೂ ಕೂಡ ಆರೋಗ್ಯ ಸಮಸ್ಯೆಗಳು ಕಾಡಬಹುದು. ಹಾಗಾಗಿ ಜಿರಳೆಗಳ ಕಾಟದಿಂದ ಮುಕ್ತಿ ಪಡೆಯಲು ಈ ಪರಿಣಾಮಕಾರಿ ಮನೆ ಮದ್ದುಗಳನ್ನು ಒಮ್ಮೆ ಟ್ರೈ ಮಾಡಿ. ಖಂಡಿತವಾಗಿಯೂ ಕಾಕ್ರೋಚ್‌ಗಳು ಇನ್ನೆಂದು ನಿಮ್ಮ ಮನೆ ಕಡೆ ಸುಳಿಯೋದಿಲ್ಲ ನೋಡಿ.
ಜಿರಳೆಗಳನ್ನು ಓಡಿಸಲು ಸರಳ ಮನೆಮದ್ದುಗಳಿವು:
ಅಡುಗೆ ಸೋಡಾ ಮತ್ತು ಸಕ್ಕರೆ: ಜಿರಳೆಗಳನ್ನು ಓಡಿಸಲು ಪರಿಣಾಮಕಾರಿ ಮನೆಮದ್ದೆಂದರೆ ಅಡುಗೆ ಸೋಡಾ ಮತ್ತು ಸಕ್ಕರೆ. ಅಡುಗೆ ಸೋಡಾವನ್ನು ಸ್ವಲ್ಪ ಸಕ್ಕರೆಯೊಂದಿಗೆ ಬೆರೆಸಿ, ಈ ಮಿಶ್ರಣವನ್ನು ಜಿರಳೆಗಳು ಓಡಾಡುವ ಸ್ಥಳದಲ್ಲಿ ಇರಿಸಿ. ಸಕ್ಕರೆಯ ವಾಸನೆಗೆ ಇದರತ್ತ ಬರುವ ಜಿರಳೆಗಳು ಈ ಮಿಶ್ರಣವನ್ನು ತಿಂದು ಸಾಯುತ್ತವೆ. ಇದಲ್ಲದೆ ಬೋರಿಕ್ ಆಮ್ಲವನ್ನು ಸಹ ಸಕ್ಕರೆಯೊಂದಿಗೆ ಬೆರೆಸಿ ಇಡಬಹುದು. ಈ ಮೂಲಕ ಜಿರಳೆಗಳ ಕಾಟದಿಂದ ಮುಕ್ತಿ ಪಡೆಯಬಹುದು.
ಬೇವಿನ ಎಲೆ: ಬೇವಿನ ಎಲೆಗಳು ಸೂಕ್ಷ್ಮ ಜೀವಿ ವಿರೋಧಿ ಹಾಗೂ ಕೀಟನಾಶಕ ಗುಣಗಳನ್ನು ಹೊಂದಿದ್ದು, ಇವುಗಳು ಜಿರಳೆಗಳನ್ನು ಓಡಿಸಲು ಪರಿಣಾಮಕಾರಿ ಮನೆಮದ್ದಾಗಿದೆ. ನಿಮ್ಮ ಮನೆಯಲ್ಲಿ ಜಿರಳೆಗಳಿದ್ದರೆ ಬೇವಿನ ಎಲೆಗಳನ್ನು ಅಲ್ಲಲ್ಲಿ ಇರಿಸಿ, ಬೇವಿನ ಪುಡಿ ಅಥವಾ ಅದರ ಎಣ್ಣೆಯನ್ನು ಅಲ್ಲಲ್ಲಿ ಸಿಂಪಡಿಸಿ. ಇದರ ವಾಸನೆಯಿಂದ ಖಂಡಿತವಾಗಿಯೂ ಜಿರಳೆಗಳು ಶಾಶ್ವತವಾಗಿ ಓಡಿ ಹೋಗುತ್ತವೆ. ಇದು ನಿಮಗೆ ಉತ್ತಮ ಫಲಿತಾಂಶ ನೀಡುತ್ತದೆ.
ನೀಲಗಿರಿ ಎಣ್ಣೆ: ನೀಲಗಿರಿ ಎಣ್ಣೆ ಸಹ ಜಿರಳೆಗಳನ್ನು ಓಡಿಸಲು ಪರಿಣಾಮಕಾರಿಯಾಗಿದೆ. ಹೌದು ಇವುಗಳ ಕಟುವಾದ ವಾಸನೆಯನ್ನು ಜಿರಳೆಗಳು ಇಷ್ಟಪಡುವುದಿಲ್ಲ. ಇದಕ್ಕಾಗಿ ಈ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಿ ಸ್ಪ್ರೇ ಬಾಟಲಿಯಲ್ಲಿ ಹಾಕಿ, ಜಿರಳೆಗಳು ಓಡಾಡುವ ಸ್ಥಳಗಳಲ್ಲಿ ಸಿಂಪಡಿಸಿ. ಈ ಮೂಲಕ ಬಲು ಸುಲಭವಾಗಿ ಜಿರಳೆಗಳು ಮನೆ ಒಳಗಡೆ ಬಾರದಂತೆ ಮಾಡಬಹುದು.
ಪುದೀನಾ ಎಣ್ಣೆ: ಜಿರಳೆಗಳನ್ನು ಓಡಿಸಲು ಪುದೀನಾ ಎಣ್ಣೆಯೂ ಪರಿಣಾಮಕಾರಿ. ಈ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಿ, ಸ್ಪ್ರೇ ಬಾಟಲಿಯಲ್ಲಿ ಹಾಕಿ ಜಿರಳೆಗಳು ಓಡಾಡುವ ಸ್ಥಳದಲ್ಲಿ ಸಿಂಪಡಿಸಿ. ಇದರ ಕಟುವಾದ ವಾಸನೆಗೆ ಜಿರಳೆಗಳು ಮನೆಯಿಂದ ಓಡಿ ಹೋಗುತ್ತವೆ.
ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಈ 5 ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ ಒತ್ತಡದಿಂದ ಮುಕ್ತರಾಗಿ
ಸಿಟ್ರನ್ ಹಣ್ಣಿನ ಸಿಪ್ಪೆ: ನಿಂಬೆ, ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳ ಸಿಪ್ಪೆಗಳು ಸಹ ಜಿರಳೆಗಳನ್ನು ಓಡಿಸಲು ಸಹಕಾರಿ. ಈ ಹಣ್ಣುಗಳ ಸಿಪ್ಪೆಯ ಕಟುವಾದ ವಾಸನೆಯನ್ನು ಜಿರಳೆಗಳು ಇಷ್ಟಪಡುವುದಿಲ್ಲ. ಇದಕ್ಕಾಗಿ ಇವುಗಳು ಓಡಾಡುವ ಜಾಗದಲ್ಲಿ ನಿಂಬೆಯಂತಹ ಸಿಟ್ರಸ್ ಹಣ್ಣಿನ ಸಿಪ್ಪೆಯನ್ನಿಡಿ. ಇದರ ಕಟುವಾದ ವಾಸನೆಯಿಂದ ಜಿರಳೆ ದೂರ ಓಡುತ್ತವೆ.
ಪಲಾವ್ ಎಲೆಗಳು: ಮನೆಯಲ್ಲಿ ಜಿರಳೆಗಳಿದ್ದರೆ ಬೇ ಲೀಫ್ ಅಥವಾ ಪಲಾವ್ ಎಲೆಯನ್ನು ಅವುಗಳು ಓಡಾಡುವ ಸ್ಥಳದಲ್ಲಿ ಇರಿಸಿ, ಇಲ್ಲವೆ ಈ ಎಲೆಯನ್ನು ಪುಡಿ ಮಾಡಿ ಅಥವಾ ಎಲೆಯನ್ನು ಬಿಸಿ ನೀರಿನಲ್ಲಿ ಕುದಿಸಿ, ಆ ನೀರನ್ನು ಜಿರಳೆಗಳು ಓಡಾಡುವ ಸ್ಥಳದಲ್ಲಿ ಸಿಂಪಡಿಸಿ, ಈ ಮನೆ ಮದ್ದು ಸಹ ಜಿರಳೆಗಳ ಕಾಟದಿಂದ ಮುಕ್ತಿ ಪಡೆಯಲು ಸಹಕಾರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




