AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ಫೋನ್‌ನಲ್ಲಿ ಟೈಪಿಂಗ್‌ ಮಾಡಲು ಒಂದೇ ಒಂದು ಬೆರಳನ್ನು ಬಳಸುವ ಜನರ ವ್ಯಕ್ತಿತ್ವ ಹೇಗಿರುತ್ತೆ ಗೊತ್ತಾ?

ಮೊಬೈಲ್‌ ಹಿಡಿದಿಟ್ಟುಕೊಳ್ಳುವ ಶೈಲಿಯಿಂದ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದಂತೆ ಅಲ್ವಾ. ಅದೇ ರೀತಿ ಮೊಬೈಲ್‌ನಲ್ಲಿ ಟೈಪಿಂಗ್‌ ಮಾಡುವ ವಿಧಾನದ ಮೂಲಕವೂ ನಿಗೂಢ ಗುಣ ಸ್ವಭಾವವನ್ನು ತಿಳಿಯಬಹುದಂತೆ. ಕೆಲವರು ಟೈಪಿಂಗ್‌ ಮಾಡಲು ಎರಡು ಕೈಗಳ ಬೆರಳುಗಳನ್ನು ಉಪಯೋಗಿಸಿದರೆ ಇನ್ನೀ ಕೆಲವರು ಒಂದೇ ಬೆರಳಿನಲ್ಲಿ ಟೈಪಿಂಟ್‌ ಮಾಡುತ್ತಾರೆ. ಇಂದಿನ ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಒಂದೇ ಒಂದು ಬೆರಳು ಉಪಯೋಗಿಸಿ ಟೈಪಿಂಗ್‌ ಮಾಡುವ ಜನರ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯೋಣ ಬನ್ನಿ.

Personality Test: ಫೋನ್‌ನಲ್ಲಿ ಟೈಪಿಂಗ್‌ ಮಾಡಲು ಒಂದೇ ಒಂದು ಬೆರಳನ್ನು ಬಳಸುವ ಜನರ ವ್ಯಕ್ತಿತ್ವ ಹೇಗಿರುತ್ತೆ ಗೊತ್ತಾ?
ವ್ಯಕ್ತಿತ್ವ ಪರೀಕ್ಷೆImage Credit source: Freepik
ಮಾಲಾಶ್ರೀ ಅಂಚನ್​
|

Updated on: Oct 23, 2025 | 3:27 PM

Share

ಪ್ರತಿಯೊಬ್ಬರ ವ್ಯಕ್ತಿತ್ವ ಭಿನ್ನವಾಗಿರುವಂತೆ, ದೇಹಕಾರ, ಮಾತನಾಡುವ ಶೈಲಿ, ನಡೆಯುವ ಶೈಲಿ, ಕೈ ಬರಹ, ಸಹಿ ಹಾಕುವ, ಊಟ ಮಾಡುವ, ಮೊಬೈಲ್‌ ಹಿಡಿದುಕೊಳ್ಳುವ,  ಶೈಲಿ ಇವೆಲ್ಲವೂ ಭಿನ್ನವಾಗಿರುತ್ತವೆ. ಇವುಗಳ ಮೂಲಕ ಒಬ್ಬ ವ್ಯಕ್ತಿಯ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದಲ್ವಾ. ಅದೇ ರೀತಿ ಮೊಬೈಲ್‌ನಲ್ಲಿ (Mobile) ಟೈಪಿಂಗ್‌ ಮಾಡುವ ವಿಧಾನದ ಮೂಲಕವೂ ಒಬ್ಬ ವ್ಯಕ್ತಿಯ ಗುಣ ಸ್ವಭಾವ ಹೇಗಿದೆ ಎಂಬುದನ್ನು ತಿಳಿಯಬಹುದಂತೆ. ಕೆಲವರು ಮೊಬೈಲ್‌ನಲ್ಲಿ ಟೈಪಿಂಗ್‌ ಮಾಡಲು ಎರಡು ಬೆರಳುಗಳನ್ನು ಉಪಯೋಗಿಸಿದರೆ ಇನ್ನೂ ಕೆಲವರು ಒಂದೇ ಬೆರಳಿನಲ್ಲಿ ಟೈಪಿಂಗ್‌ ಮಾಡ್ತಾರೆ. ಇಂದಿನ ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಮೊಬೈಲ್‌ನಲ್ಲಿ ಕೇವಲ ಒಂದೇ ಒಂದು ಬೆರಳಿನಲ್ಲಿ ಟೈಪಿಂಗ್‌ ಮಾಡುವವರ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯೋಣ ಬನ್ನಿ.

ಒಂದೇ ಬೆರಳಿನಲ್ಲಿ ಟೈಪಿಂಗ್‌ ಮಾಡುವವರ ವ್ಯಕ್ತಿತ್ವ ಹೇಗಿದೆ?

ಸ್ಪಷ್ಟತೆಯನ್ನು ಗೌರವಿಸುತ್ತಾರೆ: ಒಂದೇ ಬೆರಳನ್ನು ಉಪಯೋಗಿಸಿ ಮೆಸೇಜ್‌ ಟೈಪ್‌ ಮಾಡುವ ಜನ ಆತುರದಿಂದ ಪದಗಳನ್ನು ಬರೆಯುವುದಿಲ್ಲ. ಬದಲಾಗಿ ಅವರ ಸಂದೇಶಗಳು ಸ್ಪಷ್ಟ ಮತ್ತು ಪೂರ್ಣವಾಗಿರುತ್ತದೆ. ಅವರು ಜೀವನದಲ್ಲೂ ಸಹ ಗೊಂದಲಕ್ಕೆ ಅವಕಾಶ ನೀಡುವ ಬದಲು ಪೂರ್ಣ ಆಲೋಚನೆಗಳನ್ನು ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಅವರು ಪ್ರತಿಕ್ರಿಯಿಸುವ ಮೊದಲು ಯೋಚಿಸುತ್ತಾರೆ: ಇವರುಗಳು ಯಾವಾಗಲು ಚಿಂತನಶೀಲ ಸಂವಹನವನ್ನು ನಡೆಸುತ್ತಾರೆ. ಅವರು ಸಂಘರ್ಷಗಳನ್ನು ತಪ್ಪಿಸುವ ಸಲುವಾಗಿ ಯೋಚಿಸಿ ಉತ್ತರಿಸುತ್ತಾರೆ. ಎಲ್ಲಾ ಸಂದರ್ಭದಲ್ಲೂ ಶಾಂತ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ.

ಇದನ್ನೂ ಓದಿ
Image
ಕೈ ಬೆರಳಿನ ಆಕಾರದಿಂದ ತಿಳಿಯಬಹುದು ನಿಮ್ಮ ವ್ಯಕ್ತಿತ್ವದ ಗುಟ್ಟು
Image
ಕೈ ಮುಷ್ಟಿ ಹಿಡಿದುಕೊಳ್ಳವ ಶೈಲಿಯಿಂದ ತಿಳಿಯಬಹುದು ವ್ಯಕ್ತಿತ್ವದ ರಹಸ್ಯ
Image
ಕುತ್ತಿಗೆಯ ಉದ್ದ ವ್ಯಕ್ತಿಯ ಗುಪ್ತ ವ್ಯಕ್ತಿತ್ವ ಲಕ್ಷಣಗಳನ್ನು ತಿಳಿಸುತ್ತದೆ
Image
ನೀವು ಎಂತಹ ವ್ಯಕ್ತಿಯೆಂದು ಬಹಿರಂಗಪಡಿಸುತ್ತದೆ ನಿಮ್ಮ ಕಂಗಳ ಬಣ್ಣ

ವಿವರಗಳಿಗೆ ಹೆಚ್ಚಿನ ಗಮನ ನೀಡುತ್ತಾರೆ: ಪ್ರತಿಯೊಂದು ವಿಷಯಗಳಲ್ಲೂ ವಿವರಗಳಿಗೆ ಗಮನಕೊಡುತ್ತಾರೆ ಮತ್ತು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೂ ಎಚ್ಚರಿಕೆಯಿಂದಿರುತ್ತಾರೆ.

ತಾಳ್ಮೆಯಿಂದ ಇರುತ್ತಾರೆ: ಒಂದೇ ಬೆರಳಿನಲ್ಲಿ ಟೈಪ್‌ ಮಾಡುವಂತಹ ಜನರು ತಾಳ್ಮೆಯಿಂದ ಇರುತ್ತಾರೆ. ಟೈಪಿಂಗ್‌ ಮಾಡುವಾಗ ಮಾತ್ರವಲ್ಲ ಜೀವನದಲ್ಲೂ ಬಹಳ ತಾಳ್ಮೆಯಿಂದ, ಶಾಂತವಾಗಿ ಇರುವಂತಹ ವ್ಯಕ್ತಿಗಳಿವರು.

ಆತುರ ಪಡುವುದಿಲ್ಲ: ಅವರು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರಪಡುವುದಿಲ್ಲ, ತಾಳ್ಮೆಯಿಂದ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಮತ್ತು ಆರಾಮದಾಯಕವಾಗಿ ಟೈಪಿಂಗ್‌ ಮಾಡುವಂತೆ ತಮ್ಮ ಕೆಲಸವನ್ನು ಸಹ ಆರಾಮದಾಯಕವಾಗಿಯೇ ಮಾಡುತ್ತಾರೆ.

ಅತಿಯಾಗಿ ಹಂಚಿಕೊಳ್ಳುವುದಿಲ್ಲ: ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಇಷ್ಟಪಡುವ ಇವರು ತಮ್ಮ ಯಾವುದೇ ವಿಷಯಗಳನ್ನು ಅತಿಯಾಗಿ ಹಂಚಿಕೊಳ್ಳುವುದಿಲ್ಲ. ಎಲ್ಲರೊಂದಿಗೂ ಆರೋಗ್ಯಕರ ಗಡಿಯನ್ನು ಹೊಂದಿರುತ್ತಾರೆ.

ಇದನ್ನೂ ಓದಿ: ಕೈ ಬೆರಳಿನ ಆಕಾರದಿಂದ ತಿಳಿಯಬಹುದು ನಿಮ್ಮ ವ್ಯಕ್ತಿತ್ವದ ಗುಟ್ಟು

ಭಾವನಾತ್ಮಕವಾಗಿ ಬಲಶಾಲಿಗಳು: ಮೊಬೈಲ್‌ನಲ್ಲಿ ಟೈಪಿಂಗ್‌ ಮಾಡಲು ಕೇವಲ ಒಂದೇ ಒಂದು ಬೆರಳನ್ನು ಬಳಸುವವರು ಭಾವನಾತ್ಮಕವಾಗಿ ತುಂಬಾನೇ ಬಲಶಾಲಿಗಳಂತೆ. ಅವರು ನಿಧಾನವಾಗಿ ಪ್ರತಿಕ್ರಿಯಿಸಿದರೂ ಯೋಚಿಸಿ ಸಂದೇಶವನ್ನು ಕಳಿಸುತ್ತಾರೆ, ಜೀವನದಲ್ಲೂ ಇದೇ ನಿಯಮವನ್ನು ಪಾಲಿಸುತ್ತಾರೆ.

ಅವರು ಒಂದು ಉದ್ದೇಶದಿಂದ ಬದುಕುತ್ತಾರೆ: ಬುದ್ಧಿವಂತಿಕೆಯಿಂದ ಕೆಲಸ ಮಾಡುವ ಇವರು ಜೀವನದಲ್ಲಿ ಒಂದು ನಿಖರ ಉದ್ದೇಶ, ಗುರಿಯನ್ನು ಹೊಂದಿರುತ್ತಾರೆ. ಆ ಉದ್ದೇಶ ಪ್ರಕಾರವೇ ಶಿಸ್ತುಬದ್ಧ ಜೀವನವನ್ನು ನಡೆಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ