Chanakya Niti: ಈ ಗುಣಗಳೇ ಪುರುಷರ ವ್ಯಕ್ತಿತ್ವನ್ನು ಆಕರ್ಷಕಗೊಳಿಸುವುದು ಎನ್ನುತ್ತಾರೆ ಚಾಣಕ್ಯ
ವ್ಯಕ್ತಿಯ ಗುಣ ನಡತೆಯ ಆತನ ವ್ಯಕ್ತಿತ್ವದ ಕೈಗನ್ನಡಿ ಅಂತ ಹೇಳಬಹುದು. ಒಳ್ಳೆಯ ಗುಣಗಳನ್ನು ಹೊಂದಿರುವ ವ್ಯಕ್ತಿಯ ವ್ಯಕ್ತಿತ್ವವೂ ತುಂಬಾನೇ ಆಕರ್ಷಕವಾಗಿರುತ್ತದೆ. ಅದರಲ್ಲೂ ಈ ಕೆಲವೊಂದಷ್ಟು ಗುಣಗಳನ್ನು ಹೊಂದಿರುವ ಪುರುಷರು ಅಟ್ರಾಕ್ಟಿವ್ ಆಗಿ ಕಾಣುವುದರ ಜೊತೆಗೆ ಇಂತಹವರು ಮಹಿಳೆಯರಿಗೂ ಕೂಡ ಇಷ್ಟವಾಗ್ತಾರೆ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಹಾಗಿದ್ರೆ ಪುರುಷರು ತಮ್ಮ ವ್ಯಕ್ತಿತ್ವವನ್ನು ಸುಂದರಗೊಳಿಸಲು ಯಾವೆಲ್ಲಾ ಗುಣಗಳನ್ನು ಅಳವಡಿಸಿಕೊಂಡರೆ ಚೆಂದ ಅನ್ನೋದನ್ನು ನೋಡೋಣ ಬನ್ನಿ.

ಒಬ್ಬ ವ್ಯಕ್ತಿ ಒಳ್ಳೆಯವನೋ, ಕೆಟ್ಟವನೋ ಅಥವಾ ಆತನ ವ್ಯಕ್ತಿತ್ವ (personality) ಒಳ್ಳೆದಿದೆಯೋ ಇವೆಲ್ಲವೂ ನಿರ್ಧಾರವಾಗುವುದು ಆತನ ಗುಣ ನಡತೆಯ ಆಧಾರದ ಮೇಲೆ. ಹೌದು ನಮ್ಮ ಗುಣ, ನಡವಳಿಕೆಯೇ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಒಳ್ಳೆಯ ಗುಣ, ಸಂಸ್ಕಾರವಿರುವ ವ್ಯಕ್ತಿಯ ವ್ಯಕ್ತಿತ್ವ ಕೂಡ ಆಕರ್ಷಕವಾಗಿರುತ್ತದೆ. ಅದಕ್ಕಾಗಿಯೇ ಹಿರಿಯರು ಒಳ್ಳೆಯ ಗುಣಗಳನ್ನು ಕಲಿಯಿರಿ ಎಂದು ಕಿವಿ ಮಾತು ಹೇಳೋದು. ಅದರಲ್ಲೂ ವಿಶೇಷವಾಗಿ ಈ ಒಂದಷ್ಟು ಗುಣಗಳನ್ನು ಹೊಂದಿರುವ ಪುರುಷರ ವ್ಯಕ್ತಿತ್ವ ಆಕರ್ಷಕವಾಗಿ ಕಾಣುವುದರ ಜೊತೆಗೆ ಅವರನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ, ಮಹಿಳೆಯರು ಸಹ ಅಂತಹ ಪುರುಷರನ್ನೇ ಇಷ್ಟಪಡುತ್ತಾರೆ ಎನ್ನುತ್ತಾರೆ ಚಾಣಕ್ಯ. ಹಾಗಿದ್ರೆ ಚಾಣಕ್ಯರು ಹೇಳಿರುವಂತೆ ಪುರುಷರು ತಮ್ಮ ವ್ಯಕ್ತಿತ್ವವನ್ನು ಸುಂದರಗೊಳಿಸಲು ಯಾವೆಲ್ಲಾ ಗುಣಗಳನ್ನು ಅಳವಡಿಸಿಕೊಂಡರೆ ಚೆಂದ ಅನ್ನೋದನ್ನು ನೋಡೋಣ ಬನ್ನಿ.
ಪುರುಷರ ವ್ಯಕ್ತಿತ್ವವನ್ನು ಆಕರ್ಷಕಗೊಳಿಸುವ ಗುಣಗಳಿವು:
ಶಾಂತ ಸ್ವಭಾವ ಮತ್ತು ಸಂಯಮ: ಹೆಚ್ಚು ಶಾಂತ ಮತ್ತು ಸಂಯಮದಿಂದ ಇರುವಂತಹ ಪುರುಷರ ವ್ಯಕ್ತಿತ್ವವೂ ಅಷ್ಟೇ ಆಕರ್ಷಕವಾಗಿರುತ್ತದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಅಂತಹ ವ್ಯಕ್ತಿಗಳಿಗೆ ಸಮಾಜದಲ್ಲಿ ಸಾಕಷ್ಟು ಗೌರವ ಸಿಗುವುದರ ಜೊತೆಗೆ ಮಹಿಳೆಯರು ಸಹ ಅವರತ್ತ ಆಕರ್ಷಿತರಾಗುತ್ತದೆ, ಪ್ರತಿಯೊಬ್ಬ ಮಹಿಳೆಯೂ ತನ್ನ ಜೀವನ ಸಂಗಾತಿಯಲ್ಲಿ ಈ ಗುಣ ಇರಬೇಕೆಂದು ಬಯಸುತ್ತಾಳೆ.
ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆ: ತಾವು ಮಾಡುವ ಕೆಲಸದಲ್ಲಿ ಕಠಿಣ ಪರಿಶ್ರಮವನ್ನು ವಹಿಸುವ ಮತ್ತು ಪ್ರಾಮಾಣಿಕತೆಯನ್ನು ಹೊಂದಿರುವ ಪುರುಷರ ವ್ಯಕ್ತಿತ್ವವೂ ಆಕರ್ಷಕವಾಗಿರುತ್ತದೆ. ಈ ಗುಣಗಳನ್ನು ಹೊಂದಿರುವ ಪುರುಷರು ತಮ್ಮ ಕುಟುಂಬಗಳಲ್ಲಿ ಮತ್ತು ಸಮಾಜದಲ್ಲಿ ಉತ್ತಮ ಗೌರವವನ್ನು ಪಡೆಯುತ್ತಾರೆ. ಈ ಗುಣಗಳು ಅವರನ್ನು ತಮ್ಮ ವೃತ್ತಿಜೀವನದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತವೆ. ಅದೃಷ್ಟವನ್ನು ಅವಲಂಬಿಸದೆ ತನ್ನ ಗುರಿಗಳನ್ನು ಸಾಧಿಸಲು ನಿರಂತರವಾಗಿ ಪ್ರಾಮಾಣಿಕತೆಯಿಂದ ಶ್ರಮಿಸುವ ವ್ಯಕ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸುವುದು ಖಚಿತ ಎನ್ನುತ್ತಾರೆ ಚಾಣಕ್ಯ.
ಇತರರ ಮಾತುಗಳನ್ನು ಆಲಿಸುವ, ಅರ್ಥೈಸುವ ಗುಣ: ಹೆಚ್ಚಿನವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಲ್ಲಿ ಮಾತ್ರ ಆಸಕ್ತಿಯನ್ನು ಹೊಂದಿರುತ್ತಾರೆ. ಇತರರ ಮಾತನ್ನು ಆಲಿಸುವುದಿಲ್ಲ. ಆದರೆ ಇತರರ ಮಾತುಗಳನ್ನು ಶಾಂತವಾಗಿ ಕೇಳುವ, ಅರ್ಥೈಸುವ ಗುಣವನ್ನು ಹೊಂದಿರುವ ಜನರಿಗೆ ಸಮಾಜದಲ್ಲಿ ಗೌರವ ಲಭಿಸುತ್ತದೆ. ಜೊತೆಗೆ ಈ ಗುಣವನ್ನು ಹೊಂದಿರುವ ಪುರುಷರೇ ಮಹಿಳೆಯರಿಗೆ ಇಷ್ಟವಾಗುತ್ತಾರೆ ಎನ್ನುತ್ತಾರೆ ಚಾಣಕ್ಯ.
ಇದನ್ನೂ ಓದಿ: ಈ ಎರಡು ವಿಷಯಗಳಿಗೆ ಹೆದರುವವರು ಜೀವನದಲ್ಲಿ ಎಂದಿಗೂ ಯಶಸ್ಸು ಸಾಧಿಸಲಾರರು ಎನ್ನುತ್ತಾರೆ ಚಾಣಕ್ಯ
ಪ್ರೀತಿಯಲ್ಲಿ ನಿಷ್ಠೆ: ಪ್ರತಿಯೊಬ್ಬ ಮಹಿಳೆಯೂ ತಾನು ಪ್ರೀತಿಸುವ ವ್ಯಕ್ತಿ ಎಂದಿಗೂ ತನಗೆ ದ್ರೋಹ ಮಾಡಬಾರದು ಎಂದು ಬಯಸುತ್ತಾಳೆ. ಪುರುಷನಾದವನು ಈ ನಿಷ್ಠೆಯ ಗುಣವನ್ನು ಹೊಂದಿದ್ದರೆ, ಮಹಿಳೆ ಅಂತಹ ಪುರುಷನನ್ನು ಜೀವನಪರ್ಯಂತ ನಿಷ್ಕಲ್ಮಶವಾಗಿ ಪ್ರೀತಿಸುತ್ತಾಳೆ. ಚಾಣಕ್ಯರ ಪ್ರಕಾರ, ಸಂತೋಷದ ದಾಂಪತ್ಯ ಜೀವನಕ್ಕೆ ಈ ಗುಣ ಅತ್ಯಗತ್ಯ.
ಎಲ್ಲರನ್ನು ಸಮಾನವಾಗಿ ನಡೆಸಿಕೊಳ್ಳುವ ಗುಣ: ಬಡವ ಶ್ರೀಮಂತ, ಹೆಣ್ಣು ಗಂಡು ಇದ್ಯಾವುದೇ ತಾರತಮ್ಯ ಮಾಡದೆ ಮತ್ತು ಎಲ್ಲರನ್ನೂ ಸಮಾನವಾಗಿ ಗೌರವಿಸುವ ಪುರುಷರನ್ನು ಮಹಿಳೆಯರು ಮೆಚ್ಚುತ್ತಾರೆ. ಇದಲ್ಲದೆ, ನೀವು ಈ ಗುಣವಿರುವ ವ್ಯಕ್ತಿಗೆ ಸಮಾಜದಲ್ಲಿ ಗೌರವವೂ ಸಿಗುತ್ತದೆ. ಜೊತೆಗೆ ಇಂತಹ ಸದ್ಗುಣಶೀಲ ಪುರುಷರನ್ನೇ ಮಹಿಳೆರು ಇಷ್ಟಪಡುವುದು ಎನ್ನುತ್ತಾರೆ ಚಾಣಕ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








