AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಈ ಎರಡು ವಿಷಯಗಳಿಗೆ ಹೆದರುವವರು ಜೀವನದಲ್ಲಿ ಎಂದಿಗೂ ಯಶಸ್ಸು ಸಾಧಿಸಲಾರರು ಎನ್ನುತ್ತಾರೆ ಚಾಣಕ್ಯ

ಒಂದಲ್ಲಾ ಒಂದು ವಿಷಯಗಳಿಗೆ ಭಯ ಎನ್ನುವಂತಹದ್ದು ಎಲ್ಲರಿಗೂ ಇದ್ದೇ ಇರುತ್ತದೆ. ಕೆಲವರಿಗೆ ಕತ್ತಲು ಅಂದ್ರೆ ಭಯ, ಇನ್ನೂ ಕೆಲವರಿಗೆ ಕಷ್ಟಗಳು ಎದುರಾಗುತ್ತವೆಯೋ ಎನ್ನುವ ಭಯ. ಹೀಗೆ ಒಬ್ಬೊಬ್ಬರು ಒಂದೊಂದು ಸನ್ನಿವೇಶಗಳಿಗೆ ಹೆದರುತ್ತಾರೆ. ಆದರೆ ಈ ಎರಡು ವಿಷಯಗಳಿಗೆ ಹೆದರುವ ಜನ ಎಂದಿಗೂ ಯಶಸ್ಸು ಸಾಧಿಸಲಾರರು ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Chanakya Niti: ಈ ಎರಡು ವಿಷಯಗಳಿಗೆ ಹೆದರುವವರು ಜೀವನದಲ್ಲಿ ಎಂದಿಗೂ ಯಶಸ್ಸು ಸಾಧಿಸಲಾರರು ಎನ್ನುತ್ತಾರೆ ಚಾಣಕ್ಯ
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: Oct 24, 2025 | 9:30 AM

Share

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ಮಾತ್ರವಲ್ಲದೆ ನಮ್ಮ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ಸಾಮಾಜಿಕ ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಹೌದು ಒಬ್ಬ ವ್ಯಕ್ತಿ ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸಲು ಏನು ಮಾಡಬೇಕು, ಯಶಸ್ಸು ಸಾಧಿಸಲು ಪರಿಶ್ರಮ ಹೇಗಿರಬೇಕು, ಗಂಡ ಹೆಂಡತಿ ಹೇಗಿದ್ದರೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ಅದೇ ರೀತಿ ಅವರು ಯಶಸ್ಸನ್ನು ಸಾಧಿಸಲು ಬಯಸುವವರು ಯಾವುದೇ ಕಾರಣಕ್ಕೂ ಈ ಎರಡು ವಿಷಯಗಳಿಗೆ ಹೆದರಬಾರದು ಎಂದಿದ್ದಾರೆ. ಚಾಣಕ್ಯರು ಹೇಳಿರುವಂತೆ ಯಾವ ವಿಷಯಗಳಿಗೆ ಹೆದರಬಾರದು ಗೊತ್ತಾ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಈ ಎರಡು ವಿಷಯಗಳಿಗೆ ಹೆದರದಿರಿ:

ಟೀಕೆ: ಆಚಾರ್ಯ ಚಾಣಕ್ಯರ ಪ್ರಕಾರ, ಈ ಕೆಲಸ ಮಾಡಿದರೆ ಜನ ನಮ್ಮನ್ನು ಎಲ್ಲಿ ನಮ್ಮನ್ನು ಟೀಕಿಸುತ್ತಾರೋ, ಆಡಿಕೊಳ್ಳುತ್ತಾರೋ ಎಂದು ಭಯ ಪಟ್ಟು ಹಿಂದೆ ಸರಿಯುವ ಜನರು ಜೀವನದಲ್ಲಿ ಎಂದಿಗೂ ಯಶಸ್ಸನ್ನು ಗಳಿಸಲು ಸಾಧ್ಯವಿಲ್ಲ. ಜನರ ಟೀಕೆಗಳನ್ನು ಸಮರ್ಥವಾಗಿ ಎದುರಿಸುತ್ತಾ, ಜೀವನದಲ್ಲಿ ಆಗುವಂತಹ ಬದಲಾವಣೆಗಳನ್ನು ಸ್ವೀಕರಿಸುತ್ತಾ ಮುನ್ನಡೆದರೆ ಮಾತ್ರ ನೀವು ಜೀನವದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ. ಟೀಕೆಯೇ ಮನುಷ್ಯನ ದೊಡ್ಡ ಭಯ, ಇದರ ಭಯದಿಂದ ಹೊರ ಬಂದು ಜೀವನ ನಡೆಸುವವನು ತನ್ನ ಕಾರ್ಯವನ್ನು ಮಾಡುವವನು ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎನ್ನುತ್ತಾರೆ ಚಾಣಕ್ಯ. ಹಾಗಾಗಿ ಇನ್ನು ಮುಂದೆ ಯಾವುದೇ ಟೀಕೆಗಳಿಗೆ ತಲೆಕೆಡಿಸಿಕೊಳ್ಳಬೇಡಿ, ಬದಲಾಗಿ ನಿಮ್ಮ ಕಾರ್ಯಗಳತ್ತ ಗಮನಹರಿಸಿ.

ಇದನ್ನೂ ಓದಿ: ಐದು ಗುಣಗಳನ್ನು ಹೊಂದಿರುವವರು ಸವಾಲುಗಳನ್ನು ಎದುರಿಸುವಲ್ಲಿ ನಿಸ್ಸಿಮರಂತೆ

ಇದನ್ನೂ ಓದಿ
Image
ಈ ಗುಣಗಳನ್ನು ಹೊಂದಿರುವವರು ಸವಾಲುಗಳನ್ನು ಎದುರಿಸುವಲ್ಲಿ ನಿಸ್ಸಿಮರು
Image
ಈ 5 ನಿಯಮಗಳನ್ನು ಪಾಲಿಸಿದರೆ ಲಕ್ಷ್ಮೀ ದೇವಿ ನಿಮ್ಮ ಮನೆಗೆ ಬರುತ್ತಾಳೆ
Image
ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿದರೆ ಹಣದ ಕೊರತೆ ಬಾರದು
Image
ವಿದ್ಯಾರ್ಥಿಗಳು ಈ ಅಭ್ಯಾಸಗಳನ್ನು ತ್ಯಜಿಸಲೇಬೇಕು ಎನ್ನುತ್ತಾರೆ ಚಾಣಕ್ಯ

ಹೋರಾಟ, ಕಷ್ಟ: ಕಷ್ಟಗಳು ಮಾನವ ಜೀವನದ ಒಂದು ಭಾಗ, ಮತ್ತು ಕಷ್ಟಗಳು ಬಂದಾಗ ನಾವು ಭಯಪಡಬಾರದು ಚಾಣಕ್ಯರ ಪ್ರಕಾರ ಕಷ್ಟಗಳು, ಹೋರಾಟವೇ ಯಶಸ್ಸಿನ ಕೀಲಿಕೈ. ಕಷ್ಟ ಬಂತೆಂದು ಅದರಿಂದ ಓಡಿಹೋಗುವ ವ್ಯಕ್ತಿ ಎಂದಿಗೂ ಬಲಿಷ್ಠನಾಗಲು ಸಾಧ್ಯವಿಲ್ಲ, ಅವನು ಜೀವನದಲ್ಲಿ ಯಶಸ್ಸನ್ನು ಗಳಿಸಲು ಕೂಡ ಸಾಧ್ಯವಿಲ್ಲ. ಕಷ್ಟಗಳು ಜೀವನದಲ್ಲಿ ತಾಳ್ಮೆ, ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಹೇಗಿರಬೇಕು ಎಂಬುದನ್ನು ನಮಗೆ ಕಲಿಸುತ್ತವೆ. ಹಾಗಾಗಿ ಜೀವನದಲ್ಲಿ ಬರುವಂತಹ ಕಷ್ಟಗಳನ್ನು ಸಮರ್ಥವಾಗಿ ಎದುರಿಸಲು ಕಲಿಯಿರಿ. ಈ ಗುಣ ಖಂಡಿತವಾಗಿ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ