Chanakya Niti: ಚಾಣಕ್ಯರ ಪ್ರಕಾರ ಈ 5 ನಿಯಮಗಳನ್ನು ಪಾಲಿಸಿದರೆ ಲಕ್ಷ್ಮೀ ದೇವಿ ನಿಮ್ಮ ಮನೆಗೆ ಬರುತ್ತಾಳೆ
ಸಂಪತ್ತಿನ ಅಧಿದೇವತೆಯಾಗಿರುವ ಲಕ್ಷ್ಮೀ ಮನೆಯಲ್ಲಿ ಸದಾ ನೆಲೆಸಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಒಮ್ಮೆ ಲಕ್ಷ್ಮೀ ದೇವಿ ಒಲಿದರೆ ಆ ಮನೆಯಲ್ಲಿ ಸಂಪತ್ತು, ಹಣಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಇದೇ ರೀತಿ ನಿಮ್ಮ ಮನೆ ಬಾಗಿಲಿಗೂ ಲಕ್ಷ್ಮೀ ದೇವಿ ಬರ್ಬೇಕು, ನಿಮ್ಮ ಮನೆಯಲ್ಲೂ ಸಂಪತ್ತು ಸಮೃದ್ಧಿ ನೆಲೆಸಬೇಕು ಎಂದಾದರೆ ಮನೆಯಲ್ಲಿ ಈ ನಿಮಯಮಗಳನ್ನು ತಪ್ಪದೇ ಪಾಲಿಸಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಪಾಲಿಸಬೇಕಾದ ಆ ನಿಮಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಸಂಪತ್ತಿನ ಅಧಿದೇವತೆಯಾಗಿರುವ ಲಕ್ಷ್ಮೀ ನಮ್ಮೊಂದಿಗಿದ್ದರೆ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ (prosperity) ನೆಲೆಸಿರುತ್ತದೆ. ಆಕೆ ಒಲಿದರೆ, ಆಕೆಯ ಆಶಿರ್ವಾದ ಲಭಿಸಿದರೆ ಕಡು ಬಡವನು ಕೂಡ ಶ್ರೀಮಂತನಾಗುತ್ತಾನೆ, ಅವನ ಜೀವನದಲ್ಲೂ ಸಂತೋಷ ನೆಲೆಸುತ್ತದೆ ಆದರೆ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳುವುದು ತುಂಬಾನೇ ಕಷ್ಟ. ಆಕೆ ಯಾರಿಗೂ ಅಷ್ಟು ಸುಲಭವಾಗಿ ಒಲಿಯೋದಿಲ್ಲ. ಅದಕ್ಕಾಗಿ ಒಂದಷ್ಟು ನಿಮಯಗಳನ್ನು ಪಾಲಿಸಬೇಕು, ಆ ನಿಮಯಮಗಳನ್ನು ಮನೆಯಲ್ಲಿ ಚಾಚು ತಪ್ಪದೆ ಪಾಲಿಸಿದರೆ ಲಕ್ಷ್ಮೀ ದೇವಿ ಸಂತುಷ್ಟಳಾಗುತ್ತಾಳೆ, ಆಕೆ ನಿಮ್ಮನ್ನು ಹುಡುಕಿ ಬರುತ್ತಾಳೆ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಹಾಗಿದ್ದರೆ ಸಂಪತ್ತಿನ ಅಧಿದೇವತೆಯನ್ನು ಒಲಿಸಿಕೊಳ್ಳಲು ಮನೆಯಲ್ಲಿ ಯಾವ ನಿಮಯಗಳನ್ನು ಪಾಲಿಸಬೇಕು ಎಂಬುದನ್ನು ನೋಡೋಣ.
ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಮನೆಯಲ್ಲಿ ಪಾಲಿಸಬೇಕಾದ ನಿಯಮಗಳು:
ಸ್ವಚ್ಛತೆ: ಮನೆಯಲ್ಲಿ ಸ್ವಚ್ಛತೆಯನ್ನು ಪಾಲಿಸಬೇಕು. ನಿಮ್ಮ ಮನೆ ಸ್ವಚ್ಛವಾಗಿದ್ದರೆ ಮತ್ತು ನೀವು ಶುದ್ಧವಿದ್ದು, ದೇವರ ಧ್ಯಾನ ಮಾಡಿದರೆ ಲಕ್ಷ್ಮೀ ದೇವಿಯ ಆಶೀರ್ವಾದ ನಿಮ್ಮ ಮನೆಗೆ ಲಭಿಸುತ್ತದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಅಂತಹ ಮನೆಗಳಲ್ಲಿ ಹಣ, ಸಂಪತ್ತಿಗೆ ಯಾವುದೇ ತೊಂದರೆಗಳು, ಆರ್ಥಿಕ ಸಮಸ್ಯೆಗಳು ಬರುವುದಿಲ್ಲವಂತೆ. ನೀವು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲು ಬಯಸಿದರೆ, ನೀವು ಮನೆಯ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ಮನೆಗೆ ಬಂದ ಅತಿಥಿಗಳನ್ನು ಗೌರವಿಸುವುದು: ಅತಿಥಿ ದೇವೋಭವ ಎನ್ನುವ ಮಾತಿದೆ. ಆದ್ದರಿಂದ, ಯಾರಾದರೂ ನಿಮ್ಮ ಮನೆಗೆ ಬಂದರೆ, ನೀವು ಯಾವಾಗಲೂ ಅವರನ್ನು ಗೌರವದಿಂದ ಮಾತನಾಡಿಸಬೇಕು, ಅದು ಬಿಟ್ಟು ಅವರಿಗೆ ಅವಮಾನವಾಗುವ ರೀತಿಯಲ್ಲಿ ವರ್ತಿಸಿದರೆ ನೀವು ಲಕ್ಷ್ಮೀ ದೇವಿಯ ಕೋಪಕ್ಕೆ ಗುರಿಯಾಗುತ್ತೀರಿ ಅದೇ ರೀತಿ ಆಚಾರ್ಯ ಅತಿಥಿಗಳನ್ನು ಗೌರವ ಮತ್ತು ಆತಿಥ್ಯದಿಂದ ನಡೆಸಿಕೊಳ್ಳುವ ಮನೆಗಳಲ್ಲಿ ಗೌರವ ಮತ್ತು ಸಂಪತ್ತು ನೆಲೆಸುತ್ತದೆ ಎನ್ನುತ್ತಾರೆ ಚಾಣಕ್ಯ.
ಆಹಾರವನ್ನು ವ್ಯರ್ಥಮಾಡದಿರುವುದು: ಆಹಾರವನ್ನು ವ್ಯರ್ಥ ಮಾಡುವವರ ಮೇಲೆ ಲಕ್ಷ್ಮೀ ದೇವಿಯು ಕೋಪಗೊಳ್ಳುತ್ತಾಳೆ. ಆದ್ದರಿಂದ, ಆಹಾರವನ್ನು ಎಂದಿಗೂ ವ್ಯರ್ಥ ಮಾಡಬಾರದು ಎಂಬ ನಿಯಮವನ್ನು ನೀವು ಕಟ್ಟುನಿಟ್ಟಾಗಿ ಪಾಲಿಸಬೇಕು. ಆಹಾರ ಉಳಿದರೆ ಅದನ್ನು ವೇಸ್ಟ್ ಮಾಡುವ ಬದಲು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ತಿನ್ನಿಸಬಹುದು, ಆದರೆ ಅದನ್ನು ಎಂದಿಗೂ ಕಸದ ಬುಟ್ಟಿಗೆ ಎಸೆಯಬೇಡಿ. ಹೀಗೆ ಆಹಾರವನ್ನು ವ್ಯರ್ಥ ಮಾಡದ ಮನೆಗಳಲ್ಲಿ ಸಹ ಹಣದ ನಿರಂತರ ಹಣದ ಸಮಸ್ಯೆ ಬಾರದು ಎನ್ನುತ್ತಾರೆ ಚಾಣಕ್ಯ.
ಇದನ್ನೂ ಓದಿ: ಚಾಣಕ್ಯರ ಈ ಮಾತುಗಳನ್ನು ಅನುಸರಿಸಿದರೆ ಜೀವನದಲ್ಲಿ ಎಂದಿಗೂ ಹಣದ ಕೊರತೆ ಬಾರದು
ದಾನ ಮಾಡುವುದು: ದಾನ ಮತ್ತು ಲೋಕೋಪಕಾರ ಮಾಡುವ ಮನೆಗಳು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುವುದು ಖಚಿತ ಎನ್ನುತ್ತಾರೆ ಚಾಣಕ್ಯ. ಇತರರಿಗೆ ಸಹಾಯ ಮಾಡುವುದರಿಂದ ನಿಮಗೆ ದೇವರ ಆಶೀರ್ವಾದ ದೊರೆಯುತ್ತದೆ ಆದ್ದರಿಂದ ನಿಮ್ಮ ಸಾಮರ್ಥ್ಯಕ್ಕನುಗುಣವಾಗಿ ಕಷ್ಟದಲ್ಲಿರುವವರಿಗೆ ನೀವು ಸಹಾಯ ಮಾಡಬೇಕು.
ಸಂಯಮ ಮತ್ತು ಶಿಸ್ತು: ಸಂಯಮ ಮತ್ತು ಶಿಸ್ತಿನಿಂದ ಕೂಡಿರುವ ಮನೆಗಳು ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ. ಏಕೆಂದರೆ ಆ ಮನೆಯಲ್ಲಿರುವವರಿಗೆ ಹಣವನ್ನು ಹೇಗೆ ನಿರ್ವಹಿಸಬೇಕೆಂದು ತಿಳಿದಿರುತ್ತವೆ. ಆದ್ದರಿಂದ, ನೀವು ಯಾವಾಗಲೂ ಶಿಸ್ತನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕು. ನೀವು ಹೆಚ್ಚು ಸಂಯಮ ಮತ್ತು ಶಿಸ್ತಿನಿಂದ ಇದ್ದಷ್ಟೂ, ಲಕ್ಷ್ಮಿ ದೇವಿಯ ಆಶೀರ್ವಾದ ಲಭಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








