Oversleeping: ನೀವು ಹೆಚ್ಚು ನಿದ್ರೆ ಮಾಡುತ್ತೀರಾ? ಇದರ ಕೊರತೆಯಿರಬಹುದು

| Updated By: ಅಕ್ಷಯ್​ ಪಲ್ಲಮಜಲು​​

Updated on: May 04, 2024 | 5:31 PM

ನಮ್ಮ ದೇಹಕ್ಕೆ ನಿದ್ರೆ ಬಹಳ ಮುಖ್ಯ, ಆದರೆ ಅತಿಯಾದ ನಿದ್ರೆ ದೇಹಕ್ಕೆ ಹಾನಿ ಮಾಡುತ್ತದೆ. ವಿಟಮಿನ್ ಕೊರತೆಯು ಅತಿಯಾದ ನಿದ್ರೆಗೆ ಕಾರಣವಾಗಬಹುದು. ಯಾವ ವಿಟಮಿನ್ ಕೊರತೆಯು ಈ ರೀತಿಯ ಸಮಸ್ಯೆಯನ್ನು ಉಂಟುಮಾಡುತ್ತದೆ? ಈ ಸಮಸ್ಯೆಯನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ತಿಳಿದುಕೊಳ್ಳಿ

Oversleeping: ನೀವು ಹೆಚ್ಚು ನಿದ್ರೆ ಮಾಡುತ್ತೀರಾ? ಇದರ ಕೊರತೆಯಿರಬಹುದು
Follow us on

ಮನುಷ್ಯನ ಜೀವನದಲ್ಲಿ ನಿದ್ರೆಯು ಪ್ರಮುಖ ಪಾತ್ರ ವಹಿಸುತ್ತದೆ. ದಿನನಿತ್ಯ ಸರಿಯಾಗಿ ನಿದ್ರೆ ಮಾಡದಿದ್ದರೆ ಕೆಲವು ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚು. ಅದೇ ರೀತಿ ಅತಿ ನಿದ್ರೆಯು ಸಹ ಕೆಲವು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತೆ. ನಿದ್ರಾಹೀನತೆಯಿಂದ ಆಗುವ ಅನೇಕ ಪರಿಣಾಮಗಳ ಬಗ್ಗೆ ನಿಮಗೆ ಗೊತ್ತಿದೆ . ಆದರೆ ಅತಿ ನಿದ್ರೆಯಿಂದ ಯಾವ ಸಮಸ್ಯೆ ಉಂಟಾಗುತ್ತೆ ಗೊತ್ತಾ? ಇದರ ಪರಿಣಾಮಗಳೇನು ತಿಳಿದುಕೊಳ್ಳಿ.

ಜೀವಸತ್ವಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳಾಗಿವೆ. ಇದರ ಕೊರತೆಯು ಅತಿಯಾದ ನಿದ್ರೆಯ ಸಮಸ್ಯೆಗೆ ಕಾರಣವಾಗುತ್ತದೆ. ಇದು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹದಗೆಡಿಸುತ್ತದೆ. ಜೊತೆಗೆ ಸೋಮಾರಿತನ, ನಿರಾಶೆ, ಯಾವುದೇ ಕೆಲಸವನ್ನು ಮಾಡಲು ಬಯಸದಿರುವಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದಲ್ಲದೆ, ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವುದು ಮತ್ತು ಹಾರ್ಮೋನುಗಳ ಬೆಳವಣಿಗೆಯಲ್ಲಿ ಕೊರತೆ ಕಂಡು ಬರುತ್ತದೆ. ಹಾಗಾಗಿ ಈ ಜೀವಸತ್ವಗಳ ಕೊರತೆಯನ್ನು ಪೂರೈಸುವುದು ಮುಖ್ಯ.

ಮೊದಲು ದೇಹದಲ್ಲಿ ಯಾವ ಜೀವಸತ್ವಗಳ ಕೊರತೆಯಿಂದಾಗಿ ಈ ಸಮಸ್ಯೆ ಉಂಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಡಾ. ಅಂಕಿತ್ ಕುಮಾರ್ ಹೇಳುವ ಪ್ರಕಾರ, ವಿಟಮಿನ್ ಡಿ ಮತ್ತು ವಿಟಮಿನ್ ಬಿ 12 ಕೊರತೆಯು ಅತಿಯಾದ ನಿದ್ರೆಯ ಸಮಸ್ಯೆಗೆ ಕಾರಣವಾಗಬಹುದು ಎಂದು ಹೇಳುತ್ತಾರೆ. ವಿಟಮಿನ್ ಡಿ ಕೊರತೆಯು ಕೂದಲು ಉದುರುವಿಕೆಯಂತಹ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ, ಜೊತೆಗೆ ನರವೈಜ್ಞಾನಿಕ ಸಮಸ್ಯೆಗಳಿಗೆ ಕಾರಣವಾಗಬಹುದು.

ವಿಟಮಿನ್ ಡಿ ಕೊರತೆಯಾದರೆ ಏನಾಗುತ್ತೆ?

ವಿಟಮಿನ್ ಡಿ ದೇಹಕ್ಕೆ ತುಂಬಾ ಪ್ರಯೋಜನಕಾರಿ ಪೋಷಕಾಂಶವಾಗಿದೆ. ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಅದರ ಕೊರತೆಯಿಂದಾಗಿ, ಅತಿಯಾಗಿ ನಿದ್ರೆ ಬರುತ್ತದೆ. ಇದಲ್ಲದೆ, ಇದರ ಕೊರತೆಯು ದೇಹದ ನೋವು, ರಕ್ತದೊತ್ತಡ ಮತ್ತು ಮಧುಮೇಹದಂತಹ ಸಮಸ್ಯೆಗಳನ್ನು ಸಹ ಉಂಟುಮಾಡಬಹುದು. ಕಳಪೆ ಆಹಾರ ಮತ್ತು ಸೂರ್ಯನ ಬೆಳಕಿಗೆ ಕಡಿಮೆ ಒಡ್ಡಿಕೊಳ್ಳುವುದರಿಂದ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ.

ವಿಟಮಿನ್ ಬಿ 12 ಕೊರತೆಯಾದರೆ ಏನಾಗುತ್ತೆ?

ಇದರ ಕೊರತೆಯು ಅತಿಯಾದ ನಿದ್ರೆಯ ಸಮಸ್ಯೆಗೆ ಕಾರಣವಾಗುತ್ತದೆ. ಇದಲ್ಲದೆ ರಕ್ತಹೀನತೆ, ಮಾನಸಿಕ ದೌರ್ಬಲ್ಯ, ಆಯಾಸ, ಹೊಟ್ಟೆಯ ಸಮಸ್ಯೆ ಮತ್ತು ಇತರ ಕಾಯಿಲೆಗಳ ಅಪಾಯವೂ ಇರುತ್ತದೆ.

ಇದನ್ನೂ ಓದಿ: ಭೇದಿ ಸಮಸ್ಯೆಗೆ ಸರಳ ಮನೆ ಮದ್ದು ಇಲ್ಲಿದೆ

ಈ ಜೀವಸತ್ವಗಳ ಕೊರತೆಯನ್ನು ಹೇಗೆ ನೀಗಿಸುವುದು?

-ಪ್ರತಿದಿನ ಹಾಲು ಕುಡಿಯುವುದರಿಂದ ವಿಟಮಿನ್ ಡಿ ಮತ್ತು ಬಿ 12 ಕೊರತೆಯನ್ನು ನಿವಾರಿಸಬಹುದು. ಹಾಲಿನಲ್ಲಿ ವಿಟಮಿನ್ ಡಿ ಮತ್ತು ಬಿ 12 ಸಮೃದ್ಧವಾಗಿದೆ. ಹಾಗಾಗಿ ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಬಹುದು. ಇದಲ್ಲದೆ, ಮೊಸರು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ವಿಟಮಿನ್ ಬಿ 12 ಮತ್ತು ಡಿ ಉತ್ತಮ ಪ್ರಮಾಣದಲ್ಲಿವೆ. ಪ್ರತಿದಿನ ಇದನ್ನು ತಿನ್ನುವುದರಿಂದ ದೇಹದಲ್ಲಿ ಈ ಜೀವಸತ್ವಗಳ ಮಟ್ಟವನ್ನು ಹೆಚ್ಚಿಸಬಹುದು.

-ದೇಹದಲ್ಲಿ ವಿಟಮಿನ್ ಡಿ ಮತ್ತು ಬಿ 12 ಮಟ್ಟವನ್ನು ಹೆಚ್ಚಿಸಲು ಪನ್ನೀರ್ ಸಹಾಯ ಮಾಡುತ್ತದೆ. ಪನ್ನೀರ್ ಅನ್ನು ಹಾಲಿನಿಂದ ತಯಾರಿಸಲಾಗುತ್ತದೆ ಇದರಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಡಿ ಮತ್ತು ಬಿ 12 ಇರುತ್ತದೆ. ನೀವು ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಬಹುದು.

-ದೇಹದಲ್ಲಿ ವಿಟಮಿನ್ ಡಿ ಮತ್ತು ಬಿ 12 ಕೊರತೆಯನ್ನು ಪೂರೈಸಲು ಸೋಯಾಬೀನ್ ಗಳನ್ನು ತಿನ್ನಬಹುದು. ಸೋಯಾಬೀನ್ ಉತ್ತಮ ಪೌಷ್ಟಿಕ ಆಹಾರವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಡಿ ಮತ್ತು ಬಿ 12 ಇದೆ. ಹಾಗಾಗಿ ಇದನ್ನು ಕೂಡ ಆಹಾರದಲ್ಲಿ ಸೇರಿಸಿಕೊಳ್ಳಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ