Health Care Tips in Kannada : ಭೇದಿ ಸಮಸ್ಯೆಗೆ ಸರಳ ಮನೆ ಮದ್ದು ಇಲ್ಲಿದೆ

ಹವಾಮಾನ ಬದಲಾಗುತ್ತಿದ್ದಂತೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಒಕ್ಕರಿಸಿಕೊಂಡು ಬಿಡುತ್ತವೆ. ಈ ಬೇಸಿಗೆಯಲ್ಲಿ ಸುಡುವ ಸೂರ್ಯನ ಕಿರಣವನ್ನು ತ್ವಚೆಯನ್ನು ರಕ್ಷಿಸುವುದೇ ದೊಡ್ಡ ಸವಾಲಿನ ವಿಚಾರ. ಈ ಸಮಯದಲ್ಲಿ ಕೆಲವರು ಮಲಬದ್ಧತೆಯಿಂದ ಒದ್ದಾಡಿದರೆ, ಇನ್ನು ಕೆಲವರು ಅತಿಸಾರ (ಬೇಧಿ) ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಆಹಾರ ಹಾಗೂ ನೀರಿನಿಂದ ಸ್ವಲ್ಪ ವ್ಯತ್ಯಾಸವಾದರೂ ಕೂಡ ಈ ಸಮಸ್ಯೆಯು ಬಿಗಡಾಯಿಸುತ್ತಾ ಬಿಡುತ್ತದೆ. ಹೀಗಾದಾಗ ತಕ್ಷಣವೇ ಮನೆ ಮದ್ದಿನ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು.

Health Care Tips in Kannada : ಭೇದಿ ಸಮಸ್ಯೆಗೆ ಸರಳ ಮನೆ ಮದ್ದು ಇಲ್ಲಿದೆ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: May 04, 2024 | 4:15 PM

ಸುಡು ಬಿಸಿಲಿನ ನಡುವೆ ಈ ಹೊಟ್ಟೆ ಕೆಟ್ಟು ಹೋದರೆ ಮುಗಿದೇ ಹೋಯಿತು. ಪದೇ ಪದೇ ಶೌಚಾಲಯಕ್ಕೆ ಹೋಗಿ ಬಂದು ಸುಸ್ತೋ ಸುಸ್ತು. ಭೇದಿಯಂತಹ ಸಮಸ್ಯೆಯನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಆದರೆ, ಮನೆಯಲ್ಲೇ ಇರುವ ಕೆಲವು ಪದಾರ್ಥಗಳಿಂದ ಔಷಧ ತಯಾರಿಸಿ ಸೇವಿಸುವುದು ಉತ್ತಮ. ಒಂದು ವೇಳೆ ಸಮಸ್ಯೆಯು ಅತಿಯಾದರೆ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.

ಭೇದಿ ಸಮಸ್ಯೆಗೆ ಸರಳ ಮನೆ ಮದ್ದುಗಳು:

  • ಬೇಸಿಗೆಯಲ್ಲಿ ಭೇದಿಯ ಸಮಸ್ಯೆ ಕಾಣಿಸಿಕೊಂಡರೆ ಮೊಸರು ಸೇವಿಸುವುದು ಉತ್ತಮ.
  • ಹೊಟ್ಟೆ ಕೆಟ್ಟು ಹೋಗಿದ್ದರೆ ಎಳನೀರು ಕುಡಿದರೆ ಈ ಸಮಸ್ಯೆಯು ನಿವಾರಣೆಯಾಗುತ್ತದೆ.
  • ಮೊಸರಿಗೆ ಮೆಂತ್ಯೆ ಪುಡಿ ಹಾಗೂ ಜೀರಿಗೆ ಪುಡಿಯನ್ನು ಚೆನ್ನಾಗಿ ಮಿಶ್ರಣ ಮಾಡಿ ಸೇವಿಸುವುದರಿಂದ ಭೇದಿ ಸಮಸ್ಯೆಯು ನಿವಾರಣೆಯಾಗುತ್ತದೆ.
  • ಒಂದು ಲೋಟ ನೀರಿಗೆ ಒಂದು ಚಮಚ ಕೋಕಮ್ ಜ್ಯೂಸ್, ಸ್ವಲ್ಪ ಸಕ್ಕರೆ ಹಾಗೂ ಉಪ್ಪನ್ನು ಹಾಕಿ ಬೆರೆಸಿ ಕುಡಿದರೆ ಪರಿಣಾಮಕಾರಿಯಾಗಿದೆ.
  • ದಾಳಿಂಬೆಯ ಒಣ ಸಿಪ್ಪೆಯ ಹುಡಿಯನ್ನು ಮೊಸರಿನೊಂದಿಗೆ ಬೆರೆಸಿ ಸೇವಿಸುವುದು ಅತಿಸಾರಕ್ಕೆ ಉತ್ತಮವಾದ ಮನೆ ಮದ್ದಾಗಿದೆ.
  • ಒಂದು ಲೋಟ ನೀರಿಗೆ ನಿಂಬೆ ರಸವನ್ನು ಸೇರಿಸಿ ಉಪ್ಪು ಹಾಗೂ ಸಕ್ಕರೆಯನ್ನು ಮಿಶ್ರಣ ಮಾಡಿಡಿ ಕುಡಿದರೆ ಲೂಸ್ ಮೋಷನ್ ತಕ್ಷಣವೇ ನಿಲ್ಲುತ್ತದೆ.

ಈ ಮನೆ ಮದ್ದನ್ನೊಮ್ಮೆ ಪ್ರಯತ್ನಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ