Pancreatic cancer: ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್​​ನ ಆರಂಭಿಕ ಲಕ್ಷಣ ತಿಳಿದುಕೊಳ್ಳಿ

|

Updated on: Jul 21, 2023 | 10:34 AM

ತಜ್ಞರ ಪ್ರಕಾರ, ಗ್ಯಾಸ್ಟ್ರಿಕ್ ತೊಂದರೆಯು ಸಾಮಾನ್ಯವಾಗಿ ಅತಿಸಾರ ಅಥವಾ ಮಲಬದ್ಧತೆಯನ್ನು ಉಂಟು ಮಾಡಬಹುದು. ಆದರೆ ಪ್ರತೀ ಭಾರೀ ಗ್ಯಾಸ್ಟ್ರಿಕ್ ತೊಂದರೆ ಎಂದು ನಿರ್ಲಕ್ಷ್ಯಿಸದಿರಿ. ಇದು ನಿಮ್ಮ ಜಠರಗರುಳಿನಲ್ಲಿ ಗೆಡ್ಡೆ ಬೆಳೆಯುತ್ತಿದೆ ಎಂಬುದರ ಆರಂಭಿಕ ಲಕ್ಷಣವಾಗಿರಬಹುದು.

Pancreatic cancer: ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್​​ನ ಆರಂಭಿಕ ಲಕ್ಷಣ ತಿಳಿದುಕೊಳ್ಳಿ
Pancreatic Cancer
Image Credit source: Shutterstock
Follow us on

ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ನಂತೆ ಸಕಾಲಿಕವಾಗಿ ಪತ್ತೆ ಮಾಡಿದರೆ ಅಥವಾ ಚಿಕಿತ್ಸೆ ನೀಡಿದರೆ ಅದನ್ನು ಉತ್ತಮವಾಗಿ ನಿರ್ವಹಿಸಬಹುದು. ಇದು ಕ್ಯಾನ್ಸರ್‌ನ ಅತ್ಯಂತ ನೋವಿನ ಮತ್ತು ಮಾರಣಾಂತಿಕ ರೂಪಗಳಲ್ಲಿ ಒಂದಾಗಿದೆ, ಆರಂಭಿಕ ಹಂತಗಳಲ್ಲಿ, ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಯಾವುದೇ ಲಕ್ಷಣಗಳನ್ನು ಹೊಂದಿರುವುದಿಲ್ಲ. ಮುಂದುವರಿದ ಹಂತದಲ್ಲಿ ಕೆಲವೊಂದು ಲಕ್ಷಣಗಳು ಮಾತ್ರ ಕಾಣಿಸಿಕೊಳ್ಳುತ್ತವೆ. ಜಾಗತಿಕವಾಗಿ, ಇದು ಕ್ಯಾನ್ಸರ್‌ನ ಐದನೇ-ಮಾರಣಾಂತಿಕ ರೂಪವಾಗಿದೆ. ಸಾಮಾನ್ಯವಾಗಿ ಜಠರಗರುಳಿನ ತೊಂದರೆ ಎಂದು ತಪ್ಪಾಗಿ ಗ್ರಹಿಸಲ್ಪಡುತ್ತವೆ.

ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ನ ಲಕ್ಷಣಗಳೇನು?

ತಜ್ಞರ ಪ್ರಕಾರ, ಗ್ಯಾಸ್ಟ್ರಿಕ್ ತೊಂದರೆಯು ಸಾಮಾನ್ಯವಾಗಿ ಅತಿಸಾರ ಅಥವಾ ಮಲಬದ್ಧತೆಯನ್ನು ಉಂಟು ಮಾಡಬಹುದು. ಆದರೆ ಪ್ರತೀ ಭಾರೀ ಗ್ಯಾಸ್ಟ್ರಿಕ್ ತೊಂದರೆ ಎಂದು ನಿರ್ಲಕ್ಷ್ಯಿಸದಿರಿ. ಇದು ನಿಮ್ಮ ಜಠರಗರುಳಿನಲ್ಲಿ ಗೆಡ್ಡೆ ಬೆಳೆಯುತ್ತಿದೆ ಎಂಬುದರ ಆರಂಭಿಕ ಲಕ್ಷಣವಾಗಿರಬಹುದು. ಪ್ರಾರಂಭದಲ್ಲಿ ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳಬಹುದು. ನಂತರ ಬೆನ್ನು ಮೂಳೆ ನೋವು ಹಾಗೂ ಮಲಗಿದಾಗ ಅತಿಯಾದ ನೋವು ಕಾಣಿಸಿಕೊಳ್ಳಬಹುದು.

ಇದಲ್ಲದೆ, ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ನ ಪ್ರಮುಖ ಲಕ್ಷಣಗಳು:

  • ಅಜೀರ್ಣ
  • ಹಠಾತ್​​​ ತೂಕ ನಷ್ಟ
  • ಆಯಾಸ
  • ಕಾಮಾಲೆ
  • ರಕ್ತ ಹೆಪ್ಪುಗಟ್ಟುವಿಕೆ
  • ಖಿನ್ನತೆ

ಇದನ್ನೂ ಓದಿ: ಮಧುಮೇಹವು ಮೂತ್ರಪಿಂಡದ ಹಾನಿಯನ್ನುಂಟು ಮಾಡಬಹುದು: ಡಾ.ಸುಮಿತ್ ಶರ್ಮಾ

ಚಿಕಿತ್ಸೆಗಾಗಿ, ರೋಗದ ತೀವ್ರತೆಯನ್ನು ಅವಲಂಬಿಸಿ ಕೀಮೋಥೆರಪಿ, ರೇಡಿಯೊಥೆರಪಿಯನ್ನು ಶಿಫಾರಸು ಮಾಡಲಾಗುತ್ತದೆ.

ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅಪಾಯದ ಅಂಶಗಳು ಯಾವುವು?

ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ನ ಅಪಾಯಕಾರಿ ಅಂಶಗಳು:

  • ಆನುವಂಶಿಕ ಕಾಯಿಲೆ
  • ಕುಟುಂಬದ ಇತಿಹಾಸ
  • ಧೂಮಪಾನ
  • ಸಂಸ್ಕರಿಸಿದ ಕೆಂಪು ಮಾಂಸವನ್ನು ತಿನ್ನುವುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: