AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Post Traumatic Stress Disorder: ಒತ್ತಡದ ಅಸ್ವಸ್ಥತೆಯಿಂದ ಚೇತರಿಸಿಕೊಳ್ಳಲು ಯೋಗ ಹೇಗೆ ಸಹಾಯ ಮಾಡುತ್ತದೆ?

ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ ಅಥವಾ ಪಿಟಿಎಸ್​​ಡಿಯಿಂದ ಚೇತರಿಸಿಕೊಳ್ಳಲು ಯೋಗ ಮತ್ತು ಫಿಸಿಯೋಥೆರಪಿ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಆರೋಗ್ಯ ತಜ್ಞರು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Post Traumatic Stress Disorder: ಒತ್ತಡದ ಅಸ್ವಸ್ಥತೆಯಿಂದ ಚೇತರಿಸಿಕೊಳ್ಳಲು ಯೋಗ ಹೇಗೆ ಸಹಾಯ ಮಾಡುತ್ತದೆ?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jul 20, 2023 | 3:41 PM

Share

ಬದುಕಿನಲ್ಲಿ ನಡೆಯುವ ಆಘಾತಕಾರಿ ಘಟನೆಯು ವ್ಯಕ್ತಿಯು ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (Post traumatic stress disorder) ಅಥವಾ ಪಿಟಿಎಸ್​​ಡಿಗೆ ಕಾರಣವಾಗಬಹುದು. ಇದು ಒಂದು ರೀತಿಯ ಮಾನಸಿಕ ಆರೋಗ್ಯ ಸ್ಥಿತಿಯಾಗಿದ್ದು, ಆತಂಕ, ಕೆಟ್ಟ ಆಲೋಚನೆಗಳು, ದುಃಸ್ವಪ್ನಗಳು ಮತ್ತು ಹಿಂದಿನ ಕಹಿ ಘಟನೆಗಳನ್ನು ಮತ್ತೆ ಮತ್ತೆ ನೆನಪಿಸುತ್ತದೆ. ಇದಕ್ಕೆ ಚಿಕಿತ್ಸೆ ಮತ್ತು ಔಷಧಿಗಳನ್ನು ಬಳಸಲಾಗುತ್ತದೆಯಾದರೂ, ಯೋಗ ಮತ್ತು ಫಿಸಿಯೋಥೆರಪಿಯಂತಹ ಪೂರಕ ವಿಧಾನಗಳು ಜನರಿಗೆ ತಮ್ಮ ರೋಗಲಕ್ಷಣಗಳನ್ನು ನಿರ್ವಹಣೆ ಮಾಡಿಕೊಳ್ಳುವಲ್ಲಿ ಸಹಾಯ ಮಾಡಲಿದೆ ಎಂಬ ಭರವಸೆಯನ್ನು ಆರೋಗ್ಯ ತಜ್ಞರು ನೀಡಿದ್ದಾರೆ.

ಎಚ್​​​ಟಿ ಲೈಫ್ ಸ್ಟೈಲ್​​ನ ಸ್ಥಾಪಕ ಮತ್ತು ನಿರ್ದೇಶಕ ಡಾ. ಅಮಿತ್ ದೇಶಪಾಂಡೆ ಅವರು ಎಚ್ ಟಿ ಲೈಫ್ ಸ್ಟೈಲ್​​​ಗೆ ನೀಡಿದ ಸಂದರ್ಶನದಲ್ಲಿ, “ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (ಪಿಟಿಎಸ್ ಡಿ) ನಮ್ಮನ್ನು ದುರ್ಬಲಗೊಳಿಸುವ ಮಾನಸಿಕ ಆರೋಗ್ಯ ಸ್ಥಿತಿಯಾಗಿದ್ದು, ಆಘಾತಕಾರಿ ಘಟನೆಯನ್ನು ಅನುಭವಿಸಿದ ನಂತರ ಅಥವಾ ಅದಕ್ಕೆ ಸಾಕ್ಷಿಯಾದ ನಂತರ ಸಂಭವಿಸಬಹುದು. ಆದರೆ ಅದೃಷ್ಟವಶಾತ್, ಯೋಗ ಮತ್ತು ಫಿಸಿಯೋಥೆರಪಿ ಪಿಟಿಎಸ್​​ಡಿ ರೋಗಲಕ್ಷಣಗಳನ್ನು ಗುಣಪಡಿಸಲು ಮತ್ತು ಸರಿಯಾಗಿ ನಿರ್ವಹಣೆ ಮಾಡುವ ಭರವಸೆಯ ಮಾರ್ಗಗಳನ್ನು ನೀಡುತ್ತದೆ. ದೈಹಿಕ ಭಂಗಿಗಳು, ಉಸಿರಾಟದ ವ್ಯಾಯಾಮಗಳು ಮತ್ತು ಧ್ಯಾನ ಮಾಡುವ ಮೂಲಕ ಯೋಗವು ಸಮಗ್ರ ಚಿಕಿತ್ಸೆ ಯನ್ನು ಒದಗಿಸುತ್ತದೆ. ಜೊತೆಗೆ ನರಮಂಡಲವನ್ನು ನಿಯಂತ್ರಿಸಲು ಮತ್ತು ಆತಂಕ ಹಾಗೂ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:ಸ್ಟಾರ್ ಹಣ್ಣಿನಿಂದ ಆರೋಗ್ಯ ವೃದ್ಧಿ

ಆಳವಾದ ಉಸಿರಾಟವು ಶಾಂತತೆ ಮತ್ತು ಸ್ವಯಂ ಜಾಗೃತಿಯನ್ನು ಬೆಳೆಸುತ್ತದೆ, ಭಾವನಾತ್ಮಕವಾಗಿ ನಿಮ್ಮನ್ನು ಸದೃಢರನ್ನಾಗಿಸುತ್ತದೆ. ಮತ್ತೊಂದೆಡೆ, ಫಿಸಿಯೋಥೆರಪಿಯ ಉದ್ದೇಶಿತ ವ್ಯಾಯಾಮಗಳು ಮತ್ತು ಕೆಲವು ಚಿಕಿತ್ಸೆಯ ಮೂಲಕ ಮತ್ತೆ ಪುನಃ ನಿಮ್ಮ ದಿನನಿತ್ಯದ ಶೈಲಿಗೆ ವಾಪಸಾಗಬಹುದು. ಇದು ಉದ್ವೇಗ ಮತ್ತು ನೋವಿನಂತಹ ಆಘಾತಕ್ಕೆ ಸಂಬಂಧಿಸಿದ ದೈಹಿಕ ರೋಗಲಕ್ಷಣಗಳನ್ನು ಗುಣಪಡಿಸಬಹುದು. ಹೆಚ್ಚುವರಿಯಾಗಿ, ಯೋಗ ಮತ್ತು ಫಿಸಿಯೋಥೆರಪಿ ಎರಡೂ ಸುರಕ್ಷಿತ ಮಾರ್ಗವಾಗಿದ್ದು, ಯಾವುದೇ ರೀತಿಯಯ ಅಡ್ಡಪರಿಣಾಮಗಳಿರುವುದಿಲ್ಲ. ಜೊತೆಗೆ ಸಂಪರ್ಕದ ಪ್ರಜ್ಞೆಯನ್ನು ಬೆಳೆಸುತ್ತದೆ ಮತ್ತು ಚೇತರಿಕೆ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ.

ಬೆಂಗಳೂರಿನ ಜಿಂದಾಲ್ ನೇಚರ್ಕ್ಯೂರ್ ಇನ್ಸ್ಟಿಟ್ಯೂಟ್ನ ಮುಖ್ಯ ಯೋಗ ಅಧಿಕಾರಿ ಡಾ. ರಾಜೀವ್ ರಾಜೇಶ್ ಈ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಿದ್ದು “ಯೋಗವು ಮನಸ್ಸು ಮತ್ತು ದೇಹದ ಶಿಸ್ತನ್ನು ಸರಿಯಾದ ರೂಪಕ್ಕೆ ತರುತ್ತವೆ. ಯೋಗದ ವಿವಿಧ ದೈಹಿಕ ಭಂಗಿಗಳು, ಉಸಿರಾಟದ ತಂತ್ರಗಳಿಂದ ಮತ್ತು ಧ್ಯಾನ ಮಾಡುವುದರಿಂದ, ಆತಂಕ ಕಡಿಮೆಯಾಗುತ್ತದೆ, ಜೊತೆಗೆ ನಿದ್ರೆ ಹೆಚ್ಚಿಸುವಲ್ಲಿ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಇದು ಯಶಸ್ವಿಯಾಗಿದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಅದಲ್ಲದೆ ಇವು ಪಿಟಿಎಸ್​​ಡಿ ಹೊಂದಿರುವ ಜನರಿಗೆ ತಮ್ಮ ದೇಹದೊಂದಿಗೆ ಮರುಸಂಪರ್ಕಿಸಲು ಸಹಾಯ ಮಾಡುತ್ತದೆ. ಯೋಗದ ದೈಹಿಕ ಆಸನಗಳು ಮತ್ತು ಉಸಿರಾಟದ ತಂತ್ರಗಾರಿಕೆ, ನರಮಂಡಲವನ್ನು ನಿಯಂತ್ರಿಸಲು, ವಿಶ್ರಾಂತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತವೆ. ಹೆಚ್ಚುವರಿಯಾಗಿ, ಕೆಟ್ಟ ಆಲೋಚನೆಗಳನ್ನು ಕಡಿಮೆ ಮಾಡಲು ಮತ್ತು ಸ್ವಯಂ ಜಾಗೃತಿಯನ್ನು ಮೂಡಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ಮತ್ತೊಂದೆಡೆ, ಫಿಸಿಯೋಥೆರಪಿಯು ಪಿಟಿಎಸ್​​ಡಿ ಹೊಂದಿರುವ ಜನರಿಗೆ ದೈಹಿಕ ರೋಗಲಕ್ಷಣಗಳು, ದೀರ್ಘಕಾಲದ ನೋವು ಮತ್ತು ಆಘಾತದ ಇತರ ದೈಹಿಕ ಪರಿಣಾಮಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಫಿಸಿಯೋಥೆರಪಿ ಪರೋಕ್ಷವಾಗಿ ಮಾನಸಿಕ ತೊಂದರೆಯನ್ನು ಕಡಿಮೆ ಮಾಡುತ್ತದೆ ಮತ್ತು ದೈಹಿಕ ರೋಗಲಕ್ಷಣಗಳನ್ನು ಪರಿಹರಿಸುವ ಮೂಲಕ ಯೋಗಕ್ಷೇಮವನ್ನು ಸುಧಾರಿಸುತ್ತದೆ. ಯೋಗ ಮತ್ತು ಫಿಸಿಯೋಥೆರಪಿ ಎರಡೂ ಗುಣಪಡಿಸುವಿಕೆಗೆ ಸಮಗ್ರ ವಿಧಾನಗಳನ್ನು ಒದಗಿಸುತ್ತವೆ. ಈ ವಿಧಾನಗಳು ಎಲ್ಲರಿಗೂ ಸೂಕ್ತವಲ್ಲದಿರಬಹುದು ಹಾಗಾಗಿ ತರಬೇತಿ ಪಡೆದ ತಜ್ಞರು ನೀಡಿದ ಸಲಹೆಗಳನ್ನು ಮಾತ್ರ ಮಾಡಿ. ಆದರೆ ಪಿಟಿಎಸ್​​ಡಿ ಚಿಕಿತ್ಸಾ ಯೋಜನೆಗಳಲ್ಲಿ ಯೋಗ ಮತ್ತು ದೈಹಿಕ ಚಿಕಿತ್ಸೆಯನ್ನು ಸೇರಿಸುವುದರಿಂದ ರೋಗಿಗಳಿಗೆ ಅವರ ರೋಗಲಕ್ಷಣಗಳನ್ನು ನಿರ್ವಹಣೆ ಮಾಡಲು ಮತ್ತು ಅವರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ವಿನಃ ಯಾವುದೇ ತೊಂದರೆಯಿಲ್ಲ ಎಂದಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!