ಗುಡುಗು-ಮಿಂಚಿನ ದಾಳಿಗೆ ಅಮೇರಿಕಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯ ಮೆದುಳಿಗೆ ಹಾನಿ
ಹೂಸ್ಟನ್ ವಿಶ್ವವಿದ್ಯಾಲಯದ 25 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿನಿ ಮಿಂಚು ಸಿಡಿಲು ಬಡಿತದಿಂದಾಗಿ , ಇದೀಗಾ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ವರದಿಯಾಗಿದೆ.
ಅಮೆರಿಕಾ: ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿನಿ ಸುಸ್ರೂಣ್ಯ ಕೋಡೂರು(25) ಜುಲೈ 4 ರಂದು ತನ್ನ ಸ್ನೇಹಿತರೊಂದಿಗೆ ಅಲ್ಲಿನ ಸ್ಯಾನ್ ಜಸಿಂಟೋ ಸ್ಮಾರಕ ಉದ್ಯಾನವನದಲ್ಲಿ ಸುತ್ತಾಡಲು ಹೋಗಿದ್ದಾಳೆ. ಈ ವೇಳೆ ಮಳೆ ಹಾಗೂ ಗುಡುಗು-ಮಿಂಚಿನ ಆರ್ಭಟಕ್ಕೆ ಸುಸ್ರೂಣ್ಯ ಅಲ್ಲೇ ಪಕ್ಕದಲ್ಲಿರುವ ಕೊಳಕ್ಕೆ ಕುಸಿದು ಬಿದ್ದಿದ್ದು, ಇದೀಗಾ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ವರದಿಯಾಗಿದೆ.
ಸಿಡಿಲು ಬಡಿತಕ್ಕೆ ಒಳಗಾಗಿ ಕೊಳಕ್ಕೆ ಎಸೆಯಲ್ಪಟ್ಟಾಗ, ಈಕೆ ಹೃದಯ ಸ್ತಂಭನಕ್ಕೆ ಒಳಗಾಗಿದ್ದು, ಈಗ ಮೆದುಳು ಹಾನಿಗೊಳಗಾಗಿದ್ದಾಳೆ. ದೀರ್ಘ ವೈದ್ಯಕೀಯ ಆರೈಕೆಯ ಅಗತ್ಯವಿದೆ” ಎಂದು ಅವಳ ಸೋದರಸಂಬಂಧಿ ಸುರೇಂದ್ರ ಕುಮಾರ್ ಕೋಠ ಹೇಳಿದ್ದಾರೆ. ವಿದ್ಯಾರ್ಥಿಯ ಕುಟುಂಬವು ಆರ್ಥಿಕವಾಗಿ ಹಿಂದುಳಿದ್ದಿದ್ದು, ವೈದ್ಯಕೀಯ ವೆಚ್ಚಗಳಿಗೆ ಸಹಾಯ ಮಾಡಲು GoFundMe ರಚಿಸಿದೆ. ಮೆದುಳು ಹಾನಿಗೊಳಗಾದ್ದರಿಂದ ಕೋಮಾ ಸ್ಥಿತಿಯಲ್ಲಿದ್ದು, ಟ್ರಾಕಿಯೊಸ್ಟೊಮಿಯೊಂದಿಗೆ ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದಾಳೆ.
ಇದನ್ನೂ ಓದಿ: ಮೆದುಳು ತಿನ್ನುವ ಅಮೀಬಾಗೆ ಮತ್ತೊಂದು ಬಲಿ; 2 ವರ್ಷದ ಮಗು ನಿಧನ
ರಾಷ್ಟ್ರೀಯ ಹವಾಮಾನ ಇಲಾಖೆಯ ಪ್ರಕಾರ, ವರ್ಷಕ್ಕೆ ಮಿಂಚು ಹೊಡೆಯುವ ಸಾಧ್ಯತೆಗಳು ಸುಮಾರು 1.2 ಮಿಲಿಯನ್‌ನಲ್ಲಿ ಒಂದು. ಕಳೆದ 30 ವರ್ಷಗಳಲ್ಲಿ, ವರ್ಷಕ್ಕೆ ಸರಾಸರಿ 43 ಸಿಡಿಲು ಸಾವುಗಳು ಸಂಭವಿಸಿವೆ. ಸಿಡಿಲು ಬಡಿತಕ್ಕೆ ಶೇಕಡ 10 ರಷ್ಟು ಜನರು ಸಾವನ್ನಪ್ಪುತ್ತಾರೆ, 90 ಪ್ರತಿಶತದಷ್ಟು ಜನರು ವಿವಿಧ ಹಂತದ ಅಂಗವೈಕಲ್ಯವನ್ನು ಹೊಂದಿರುತ್ತಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 12:56 pm, Fri, 21 July 23