
ಪಪ್ಪಾಯಿ (Papaya) ಹಣ್ಣಿನ ಪರಿಚಯ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಆದರೆ ಇದನ್ನು ಕೊಂಡು ತಿನ್ನುವವರ ಸಂಖ್ಯೆ ಮಾತ್ರ ಬಹಳ ಕಡಿಮೆ. ಮಾರುಕಟ್ಟೆಯಲ್ಲಿ ವಿದೇಶಿ ಹಣ್ಣುಗಳಿಗಿರುವ ಸ್ಥಾನಮಾನ ಇದಕ್ಕೆ ಸಿಗುವುದು ತೀರಾ ಕಡಿಮೆ. ಮಾತ್ರವಲ್ಲ ಇದರ ಪ್ರಯೋಜನಗಳ ಬಗ್ಗೆ ಹೆಚ್ಚಿನವರಿಗೆ ತಿಳಿದೇ ಇಲ್ಲ. ನಮ್ಮ ನೆಲದಲ್ಲಿಯೇ ಆಗುವ ಈ ಒಂದು ಹಣ್ಣಿನಲ್ಲಿ ನೀವು ಊಹಿಸಲೂ ಸಾಧ್ಯವಾಗದಂತಹ ಶಕ್ತಿ ಇದೆ. ಹೌದು, ಪಪ್ಪಾಯಿ ಹಣ್ಣನ್ನು ಸರಿಯಾದ ಸಮಯದಲ್ಲಿ ಸೇವನೆ ಮಾಡಿದರೆ ಇದರಿಂದ ಸಿಗುವ ಪ್ರಯೋಜನಗಳು ಯಾವ ಹಣ್ಣಿನಲ್ಲಿಯೂ ಸಿಗಲ್ಲ. ಅದರಲ್ಲಿಯೂ ಆರೋಗ್ಯ (Health) ತಜ್ಞರು ಹೇಳುವ ಪ್ರಕಾರ, ಮಲಗುವ ಮುನ್ನ ಪಪ್ಪಾಯಿ ತಿನ್ನುವುದರಿಂದ ದೇಹಕ್ಕೆ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಸಾಮಾನ್ಯವಾಗಿ ರಾತ್ರಿ ಹಣ್ಣುಗಳ ಸೇವನೆ ಮಾಡಬಾರದು ಎಂದು ಹೇಳುತ್ತಾರೆ. ಆದರೆ ಈ ಹಣ್ಣನ್ನು ಮಾತ್ರ ರಾತ್ರಿ ತಿನ್ನುವುದೇ ಒಳ್ಳೆಯದು ಎನ್ನಲಾಗುತ್ತದೆ. ಹಾಗಾದರೆ ಯಾಕೆ ಮಲಗುವ ಮೊದಲು ಈ ಹಣ್ಣನ್ನು ಸೇವನೆ ಮಾಡಬೇಕು, ಇದರಿಂದ ಸಿಗುವ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳಿ. ಈ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ.
ಮಲಗುವ ಮುನ್ನ ನಾವು ಸೇವನೆ ಮಾಡುವ ಆಹಾರದಲ್ಲಿ ಪಪ್ಪಾಯಿಯನ್ನು ಸೇರಿಸಿಕೊಳ್ಳುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇಂತಹ ಅಭ್ಯಾಸ ದೇಹಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಸಾಮಾನ್ಯವಾಗಿ ಪಪ್ಪಾಯಿಯಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ನಾರಿನಂಶಗಳು ಸಮೃದ್ಧವಾಗಿದ್ದು ಈ ಹಣ್ಣನ್ನು ಮಲಗುವ ಮುನ್ನ ಸೇವನೆ ಮಾಡುವುದರಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಜೀರ್ಣಕ್ರಿಯೆ ಸಮಸ್ಯೆ, ಮಲಬದ್ಧತೆ, ತೂಕ ಹೆಚ್ಚಳ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದು.
ಇದನ್ನೂ ಓದಿ: ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಅತಿಯಾಗಿ ಈ ಹಣ್ಣನ್ನು ಸೇವನೆ ಮಾಡಿದ್ರೆ ಸಮಸ್ಯೆಗಳು ಸಾಲು ಸಾಲಾಗಿ ಬರುತ್ತೆ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ