ಯಾವುದೇ ರೀತಿಯ ಔಷಧಗಳ ಸೇವನೆ ಮಾಡದೆಯೇ ರಕ್ತಹೀನತೆಯಿಂದ ಮುಕ್ತಿ ಪಡೆಯಲು ಈ ರೀತಿ ಮಾಡಿ
ಹಣ್ಣುಗಳ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಒಂದೊಂದು ಹಣ್ಣಿನಲ್ಲಿಯೂ ವಿಭಿನ್ನವಾದ ಶಕ್ತಿ ಇರುತ್ತದೆ. ಅದರಂತೆಯೇ ದಾಳಿಂಬೆ ಹಣ್ಣು ಕೂಡ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಅದರಲ್ಲಿಯೂ ರಕ್ತಹೀನತೆ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಕಡ್ಡಾಯವಾಗಿ ಈ ಹಣ್ಣನ್ನು ಸೇವಿಸಬೇಕಾಗುತ್ತದೆ. ಈ ಹಣ್ಣನ್ನು ನೀವು ನೇರವಾಗಿ ತಿನ್ನಬಹುದು. ಹಾಗಾದರೆ ದಾಳಿಂಬೆ ಹಣ್ಣು ಯಾವ ಆರೋಗ್ಯ ಸಮಸ್ಯೆಗೆ ರಾಮಬಾಣ, ಇದರ ಸೇವನೆಯಿಂದ ಸಿಗುವ ಪ್ರಯೋಜನಗಳೇನು, ಯಾಕೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದಾಳಿಂಬೆ (Pomegranate) ಹಣ್ಣು ಉತ್ತಮ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಅದಕ್ಕಾಗಿಯೇ ಇದನ್ನು ನಿಯಮಿತವಾಗಿ ಸೇವನೆ ಮಾಡಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಮಾತ್ರವಲ್ಲ ಈ ಹಣ್ಣುಗಳನ್ನು ಸೂಪರ್ ಫುಡ್ ಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದರಲ್ಲಿ ಪೋಷಕಾಂಶಗಳು, ಆಂಟಿಆಕ್ಸಿಡೆಂಟ್ ಗಳು ಮತ್ತು ಬಯೋ ಆಕ್ಟಿವ್ ಸಂಯೋಜನೆಗೊಂಡಿದೆ. ಅದರಲ್ಲಿಯೂ ರಕ್ತಹೀನತೆ (anemia) ಮತ್ತು ಅಧಿಕ ರಕ್ತದೊತ್ತಡ (hypertension) ಸಮಸ್ಯೆ ಇರುವವರು ಕಡ್ಡಾಯವಾಗಿ ಈ ಹಣ್ಣನ್ನು ಸೇವಿಸಬೇಕಾಗುತ್ತದೆ. ಈ ಹಣ್ಣನ್ನು ನೀವು ನೇರವಾಗಿ ತಿನ್ನಬಹುದು. ಆದರೆ ಪ್ರತಿಬಾರಿಯೂ ಹೀಗೆ ಸೇವನೆ ಮಾಡಲು ಇಷ್ಟವಾಗದಿದ್ದವರು ಜ್ಯೂಸ್ ಮಾಡಬಹುದು ಅಥವಾ ಸಲಾಡ್‌ಗಳ ಮೂಲಕವೂ ಸೇವನೆ ಮಾಡಬಹುದು. ಹಾಗಾದರೆ ದಾಳಿಂಬೆ ಹಣ್ಣು ಯಾವ ಆರೋಗ್ಯ ಸಮಸ್ಯೆಗೆ ರಾಮಬಾಣ, ಇದರ ಸೇವನೆಯಿಂದ ಸಿಗುವ ಪ್ರಯೋಜನಗಳೇನು, ಯಾಕೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ದಾಳಿಂಬೆ ಹಣ್ಣಿನ ಸೇವನೆಯಿಂದ ಸಿಗುವ ಪ್ರಯೋಜನ:
- ಈ ಹಣ್ಣು ಮುಖ್ಯವಾಗಿ ಹೃದಯದ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ, ಒತ್ತಡವನ್ನು ಕಡಿಮೆ ಮಾಡಿ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯುತ್ತದೆ.
- ಆಂಟಿಆಕ್ಸಿಡೆಂಟ್ ಗಳಲ್ಲಿ ಶ್ರೀಮಂತವಾಗಿರುವ ಈ ಹಣ್ಣು ಕೋಶಗಳನ್ನು ರಕ್ಷಿಸಿ ಹಾನಿಯಾಗುವುದನ್ನು ತಡೆಯುತ್ತದೆ ಮಾತ್ರವಲ್ಲ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
- ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ, ಇದು ಮೆದುಳಿನ ಕೋಶಗಳನ್ನು ರಕ್ಷಿಸಲು ಕೂಡ ನೆರವಾಗುತ್ತದೆ.
- ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಕಾರಣ, ಇದು ಚರ್ಮವನ್ನು ಕಾಂತಿಯುತವಾಗಿಸಲು ಮತ್ತು ಒಣ ಚರ್ಮಕ್ಕೆ ತೇವಾಂಶ ನೀಡಲು ಸಹಕಾರಿಯಾಗಿದೆ.
- ದಾಳಿಂಬೆ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಇದರಲ್ಲಿನ ಔಷಧಿ ಗುಣಗಳು ಕೆಲವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಆ ಮೂಲಕ ಕ್ಯಾನ್ಸರ್ ಬರದಂತೆ ನೋಡಿಕೊಳ್ಳುತ್ತದೆ.
- ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಕರುಳಿನ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮಾತ್ರವಲ್ಲ, ದಾಳಿಂಬೆ ಹಣ್ಣು ಸ್ಟಾಮಿನಾವನ್ನು ಹೆಚ್ಚಿಸಿ ವೇಗವಾಗಿ ಚೇತರಿಸಿಕೊಳ್ಳಲು ಅನುವುಮಾಡಿಕೊಡುತ್ತದೆ.
- ರಕ್ತವನ್ನು ವೃದ್ಧಿಸುವ ಗುಣವನ್ನು ಹೊಂದಿರುವುದರಿಂದ, ಇದು ರಕ್ತಹೀನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಸಕ್ಕರೆ ಕಾಯಿಲೆಯನ್ನು ಕೂಡ ನಿಯಂತ್ರಿಸುತ್ತದೆ.
- ದಾಳಿಂಬೆ ಬೀಜಗಳಲ್ಲಿರುವ ಫ್ಲೇವನಾಲ್ ಉತ್ಕರ್ಷಣ ನಿರೋಧಕಗಳು ಸಂಧಿವಾತದ ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
- ದಾಳಿಂಬೆಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ವಿಟಮಿನ್ ಸಿ ಗರಿಷ್ಠ ಹೀರಿಕೊಳ್ಳುವಿಕೆಗೆ ಸಹಕಾರಿಯಾಗಿದೆ.
ಇದನ್ನೂ ಓದಿ: ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಅತಿಯಾಗಿ ಈ ಹಣ್ಣನ್ನು ಸೇವನೆ ಮಾಡಿದ್ರೆ ಸಮಸ್ಯೆಗಳು ಸಾಲು ಸಾಲಾಗಿ ಬರುತ್ತೆ
ಯಾರಿಗೆ ಒಳ್ಳೆಯದಲ್ಲ?
- ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವವರು ದಾಳಿಂಬೆಯನ್ನು ಸೇವಿಸುವುದು ಒಳ್ಳೆಯದಲ್ಲ. ಏಕೆಂದರೆ ಇದರ ಶೀತ ಪರಿಣಾಮವು ಸಮಸ್ಯೆಯನ್ನು ಹೆಚ್ಚಿಸಬಹುದು.
- ಕೆಲವು ಆಹಾರಗಳೊಂದಿಗೆ ದಾಳಿಂಬೆಯನ್ನು ಸೇವಿಸುವುದರಿಂದ ಹಾನಿಯಾಗಬಹುದು ಹಾಗಾಗಿ ಸೇವಿಸುವ ಮೊದಲು ಎಚ್ಚರವಹಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




