ಪೀನಟ್‌ ಬಟರ್‌ ಸೇವಿಸುವ ಅಭ್ಯಾಸ ನಿಮಗಿದ್ಯಾ? ಪ್ರತಿದಿನ ತಿಂದ್ರೆ ಏನಾಗುತ್ತೆ ಅನ್ನೋದು ತಿಳಿದುಕೊಳ್ಳಿ

ಕೆಲವರಿಗೆ ಪ್ರತಿನಿತ್ಯ ಪೀನಟ್‌ ಬಟರ್‌ ಸೇವನೆ ಮಾಡುವ ಅಭ್ಯಾಸವಿರಬಹುದು. ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾದ ಪೋಷಕಾಂಶಗಳ ಗಣಿಯಾಗಿದೆ. ಇದು ನಮ್ಮಲ್ಲಿ ಹಲವರಿಗೆ ತಿಳಿದಿಲ್ಲ. ಆದರೆ ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದು ಹೃದಯದ ಆರೋಗ್ಯ ಕಾಪಾಡುವುದರ ಜೊತೆಗೆ ತೂಕ ನಿಯಂತ್ರಣಕ್ಕೆ ಹೀಗೆ ಹಲವಾರು ಸಮಸ್ಯೆಗಳಿಂದ ನಿಮಗೆ ಮುಕ್ತಿ ನೀಡುತ್ತದೆ. ಹಾಗಾದ್ರೆ ಇದರಿಂದ ಯಾವ ರೀತಿ ಆರೋಗ್ಯಕರ ಪ್ರಯೋಜನಗಳು ಸಿಗುತ್ತೆ? ಯಾಕೆ ಇದು ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪೀನಟ್‌ ಬಟರ್‌ ಸೇವಿಸುವ ಅಭ್ಯಾಸ ನಿಮಗಿದ್ಯಾ? ಪ್ರತಿದಿನ ತಿಂದ್ರೆ ಏನಾಗುತ್ತೆ ಅನ್ನೋದು ತಿಳಿದುಕೊಳ್ಳಿ
Peanut Butter

Updated on: Aug 01, 2025 | 6:04 PM

ಪೀನಟ್‌ ಬಟರ್‌ (Peanut Butter) ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಹಲವರು ಇದನ್ನು ಪ್ರತಿನಿತ್ಯ ಬಳಕೆ ಮಾಡುತ್ತಾರೆ. ಇದು ಕೇವಲ ರುಚಿಕರ ಮಾತ್ರವಲ್ಲ ಬದಲಾಗಿ ಆರೋಗ್ಯಕ್ಕೆ ಪೋಷಣೆ ನೀಡುವಂತಹ ನಿಧಿಯಾಗಿದೆ. ಇದರಲ್ಲಿ ಪ್ರೋಟೀನ್, ದೇಹಕ್ಕೆ ಅಗತ್ಯವಾದ ಉತ್ತಮ ಕೊಬ್ಬುಗಳು ಮತ್ತು ಅನೇಕ ಜೀವಸತ್ವಗಳಿವೆ. ಇವೆಲ್ಲವೂ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ ಮತ್ತು ದೈನಂದಿನ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತವೆ. ಅದಕ್ಕಾಗಿಯೇ ಪೀನಟ್‌ ಬಟರ್‌ ನಮ್ಮ ದೇಹಕ್ಕೆ ಉತ್ತಮ ಆಹಾರವೆಂದು ಪರಿಗಣಿಸಲಾಗುತ್ತದೆ. ಆದರೆ ನಿಮಗೆ ಇದರಿಂದ ಯಾವ ರೀತಿ ಆರೋಗ್ಯಕರ ಪ್ರಯೋಜನಗಳು ಸಿಗುತ್ತೆ ಎಂಬುದು ತಿಳಿದಿದೆಯೇ? ಹಾಗಿದ್ರೆ, ಇದು ಯಾಕೆ ಇದು ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೃದಯ ಆರೋಗ್ಯವಾಗಿರುತ್ತೆ

ಪೀನಟ್‌ ಬಟರ್‌ ನಲ್ಲಿ ಕಂಡುಬರುವ ನೈಸರ್ಗಿಕ ಕೊಬ್ಬುಗಳು ಹೃದಯಕ್ಕೆ ತುಂಬಾ ಪ್ರಯೋಜನಕಾರಿ. ಅವು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ಇದರಿಂದ ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಪೀನಟ್‌ ಬಟರ್‌ ನಲ್ಲಿ ಹೆಚ್ಚುವರಿಯಾಗಿ, ಇರುವ ಉತ್ಕರ್ಷಣ ನಿರೋಧಕಗಳು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ ಮತ್ತು ವಿವಿಧ ರೋಗಗಳಿಂದ ರಕ್ಷಿಸುತ್ತವೆ. ಇದರ ನಿಯಮಿತ ಸೇವನೆ ಜೀರ್ಣಕ್ರಿಯೆಗೆ ಸರಿಯಾಗಿ ಸಹಾಯ ಮಾಡುವ ಮೂಲಕ ಅಜೀರ್ಣ, ಅನಿಲ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಪೀನಟ್‌ ಬಟರ್‌ನಲ್ಲಿರುವ ಪೋಷಕಾಂಶಗಳು, ವಿಶೇಷವಾಗಿ ಫೈಬರ್, ಪ್ರೋಟೀನ್ ಮತ್ತು ಉತ್ತಮ ಕೊಬ್ಬುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ತೂಕ ನಿಯಂತ್ರಣ ಮಾಡಲು ಕೂಡ ಪೀನಟ್‌ ಬಟರ್‌ ಸಹಾಯ ಮಾಡುತ್ತದೆ. ಹಾಗಾಗಿ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು, ಹಸಿವನ್ನು ನಿಯಂತ್ರಿಸಲು ಮತ್ತು ಅನಗತ್ಯ ಆಹಾರವನ್ನು ತಪ್ಪಿಸಲು ಇದನ್ನು ಸೇವಿಸಬಹುದು.

ನಿದ್ರೆ ಚೆನ್ನಾಗಿ ಬರುತ್ತೆ

ರಾತ್ರಿ ಮಲಗುವ ಮುನ್ನ ಒಂದು ಚಮಚ ಪೀನಟ್‌ ಬಟರ್‌ ಅನ್ನು ತಿನ್ನುವುದರಿಂದ ಒಳ್ಳೆಯ ನಿದ್ರೆ ಜೊತೆಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಮಾತ್ರವಲ್ಲ ಅಗತ್ಯ ಪೋಷಕಾಂಶಗಳು ಕೂಡ ದೊರೆಯುತ್ತವೆ. ಇದು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ, ಇದರಲ್ಲಿರುವ ಟ್ರಿಪ್ಟೊಫಾನ್ ಎಂಬ ಅಂಶವು ಮೆದುಳಿನಲ್ಲಿ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಒಳ್ಳೆಯ ನಿದ್ರೆ ಬರುವುದಕ್ಕೆ ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಪೀನಟ್‌ ಬಟರ್‌ನಲ್ಲಿ ಮೆಗ್ನೀಸಿಯಮ್ ಕೂಡ ಸಮೃದ್ಧವಾಗಿದೆ. ನರಮಂಡಲದ ಸರಿಯಾದ ಕಾರ್ಯನಿರ್ವಹಣೆಗೆ ಇದು ಅವಶ್ಯಕವಾಗಿದೆ. ಉತ್ತಮ ನಿದ್ರೆ ಮಾಡಿ ಬೆಳಿಗ್ಗೆ ಆರಾಮವಾಗಿ ಎಚ್ಚರಗೊಳ್ಳುವಲ್ಲಿ ಮೆಗ್ನೀಸಿಯಮ್ ನಿರ್ಣಾಯಕ ಪಾತ್ರ ವಹಿಸುತ್ತದೆ.

ಇದನ್ನೂ ಓದಿ
ಪ್ರತಿದಿನ ಕಾಫಿ ಕುಡಿಯುವುದರಿಂದ ಏನೆಲ್ಲಾ ಆಗುತ್ತೆ ಗೊತ್ತಾ?
ಹೃದಯಾಘಾತಕ್ಕೂ ಮುನ್ನ ಚರ್ಮದಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತಂತೆ
ಈ ಆಯುರ್ವೇದ ಅಭ್ಯಾಸಗಳನ್ನು ಅನುಸರಿಸಿದರೆ ಲಿವರ್ ಆರೋಗ್ಯವಾಗಿರುತ್ತೆ!
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ರೀತಿ ಅಂಜೂರ ಸೇವನೆ ಮಾಡಿ

ಇದನ್ನೂ ಓದಿ: Peanut Butter Recipe Ideas: ಪೀನಟ್ ಬಟರ್​​ನಿಂದ ಈ ಸುಲಭ ರೆಸಿಪಿ ತಯಾರಿಸಿ

ಕೆಲವು ಅಧ್ಯಯನಗಳ ಪ್ರಕಾರ, ಪೀನಟ್‌ ಬಟರ್‌ ಅನ್ನು ಆಗಾಗ ಸೇವಿಸುವುದರಿಂದ ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಇದರಲ್ಲಿರುವ ಅರ್ಜಿನೈನ್ ಎಂಬ ಅಮೈನೋ ಆಮ್ಲವು ಹೃದಯ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಸರಿಯಾದ ಜೀರ್ಣಕ್ರಿಯೆಗೆ ಸಹಾಯ ಮಾಡುವ ಹೆಚ್ಚಿನ ಫೈಬರ್ ಅಂಶದಿಂದಾಗಿ, ಪೀನಟ್‌ ಬಟರ್‌ ಅನ್ನು ಆರೋಗ್ಯಕರ ಆಹಾರವೆಂದು ಗುರುತಿಸಲಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ