ಮಧುಮೇಹದಿಂದ (Diabetes) ಬಳಲುವವರಲ್ಲಿ ಆರೋಗ್ಯವಂತರಿಗೆ (ಮಧುಮೇಹದ ಸಮಸ್ಯೆ ಇಲ್ಲದವರು) ಹೋಲಿಸಿದರೆ ಚಿಕ್ಕ ವಯಸ್ಸಿನಲ್ಲೇ ಹೃದ್ರೋಗಗಳು (heart diseases) ಕಾಣಿಸಿಕೊಳ್ಳುತ್ತವೆ. ಮಧುಮೇಹಿಗಳಿಗೆ ಹೃದಯ ವೈಫಲ್ಯಕ್ಕೊಳಗಾಗುವ ಆಪಾಯ ಜಾಸ್ತಿ ಇರುತ್ತದೆ ಎಂದು ಹೇಳುವ ಆಯುರ್ವೇದ ತಜ್ಞ ಡಾ ಡಾ ದಿಕ್ಸಾ ಭಾವಸಾರ (Dr Dixa Bhavsar) ಅವರು ಮಧುಮೇಹಿಗಳು ಹೃದಯಾಘಾತಕ್ಕೊಳಗಾಗುವ ಸಾಧ್ಯತೆ ಆರೋಗ್ಯವಂತರಿಗೆ ಹೋಲಿಸಿದರೆ 4 ಪಟ್ಟು ಜಾಸ್ತಿ ಎಂದು ಹೇಳುತ್ತಾರೆ.
ಮಧುಮೇಹ ಮೂತ್ರಪಿಂಡದ ವೈಫಲ್ಯಕ್ಕೂ ಕಾರಣವಾಗುತ್ತದೆ ಮತ್ತು ಇದರಿಂದ ಬಳಲುವ ಮೂವರಲ್ಲಿ ಒಬ್ಬರು ಮೂತ್ರಪಿಂಡಕ್ಕೆ ಸಂಬಂಧಿಸಿದ ರೋಗಗಳಿಗೆ ಈಡಾಗುತ್ತಾರೆ ಎಂದು ಡಾ ಭಾವಸಾರ್ ಹೇಳುತ್ತಾರೆ. ಹಾಗಂತ ವ್ಯಕ್ತಿಯೊಬ್ಬನಲ್ಲಿ ಡಯಾಬಿಟೀಸ್ ಪತ್ತೆಯಾದ ಕೂಡಲೇ ಕಿಡ್ನಿ ಸಮಸ್ಯೆಗಳೂ ತಲೆದೋರುವುದಿಲ್ಲ. ಅದು ಆರಂಭವಾದ 10-15 ವರ್ಷಗಳ ನಂತರ ಮೂತ್ರಪಿಂಡಗಳಿಗೆ ರಕ್ತವನ್ನು ಶುದ್ಧೀಕರಿಸುವುದದು ಕಷ್ಬವಾಗತೊಡಗುತ್ತದೆ.
ಡಯಾಬಿಟೀಸ್ನಿಂದ (ಟೈಪ್ 1 ಮತ್ತು 2) ಬಳಲುತ್ತಿರವವರು ಹೃದಯ ಮತ್ತು ಮೂತ್ರಪಿಂಡಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಮತ್ತು ಅವು ಸಪರ್ಪಕವಾಗಿ ಕಾರ್ಯ ನಿರ್ವಹಿಸಲು ಅಯುರ್ವೇದ ತಜ್ಞರು ಕೆಲವು ಉಪಯೋಗಕಾರಿ ಟಿಪ್ಸ್ ನೀಡುತ್ತಾರೆ.
1. ನೀರು, ಕಾಫಿ ಮತ್ತು ಚಹಾ ಕುಡಿಯುವಾಗ ಅದಕ್ಕೆ ಚಿಟಿಕೆಯಷ್ಟು ದಾಲ್ಚಿನ್ನಿ (ಚಕ್ಕೆ) ಸೇರಿಸಬೇಕು.
2. ಊಟಕ್ಕೆ ಒಂದು ಗಂಟೆ ಮೊದಲು ಅಥವಾ ನಂತರ 10-20 ಮಿ. ಲೀ ಸಾವಯವ ಸೇಬಿನ ಸೈಡರ್ ವಿನೆಗರ್ ಸೇವಿಸಬೇಕು.
3. ವಾರಕ್ಕೊಮ್ಮೆ ಇಲ್ಲವೇ ತಿಂಗಳಿಗೆ ಎರಡು ಬಾರಿ ಉಪ್ಪು, ಡೈರಿ ಉತ್ಪನ್ನಗಳು ಕಾಳುಗಳನ್ನು ತಿನ್ನವುದನ್ನು ಸಂಪೂರ್ಣವಾಗಿ ವರ್ಜಿಸಿ.
4. ಪ್ರತಿದಿನ ಬೆಳಗ್ಗೆ ಬರಿ ಹೊಟ್ಟೆಯಲ್ಲಿ ಒಂದು ಚಮಚೆಯಷ್ಟು ನೆನೆಸಿದ ಮೆಂತೆಕಾಳುಗಳನ್ನು ತಿನ್ನಿರಿ ಮತ್ತು ಕಾಳುಗಳನ್ನು ಚಹಾಗೆ ಸೇರಿಸಿ ಕುಡಿಯಿರಿ.
5. ಪ್ರತಿದಿನ ಕನಿಷ್ಟ 20 ನಿಮಿಷಗಳ ಪ್ರಾಣಯಾಮ ಮಾಡಿ ಇಲ್ಲವೇ ದೀರ್ಘವಾಗಿ ಉಸಿರೆಳೆದುಕೊಂಡು ನಿಧಾನವಾಗಿ ಅದನ್ನು ಹೊರಹಾಕುವುದನ್ನು ಮಾಡಿ.
6. ವಾರಕ್ಕೆ ಕನಿಷ್ಟ 6 ಗಂಟೆಗಳ ಕಾಲ ವ್ಯಾಯಾಮ ಮಾಡಿ.
7. ನಿಮ್ಮ ಆಹಾರ ಪದ್ಧತಿಯಲ್ಲಿ ತಪ್ಪದೆ ಬೆಳ್ಳುಳ್ಳಿ ಸೇರಿಸಿ.
8. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಬಹಳ ಪ್ರಮುಖವಾದದ್ದು.
9. ಕರಿದ ಆಹಾರ ಪದಾರ್ಥಗಳು, ಕೇಫೀನ್, ಅನ್ನ, ಸಕ್ಕರೆ ಮತ್ತು ಅಲ್ಕೊಹಾಲ್ ಮೊದಲಾದವುಗಳ ಸೇವನೆ ಮಿತಿಯಾಗಿರಲಿ. ಸೀಸನಲ್ ಹಣ್ಣುಗಳು, ತರಕಾರಿ ಸೇವನೆ ಹೆಚ್ಚಿಸಿರಿ ಮತ್ತು ಆಗಷ್ಟೇ ತಯಾರಿಸಿದ ಬಿಸಿಬಿಸಿ ಆಹಾರವನ್ನು ಸೇವಿಸಿರಿ.
‘ಕಾಯಿಲೆಗಳಿಂದ ನಿಮ್ಮ ದೇಹವನ್ನು ರಕ್ಷಿಸಿಕೊಳ್ಳಲು ಮತ್ತು ನೆಮ್ಮದಿಯುತ ಬದುಕು ನಡೆಸಲು ಆರೋಗ್ಯಕರ ಜೀವನಶೈಲಿಯ ಮೂಲಕ ರಕ್ತದಲ್ಲಿ ಸಕ್ಕರೆ ಅಂಶವನ್ನು ಸಾಮಾನ್ಯವಾಗಿಟ್ಟುಕೊಳ್ಳಬೇಕು. ಇಲ್ಲಿ ತಿಳಿಸಿರುವ ಸಲಹೆಗಳನ್ನು ಕಾರ್ಯರೂಪಕ್ಕೆ ತರುವ ಮೊದಲು ನಿಮ್ಮ ಸಮೀಪದ ಆಯುರ್ವೇದ ತಜ್ಞರನ್ನು ಸಂಪರ್ಕಿಸಿರಿ. ನಿಮ್ಮ ಪ್ರಕೃತಿ, ಮಾನಸಿಕ ಆರೋಗ್ಯ, ಸಕ್ಕರೆ ಪ್ರಮಾಣ, ದೈಹಿಕ ಚಟುವಟಿಕೆಗಳು ಮತ್ತು ನಿದ್ರೆ ಮೊದಲಾದವುಗಳನ್ನು ಗಮನದಲ್ಲಿಟ್ಟುಕೊಂಡು ಯಾವುದನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ನಿಖರವಾದ ಮಾಹಿತಿ ನೀಡುತ್ತಾರೆ,’ ಎಂದು ಡಾ ಭಾವಸಾರ್ ಹೇಳುತ್ತಾರೆ.