AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರಂತರ ಆಯಾಸವಾಗಿ ಕೈ, ಕಾಲುಗಳಲ್ಲಿ ಜುಮ್ಮೆನಿಸುತ್ತಾ? ಹಾಗಿದ್ರೆ ನಿಮ್ಮ ದೇಹದಲ್ಲಿ ಈ ವಿಟಮಿನ್ ಕೊರತೆ ಇದೆ ಎಂದರ್ಥ!

ನಮ್ಮ ದೇಹ ಆರೋಗ್ಯವಾಗಿರಲು ಜೀವಸತ್ವಗಳು ಮತ್ತು ಖನಿಜಗಳು ಅವಶ್ಯಕ. ಅಂತಹ ಪ್ರಮುಖ ಜೀವಸತ್ವಗಳಲ್ಲಿ ವಿಟಮಿನ್ ಬಿ 12 ಕೂಡ ಒಂದು. ಆದರೆ ಇದರ ಕೊರತೆಯಿದ್ದಾಗ, ದೈಹಿಕ ಮತ್ತು ನರವೈಜ್ಞಾನಿಕ ಸಂಬಂಧಿತ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ಇದು ಅಗತ್ಯಕ್ಕಿಂತ ಕಡಿಮೆ ಇದ್ದಾಗ ದೇಹದಲ್ಲಿ ವಿವಿಧ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೌದು, ಅವುಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ನಿಮಗೂ ಕೂಡ ಈ ರೀತಿಯಾದಾಗ ನಿರ್ಲಕ್ಷ್ಯ ಮಾಡಬಾರದು. ಹಾಗಾದರೆ ಲಕ್ಷಣಗಳು ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ನಿರಂತರ ಆಯಾಸವಾಗಿ ಕೈ, ಕಾಲುಗಳಲ್ಲಿ ಜುಮ್ಮೆನಿಸುತ್ತಾ? ಹಾಗಿದ್ರೆ ನಿಮ್ಮ ದೇಹದಲ್ಲಿ ಈ ವಿಟಮಿನ್ ಕೊರತೆ ಇದೆ ಎಂದರ್ಥ!
Vitamin B12 Deficiency
ಪ್ರೀತಿ ಭಟ್​, ಗುಣವಂತೆ
|

Updated on: Dec 28, 2025 | 3:13 PM

Share

ನಮ್ಮ ದೇಹ ಮತ್ತು ಅಂಗಗಳು ಆರೋಗ್ಯಕರವಾಗಿ ಕಾರ್ಯನಿರ್ವಹಿಸಲು, ಜೀವಸತ್ವ (Vitamin) ಅಂದರೆ ವಿಟಮಿನ್ ಮತ್ತು ಖನಿಜಗಳು ಅವಶ್ಯಕ. ದೇಹವು ಪೋಷಕಾಂಶಗಳನ್ನು ಸರಿಯಾಗಿ ಪಡೆಯದಿದ್ದರೆ, ದೈಹಿಕ ಕಾರ್ಯಗಳಿಗೆ ಅಡ್ಡಿಯಾಗುತ್ತದೆ ಮತ್ತು ಅಂಗಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಅದೇ ರೀತಿ, ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿರುವ ಪೋಷಕಾಂಶಗಳನ್ನು ಹೊಂದಿರುವ ಸಮತೋಲಿತ ಆಹಾರವು ದೇಹದ ಬೆಳವಣಿಗೆ, ರೋಗನಿರೋಧಕ ಶಕ್ತಿ ಮತ್ತು ಜೀವನ ಪ್ರಕ್ರಿಯೆಗಳಿಗೆ ಸಹಾಯ ಮಾಡುತ್ತದೆ. ಅಂತಹ ಪ್ರಮುಖ ಜೀವಸತ್ವಗಳಲ್ಲಿ ವಿಟಮಿನ್ ಬಿ 12 (Vitamin B12) ಕೂಡ ಒಂದು. ಇದು ದೇಹದಲ್ಲಿ ಕೆಂಪು ರಕ್ತ ಕಣಗಳು, ನರಗಳ ಆರೋಗ್ಯ ಮತ್ತು ಡಿಎನ್‌ಎ ರಚನೆಗೆ ಅಗತ್ಯವಾದ ಪೋಷಕಾಂಶವಾಗಿದೆ. ಅನೇಕರು ಇದರ ಕೊರತೆಯ ಬಗ್ಗೆ ಗಮನ ಹರಿಸುವುದಿಲ್ಲ, ಆದರೆ ಇದು ದೇಹಕ್ಕೆ ಬಹಳ ಅವಶ್ಯಕವಾಗಿದೆ. ಇದರ ಕೊರತೆಯಿದ್ದಾಗ, ದೈಹಿಕ ಮತ್ತು ನರವೈಜ್ಞಾನಿಕ ಸಂಬಂಧಿತ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ಇದು ಅಗತ್ಯಕ್ಕಿಂತ ಕಡಿಮೆ ಇದ್ದಾಗ ದೇಹದಲ್ಲಿ ವಿವಿಧ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೌದು ಅವುಗಳ ಬಗ್ಗೆ ತಿಳಿದು ನಿಮಗೂ ಕೂಡ ಈ ರೀತಿಯಾದಾಗ ನಿರ್ಲಕ್ಷ್ಯ ಮಾಡಬಾರದು.

ವಿಟಮಿನ್ ಬಿ 12 ಕೊರತೆಯ ಲಕ್ಷಣಗಳು:

ಕೈ ಮತ್ತು ಕಾಲುಗಳಲ್ಲಿ ಜುಮ್ಮೆನಿಸುವಿಕೆ: ವಿಟಮಿನ್ ಬಿ 12 ಕೊರತೆಯು ನರಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಕೆಲವರಲ್ಲಿ ಕೈ ಮತ್ತು ಕಾಲುಗಳಲ್ಲಿ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆ ಉಂಟಾಗುತ್ತದೆ.

ನಿರಂತರ ಆಯಾಸ: ವಿಟಮಿನ್ ಬಿ 12 ಕೊರತೆಯು ತೀವ್ರ ಆಯಾಸಕ್ಕೆ ಕಾರಣವಾಗಬಹುದು. ಈ ಕೊರತೆಯು ದೇಹಕ್ಕೆ ಸಾಕಷ್ಟು ಆಮ್ಲಜನಕವನ್ನು ಪಡೆಯುವುದನ್ನು ತಡೆಯುತ್ತದೆ.

ಉಸಿರಾಟದ ತೊಂದರೆ: ಕೆಂಪು ರಕ್ತ ಕಣಗಳ ರಚನೆಗೆ ವಿಟಮಿನ್ ಬಿ 12 ಬಹಳ ಮುಖ್ಯ. ಆದ್ದರಿಂದ, ಇದರ ಕೊರತೆಯು ರಕ್ತಹೀನತೆಗೆ ಕಾರಣವಾಗುತ್ತದೆ. ಇದರಿಂದ ಆಮ್ಲಜನಕದ ಕೊರತೆಯಾಗಿ ಉಸಿರಾಟದ ತೊಂದರೆ ಉಂಟಾಗುತ್ತದೆ.

ಇದನ್ನೂ ಓದಿ: ವಿಟಮಿನ್ ಬಿ12 ಕೊರತೆ ಇದ್ದು ನೀವು ಸಸ್ಯಾಹಾರಿಗಳಾಗಿದ್ದರೆ ಈ 4 ಸೊಪ್ಪುಗಳನ್ನು ತಪ್ಪದೆ ತಿನ್ನಿ!

ಮಸುಕಾದ ಚರ್ಮ: ವಿಟಮಿನ್ ಬಿ 12 ಕೊರತೆಯು ಚರ್ಮವು ಮಸುಕಾಗಲು ಕಾರಣವಾಗುತ್ತದೆ. ದೇಹವು ಸಾಕಷ್ಟು ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಸಾಧ್ಯವಾಗದ ಕಾರಣ ಇದು ರಕ್ತಹೀನತೆಗೆ ಕಾರಣವಾಗುತ್ತದೆ.

ನರಮಂಡಲಕ್ಕೆ ಸಂಬಂಧಿಸಿದ ಸಮಸ್ಯೆಗಳು: ವಿಟಮಿನ್ ಬಿ 12 ಕೊರತೆಯು ಮೆಮೊರಿ ಸಮಸ್ಯೆಗಳು, ನರಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ತಜ್ಞರು ಹೇಳುತ್ತಾರೆ.

ಇಂತಹ ಲಕ್ಷಣ ನಿಮ್ಮಲ್ಲಿ ಕಂಡುಬಂದರೂ ಕೂಡ ತಕ್ಷಣ ವೈದ್ಯರನ್ನು ಸಂಪರ್ಕಿಸಲು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ