Period Pain: ಮುಟ್ಟಿನ ಸಮಯದ ನೋವನ್ನು ಕಡಿಮೆ ಮಾಡುವ 5 ಆಹಾರಗಳು ಇಲ್ಲಿವೆ

|

Updated on: Feb 25, 2023 | 2:15 PM

ಆಹಾರದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ಈ ಸಮಸ್ಯೆಗಳನ್ನು ಹೇಗೆ ನಿಭಾಯಿಸಬಹುದು ಎಂಬುದರ ಕುರಿತು ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್ ರುಜುತಾ ದಿವೇಕರ್ ಸಲಹೆ ನೀಡಿದ್ದಾರೆ.

Period Pain: ಮುಟ್ಟಿನ ಸಮಯದ ನೋವನ್ನು ಕಡಿಮೆ ಮಾಡುವ 5 ಆಹಾರಗಳು ಇಲ್ಲಿವೆ
ಪಿರಿಯಡ್
Image Credit source: Hindustan Times
Follow us on

ಇತ್ತೀಚಿನ ದಿನಗಳಲ್ಲಿ ಮುಟ್ಟಿನ (Period Pain) ತೊಂದರೆ ಹೆಚ್ಚು ಸಾಮಾನ್ಯವಾಗುತ್ತಿದೆ. ಈ ಸಮಸ್ಯೆಗಳಿಗೆ ಬದಲಾದ ಜೀವನಶೈಲಿ ಹಾಗೂ ಆಹಾರ ಕ್ರಮ ಪ್ರಮುಖ ಕಾರಣವಾಗಿದೆ. ಇದು ನಿಮ್ಮ ಮಾಸಿಕ ಋತು ಸ್ರಾವದ ಸಮಯದಲ್ಲಿ ತಲೆನೋವು, ವಾಕರಿಕೆ, ಮೈಗ್ರೇನ್, ಮೂಡ್ ಸ್ವಿಂಗ್ಸ್, ದೇಹದ ಸೆಳೆತ ಮುಂತಾದ ಸಮಸ್ಯೆಗೆ ಕಾರಣವಾಗುತ್ತದೆ.

ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್ ರುಜುತಾ ದಿವೇಕರ್(Nutritionist Rujuta Diwekar) ಅವರು ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಆಹಾರದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ಈ ಸಮಸ್ಯೆಗಳನ್ನು ಹೇಗೆ ನಿಭಾಯಿಸಬಹುದು ಎಂಬುದರ ಕುರಿತು ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಪಿರಿಯಡ್ ಅಥವಾ ನಿಮ್ಮ ಮುಟ್ಟಿನ ಸಮಯದಲ್ಲಿ ಕಿಬೊಟ್ಟೆ ನೋವು, ಸೆಳೆತ, ಮೈಗ್ರೇನ್, ವಾಕರಿಕೆ, ಮೂಡ್ ಸ್ವಿಂಗ್ಸ್ ಇತ್ಯಾದಿಗಳನ್ನು ಕಡಿಮೆ ಮಾಡಲು ಈ 5 ಆಹಾರಗಳನ್ನು ರೂಢಿಸಿಕೊಳ್ಳಿ ಎಂದು ಸಲಹೆ ನೀಡುತ್ತಾರೆ.

1.ನೆನೆಸಿದ ಒಣದ್ರಾಕ್ಷಿ ಮತ್ತು ಕೇಸರಿ:

ಕಪ್ಪು ಒಣದ್ರಾಕ್ಷಿ ಮತ್ತು ಕೇಸರಿಯ ಸಂಯೋಜನೆಯು ನಿಮ್ಮ ಮುಟ್ಟಿನ ಸಮಯದ ನೋವು ಮತ್ತು ಸೆಳೆತಕ್ಕೆ ಸಹಾಯ ಮಾಡುತ್ತದೆ. ಆದ್ದರಿಂದ ರಾತ್ರಿ ಹೊತ್ತು ನೆನೆಸಿಟ್ಟ ಒಣದ್ರಾಕ್ಷಿ ಕೇಸರಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದು ತಕ್ಷಣಕ್ಕೆ ನಿಮಗೆ ಉಪಶಮನ ನೀಡದ್ದಿದ್ದರೂ ಕೂಡ ಕಾಲ ಕ್ರಮೇಣ ನೀವು ಇದನ್ನು ರೂಢಿಸಿಕೊಂಡು ಹೋದಂತೆ ಮುಟ್ಟಿನ ಅವಧಿ ನೋವಿನಿಂದ ಉಪಶಮನ ಪಡೆಯಬಹುದು.

2. ತುಪ್ಪ:

ಪ್ರತಿ ಊಟಕ್ಕೆ ಒಂದು ಚಮಚ ತುಪ್ಪವನ್ನು ಸೇರಿಸಿ. ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದಲ್ಲಿ ತುಪ್ಪವನ್ನು ಸೇರಿಸುವುದರಿಂದ ನಿಮ್ಮ ಮುಟ್ಟಿನ ಸಮಯದಲ್ಲಿ ಸಂಭವಿಸುವ ಸೆಳೆತ ಮತ್ತು ವಾಕರಿಕೆಗಳ ಸಂಭವವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

3. ಮೊಸರನ್ನ:

ಮುಟ್ಟಿನ ಸಮಯದಲ್ಲಿ ಕಿಬ್ಬೊಟ್ಟೆಯ ನೋವಿನಿಂದ ಬಳಲುತ್ತಿರುವವರಿಗೆ ಮೊಸರನ್ನವು ಒಂದು ಉತ್ತಮ ಊಟದ ಆಯ್ಕೆಯಾಗಿದೆ. ದೇಹಕ್ಕೆ ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಉಂಟುಮಾಡುವುದಿಲ್ಲ. ಜೊತೆಗೆ ನಿಮ್ಮ ಈ ಊಟದ ರುಚಿಯನ್ನು ಹೆಚ್ಚಿಸಲು ದಾಳಿಂಬೆ ಬೀಜಗಳನ್ನು ಕೂಡ ಒಟ್ಟಿಗೆ ಸೇರಿಸಿಕೊಳ್ಳಿ. ಮನೆಯಲ್ಲಿ ಕರಿದ ಹಪ್ಪಳ ಕೂಡ ಸೇವಿಸಬಹುದು.

4. ಬೀಜಗಳು:

ನಿಮ್ಮ ಋತು ಸ್ರಾವದ ನೋವಿನ ದಿನಗಳಲ್ಲಿ ಕೈಬೆರಳೆಣಿಕೆಯಷ್ಟು ಗೋಡಂಬಿ, ಕಡಲೆಕಾಯಿಗಳನ್ನು ಸೇವಿಸಿ. ಸಿಹಿ ತಿನ್ನುವ ಬಯಕೆ ಮತ್ತು ಮೂಡ್ ಸ್ವಿಂಗ್‌ಗಳನ್ನು ನಿವಾರಿಸಲು ಈ ಬೀಜಗಳ ಜೊತೆಗೆ ಬೆಲ್ಲವನ್ನು ಹಾಕಿ ಸೇವಿಸಿ ಎಂದು ಸಲಹೆ ನೀಡುತ್ತಾರೆ.

5. ರಾಗಿ:

ರಾಗಿಯಿಂದ ಮಾಡಿದ ದೋಸೆ, ರೊಟ್ಟಿಯಂತೆ ಆಹಾರವನ್ನು ಸೇವಿಸಿ. ಇದು ನಿಮ್ಮ ಅತಿಯಾದ ಮುಟ್ಟಿನ ಸಮಯದಲ್ಲಿ ಕಿಬ್ಬೊಟ್ಟೆಯ ನೋವನ್ನು ಕಡಿಮೆ ಮಾಡಿ. ನಿಮ್ಮನ್ನು ತಂಪಾಗಿರಿಸುತ್ತದೆ.

ಇದನ್ನು ಓದಿ: ನಿಮ್ಮ ಮುಖದಲ್ಲಿ ಸಾಕಷ್ಟು ಮೊಡವೆಗಳಿದ್ದು, ನೀವು ಪ್ರತಿ ದಿನ ಹಾಲು ಕುಡಿಯುತ್ತಿದ್ದರೆ ಎಚ್ಚರ ವಹಿಸಿ.

ಆದ್ದರಿಂದ ನಿಮ್ಮ ಆರೋಗ್ಯದ ಸಮಸ್ಯೆಗೆ ನೀವು ಸೇವಿಸುವ ಆಹಾರಗಳು ಕೂಡ ಕಾರಣವಾಗಿತ್ತದೆ. ಜೊತೆಗೆ ಒತ್ತಡದ ಜೀವನ ಶೈಲಿ ಮಾನಸಿಕ ಖಿನ್ನತೆಗಳು ಕೂಡ ನಿಮ್ಮ ದೇಹದ ಆರೋಗ್ಯವನ್ನು ಕೆಡಿಸುವಲ್ಲಿ ಕಾರಣವಾಗುತ್ತದೆ ಎಂದು ಇವರು ಸಲಹೆ ನೀಡುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 6:51 pm, Wed, 23 November 22