Acne Problem: ನಿಮ್ಮ ಮುಖದಲ್ಲಿ ಸಾಕಷ್ಟು ಮೊಡವೆಗಳಿದ್ದು, ನೀವು ಪ್ರತಿ ದಿನ ಹಾಲು ಕುಡಿಯುತ್ತಿದ್ದರೆ ಎಚ್ಚರ ವಹಿಸಿ.
ನಿಮ್ಮ ಮೊಡವೆಯೊಂದಿನ ಚರ್ಮಕ್ಕೆ ಹಾಲು ಕುಡಿಯುವುದು ಎಷ್ಟು ಸೂಕ್ತ ಎಂಬುದರ ಕುರಿತು ಚರ್ಮರೋಗ ತಜ್ಞೆ ಡಾ. ಸೋನಿಯಾ ತೆಖಚಂದಾನಿ ಸಲಹೆಗಳನ್ನು ನೀಡುತ್ತಾರೆ. ಆದ್ದರಿಂದ ನೀವು ಇಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಈಕೆಳಗಿನ ಮಾಹಿತಿ ಓದಿ.
ಹಾಲು ಸಾಮಾನ್ಯವಾಗಿ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಲನ್ನು ವಿಜ್ಞಾನದ ದೃಷ್ಟಿಯಿಂದ ಮಾತ್ರವಲ್ಲದೆ ಆಯುರ್ವೇದದ ದೃಷ್ಟಿಯಿಂದಲೂ ಸಂಪೂರ್ಣ ಆಹಾರವೆಂದು ಪರಿಗಣಿಸಲಾಗಿದೆ. ಹಾಲು ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿದೆ. ಆದರೆ ನೀವು ಚರ್ಮದ ಕಾಯಿಲೆಯಿಂದ ಬಳಲುತ್ತಿದ್ದರೆ, ನಿಮ್ಮ ಮುಖದಲ್ಲಿ ಸಾಕಷ್ಟು ಮೊಡವೆಗಳು ಹಾಗು ನಿಮ್ಮ ಚರ್ಮ ಬಿರುಕು ಬಿಟ್ಟಿದ್ದರೆ ಆಗ ಹಾಲು ಕುಡಿಯುವುದು ಎಷ್ಟು ಸೂಕ್ತ ಎಂಬುದರ ಕುರಿತು ಆರೋಗ್ಯ ತಜ್ಞರು ಮಾಹಿತಿ ನೀಡುತ್ತಾರೆ.
ಪ್ರತಿಯೊಬ್ಬರ ಮುಖದಲ್ಲಿ ಒಮ್ಮೆಯಾದರೂ ಮೊಡವೆಗಳು ಹುಟ್ಟುವುದು ಸಹಜವಾಗಿದೆ. ವಿಶೇಷವಾಗಿ ಹದಿಹರೆಯದವರಲ್ಲಿ ಮೊಡವೆಗಳು ದೊಡ್ಡ ಸಮಸ್ಯೆಯಾಗಿದೆ. ಇದ್ದರಿಂದಾಗಿ ನಿಮ್ಮ ಸೌಂದರ್ಯವು ಕೆಳೆದು ಹೋಗುತ್ತದೆ ಎಂಬ ಭೀತಿ ಕಾಡುತ್ತಿರುತ್ತದೆ. ಆದ್ದರಿಂದ ನೀವು ಮೊಡವೆ ಸಮಸ್ಯೆಯಿಂದ ಬಳಲುತ್ತಿದ್ದರೆ ನಿರ್ಲಕ್ಯಿಸಲು ಹೋಗದಿರಿ. ಸೂಕ್ತವಾದ ಚಿಕಿತ್ಸೆಯ ಜೊತೆಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ, ಆಹಾರಕ್ರಮವನ್ನು ನೋಡಿಕೊಳ್ಳುವುದು ಅಷ್ಟೇ ಮುಖ್ಯವಾಗುತ್ತದೆ.
ನಿಮ್ಮ ಮೊಡವೆಯೊಂದಿನ ಚರ್ಮಕ್ಕೆ ಹಾಲು ಕುಡಿಯುವುದು ಎಷ್ಟು ಸೂಕ್ತ ಎಂಬುದರ ಕುರಿತು ಚರ್ಮರೋಗ ತಜ್ಞೆ ಡಾ. ಸೋನಿಯಾ ತೆಖಚಂದಾನಿ ಸಲಹೆಗಳನ್ನು ನೀಡುತ್ತಾರೆ. ಆದ್ದರಿಂದ ನೀವು ಇಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಈಕೆಳಗಿನ ಮಾಹಿತಿ ಓದಿ.
ಅತಿಯಾದ ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರಗಳು ನಿಮ್ಮ ಚರ್ಮಕ್ಕೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಆದರೆ ಹಾಲು ಕೆಲವೊಮ್ಮೆ ನಿಮ್ಮ ಮೊಡವೆ-ಪೀಡಿತ ಚರ್ಮ ಹೆಚ್ಚಾಗಲು ಕಾರಣವಾಗಬಹುದು ಎಂದು ನಿಮಗೆ ತಿಳಿದಿದೆಯೇ? ನಿಮ್ಮ ಮುಖದಲ್ಲಿನ ಮೊಡವೆ ಸಮಸ್ಯೆಯನ್ನು ನಿವಾರಿಸಲು ನೀವು ಮಾಡಬೇಕಾಗಿರುವುದು ಇಷ್ಟೇ. ಚರ್ಮರೋಗ ತಜ್ಞೆ ಡಾ. ಸೋನಿಯಾರವರು ನೀಡಿರುವ ನಾಲ್ಕು ಕಾರಣಗಳು ಇಲ್ಲಿವೆ.
1. ಐ.ಜಿ.ಎಫ್ ಎಂಬುದು ಹಾಲಿನಲ್ಲಿ ಇರುವ ಒಂದು ರೀತಿಯ ಹಾರ್ಮೋನ್ ಆಗಿದ್ದು, IGF-1 ಬೆಳವಣಿಗೆಯ ಹಾರ್ಮೋನ್ ಆಗಿದೆ. ಇದು ನಿಮ್ಮ ಚರ್ಮದ ಸಮಸ್ಯೆಗಳು ಹೆಚ್ಚಾಗಲು ಕಾರಣವಾಗುತ್ತದೆ.
2. ನೀವು ಪ್ರತಿ ದಿನ ಹಾಲು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಹೆಚ್ಚಿನ ಪ್ರಮಾಣದ ಇನ್ಸುಲಿನ್ ಉತ್ಪಾದನೆಗೆ ಕಾರಣವಾಗುತ್ತದೆ. ಹೆಚ್ಚಿನ ಇನ್ಸುಲಿನ್ ಮಟ್ಟವು ಹೆಚ್ಚಿನ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಗೆ ಕಾರಣವಾಗಿ, ಇದು ಮೊಡವೆಗಳಿಗೆ ಕಾರಣವಾಗಬಹುದು.
3. ನೀವು ಮೊಡವೆ ಸಮಸ್ಯೆಯಿಂದ ಬಳಲುತ್ತಿದ್ದು, ಪ್ರತಿ ದಿನ ಹಾಲು ಕುಡಿಯುತ್ತಿದ್ದರೆ ನಿಮ್ಮ ದೇಹದಲ್ಲಿ ಆಂಡ್ರೊಜೆನ್ ಎಂಬ ಒಂದು ರೀತಿಯ ಹಾರ್ಮೋನ್ ಹೆಚ್ಚಾಗಲು ಕಾರಣವಾಗುತ್ತದೆ. ಮೆಡಿಕಲ್ ನ್ಯೂಸ್ ಟುಡೇ ಪ್ರಕಾರ, “ಆಂಡ್ರೋಜೆನ್ ಮಟ್ಟಗಳಲ್ಲಿನ ಏರಿಕೆಯು ಹೆಚ್ಚಿನ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯ ಪ್ರಕ್ರಿಯೆಗೆ ಪ್ರಚೋದಿಸುತ್ತದೆ ಮತ್ತು ಚರ್ಮದ ಕೋಶಗಳ ಚಟುವಟಿಕೆಯಲ್ಲಿನ ಬದಲಾವಣೆಗಳು ಹಾಗೂ ಇದು ಚರ್ಮದ ಮೇಲೆ ಮೊಡವೆಗಳ ಉತ್ಪಾದನೆಗೆ ಕಾರಣವಾಗುತ್ತದೆ.
4. ಹಾಲಿನಲ್ಲಿ ಅಧಿಕ ಎಣ್ಣೆಯ ಅಂಶ ಇರುವುದರಿಂದ, ನಾವು ಪ್ರತಿದಿನ ಸೇವಿಸಿದಾಗ ಇದು ಚರ್ಮ ಬಿರುಕು ಬಿಡಲು ಕಾರಣವಾಗುತ್ತದೆ. ಡಾ. ಸೋನಿಯಾ ಟೆಕ್ಚಂದಾನಿ ಹಾಲು ತೈಲ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತದೆ.
ಇದನ್ನು ಓದಿ: ಯಾವ ಹೊತ್ತಿನಲ್ಲಿ ಬಾಳೆಹಣ್ಣು ತಿನ್ನಬೇಕು, ತಿನ್ನಬಾರದು ಇಲ್ಲಿದೆ ಮಾಹಿತಿ
ಸಾಮಾನ್ಯವಾಗಿ ಹಾಲು ಕುಡಿಯುವುದ್ದರಿಂದ ದೇಹಕ್ಕೆ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಇತರ ಪೋಷಕಾಂಶಗಳನ್ನು ನೀಡುತ್ತದೆ. ಆದರೆ ಮೊಡವೆಯ ಸಮಸ್ಯೆಯಿಂದ ಬಳಲುತ್ತಿರುವವರು ಹಾಲು ಕುಡಿಯುವುದನ್ನು ತಪ್ಪಿಸಬೇಕು. ಹಾಲಿನ ಬದಲಿಗೆ ಪರ್ಯಾಯವಾಗಿ ಬಾದಾಮಿ ಹಾಲು ಮತ್ತು ಸೋಯಾ ಹಾಲು ಕುಡಿಯುವುದು ಉತ್ತಮ ಎಂದು ಹೇಳುತ್ತಾರೆ.
(ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.)
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: