AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಯಾವ ಹೊತ್ತಿನಲ್ಲಿ ಬಾಳೆಹಣ್ಣು ತಿನ್ನಬೇಕು, ತಿನ್ನಬಾರದು ಇಲ್ಲಿದೆ ಮಾಹಿತಿ

ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣನ್ನು ಸೇವಿಸುವುದ್ದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಕರುಳಿನ ಸಮಸ್ಯೆಗಳಿಗೆ ಕಾರಣವಾಗಬಹುದು.

Health Tips: ಯಾವ ಹೊತ್ತಿನಲ್ಲಿ ಬಾಳೆಹಣ್ಣು ತಿನ್ನಬೇಕು, ತಿನ್ನಬಾರದು ಇಲ್ಲಿದೆ ಮಾಹಿತಿ
Health TipsImage Credit source: Google
TV9 Web
| Edited By: |

Updated on: Nov 19, 2022 | 11:25 AM

Share

ಬಾಳೆಹಣ್ಣು ಸೇವಿಸುವುದ್ದರಿಂದ ಇದು ನಿಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ. ಆದರೆ ಯಾವ ಸಮಯದಲ್ಲಿ ತಿಂದರೆ ಉತ್ತಮ, ಯಾವ ಸಮಯದಲ್ಲಿ ತಿಂದರೆ ಆರೋಗ್ಯ ಕೆಡಲು ಕಾರಣವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಬಾಳೆ ಹಣ್ಣಿನಲ್ಲಿ ಕದಳಿ, ಪಚ್ಚೆ, ನೇಂದ್ರ, ಹೀಗೆ ಸಾಕಷ್ಟು ವಿಧಗಳಿವೆ. ಪ್ರತಿ ದಿನ ಬಾಳೆ ಹಣ್ಣನ್ನು ಸೇವಿಸುವುದ್ದರಿಂದ ನಿಮ್ಮ ದೇಹಕ್ಕೆ 100ರಷ್ಟು ಕ್ಯಾಲೋರಿಯನ್ನು ಒದಗಿಸುತ್ತದೆ. ಬಾಳೆಹಣ್ಣುಗಳಿಂದಾಗುವ ಪ್ರಯೋಜನಗಳೆನು? ಬಾಳೆಹಣ್ಣು ತಿನ್ನಲು ಸರಿಯಾದ ಸಮಯವಿದೆಯೇ? ಈ ಎಲ್ಲ ಮಾಹಿತಿ ಇಲ್ಲಿದೆ.

ಬಾಳೆಹಣ್ಣು ಹಣ್ಣಾಗುತ್ತಿದ್ದಂತೆ ಅದರ ರುಚಿ ಮತ್ತು ಪೌಷ್ಟಿಕಾಂಶದ ಮೌಲ್ಯವು ಬದಲಾಗುತ್ತದೆ. ಚೆನ್ನಾಗಿ ಮಾಗಿದ ಬಾಳೆಹಣ್ಣು, ಹೊಸದಾಗಿ ಮಾಗಿದ ಬಾಳೆಹಣ್ಣಿಗಿಂತ ಹೆಚ್ಚಿನ ಸಿಹಿಯನ್ನು ಹೊಂದಿರುತ್ತದೆ. ಹೊಸದಾಗಿ ಮಾಗಿದ ಬಾಳೆಹಣ್ಣನ್ನು ತಿನ್ನುವುದರಿಂದ ನಿಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹೆಚ್ಚಾಗಿ ಹಣ್ಣಾಗಿರುವ ಬಾಳೆ ಹಣ್ಣು ಅಂದರೆ ಅದರ ಸಿಪ್ಪೆಯು ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿರುತ್ತದೆ ಇದನ್ನು ಪ್ರತಿದಿನ ಸೇವಿಸುವುದ್ದರಿಂದ ನಿಮ್ಮ ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಜೊತೆಗೆ ನಿಮ್ಮ ದೇಹಕ್ಕೆ ಬೇಕಾಗುವ ಶಕ್ತಿಯನ್ನು ನೀಡುತ್ತದೆ. ಬಾಳೆಹಣ್ಣುಗಳಲ್ಲಿ ಟ್ರಿಪ್ಟೊಫಾನ್ ಎಂಬ ಅಂಶವನ್ನು ಹೊಂದಿದ್ದು, ಇದು ನಿಮ್ಮ ದೇಹದಲ್ಲಿ ಅಮೈನೋ ಆಮ್ಲವನ್ನು ಒದಗಿಸುತ್ತದೆ. ಜೊತೆಗೆ ನಿಮ್ಮ ದೇಹವು ಸಿರೊಟೋನಿನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಸಿರೊಟೋನಿನ್ ಮೆದುಳಿನ ಪ್ರಮುಖ ರಾಸಾಯನಿಕ ಅಂಶವಾಗಿದ್ದು, ಇದು ನೈಸರ್ಗಿಕ ಖಿನ್ನತೆಗೆ ಶಮನಕಾರಿಯಾಗಿದೆ ಮತ್ತು ಆತಂಕ ಮತ್ತು ನಿದ್ರಾಹೀನತೆಗೆ ಚಿಕಿತ್ಸೆ ನೀಡುತ್ತದೆ.

ಕೆಮ್ಮಿನ ಸಮಸ್ಯೆಯಿಂದ ಬಳಲುತ್ತಿರುವವರು ಎಚ್ಚರ ವಹಿಸಿ

ಹೌದು ಕೆಮ್ಮಿನ ಸಮಸ್ಯೆ ಇರುವವರು ರಾತ್ರಿಯಲ್ಲಿ ಬಾಳೆಹಣ್ಣನ್ನು ಸೇವಿಸಬಾರದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್, ಫೈಬರ್ ಮತ್ತು ಮೆಗ್ನೀಸಿಯಮ್‌ ಹೇರಳವಾಗಿದೆ. ಆದರೆ  ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ಯಾವತ್ತೂ ತಿನ್ನಬೇಡಿ. ಬಾಳೆಹಣ್ಣುಗಳಲ್ಲಿ ಆಮ್ಲೀಯ ಸ್ವಭಾವವನ್ನು ಹೊಂದಿರುವುದ್ದರಿಂದ ಇದು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಕರುಳಿನ ಸಮಸ್ಯೆಗಳಿಗೆ ಕಾರಣವಾಗಬಹುದು.

ಇಂದೂ ನೀವು ಖರೀದಿಸುವ ಪ್ರತಿಯೊಂದು ಹಣ್ಣು ತರಕಾರಿಗಳನ್ನು ರಾಸಯನಿಕ ಔಷಧಿಗಳನ್ನು ಸಿಂಪಡಿಸಿ ಬೆಳೆಸಲಾಗುತ್ತದೆ. ಆದ್ದರಿಂದ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದ್ದರಿಂದ ನಿಮ್ಮ ಆಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣನ್ನು ಸೇವಿಸುವುದ್ದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.ರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುವ ಸಾಧ್ಯತೆ ಹೆಚ್ಚಿದೆ.

ಇದನ್ನು ಓದಿ: ಯೋಗದಿಂದ ನಿಮ್ಮ ದೇಹದ ಎತ್ತರವನ್ನು ಹೆಚ್ಚಿಸಬಹುದು ಎಂದು ನಿಮಗೆ ತಿಳಿದಿದೆಯೇ?

ಆದ್ದರಿಂದ ನೀವು ಬಾಳೆಹಣ್ಣುಗಳನ್ನು ಸೇವಿಸುವ ಉತ್ತಮ ಕ್ರಮವೆಂದರೆ ನೀವು ಸೇವಿಸುವ ಆಹಾರಗಳ ಜೊತೆಗೆ ಸೇವಿಸಿ. ಬಾಳೆಹಣ್ಣಿನಿಂದ ತಯಾರಿಸಲಾಗುವ ಕೆಲವೊಂದಿಷ್ಟು ರೆಸಿಪಿಗಳನ್ನು ತಯಾರಿಸಿ ತಿನ್ನುವುದು ಉತ್ತಮವಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ