Yoga Tips: ಯೋಗಾಸನ ಮಾಡುವಾಗ ಈ 7 ತಪ್ಪು ಮಾಡಬೇಡಿ

ಕೊರೋನಾ ನಂತರದ ದಿನಗಳಲ್ಲಿ ಸಾಕಷ್ಟು ಆನ್‌ಲೈನ್ ಯೋಗ ತರಬೇತುಗಳು ಪ್ರಾರಂಭವಾಗಿದೆ. ನೀವು ಪ್ರತಿದಿನ ಯೋಗಾಸನಗಳನ್ನು ಮಾಡುವ ಅಭ್ಯಾಸವನ್ನು ಹೊಂದಿದ್ದರೆ, ನೀವು ಯೋಗಾಸನಗಳನ್ನು ಮಾಡುವಾಗ ಮಾಡುವ ಈ 7 ತಪ್ಪುಗಳ ಬಗ್ಗೆ ತಿಳಿದುಕೊಳ್ಳಿ.

Yoga Tips: ಯೋಗಾಸನ ಮಾಡುವಾಗ ಈ 7 ತಪ್ಪು ಮಾಡಬೇಡಿ
Online YogaImage Credit source: Time Out
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Nov 18, 2022 | 6:20 PM

ಯೋಗವು ಆರೋಗ್ಯವನ್ನು ವೃದ್ದಿಸುವಲ್ಲಿ ಸಹಕಾರಿಯಾಗಿದೆ. ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಪ್ರತಿ ದಿನ ಯೋಗಾಭ್ಯಾಸದಿಂದ ಪಡೆಯಬಹುದು. ಕೊರೋನಾ ನಂತರದ ದಿನಗಳಲ್ಲಿ ಸಾಕಷ್ಟು ಆನ್‌ಲೈನ್ ಯೋಗ ತರಬೇತಿಗಳು ಪ್ರಾರಂಭವಾಗಿದೆ. ನೀವು ಪ್ರತಿದಿನ ಯೋಗಾಸನಗಳನ್ನು ಮಾಡುವ ಅಭ್ಯಾಸವನ್ನು ಹೊಂದಿದ್ದರೆ, ನೀವು ಯೋಗಾಸನಗಳನ್ನು ಮಾಡುವಾಗ ಮಾಡುವ ಈ 7 ತಪ್ಪುಗಳ ಬಗ್ಗೆ ತಿಳಿದುಕೊಳ್ಳಿ.

ಯೋಗ ಆಸನಗಳು ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ, ಆದರೆ ಆಸನಗಳನ್ನು ಸರಿಯಾದ ರೀತಿಯಲ್ಲಿ ಮಾಡುವುದು ಅತ್ಯಗತ್ಯ. ನೀವು ಯೋಗ ಆಸನಗಳನ್ನು ಮಾಡುವಾಗ  ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಅಂಶಗಳ ಬಗ್ಗೆ ಈ ವರದಿಯಲ್ಲಿ ತಿಳಿದುಕೊಳ್ಳಿ. ಯೋಗಾ ಮಾಡುವಾಗ 7 ಸಾಮಾನ್ಯ ತಪ್ಪುಗಳು ಇಲ್ಲಿವೆ.

1.ಆನ್‌ಲೈನ್ ಯೋಗ ಮಾಡುವಾಗ ಇದ್ದಕ್ಕಿದ್ದಂತೆ  ಸ್ಕ್ರೀನ್‌ಗಳನ್ನು ನೋಡುವುದು:

ಕೊರೊನಾದ ನಂತರದ ದಿನಗಳಲ್ಲಿ ಆನ್‌ಲೈನ್ ಯೋಗ ತರಗತಿಗಳಿಗೆ ಬೇಡಿಕೆ ಹೆಚ್ಚಿದೆ. ಈಗ ನಿರ್ಬಂಧಗಳನ್ನು ತೆಗೆದುಹಾಕಲಾಗಿದ್ದರೂ, ಜನರು ಆನ್‌ಲೈನ್‌ನಲ್ಲಿ ಯೋಗ ತರಗತಿಗಳಿಗೆ ಆದ್ಯತೆ ನೀಡುತ್ತಿದ್ದಾರೆ. ವ್ಯಾಯಾಮದ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಮೊಬೈಲ್ ನೋಡಿಕೊಂಡು ಮಾಡುವುದು ತಪ್ಪು. ಇದು ಕುತ್ತಿಗೆ ಅಥವಾ ಬೆನ್ನು ಉಳುಕಿನಂತಹ ಗಾಯಕ್ಕೆ ಕಾರಣವಾಗಬಹುದು. ಜೊತೆಗೆ ನೀವು ಏಕಾಗ್ರತೆಯನ್ನು ಕೂಡ ಕಳೆದುಕೊಳ್ಳುತ್ತೀರಿ.

2.ಕಳಪೆ ಗುಣಮಟ್ಟದ ಯೋಗ ಮ್ಯಾಟ್:

ನೀವು ಹೊಸದಾಗಿ ಯೋಗ ಮಾಡಲು ಪ್ರಾರಂಭಿಸಿದರೆ ಅಲ್ಲಿ ಉತ್ತಮ ಗುಣ ಮಟ್ಟದ ಯೋಗ ಮ್ಯಾಟ್ ಅಗತ್ಯವಾಗಿದೆ. ಉತ್ತಮ ಗುಣ ಮಟ್ಟದ ಯೋಗ ಮ್ಯಾಟ್ ಬಳಸುವುದ್ದರಿಂದ ಯೋಗಾಸನಗಳ ಭಂಗಿಗಳನ್ನು ಸರಿಯಾದ ರೀತಿಯಲ್ಲಿ ಮಾಡಬಹುದು. ಜೊತೆಗೆ ಗಾಯಗಳನ್ನು ತಪ್ಪಿಸಲು ಉತ್ತಮ ಗುಣಮಟ್ಟದ ಯೋಗ ಮ್ಯಾಟ್ ಅಗತ್ಯವಿದೆ. ನೀವು ಸಮತೋಲನವನ್ನು ಕಳೆದುಕೊಳ್ಳದಂತೆ ಅಥವಾ ನಿಮ್ಮ ಮೊಣಕಾಲುಗಳು ಅಥವಾ ಮೊಣಕೈಗಳಿಗೆ ಗಾಯವಾಗದಂತೆ ಸಾಕಷ್ಟು ಮೃದು ಇರುವ ಉತ್ತಮ ಗುಣಮಟ್ಟದ ಯೋಗ ಮ್ಯಾಟ್ ಖರೀದಿಸಿಕೊಳ್ಳಿ.

3. ಆರಾಮದಾಯಕವಲ್ಲದ ಬಟ್ಟೆಗಳನ್ನು ಧರಿಸುವುದು:

ನೀವು ಯೋಗವನ್ನು ಪ್ರಾರಂಭಿಸುವ ಮೊದಲು ಆರಾಮದಾಯಕವಾದ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳಿ. ವ್ಯಾಯಮದಲ್ಲಿನ ಕೆಲವೊಂದು ಭಂಗಿಗಳಿಗೆ ನಿಮ್ಮ ಬಟ್ಟೆಗಳು ಹೊಂದಿಕೊಳ್ಳದಿರಬಹುದು. ಆದ್ದರಿಂದ ನಿಮ್ಮ ಅಂಗಗಳನ್ನು ಮುಕ್ತವಾಗಿ ಚಲಿಸಲು ಅನುವು ಮಾಡುವ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳಿ.

4. ನಿಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳುವುದು:

ಸ್ಥಿರ ಮತ್ತು ಸರಿಯಾದ ಉಸಿರಾಟವು ಯೋಗದ ಅತ್ಯಗತ್ಯ ಭಾಗವಾಗಿದೆ, ಆದ್ದರಿಂದ ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸಿ. ನಿಮ್ಮ ಬಾಯಿಯ ಮೂಲಕ ಉಸಿರಾಡುವುದನ್ನು ಕಡಿಮೆಮಾಡಿ, ಮೂಗಿನ ಮೂಲಕ ನಿಧಾನ ಹಾಗೂ ಸ್ಥಿರವಾದ ಉಸಿರಾಟವನ್ನು ಅಭ್ಯಾಸ ಮಾಡಿ.

5.ಖಾಲಿ ಹೊಟ್ಟೆಯಲ್ಲಿ ಯೋಗ ಅಭ್ಯಾಸ ಮಾಡುವುದು:

ನೀವು ಹಸಿವಿನಿಂದ ಬಳಲುತ್ತಿದ್ದರೆ, ನೀವು ಆಸನಗಳನ್ನು ಸರಿಯಾದ ರೀತಿಯಲ್ಲಿ ಏಕಾಗ್ರತೆಯಿಂದ ಅಭ್ಯಾಸ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಯೋಗಾಭ್ಯಾಸ ಪ್ರಾರಂಭವಾಗುವ ಒಂದು ಅಥವಾ ಎರಡು ಗಂಟೆಗಳ ಮೊದಲು ಲಘು ತಿಂಡಿ ಸೇವಿಸಿ.

6.ಸರಿಯಾದ ಸಲಕರಣೆಗಳನ್ನು ಬಳಸದಿರುವುದು:

ನಿಮ್ಮ ಯೋಗ ತರಬೇತುದಾರರು ಕೆಲವು ಆಸನಗಳನ್ನು ಮಾಡುವಾಗ ಕೆಲವೊಂದಿಷ್ಟು ಸಲಕರಣೆಗಳನ್ನು ಬಳಸುತ್ತಿದ್ದರೆ, ಅದರ ಕುರಿತು ಮಾಹಿತಿ ಪಡೆದುಕೊಳ್ಳಿ. ಇದು ಕೆಲವೊಮ್ಮೆ ಅನಗತ್ಯ ಅನಿಸಬಹುದು. ಆದರೆ ನಿಮ್ಮ ಯೋಗ ತರಬೇತುದಾರರು ಅವುಗಳನ್ನು ಬಳಸುತ್ತಿದ್ದರೆ, ಈ ಪರಿಕರಗಳು ಮುಖ್ಯವೆಂದು ನೆನಪಿಡಿ.

7.ಶವಾಸನವನ್ನು ಬಿಟ್ಟುಬಿಡುವುದು:

ಶವಾಸನ ಎಂದರೆ ಸುಮ್ಮನೆ ಮಲಗುವುದಲ್ಲ. ಇದು ಮುಖ್ಯವಲ್ಲ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಇದು ನಿಮ್ಮ ಪ್ರತಿ ದಿನದ ಯೋಗಾಭ್ಯಾಸಗಳು ಮುಗಿದ ಮೇಲೆ ನಿಮ್ಮ ದೇಹಕ್ಕೆ ಹಾಗೂ ಮನಸ್ಸಿಗೆ ವಿಶ್ರಾಂತಿಯನ್ನು ನೀಡುತ್ತದೆ.

ಇದನ್ನು ಓದಿ: ಯೋಗದಿಂದ ನಿಮ್ಮ ದೇಹದ ಎತ್ತರವನ್ನು ಹೆಚ್ಚಿಸಬಹುದು ಎಂದು ನಿಮಗೆ ತಿಳಿದಿದೆಯೇ?

ಆದ್ದರಿಂದ ನಿಮ್ಮ ಪ್ರತಿ ದಿನದ ಯೋಗಾಭ್ಯಾಸಗಳಲ್ಲಿ ಈ ಮೇಲಿನ 7 ತಪ್ಪುಗಳ ಬಗ್ಗೆ ಎಚ್ಚರ ವಹಿಸಿ. ಸರಿಯಾದ ಕ್ರಮಗಳೊಂದಿಗೆ ಯೋಗ ಮಾಡಿ ಹಾಗೂ ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್