AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಪದಾರ್ಥಗಳನ್ನು ತಿಂದ ಬಳಿಕ ತಪ್ಪಿಯೂ ಹಾಲು ಕುಡಿಯಬೇಡಿ, ಈ ಆರೋಗ್ಯ ಸಮಸ್ಯೆಗಳು ಕಾಡಬಹುದು

ಅನೇಕ ಮಂದಿ ಏನನ್ನೂ ಯೋಚಿಸದೆ ಮನಸ್ಸಿಗೆ ಬಂದಂತೆ ತಿಂದುಬಿಡುತ್ತಾರೆ. ಇದು ಆರೋಗ್ಯದ ಮೇಲೆ ಹಲವು ರೀತಿಯ ತೊಂದರೆಯನ್ನುಂಟು ಮಾಡುತ್ತದೆ.  ಹಾಲು ಕುಡಿದ ನಂತರ ಕೆಲವು ವಸ್ತುಗಳನ್ನು ತಪ್ಪಾಗಿಯೂ ಸೇವಿಸಬಾರದು.

ಈ ಪದಾರ್ಥಗಳನ್ನು ತಿಂದ ಬಳಿಕ ತಪ್ಪಿಯೂ ಹಾಲು ಕುಡಿಯಬೇಡಿ, ಈ ಆರೋಗ್ಯ ಸಮಸ್ಯೆಗಳು ಕಾಡಬಹುದು
Milk
TV9 Web
| Edited By: |

Updated on: Nov 17, 2022 | 12:41 PM

Share

ಅನೇಕ ಮಂದಿ ಏನನ್ನೂ ಯೋಚಿಸದೆ ಮನಸ್ಸಿಗೆ ಬಂದಂತೆ ತಿಂದುಬಿಡುತ್ತಾರೆ. ಇದು ಆರೋಗ್ಯದ ಮೇಲೆ ಹಲವು ರೀತಿಯ ತೊಂದರೆಯನ್ನುಂಟು ಮಾಡುತ್ತದೆ.  ಹಾಲು ಕುಡಿದ ನಂತರ ಕೆಲವು ವಸ್ತುಗಳನ್ನು ತಪ್ಪಾಗಿಯೂ ಸೇವಿಸಬಾರದು. ಅಥವಾ ಈ ಪದಾರ್ಥಗಳನ್ನು ತಿಂದ ಬಳಿಕ ಹಾಲನ್ನು ಕುಡಿಯಬೇಡಿ.  ಈ ರೀತಿ ಮಾಡುವುದರಿಂದ ನೀವು ತೊಂದರೆಗೆ ಸಿಲುಕಬಹುದು, ಅಂತಹ ಪರಿಸ್ಥಿತಿಯಲ್ಲಿ, ಹಾಲು ಕುಡಿದ ನಂತರ ಯಾವ ವಸ್ತುಗಳನ್ನು ಸೇವಿಸಬಾರದು.

ಈ ಪದಾರ್ಥಗಳನ್ನು ಸೇವಿಸಿದ ಬಳಿಕ ಹಾಲು ಕುಡಿಯಬೇಡಿ

ನಿಂಬೆ ಹಾಲು ಕುಡಿಯುವುದಕ್ಕೂ ಮುನ್ನ ನಿಂಬೆ ನೀರು ಅಥವಾ ನಿಂಬೆ ರಸ ಕುಡಿಯುವುದು, ಅಥವಾ ಹಾಲು ಕುಡಿದ ಬಳಿಕ ನಿಂಬೆ ರಸ ಸೇವನೆ ಮಾಡುವುದನ್ನು ತಪ್ಪಿಸಿ. ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹಾಲು ಕುಡಿದ ತಕ್ಷಣ ನಿಂಬೆಯಿಂದ ತಯಾರಿಸಿದ ಯಾವುದನ್ನಾದರೂ ಸೇವಿಸಿದರೆ ಅದು ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗಬಹುದು.

ಮೂಲಂಗಿಯನ್ನು ಸೇವಿಸಬಾರದು ಇದು ಜೀರ್ಣಕ್ರಿಯೆ ಮತ್ತು ಚರ್ಮದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ ಹಾಲು ಕುಡಿದ ನಂತರ ಮೂಲಂಗಿಯನ್ನು ಸೇವಿಸಬಾರದು.

ಮೀನು ಹಾಲು ಕುಡಿಯುವ ಮೊದಲು ಅಥವಾ ನಂತರ ಮೀನುಗಳನ್ನು ಸೇವಿಸಬಾರದು. ಮೀನಿನ ಸೇವನೆಯಿಂದ ಚರ್ಮದ ಸಮಸ್ಯೆ ಉಂಟಾಗುತ್ತದೆ.ಹಾಲು ಕುಡಿದ ನಂತರ ಮೀನು ತಿಂದರೆ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.ಹಾಗಾಗಿಯೇ ಹಾಲು ಕುಡಿದ ನಂತರ ಮೀನು ತಿನ್ನಬೇಡಿ.

ಸಿಟ್ರಿಕ್ ಹಣ್ಣು ಹಾಲು ಕುಡಿದ ತಕ್ಷಣ ಸಿಟ್ರಿಕ್ ಹಣ್ಣನ್ನು ಸೇವಿಸಬೇಡಿ. ಹಾಲು ಕುಡಿದ ತಕ್ಷಣ ಸಿಟ್ರಸ್ ಹಣ್ಣುಗಳನ್ನು ಸೇವಿಸುವುದರಿಂದ ಕ್ಯಾಲ್ಸಿಯಂ ಹಣ್ಣುಗಳಲ್ಲಿರುವ ಕಿಣ್ವಗಳನ್ನು ಹೀರಿಕೊಳ್ಳುತ್ತದೆ. ಈ ಕಾರಣದಿಂದಾಗಿ, ನಿಮ್ಮ ದೇಹವು ಪೋಷಣೆಯನ್ನು ಸಹ ಪಡೆಯುವುದಿಲ್ಲ. ದಯವಿಟ್ಟು ಹಾಲು ಕುಡಿದ ನಂತರ ಕಿತ್ತಳೆ, ಅನಾನಸ್ ಮುಂತಾದ ಹಣ್ಣುಗಳನ್ನು ತಿನ್ನಬೇಡಿ.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ