ನೀವು ಬಳಸುವ ಸ್ಯಾನಿಟರಿ ಪ್ಯಾಡ್‌ಗಳು ನಿಮ್ಮ ಆರೋಗ್ಯಕ್ಕೆ ಕಂಟಕವಾಗಬಹುದು
ನೀವು ಬಳಸುವ ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಇರುವ ಕೆಲವು ರಾಸಾಯನಿಕಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಅಧ್ಯಯನವು ಕಂಡುಹಿಡಿದಿದೆ.
ಸ್ಯಾನಿಟರಿ ಪ್ಯಾಡ್‌ಗಳನ್ನು ಶೇಕಾಡ 90ರಷ್ಟು ಮಹಿಳೆಯರು ಮುಟ್ಟಿನ ಸಂದರ್ಭದಲ್ಲಿ ಉಪಯೋಗಿಸುತ್ತಾರೆ. ಆದರೆ ನೀವು ಬಳಸುವ ಈ ಪ್ಯಾಡ್‌ಗಳಿಂದ ನಿಮ್ಮ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ ಎಂಬುದು ನಿಮಗೆ ತಿಳಿದಿದಿಯೇ? ಸ್ಯಾನಿಟರಿ ಪ್ಯಾಡ್‌ಗಳನ್ನು ಅಧ್ಯಯನಕ್ಕೆ ಒಳಪಡಿಸಿದ ಬಳಸಿ ಸಂಶೋಧನೆಯಲ್ಲಿ ತಿಳಿದ ಅಂಶಗಳ ವಿವರ ಇಲ್ಲಿದೆ. ನೀವು ಬಳಸುವ ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಇರುವ ಕೆಲವು ರಾಸಾಯನಿಕಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಅಧ್ಯಯನವು ಕಂಡುಹಿಡಿದಿದೆ.
ರಾಪ್ಡ್ ಇನ್ ಸೀಕ್ರೆಸಿ ಎಂಬ ಶೀರ್ಷಿಕೆಯ ಅಡಿಯಲ್ಲಿ ನಡೆಸಲಾದ ಈ ಅಧ್ಯಯನದಲ್ಲಿ ಭಾರತದಾದ್ಯಂತ ಸಾಮಾನ್ಯವಾಗಿ ಲಭ್ಯವಿರುವ ಹತ್ತು ಸ್ಯಾನಿಟರಿ ಪ್ಯಾಡ್ ಬ್ರಾಂಡ್‌ಗಳ ಮೇಲೆ ಅಧ್ಯಯನ ನಡೆಸಲಾಗಿದೆ. ಈ ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಕಾರ್ಸಿನೋಜೆನ್‌ಗಳು, ರಿಪ್ರೊಡಕ್ಟಿವ್ ಟಾಕ್ಸಿನ್‌ಗಳು, ಎಂಡೋಕ್ರೈನ್ ಡಿಸ್ರಪ್ಟರ್‌ಗಳು ಮತ್ತು ಅಲರ್ಜಿನ್‌ಗಳಂತಹ ವಿಷಕಾರಿ ರಾಸಾಯನಿಕಗಳು ಸೇರಿವೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಇಂತಹ ರಾಸಾಯನಿಕಗಳು ನಿಮ್ಮ ದೇಹದ ಮೇಲೆ ಕಾಲ ಕ್ರಮೇಣ ಮಾರಕ ಕಾಯಿಲೆಗೆ ಕಾರಣವಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಭಾರತದಲ್ಲಿ 4 ರಲ್ಲಿ 3 ಹದಿಹರೆಯದ ಹುಡುಗಿಯರು ಸ್ಯಾನಿಟರಿ ಪ್ಯಾಡ್‌ಗಳನ್ನು ಅವಲಂಬಿಸಿದ್ದಾರೆ. ಏಕೆಂದರೆ ಮುಟ್ಟಿನ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಮಹಿಳೆಯ ಯೋನಿಯ ಮೂಲಕ ರಾಸಾಯನಿಕಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಸ್ಯಾನಿಟರಿ ಪ್ಯಾಡ್ ಹೊಂದಿದೆ. ಭಾರತದಲ್ಲಿ 15 ರಿಂದ 24 ವರ್ಷ ವಯಸ್ಸಿನ ಸುಮಾರು 64 ಪ್ರತಿಶತ ಮಹಿಳೆಯರು ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿ ಬಹಿರಂಗಪಡಿಸಿದೆ.
ಇದನ್ನು ಓದಿ: ಕಿವಿ ಹಣ್ಣುಗಳನ್ನು ತಿನ್ನುವುದರಿಂದ ಈ ವಿಟಮಿನ್‌ನ ಕೊರತೆ ನೀಗುತ್ತದೆ, ರೋಗಗಳ ಅಪಾಯವೂ ಕಡಿಮೆ
ಇದಲ್ಲದೇ ನೀವು ಪ್ರತಿ ನಿತ್ಯ ಬಳಸುವ ಡಿಯೋಡರೆಂಟ್‌ಗಳು, ಏರ್ ಫ್ರೆಶ್‌ನರ್‌ಗಳು, ಉಗುರು ಬಣ್ಣ, ಇಂಧನಗಳು ಮತ್ತು ವಾಹನ ಉತ್ಪನ್ನಗಳಲ್ಲಿ ಬಳಸಲಾಗುವ ಕೃತಕ ಪರಿಮಳಕಾರಗಳು ಕೂಡ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಇಂತಹ ರಾಸಯನಿಕಗಳು ನಿಮ್ಮ ದೇಹದ ಮೇಲೆ ನಿಧಾನವಾಗಿ ಕಾಲಕ್ರಮೇಣ ಮಾರಕವಾಗುತ್ತಾ ಹೋಗುತ್ತದೆ ಎಚ್ಚರದಿಂದಿರಿ.
ಇಂಗ್ಲೀಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ:
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: