ಪಿರಿಯಡ್ಸ್ ನೋವು ತಡೆಯಲಾಗುತ್ತಿಲ್ಲವೇ?; ಈ ಯೋಗಾಸನ ಮಾಡಿ

|

Updated on: Jan 26, 2024 | 5:38 PM

ಮುಟ್ಟಿನ ಸಂದರ್ಭದಲ್ಲಿ ಉಂಟಾಗುವ ನೋವು ಸಾಮಾನ್ಯವಾಗಿ ಎಲ್ಲ ಮಹಿಳೆಯರನ್ನು ಕೂಡ ಕಾಡುತ್ತದೆ. ಬಹುತೇಕ ಮಹಿಳೆಯರು ಈ ನೋವಿನ ನಿವಾರಣೆಗೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಯೋಗಾಸನವನ್ನು ನೀವು ಒಮ್ಮೆ ಪ್ರಯತ್ನಿಸಿದರೆ ಮುಟ್ಟಿನ ನೋವನ್ನು ನಿವಾರಿಸಲು ಸಹಕಾರಿಯಾಗುತ್ತದೆ.

ಪಿರಿಯಡ್ಸ್ ನೋವು ತಡೆಯಲಾಗುತ್ತಿಲ್ಲವೇ?; ಈ ಯೋಗಾಸನ ಮಾಡಿ
ಪಿರಿಯಡ್ಸ್
Image Credit source: iStock
Follow us on

ಮುಟ್ಟಿನ ಸೆಳೆತವು ಮಹಿಳೆಯರಿಗೆ ಬಹಳ ನೋವನ್ನು ಉಂಟುಮಾಡುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಸುಲಭವಲ್ಲ. ಮುಟ್ಟಿನ ಸಂದರ್ಭದಲ್ಲಿ ಉಂಟಾಗುವ ನೋವು ಸಾಮಾನ್ಯವಾಗಿ ಎಲ್ಲ ಮಹಿಳೆಯರನ್ನು ಕೂಡ ಕಾಡುತ್ತದೆ. ಬಹುತೇಕ ಮಹಿಳೆಯರು ಈ ನೋವಿನ ನಿವಾರಣೆಗೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಋತುಚಕ್ರದ ಸಂದರ್ಭದಲ್ಲಿ ಎಂಡೊಮೆಟ್ರಿಯಮ್ ಅನ್ನು ಹೊರಹಾಕಲು ಗರ್ಭಾಶಯದ ಸಂಕೋಚನ ಉಂಟಾಗುವುದರಿಂದ ಹೆಚ್ಚಾಗಿ ಮುಟ್ಟಿನ ನೋವು ಉಂಟಾಗುತ್ತದೆ. ಹೀಗಾಗಿ, ಯೋಗಾಸನವನ್ನು ನೀವು ಒಮ್ಮೆ ಪ್ರಯತ್ನಿಸಿದರೆ ಮುಟ್ಟಿನ ನೋವನ್ನು ನಿವಾರಿಸಲು ಸಹಕಾರಿಯಾಗುತ್ತದೆ.

ಬ್ರಹ್ಮರಿ:

ಈ ಆಸನವು ಉದ್ವೇಗ ಮತ್ತು ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮುಟ್ಟಿನ ಸಮಯದಲ್ಲಿ ಯೋಗ ಅಭ್ಯಾಸವನ್ನು ಪ್ರಾರಂಭಿಸಲು ಇದು ಸೂಕ್ತ ಮಾರ್ಗವಾಗಿದೆ. ಇದು ತಕ್ಷಣವೇ ನೋವನ್ನು ಶಾಂತಗೊಳಿಸುತ್ತದೆ ಮತ್ತು ಮನಸ್ಸು, ದೇಹವನ್ನು ವಿಶ್ರಾಂತಿಗೆ ಸಿದ್ಧಪಡಿಸುತ್ತದೆ.

ಇದನ್ನೂ ಓದಿ: ಮುಟ್ಟಿನ ಸಮಯದ ನೋವಿನಿಂದ ಮುಕ್ತಿ ಪಡೆಯಲು ಈ ಸಲಹೆ ಪಾಲಿಸಿ

ಮಲಾಸನ:

ಇದು ಮುಟ್ಟಿನ ಸಮಯದಲ್ಲಿ ಮಾಡಬಹುದಾದ ಅತ್ಯುತ್ತಮ ಯೋಗಾಸನವಾಗಿದೆ. ಏಕೆಂದರೆ ಇದು ಸೊಂಟ ಮತ್ತು ಒಳ ತೊಡೆಗಳನ್ನು ತೆರೆಯುತ್ತದೆ. ಇದು ಹೊಟ್ಟೆಯ ಭಾಗಕ್ಕೆ ವ್ಯಾಯಾಮ ನೀಡುತ್ತದೆ. ಈ ಯೋಗಾಸನವು ಸುಗಮ ಹರಿವಿಗೆ ಸಹಾಯ ಮಾಡುತ್ತದೆ ಮತ್ತು ದೇಹವನ್ನು ವಿಶ್ರಾಂತಿ ಮಾಡುತ್ತದೆ.

ಬಡ್ಡಕೋನಾಸನ:

ಇದು ಪಿರಿಯಡ್ಸ್ ಸಮಯದಲ್ಲಿ ಮಾಡಬೇಕಾದ ಮತ್ತೊಂದು ಉತ್ತಮ ಆಸನವಾಗಿದೆ. ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಒತ್ತಡವನ್ನು ನಿವಾರಿಸುತ್ತದೆ.

ಸುಪ್ತ ಬದ್ಧ ಕೋನಾಸನ:

ಇದು ದೇಹದ ಸಂಪೂರ್ಣ ವಿಶ್ರಾಂತಿಗೆ ಸಹಾಯ ಮಾಡುತ್ತದೆ. ಏಕೆಂದರೆ ಈ ಆಸನ ಮಾಡಲು ಬೆನ್ನಿನ ಮೇಲೆ ಮಲಗಬೇಕು. ಇದು ಕಿಬ್ಬೊಟ್ಟೆಯ ಅಂಗಗಳನ್ನು ಉತ್ತೇಜಿಸುತ್ತದೆ ಮತ್ತು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಇದು ಒಳ ತೊಡೆಗಳನ್ನು ಸಹ ವಿಸ್ತರಿಸುತ್ತದೆ.

ಇದನ್ನೂ ಓದಿ: Lok Sabha Election Date: ಏಪ್ರಿಲ್​​ 16ಕ್ಕೆ ಲೋಕಸಭೆ ಚುನಾವಣೆ? ಚುನಾವಣಾ ಆಯೋಗದ ಸ್ಪಷ್ಟನೆ ಇಲ್ಲಿದೆ

ಬಾಲಾಸನ:

ಮಗುವಿನ ಭಂಗಿಯು ಅತ್ಯಂತ ವಿಶ್ರಾಂತಿ ಭಂಗಿಯಾಗಿದ್ದು ಇದು ಮುಟ್ಟಿನ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮಗುವಿನ ಭಂಗಿಯು ನಿಮ್ಮ ಬೆನ್ನಿನ ಜೋಡಣೆಗೆ ಸಹಾಯ ಮಾಡುತ್ತದೆ. ಇದು ಬೆನ್ನಿನ ಪ್ರದೇಶದಲ್ಲಿನ ನೋವನ್ನು ನಿವಾರಿಸಲು ಅನುವು ಮಾಡಿಕೊಡುತ್ತದೆ. ಮನಸ್ಸನ್ನು ರಿಲ್ಯಾಕ್ಸ್ ಮಾಡಲು ಇದು ಸಹಕಾರಿಯಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ