Personal Hygiene: ದೇಹದ ಈ ಮೂರು ಭಾಗಗಳನ್ನು ಸ್ವಚ್ಛಗೊಳಿಸುವುದು ತುಂಬಾ ಮುಖ್ಯ

|

Updated on: May 29, 2024 | 7:27 PM

ಪ್ರತಿಯೊಬ್ಬರು ದಿನಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಸ್ನಾನ ಮಾಡಿದರೂ ಕೂಡ ದೇಹದ ಈ ಮೂರು ಭಾಗಗಳಿಗೆ ಹೆಚ್ಚಿನ ಗಮನ ಕೊಡುವುದಿಲ್ಲ. ಇದು ಚರ್ಮದ ಮೇಲೆ ಬ್ಯಾಕ್ಟೀರಿಯಾದ ರಚನೆ, ಫ್ಲಾಕಿ ಚರ್ಮ ಮತ್ತು ಕೆಲವು ಗಂಭೀರವಾದ ಚರ್ಮದ ಸೋಂಕುಗಳಿಗೆ ಕಾರಣವಾಗಬಹುದು. ದೇಹದ ಆ ಮೂರು ಭಾಗಗಳು ಯಾವುವು? ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಚರ್ಮಶಾಸ್ತ್ರಜ್ಞರು ತಿಳಿಸಿರುವ ಪ್ರಮುಖ ಅಂಶಗಳು ಇಲ್ಲಿವೆ.

Personal Hygiene: ದೇಹದ ಈ ಮೂರು ಭಾಗಗಳನ್ನು ಸ್ವಚ್ಛಗೊಳಿಸುವುದು ತುಂಬಾ ಮುಖ್ಯ
Personal Hygiene
Follow us on

ಶುಚಿತ್ವ ಮತ್ತು ವೈಯಕ್ತಿಕ ನೈರ್ಮಲ್ಯ(Personal hygiene)ವು ನಿಮ್ಮನ್ನು ರೋಗ ಮುಕ್ತವಾಗಿರಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬರು ದಿನಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಸ್ನಾನ ಮಾಡಿದರೂ ಕೂಡ ದೇಹದ ಈ ಮೂರು ಭಾಗಗಳಿಗೆ ಹೆಚ್ಚಿನ ಗಮನ ಕೊಡುವುದಿಲ್ಲ. ಇದು ಚರ್ಮದ ಮೇಲೆ ಬ್ಯಾಕ್ಟೀರಿಯಾದ ರಚನೆ, ಫ್ಲಾಕಿ ಚರ್ಮ ಮತ್ತು ಕೆಲವು ಗಂಭೀರವಾದ ಚರ್ಮದ ಸೋಂಕುಗಳಿಗೆ ಕಾರಣವಾಗಬಹುದು. ದೇಹದ ಆ ಮೂರು ಭಾಗಗಳು ಯಾವುವು? ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಚರ್ಮಶಾಸ್ತ್ರಜ್ಞರು ತಿಳಿಸಿರುವ ಪ್ರಮುಖ ಅಂಶಗಳು ಇಲ್ಲಿವೆ.

ದೇಹದ ಈ ಮೂರು ಭಾಗಗಳನ್ನು ಸರಿಯಾಗಿ ಸ್ವಚ್ಛಗೊಳಿಸಿ:

ಕಿವಿಯ ಹಿಂಭಾಗ:

ಹೆಚ್ಚಿನ ಜನರು ಕಿವಿಯ ಹಿಂದೆ ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ ಎಂದು ಚರ್ಮರೋಗ ತಜ್ಞರು ಹೇಳುತ್ತಾರೆ. ಆದ್ದರಿಂದ ಕಿವಿಯ ಹಿಂದೆ ಬೆರಳಿಂದ ಉಜ್ಜಬೇಕು ಮತ್ತು ಬರುವ ವಾಸನೆಯನ್ನು ಗಮನಿಸಬೇಕು. ಕಿವಿಗಳ ಹಿಂದೆ ತಲೆಹೊಟ್ಟು ಮತ್ತು ಚರ್ಮದ ಶುಷ್ಕತೆ ಸಾಮಾನ್ಯವಾಗಿರುತ್ತದೆ. ಕೆಲವೊಮ್ಮೆ ಕಿವಿಯ ಹಿಂದೆ ಬೆರಳನ್ನು ಉಜ್ಜಿದಾಗಲೂ ಬೆರಳಿನ ಮೇಲೆ ಕಪ್ಪು ತ್ಯಾಜ್ಯ ಸಂಗ್ರಹವಾಗುವುದನ್ನು ಗಮನಿಸಬಹುದು. ಆದ್ದರಿಂದ ಪ್ರತೀ ಸ್ನಾನದ ನಂತರ ಒದ್ದೆ ಟವೆಲ್​ನಿಂದ ಕಿವಿಯ ಹಿಂಭಾಗದಲ್ಲಿ ಕೊಳೆ ನಿಲ್ಲದಂತೆ ಸ್ವಚ್ಛಗೊಳಿಸಿ.

ಉಗುರುಗಳ ಒಳಗೆ:

ಅನೇಕ ಜನರು ಉಗುರುಗಳ ಅಡಿಯಲ್ಲಿ ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ. ಆದ್ದರಿಂದ, ಕೊಳಕು ಮತ್ತು ಬ್ಯಾಕ್ಟೀರಿಯಾ ತೆಗೆದುಹಾಕಲು ಸರಿಯಾಗಿ ಸ್ಕ್ರಬ್ ಮಾಡುವುದು ಮುಖ್ಯ. ಉಗುರುಗಳ ಕೆಳಗೆ ಸರಿಯಾಗಿ ಸ್ವಚ್ಛಗೊಳಿಸಲು ಸೋಪ್ ಅನ್ನು ಸಹ ಬಳಸಬಹುದು. ಉಗುರುಗಳ ಒಳಭಾಗದಲ್ಲಿರುವ ಕೊಳೆ ನೀವು ಸೇವಿಸುವ ಆಹಾರದ ಜೊತೆಗೆ ಹೊಟ್ಟೆಯನ್ನು ಸೇರಿ ಸಾಕಷ್ಟು ಆರೋಗ್ಯ ಸಮಸ್ಯೆಯನ್ನುಂಟು ಮಾಡಬಹುದು.

ಇದನ್ನೂ ಓದಿ: ಕೋವಿಡ್ ನಂತರ ಮಕ್ಕಳಲ್ಲಿ ಹೆಚ್ಚುತ್ತಿದೆ ಆರೋಗ್ಯ ಸಮಸ್ಯೆಗಳು; ಸಮೀಕ್ಷೆ

ಹೊಕ್ಕುಳು:

ದೇಹದ ಕೊಳಕು ಮತ್ತು ಬೆವರು ಸಾಮಾನ್ಯವಾಗಿ ಹೊಕ್ಕುಳಲ್ಲಿ ಸಂಗ್ರಹವಾಗುತ್ತದೆ. ಹೊಕ್ಕುಳಲ್ಲಿ ಸುಮಾರು 67 ವಿಧದ ಬ್ಯಾಕ್ಟೀರಿಯಾಗಳಿರುತ್ತವೆ ಎಂದು ಸಂಶೋಧನೆಗಳು ಬಹಿರಂಗಪಡಿಸಿದೆ. ಆದ್ದರಿಂದ ಪ್ರತೀ ಭಾರಿ ಸ್ನಾನ ಮಾಡುವಾಗಲೂ ಹೊಕ್ಕುಳನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು ಎಂದು ಚರ್ಮಶಾಸ್ತ್ರಜ್ಞರು ಎಚ್ಚರಿಸುತ್ತಾರೆ.

ದೇಹದ ಈ ಮೂರು ಭಾಗಗಳಲ್ಲಿ ಸೋಂಕು ರೂಪುಗೊಂಡರೆ, ಅದು ಈ ಕೆಳಗಿನ ಲಕ್ಷಣಗಳಿಗೆ ಕಾರಣವಾಗಬಹುದು:

  • ಕೀವು ಸೋರಿಕೆ
  • ಊತ
  • ನೋವು
  • ತುರಿಕೆ

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: