Home Remedies: ಪಿತ್ತದೋಶ ನಿವಾರಣೆ ಮಾಡಿಕೊಳ್ಳಲು ಈ ಸುಲಭ ವಿಧಾನ ಅನುಸರಿಸಿ
ವರ್ಷದ ಯಾವುದೇ ಸಮಯವಾದರೂ ಸರಿ ಎಳನೀರನ್ನು ಸಂತ್ರಪ್ತಿಯಿಂದ ಕುಡಿಯಬಹುದು. ಅದು ತಕ್ಷಣ ಒಂದು ರೀತಿಯ ಉಲ್ಲಾಸ ನೀಡುತ್ತದೆ ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಎಳನೀರನ್ನು ಕುಡಿದು ಬಿಸಾಡುವಾಗ ಅದರೊಳಗಿರುವ ನೆಟ್ಟಿಯನ್ನು ತಿನ್ನುವುದಿಲ್ಲ. ನೆಟ್ಟಿ ಎಂದರೆ ಕಾಯಿಯ ತಿರುಳಿರುವ ಕೆಳ ಪದರ ಇದು ಸಾಮಾನ್ಯವಾಗಿ ಒಗರಾಗಿರುತ್ತದೆ. ಹಾಗಾದರೆ ಇದರ ಪ್ರಯೋಜನವೇನು? ಇಲ್ಲಿದೆ ಮಾಹಿತಿ.
ಎಳನೀರು ದೇಹಕ್ಕೆ ನೀಡುವಷ್ಟು ತಾಜಾತನ ಬೇರೆ ಯಾವ ಪಾನೀಯವೂ ನೀಡದು. ವರ್ಷದ ಯಾವುದೇ ಸಮಯವಾದರೂ ಸರಿ ಎಳನೀರನ್ನು ಸಂತ್ರಪ್ತಿಯಿಂದ ಕುಡಿಯಬಹುದು. ಅದು ತಕ್ಷಣ ಒಂದು ರೀತಿಯ ಉಲ್ಲಾಸ ನೀಡುತ್ತದೆ ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಎಳನೀರನ್ನು ಕುಡಿದು ಬಿಸಾಡುವಾಗ ಅದರೊಳಗಿರುವ ನೆಟ್ಟಿಯನ್ನು ತಿನ್ನುವುದಿಲ್ಲ. ನೆಟ್ಟಿ ಎಂದರೆ ಕಾಯಿಯ ತಿರುಳಿರುವ ಕೆಳ ಪದರ ಇದು ಸಾಮಾನ್ಯವಾಗಿ ಒಗರಾಗಿರುತ್ತದೆ. ಹಾಗಾದರೆ ಇದರ ಪ್ರಯೋಜನವೇನು? ಇಲ್ಲಿದೆ ಮಾಹಿತಿ.
ಕೆಲವೆಡೆ ಎಳನೀರನ್ನು ಬೋಂಡ ಜ್ಯೂಸ್ ಎಂದು ಕರೆಯಲಾಗುತ್ತದೆ. ಅದರಲ್ಲಿರುವ ಕಾಯಿಯನ್ನು ಗಂಜಿ ಎನ್ನುತ್ತಾರೆ. ಇವೆರಡನ್ನೂ ಸೇವಿಸಿದ ಬಳಿಕ ನಾವು ಅದನ್ನು ಬಿಸಾಡುತ್ತೇವೆ. ಏಕೆಂದರೆ ನಮಗೆ ಇದರ ಇನ್ನಿತರ ಪ್ರಯೋಜನಗಳ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಈ ಕಾಯಿಯನ್ನು ತಿಂದ ಮೇಲೆ ಒಂದು ಬಿಳಿ ಪದರವಿರುತ್ತದೆ ಅದನ್ನು ನೆಟ್ಟಿ ಎಂದು ಕರೆಯಲಾಗುತ್ತದೆ. ಬೇರೆ ಬೇರೆ ಪ್ರದೇಶಗಳಲ್ಲಿ ಇದನ್ನು ವಿವಿಧ ಹೆಸರುಗಳಿಂದ ಕರೆಯಬಹುದು. ಇದು ರುಚಿಯಲ್ಲಿ ಹೆಚ್ಚಾಗಿ ಒಗರಾಗಿರುತ್ತದೆ. ಹಾಗಾಗಿ ಇದನ್ನು ತಿನ್ನುವುದು ಬಿಡಿ, ಕಂಡರೆ ಮೂಗು ಮೂರಿಯುವರೆ ಜಾಸ್ತಿ. ಹಾಗಾಗಿ ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ.
ಇದನ್ನೂ ಓದಿ: ಊಟದ ಬಳಿಕ ನಡೆಯುವುದು ದೇಹಕ್ಕೆ ಎಷ್ಟು ಮುಖ್ಯ ಗೊತ್ತಾ?
ಇದನ್ನು ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನವೇನು?
- ಈ ನೆಟ್ಟಿಯನ್ನು ತಿನ್ನುವುದರಿಂದ ಪಿತ್ತದೋಶವಿದ್ದಲ್ಲಿ ಶಮನಗೊಳ್ಳುತ್ತದೆ.
- ಇದರಲ್ಲಿ ಆಂಟಿ – ಆಕ್ಸಿಡೆಂಟ್ ಹೆಚ್ಚಾಗಿರುತ್ತದೆ. ಹಾಗಾಗಿ ದೇಹಕ್ಕೆ ತುಂಬಾ ಒಳ್ಳೆಯದು.
- ಇದು ದೇಹವನ್ನು ತಂಪಾಗಿರಿಸುತ್ತದೆ. ಬೇಸಿಗೆ ಕಾಲದಲ್ಲಿ ಇದನ್ನು ತಪ್ಪದೆ ಸೇವನೆ ಮಾಡಬೇಕು.
- ಕೆಲವರ ಬಾಯಲ್ಲಿ ಹಿಟ್ ನಿಂದಾಗಿ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ, ಇದರ ಸೇವನೆಯಿಂದ ಅದಕ್ಕೆ ಮುಕ್ತಿ ಸಿಗುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ