ಪೈಲ್ಸ್ ಇರುವವರು ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ಸೇವನೆ ಮಾಡ್ಲೇಬಾರ್ದು ಎನ್ನುತ್ತಾರೆ ಡಾ. ಸಲೀಲ್

ಇತ್ತೀಚಿನ ದಿನಗಳಲ್ಲಿ ಮೂಲವ್ಯಾಧಿ ಮತ್ತು ಫಿಸ್ಟುಲಾಗಳಂತಹ ಸಮಸ್ಯೆಗಳು ಹೆಚ್ಚಾಗುತ್ತಿದೆ. ಹಾಗಾಗಿ ಪೈಲ್ಸ್ ಇರುವವರು ತಮ್ಮ ಆಹಾರ ಪದ್ಧತಿಯಲ್ಲಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಮಾತ್ರವಲ್ಲ ಕೆಲವು ಸಲಹೆಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು. ಏಕೆಂದರೆ ನೀವು ಸೇವನೆ ಮಾಡುವ ಕೆಲವು ಆಹಾರಗಳು ಸಮಸ್ಯೆಗಳನ್ನು ಕಡಿಮೆ ಮಾಡಬಹುದು, ಆದರೆ ಇತರ ಕೆಲವು ಆಹಾರಗಳು ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸಬಹುದು. ಹಾಗಾಗಿ ಡಾ. ಸಲೀಲ್ ಯಾದವ್ ಅವರು ಪೈಲ್ಸ್ ಇದ್ದವರು ಯಾವ ಆಹಾರಗಳನ್ನು ಸೇವನೆ ಮಾಡಬಾರದು ಎಂಬುದನ್ನು ತಿಳಿಸಿದ್ದು ನೀವು ಕೂಡ ಈ ಸರಳ ಸಲಹೆ ಪಾಲಿಸುವ ಮೂಲಕ ಮೂಲವ್ಯಾಧಿ ಮತ್ತು ಫಿಸ್ಟುಲಾಗಳಂತಹ ಸಮಸ್ಯೆಗಳಿಂದ ದೂರವಿರಬಹುದು.

ಪೈಲ್ಸ್ ಇರುವವರು ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ಸೇವನೆ ಮಾಡ್ಲೇಬಾರ್ದು ಎನ್ನುತ್ತಾರೆ ಡಾ. ಸಲೀಲ್
Hemorrhoids

Updated on: Jul 18, 2025 | 3:25 PM

ಇತ್ತೀಚಿನ ದಿನಗಳಲ್ಲಿ ಮಲಬದ್ಧತೆಯ (Constipation) ಸಮಸ್ಯೆ ಹಲವರನ್ನು ಕಾಡುತ್ತಿದೆ. ಏನೇ ತಿಂದರೂ, ಜೀರ್ಣಕ್ರಿಯೆ ಸರಿಯಾಗಿ ಆಗದೆಯೇ ಕರುಳಿನಲ್ಲಿ ತೊಂದರೆಗಳು ಕಂಡುಬರುತ್ತದೆ. ಜೊತೆಗೆ ಈ ರೀತಿ ಸಮಸ್ಯೆಯ ಬಗ್ಗೆ ಜನ ಮಾತನಾಡಲು ಅಥವಾ ಅದನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಹಿಂಜರಿಯುತ್ತಾರೆ, ಇದರಿಂದ ಈ ರೀತಿಯ ಸಮಸ್ಯೆ ಮತ್ತಷ್ಟು ಹದಗೆಡುತ್ತದೆ. ಇನ್ನು ಮೂಲವ್ಯಾಧಿ (Piles) ಇರುವವರು ಕೂಡ ಹೇಳಿದರೆ ಯಾರಾದರೂ ಅಪಹಾಸ್ಯ ಮಾಡಿದರೆ ಕಷ್ಟ ಎಂದು ಅದನ್ನು ಮುಚ್ಚಿಡುತ್ತಾರೆ. ಆದರೆ ಇಂತಹ ಆರೋಗ್ಯ ಸಮಸ್ಯೆಗಳನ್ನು ಎಂದಿಗೂ ನಿರ್ಲಕ್ಷಿಸಬಾರದು. ಅಲ್ಲದೆ ಮೂಲವ್ಯಾಧಿ (Hemorrhoids) ಮತ್ತು ಫಿಸ್ಟುಲಾಗಳಂತಹ (ಗುದನಾಳದ ಮಾರ್ಗ) ಸಮಸ್ಯೆಗಳಿರುವವರು ತಮ್ಮ ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕಾಗುತ್ತದೆ. ಜೊತೆಗೆ ಕೆಲವು ಆಹಾರಗಳಿಂದ ದೂರವಿರುವುದು ಉತ್ತಮ ಎಂದು ಡಾ. ಸಲೀಲ್ ಯಾದವ್ (Dr. Salil Yadav) ಹೇಳಿದ್ದಾರೆ. ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಈ ವಿಷಯವಾಗಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದು ಮೂಲವ್ಯಾಧಿ ಮತ್ತು ಫಿಸ್ಟುಲಾ ಇರುವವರು ಯಾವ ಆಹಾರವನ್ನು ತಿನ್ನಬಾರದು ಎಂಬುದನ್ನು ತಿಳಿಸಿದ್ದಾರೆ. ಹಾಗಾದರೆ ಆ ಆಹಾರಗಳು ಯಾವವು? ಯಾಕೆ ಸೇವನೆ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

ಮೂಲವ್ಯಾಧಿ ಮತ್ತು ಫಿಸ್ಟುಲಾಗಳಂತಹ ಸಮಸ್ಯೆಗಳಿರುವವರು ತಮ್ಮ ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಏಕೆಂದರೆ ನೀವು ಏನನ್ನು ತಿನ್ನುತ್ತಿದ್ದೀರಿ ಎಂಬುದರ ಆಧಾರದ ಮೇಲೆ ಸಮಸ್ಯೆಯ ತೀವ್ರತೆ ಮತ್ತು ಅದನ್ನು ಎಷ್ಟು ಕಡಿಮೆ ಮಾಡಬಹುದು ಎಂಬುದನ್ನು ನಿರ್ಧರಿಸಬಹುದು ಎಂದು ವೈದ್ಯರು ಹೇಳುತ್ತಾರೆ. ನೀವು ಸೇವನೆ ಮಾಡುವ ಕೆಲವು ಆಹಾರಗಳು ಸಮಸ್ಯೆಗಳನ್ನು ಕಡಿಮೆ ಮಾಡಬಹುದು, ಆದರೆ ಇತರ ಕೆಲವು ಆಹಾರಗಳು ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸಬಹುದು. ಅಂತಹ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಉರಿಯುವ ಸಂವೇದನೆ ತಕ್ಷಣ ಹೆಚ್ಚಾಗಬಹುದು. ದೇಹದಾದ್ಯಂತ ಹೆಚ್ಚಿನ ಉರಿಯೂತ ಉಂಟಾಗಬಹುದು. ಪರಿಣಾಮವಾಗಿ, ಸೇವಿಸಿದ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ, ಇದು ಮಲಬದ್ಧತೆಗೆ ಕಾರಣವಾಗುತ್ತದೆ ಮಾತ್ರವಲ್ಲ ಮೂಲವ್ಯಾಧಿ ಮತ್ತು ಫಿಸ್ಟುಲಾಗಳಂತಹ ಸಮಸ್ಯೆಗಳನ್ನು ನಿವಾರಿಸಲು ಇನ್ನಷ್ಟು ಕಷ್ಟಕರವಾಗಿಸುತ್ತದೆ.

ಇದನ್ನೂ ಓದಿ
ಕೇವಲ 5 ಮುನ್ನೆಚ್ಚರಿಕೆಗಳನ್ನು ಅನುಸರಿಸಿ, ಹೃದಯಾಘಾತ ಸಂಭವಿಸುವುದಿಲ್ಲ
ಮಧುಮೇಹಿಗಳು ಯಾವ ತರಕಾರಿ ತಿನ್ನಬಾರದು ಗೊತ್ತಾ?
ಪೇರಳೆ ಹಣ್ಣು ಇಷ್ಟನಾ? ಆದ್ರೆ ನಿಮಗೆ ಈ ಖಾಯಿಲೆ ಇದ್ರೆ ತಿನ್ನಬೇಡಿ
ರಾತ್ರಿ ಮಲಗುವ ಮೊದಲು ಈ ಕೆಲಸಗಳನ್ನು ತಪ್ಪಿಯೂ ಮಾಡಬೇಡಿ

ಪೈಲ್ಸ್ ಇರುವವರು ಈ ಆಹಾರಗಳನ್ನು ಸೇವನೆ ಮಾಡಬೇಡಿ

ಡಾ. ಸಲೀಲ್ ಯಾದವ್ ತಿಳಿಸಿರುವ ಮಾಹಿತಿ ಪ್ರಕಾರ, ಮಸಾಲೆ ಪದಾರ್ಥಗಳು ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಅವು ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡ ಹೇರುತ್ತವೆ ಮತ್ತು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳುವುದಕ್ಕೆ ಬಿಡುವುದಿಲ್ಲ ಇವುಗಳನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಉರಿ ಹೆಚ್ಚಾಗುತ್ತದೆ. ಇದಲ್ಲದೆ, ಅನಿಲವನ್ನು ಹೊರಹಾಕಲು ಸಾಧ್ಯವಾಗದಿರುವುದು ನೋವಿಗೆ ಕಾರಣವಾಗಬಹುದು. ಇವು ಫಿಸ್ಟುಲಾ ಮತ್ತು ಮೂಲವ್ಯಾಧಿಯಂತಹ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಇದಲ್ಲದೆ, ಕೆಂಪು ಮಾಂಸವು ಜೀರ್ಣಿಸಿಕೊಳ್ಳಲು ಸುಲಭವಲ್ಲದ ಕಾರಣ ಅದನ್ನು ತಿನ್ನಬಾರದು. ಇದಕ್ಕೆ ಕಾರಣವೆಂದರೆ ಇದರಲ್ಲಿರುವ ಕಡಿಮೆ ಫೈಬರ್, ಇದು ಮಲಬದ್ಧತೆಗೆ ಕಾರಣವಾಗಬಹುದು. ಆದ್ದರಿಂದ, ಇವುಗಳಿಂದ ಸಾಧ್ಯವಾದಷ್ಟು ದೂರವಿರುವುದು ಉತ್ತಮ. ಹೆಚ್ಚುವರಿಯಾಗಿ, ಹುರಿದ ಆಹಾರಗಳನ್ನು ಸೇವನೆ ಮಾಡಬಾರದು. ಏಕೆಂದರೆ ಅವು ಜೀರ್ಣಕ್ರಿಯೆಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತವೆ.

ಡಾ. ಸಲೀಲ್ ಯಾದವ್ ಅವರ ವಿಡಿಯೋ ಇಲ್ಲಿದೆ ನೋಡಿ:

ಆಲ್ಕೋಹಾಲ್‌, ಕೆಫೀನ್ ಅಧಿಕವಾಗಿರುವ ಪಾನೀಯ

ಕೆಫೀನ್ ಅಧಿಕವಾಗಿರುವ ಪಾನೀಯಗಳನ್ನು ಆದಷ್ಟು ತಪ್ಪಿಸಬೇಕು. ಅಂದರೆ, ಚಹಾ ಅಥವಾ ಕಾಫಿಯಂತಹ ಪಾನೀಯಗಳಿಂದ ದೂರವಿರಬೇಕು. ಏಕೆಂದರೆ ಕೆಫೀನ್ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ಇದು ಕರುಳಿನ ಚಲನೆಗೆ ಸಮಸ್ಯೆ ಉಂಟುಮಾಡುತ್ತದೆ. ಜೊತೆಗೆ ಆಲ್ಕೋಹಾಲ್‌ನಿಂದ ಕೂಡ ದೂರವಿರಬೇಕು. ಆಲ್ಕೋಹಾಲ್‌ನಲ್ಲೂ ದೇಹವು ಬೇಗನೆ ನಿರ್ಜಲೀಕರಣಗೊಳ್ಳುತ್ತದೆ. ಇದು ಕರುಳಿನ ಆರೋಗ್ಯವನ್ನು ಹಾನಿಗೊಳಿಸುತ್ತದೆ. ದೇಹದಲ್ಲಿ ಉರಿಯೂತ ಹೆಚ್ಚಾಗುತ್ತದೆ, ಇದು ವಿವಿಧ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ, ಮೂಲವ್ಯಾಧಿ ಇರುವವರು ಕೆಫೀನ್ ಅಧಿಕವಾಗಿರುವ ಪಾನೀಯ ಮತ್ತು ಆಲ್ಕೋಹಾಲ್‌ನಿಂದ ದೂರವಿರುವುದು ಉತ್ತಮ. ಚಿಪ್ಸ್ ಮತ್ತು ಬಿಸ್ಕತ್ತುಗಳಂತಹ ಸಂಸ್ಕರಿಸಿದ ಆಹಾರಗಳನ್ನು ಸಹ ಸಾಧ್ಯವಾದಷ್ಟು ತಪ್ಪಿಸಬೇಕು. ಅವುಗಳಲ್ಲಿ ಫೈಬರ್ ಅಂಶ ಕಡಿಮೆ ಇರುವುದರಿಂದ ಅವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತವೆ.

ಬ್ರೆಡ್, ಉಪ್ಪಿನಕಾಯಿ, ತಂಪು ಪಾನೀಯ

ಬಿಳಿ ಬ್ರೆಡ್ ಅನ್ನು ಅಪ್ಪಿತಪ್ಪಿಯೂ ಸೇವಿಸಬಾರದು. ಇದರಲ್ಲಿ ಫೈಬರ್ ಇರುವುದಿಲ್ಲ. ಪರಿಣಾಮವಾಗಿ, ಕರುಳಿನ ಆರೋಗ್ಯ ಹಾಳಾಗುತ್ತದೆ. ಜೊತೆಗೆ ಸಾಧ್ಯವಾದಷ್ಟು ಡೈರಿ ಉತ್ಪನ್ನಗಳನ್ನು ಸಹ ತಪ್ಪಿಸಬೇಕು. ಅಂದರೆ ಚೀಸ್, ಕ್ರೀಮ್‌, ಪನೀರ್ ಇತ್ಯಾದಿ ಆಹಾರಗಳನ್ನು ಸೇವಿಸಬಾರದು. ಅವು ಹೊಟ್ಟೆಯಲ್ಲಿ ಅನಿಲ ಮತ್ತು ಉಬ್ಬರದಂತಹ ಸಮಸ್ಯೆಗಳಿಗೆ ಕಾರಣವಾಗಿ ಮಲಬದ್ಧತೆಗೆ ಕಾರಣವಾಗಬಹುದು. ಹಾಗಾಗಿ ಈಗಾಗಲೇ ಕರುಳಿನ ಸಮಸ್ಯೆಗಳನ್ನು ಹೊಂದಿರುವವರು ಈ ಮೂರು ವಸ್ತುಗಳಿಂದ ಸಾಧ್ಯವಾದಷ್ಟು ದೂರವಿರಬೇಕು. ಜೊತೆಗೆ ಉಪ್ಪಿನಕಾಯಿಗಳ ಹತ್ತಿರವೂ ಹೋಗಬಾರದು. ಅವುಗಳಲ್ಲಿ ಅತಿಯಾದ ಮಸಾಲೆ ಮತ್ತು ಉಪ್ಪಿನ ಅಂಶವಿರುತ್ತದೆ. ಅವುಗಳನ್ನು ತಿನ್ನುವುದರಿಂದ ಕರುಳಿನ ಮೇಲೆ ಪರಿಣಾಮ ಬೀರುತ್ತದೆ. ಇದರ ಜೊತೆಗೆ ಕಾರ್ಬೊನೇಟೆಡ್ ಪಾನೀಯಗಳು, ಅಂದರೆ, ತಂಪು ಪಾನೀಯಗಳನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಹಾಲಿನ ಚಾಕೊಲೇಟ್‌ಗಳನ್ನು ಸಹ ನಿಲ್ಲಿಸಬೇಕು. ಏಕೆಂದರೆ ಕಡಿಮೆ ಫೈಬರ್ ಹೊಂದಿರುವ ಈ ಚಾಕೊಲೇಟ್‌ಗಳಲ್ಲಿ ಹೆಚ್ಚಿನ ಸಕ್ಕರೆ ಅಂಶವಿದ್ದು. ಕರುಳಿನ ಆರೋಗ್ಯಕ್ಕೆ ಒಳ್ಳೆಯದಲ್ಲ.

ಇದನ್ನೂ ಓದಿ: ಮೂತ್ರದಲ್ಲಿ ರಕ್ತ ಬರುತ್ತಾ? ಮೂಲವ್ಯಾಧಿ ಇದ್ಯಾ? ಚಿಂತೆ ಬೇಡ! ಬೆಳಿಗ್ಗೆ ಎದ್ದು ಈ ತರಕಾರಿಯ ಜ್ಯೂಸ್ ಕುಡಿಯಿರಿ

ಬಾಳೆ ಹಣ್ಣುಗಳು

ವೈದ್ಯರು ಹೇಳುವ ಪ್ರಕಾರ, ಮೂಲವ್ಯಾಧಿ ಇರುವವರು ಬಾಳೆಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಅವು ಮಲಬದ್ಧತೆಗೆ ಕಾರಣವಾಗಬಹುದು ಜೊತೆಗೆ ಅಜೀರ್ಣದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಈಗಾಗಲೇ ಔಷಧಿಗಳೊಂದಿಗೆ ಈ ರೀತಿಯ ಸಮಸ್ಯೆಗಳನ್ನು ಗುಣಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಈ ಆಹಾರ ಪದ್ಧತಿಗಳ ಬಗ್ಗೆಯೂ ಜಾಗರೂಕರಾಗಿರಬೇಕು. ದೇಹವು ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳುವುದರ ಜೊತೆಗೆ ಜೀರ್ಣಕ್ರಿಯೆಗೆ ಅಗತ್ಯವಾದ ಫೈಬರ್ ಅನ್ನು ಒದಗಿಸುವುದು ಬಹಳ ಮುಖ್ಯವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ