ನವದೆಹಲಿ: ನಮ್ಮ ದೇಹದ ಆರೋಗ್ಯಕ್ಕೆ ವ್ಯಾಯಾಮ, ವಾಕ್ (jogging), ಕ್ರೀಡೆ-ಒಟ್ಟಿನಲ್ಲಿ ದೈಹಿಚ ಚಟುವಟಿಕೆಗಳು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಿರುವ ಜನ ಒಂದಿಲ್ಲೊಂದು ದೈಹಿಕ ಚಟುವಟಿಕೆಯಲ್ಲಿ (physical exercises) ತೊಡಗುತ್ತಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರು ಹೇಳುವ ಪ್ರಕಾರ ಬ್ಯಾಡ್ಮಿಂಟನ್ (Badminton) ಆಟ ನಮ್ಮ ದೇಹಕ್ಕೆ ತೀವ್ರ ಸ್ವರೂಪದ ಕಸರತ್ತು ನೀಡುವ ಕ್ರೀಡೆಯಾಗಿದೆ. ವ್ಯಕ್ತಿಯೊಬ್ಬ ಬ್ಯಾಡ್ಮಿಂಟನ್ ಆಟದಲ್ಲಿ ತನ್ನನ್ನು ತೊಡಗಿಸಿಕೊಂಡಾಗ ಅವನ ದೇಹದ ಎಲ್ಲ ಸ್ನಾಯುಗಳಿಗೆ ಸ್ಟ್ರೆಚ್ಚಿಂಗ್ ಕಸರತ್ತು ಸಿಗುತ್ತದೆ. ತಜ್ಞರು ಬ್ಯಾಡ್ಮಿಂಟನ್ ಆಡುವುದರಿಂದ ದೇಹಕ್ಕೆ ಸಿಗುವ ಪ್ರಯೋಜನಗಳು ಯಾವ್ಯಾವು ಅನ್ನೋದನ್ನು ಪಟ್ಟಿ ಮಾಡಿದ್ದಾರೆ.
1. ಬ್ಯಾಡ್ಮಿಂಟನ್ ಆಟ ನಮ್ಮ ದೇಹದ ಫ್ಲೆಕ್ಸಿಬಿಲಿಟಿಯನ್ನು ಹೆಚ್ಚಿಸುತ್ತದೆ: ನೀವು ಬ್ಯಾಡ್ಮಿಂಟನ್ ಆಡಲು ಆರಂಭಿಸಿದಾಗ ಅದು ನಿಮ್ಮ ದೇಹ ಹೆಚ್ಚೆಚ್ಚು ಸ್ಟ್ರೆಚ್ ಆಗುವ ಪ್ರಕ್ರಿಯೆಗೆ ಒಳಪಡಿಸುವುದರಿಂದ ಅದರಿಂದ ದೇಹದ ಫ್ಲೆಕ್ಸಿಬಿಲಿಟಿಯನ್ನು ಉತ್ತಮಪಡಿಸುತ್ತದೆ. ನಿಮ್ಮ ದೇಹ ಫ್ಲೆಕ್ಸಿಬಲ್ ಆದಾಗ ನಿಮ್ಮ ದೇಹದ ಚಲನವಲನಗಳು ಸರಾಗಗೊಳ್ಳುತ್ತವೆ ಮತ್ತು ನೀವು ಗಾಯಗೊಳ್ಳುವ, ಸ್ನಾಯು ಸೆಳೆತಕ್ಕೆ ಒಳಗಾಗುವ ಸಾಧ್ಯತೆ ಕಮ್ಮಿಯಾಗುತ್ತದೆ.
2. ಬ್ಯಾಡ್ಮಿಂಟನ್ ಕ್ರೀಡೆ ದೇಹದ ಚಯಾಪಚಯ (ಮೆಟಾಬೊಲಿಸಮ್) ಕ್ರಿಯೆಯನ್ನು ಉತ್ತಮಪಡಿಸುತ್ತದೆ: ನೀವು ಬ್ಯಾಡ್ಮಿಂಟನ್ ಆಟವಾಡಲು ಪ್ರಾರಂಭಿಸಿದಾಗ ನಿಮ್ಮ ದೇಹದಿಂದ ಹೆಚ್ಚಿನ ಪ್ರಮಾಣದಲ್ಲಿ ಬೆವರು ಹೊರಬರುತ್ತದೆ, ಮತ್ತು ಹೆಚ್ಚು ಕ್ಯಾಲೊರಿಗಳು ಬಳಕೆಯಾಗುತ್ತವೆ (ಬರ್ನ್ ಆಗುತ್ತವೆ). ಆಗ ನಿಮ್ಮ ದೇಹಕ್ಕೆ ಹೆಚ್ಚು ಆಮ್ಲಜನಕ ಬೇಕಾಗುತ್ತದೆ ಮತ್ತು ಅದರಿಂದಾಗಿ ರಕ್ತ ಪರಿಚಲನೆ ಹೆಚ್ಚಾಗಿ ದೇಹದಲ್ಲಿ ನಡೆಯುವ ಚಯಾಪಚಯ ಕ್ರಿಯೆ ಉತ್ತಮಗೊಳ್ಳುತ್ತದೆ.
3. ಬ್ಯಾಡ್ಮಿಂಟನ್ ಆಟ ದೇಹತೂಕ ಕಡಿಮೆ ಮಾಡಿಕೊಳ್ಳಲು ನೆರವಾಗುತ್ತದೆ: ಬ್ಯಾಡ್ಮಿಂಟನ್ ಆಡುವಾಗ ನಿಮ್ಮ ದೇಹದಿಂದ ಅಧಿಕ ಪ್ರಮಾಣದಲ್ಲಿ ಬೆವರು ಹೊರಬರುವುದರಿಂದ ಹೆಚ್ಚು ಕ್ಯಾಲೊರಿಗಳು ಬರ್ನ್ ಆಗಿ ದೇಹದ ತೂಕ ಕಮ್ಮಿಯಾಗುತ್ತದೆ. ಈ ಆಟದಲ್ಲಿ ದೈಹಿಕ ಪರಿಶ್ರಮ ಹೆಚ್ಚಿರುವುದರಿಂದ ದೇಹದ ತೂಕ ತ್ವರಿತವಾಗಿ ಕಡಿಮೆಯಾಗಲಾರಂಭಿಸುತ್ತದೆ.
4. ಬ್ಯಾಡ್ಮಿಂಟನ್ ಆಟ ನಿಮ್ಮ ಹೃದಯವನ್ನು ಆರೋಗ್ಯವಾಗಿರಿಸುತ್ತದೆ: ಬ್ಯಾಡ್ಮಿಂಟನ್ ಆಡುವುದರಿಂದ ರಕ್ತ ಸಂಚಾರ ಹೆಚ್ಚುತ್ತದೆ ಮತ್ತು ನಿಮ್ಮ ಹೃದಯ ಹೆಚ್ಚೆಚ್ಚು ರಕ್ತವನ್ನು ಪಂಪ್ ಮಾಡುತ್ತದೆ. ಇದರಿಂದ ನಿಮ್ಮ ರಕ್ತನಾಳಗಳು ಸರಾಗಗೊಂಡು ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ.
5. ಬ್ಯಾಡ್ಮಿಂಟನ್ ಆಟ ನಿಮ್ಮ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ: ಬ್ಯಾಡ್ಮಿಂಟನ್ ಆಡುವುದರಿಂದ ನಿಮ್ಮ ದೇಹ ದಣಿಯುತ್ತದೆ ಹಾಗಾಗಿ ದಣಿದ ದೇದಕ್ಕೆ ಬೇಗ ಮತ್ತು ಸೊಂಪಾದ ನಿದ್ರೆ ಅವರಿಸಿಕೊಳ್ಳುತ್ತದೆ.
ಅದಕ್ಕೇ ನಾವು ಹೇಳಿದ್ದು, ನೀವಿನ್ನೂ ಬ್ಯಾಡ್ಮಿಂಟನ್ ಆಡುವುದನ್ನು ಆರಂಭಿಸಸಿಲ್ಲವಾದೆ ಕೂಡಲೇ ಶುರುವಿಟ್ಟುಕೊಳ್ಳಿ ಮಾರಾಯ್ರೇ.
ಇದನ್ನೂ ಓದಿ: Ashadam Special: ಆಷಾಢದಲ್ಲಿ ನುಗ್ಗೆ ಸೊಪ್ಪು ತಿನ್ನಬೇಕು ಅನ್ನುತ್ತಾರೆ! ಈ ವಾಡಿಕೆಯ ಹಿಂದೆ ಇದೆ ಆರೋಗ್ಯದ ರಹಸ್ಯ, ಏನದು?