Ashadam Special: ಆಷಾಢದಲ್ಲಿ ನುಗ್ಗೆ ಸೊಪ್ಪು ತಿನ್ನಬೇಕು ಅನ್ನುತ್ತಾರೆ! ಈ ವಾಡಿಕೆಯ ಹಿಂದೆ ಇದೆ ಆರೋಗ್ಯದ ರಹಸ್ಯ, ಏನದು?

Drumstick: ನುಗ್ಗೆ ಸೊಪ್ಪು ತಿನ್ನಬೇಕು, ಅದರಲ್ಲೂ ನಿಶ್ಚಿತವಾಗಿ ಆಷಾಢದಲ್ಲಿ ನುಗ್ಗೆ ಸೊಪ್ಪು ತಿನ್ನುವ ಸಂಪ್ರದಾಯ ಇದೆ. ಆದರೆ ಮೂಲ ಆಷಾಢ ಮಾಸದಲ್ಲಿ ನುಗ್ಗೆ ಸೊಪ್ಪು ಏಕೆ ತಿನ್ನಬೇಕು ಎಂದು ಪ್ರಶ್ನಿಸುವ ಆಧುನಿಕ ಭಾವನೆ ಉಳ್ಳವರಿಗಾಗಿ... ಈ ಮಾಹಿತಿ.

Ashadam Special: ಆಷಾಢದಲ್ಲಿ ನುಗ್ಗೆ ಸೊಪ್ಪು ತಿನ್ನಬೇಕು ಅನ್ನುತ್ತಾರೆ! ಈ ವಾಡಿಕೆಯ ಹಿಂದೆ ಇದೆ ಆರೋಗ್ಯದ ರಹಸ್ಯ, ಏನದು?
ಆಷಾಢದಲ್ಲಿ ನುಗ್ಗೆ ಸೊಪ್ಪು ತಿನ್ನಬೇಕು ಅನ್ನುತ್ತಾರೆ! ಈ ವಾಡಿಕೆಯ ಹಿಂದೆ ಇದೆ ಆರೋಗ್ಯದ ರಹಸ್ಯ, ಏನದು?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jul 06, 2022 | 6:06 AM

ನುಗ್ಗೆ ಸೊಪ್ಪು ತಿನ್ನಬೇಕು, ಅದರಲ್ಲೂ ನಿಶ್ಚಿತವಾಗಿ ಆಷಾಢದಲ್ಲಿ ನುಗ್ಗೆ ಸೊಪ್ಪು ತಿನ್ನುವ ಸಂಪ್ರದಾಯ ಇದೆ. ಆದರೆ ಮೂಲ ಆಷಾಢ ಮಾಸದಲ್ಲಿ ನುಗ್ಗೆ ಸೊಪ್ಪು ಏಕೆ ತಿನ್ನಬೇಕು ಎಂದು ಪ್ರಶ್ನಿಸುವ ಆಧುನಿಕ ಭಾವನೆ ಉಳ್ಳವರಿಗಾಗಿ… ಈ ಮಾಹಿತಿ.

ಆಷಾಢ ವಿಶೇಷ: ಆಷಾಢದಲ್ಲಿ ಮದುವೆಯಂತಹ ಶುಭ ಕಾರ್ಯಕ್ರಮಗಳು ನಡೆಯುವುದಿಲ್ಲ, ಆದರೆ ಈ ಆಷಾಢವು ಸಾಕಷ್ಟು ಸಂಭ್ರಮ, ವಿನೋದವನ್ನು ತರುತ್ತದೆ. ಹಳ್ಳಿಗಳಲ್ಲಿ ಗ್ರಾಮ ದೇವತೆಗಳಿಗೆ ಜಾತ್ರೆ, ರಾತ್ರೆ ವೇಳೆ ದೀಪಾಲಂಕಾರಗಳು ಹಿತಕರವಾದ ವಾತಾವರಣ ಸೃಜಿಸುತ್ತದೆ. ತವರು ಮನೆಗೆ ಬರುವ ಹೊಸ ಮದುಮಗಳು, ಕೈಯಲ್ಲಿ ಹೂವಾಗಿ ಅರಳುವ ಬಳೆಗಳು… ಇವುಗಳ ಜೊತೆಗೆ… ನುಗ್ಗೆ ಸೊಪ್ಪು ಕರಿ, ನೇರಳೆಹಣ್ಣು ಇವೆಲ್ಲ ತಿಂದರೆ ಉತ್ತಮ. ಆಷಾಢಕ್ಕೆ ವೈಶಿಷ್ಟತೆ ಬರುತ್ತದೆ. ಆದರೆ ಆಷಾಢದಲ್ಲಿ ನುಗ್ಗೆ ಸೊಪ್ಪು ತಿನ್ನಲು ಹೇಳುತ್ತಾರೆ. ನುಗ್ಗೆ ಸೊಪ್ಪು ತಿನ್ನುವ ಸಂಪ್ರದಾಯ ಈಗಿನದಲ್ಲ.. ಆದರೆ ಮೂಲ ಆಷಾಢ ಮಾಸದಲ್ಲಿ ನುಗ್ಗೆ ಸೊಪ್ಪು ಏಕೆ ತಿನ್ನಬೇಕು.. ಎಂಬ ಪ್ರಶ್ನೆ ಎದುರಾದಾಗ.. ಹಿರಿಯ ಸಂಪ್ರದಾಯದ ಹಿಂದೆ ವೈಜ್ಞಾನಿಕ ಅಂಶ ಅಡಗಿರುವುದು ಕಂಡುಬರುತ್ತದೆ.

ಆಯುರ್ವೇದವು ನುಗ್ಗೆ ಸೊಪ್ಪು/ ನುಗ್ಗೆ ಕಾಯಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ಹೇಳುತ್ತದೆ. ಈ ನುಗ್ಗೆ ಸೊಪ್ಪಿನಲ್ಲಿ ಶಾಖೋತ್ಪನ್ನ ಗುಣವಿದೆ. ಆದ್ದರಿಂದ, ಬೇಸಿಗೆಯಲ್ಲಿ ಈ ನುಗ್ಗೆ ಸೊಪ್ಪು ತಿನ್ನುವುದು ದೇಹದಲ್ಲಿ ಉಷ್ನಾಂಶ ಹೆಚ್ಚಾಗಿ, ಇತರ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ನುಗ್ಗೆ ಸೊಪ್ಪನ್ನು ತಿನ್ನಲು ಉತ್ತಮ ಸಮಯವೆಂದರೆ ಮಳೆಗಾಲ. ಆಷಾಢದಲ್ಲಿ ನೀವು ಕೋಮಲವಾಗಿರುವ ನುಗ್ಗೆ ಸೊಪ್ಪನ್ನು ಯಥೇಚ್ಛವಾಗಿ ಕಾಣಬಹುದು, ತಿನ್ನಬಹುದು.

ನುಗ್ಗೆ ಸೊಪ್ಪು ಹೊರಗಿನ ತಾಪಮಾನಕ್ಕೆ ಅನುಗುಣವಾಗಿ ಆಂತರಿಕ ಶಾಖವನ್ನು ಹೆಚ್ಚಿಸುತ್ತದೆ. ನುಗ್ಗೆ ಕಾಯಿಯಲ್ಲಿರುವ ಪೋಷಕಾಂಶಗಳು ದೇಹವನ್ನು ತಲುಪುತ್ತವೆ. ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಎ ಅಧಿಕವಾಗಿದ್ದು, ಕಣ್ಣಿನ ಸಮಸ್ಯೆ ತಡೆಯುತ್ತದೆ ಎನ್ನುತ್ತಾರೆ ಆಯುರ್ವೇದ ವೈದ್ಯರು.

ನುಗ್ಗೆ ಸೊಪ್ಪು ತಿನ್ನುವುದರಿಂದ ನಮಗೆ ಪ್ರೋಟೀನ್, ವಿಟಮಿನ್ ಎ, ಸಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಪೊಟ್ಯಾಸಿಯಮ್ ಸಿಗುತ್ತದೆ. ನುಗ್ಗೆ ಸೊಪ್ಪನ್ನು ಯಾವುದೇ ರೂಪದಲ್ಲಿಯೂ ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಇದು ಅಸ್ತಮಾ ಮತ್ತು ಶ್ವಾಸಕೋಶದ ಕಾಯಿಲೆಗಳನ್ನೂ ತಡೆಯುತ್ತದೆ. ಇದಲ್ಲದೆ, ಶುಶ್ರೂಷಣೆಯಲ್ಲಿರುವ ಬಾಣಂತಿಯರು ಮತ್ತು ಗರ್ಭಿಣಿಯರಿಗೆ ಇದು ತುಂಬಾ ಒಳ್ಳೆಯದು.

ಹಲವಾರು ಆರೋಗ್ಯಕಾರಿ ಗುಣಗಳನ್ನು ಹೊಂದಿರುವ ನುಗ್ಗೆ ಸೊಪ್ಪು ಸ್ವಲ್ಪ ಕಹಿ ರುಚಿಯನ್ನು ಹೊಂದಿರುವ ಕಾರಣ ನೇರವಾಗಿ ತಿನ್ನುವಂತಿಲ್ಲ. ಹಾಗಾಗಿ ನುಗ್ಗೆ ಸೊಪ್ಪನ್ನು ದಾಲ್ ಮತ್ತು ದಾಲ್ ಪಲಾವ್​ ನಲ್ಲಿ ಬೇಯಿಸಲಾಗುತ್ತದೆ.

To read in Telugu Click here

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?