Mental Health: ಇಷ್ಟಪಟ್ಟವರನ್ನು ಕಳೆದುಕೊಂಡ ದುಃಖದಿಂದ ಹೊರಬರಲು ಸೂತ್ರಗಳು
ನಮಗೆ ಇಷ್ಟವಾದವರನ್ನು ಕಳೆದುಕೊಂಡಾಗ ಆಗುವ ದುಃಖ ಸಾಮಾನ್ಯವಾದದ್ದಲ್ಲ, ವರ್ಷಗಟ್ಟಲೆ ಆ ನೋವು ನಮ್ಮನ್ನು ಕಾಡಿ, ಮಾನಸಿಕವಾಗಿ ದುರ್ಬಲಗೊಳಿಸಿಬಿಡುತ್ತದೆ. ಮಕ್ಕಳು, ಸಂಗಾತಿ, ಪೋಷಕರು ಅಥವಾ ಇನ್ಯಾವುದೇ ಕುಟುಂಬ ಸದಸ್ಯರನ್ನು ಕಳೆದುಕೊಂಡಾಗ ಖಿನ್ನತೆ ಆವರಿಸಿಬಿಡುತ್ತದೆ. ಆದರೆ ಕ್ರಮೇಣವಾಗಿ ಇದೆಲ್ಲದರಿಂದಲೂ ಹೊರಬರಲೇಬೇಕಿದೆ.
ನಮಗೆ ಇಷ್ಟವಾದವರನ್ನು ಕಳೆದುಕೊಂಡಾಗ ಆಗುವ ದುಃಖ ಸಾಮಾನ್ಯವಾದದ್ದಲ್ಲ, ವರ್ಷಗಟ್ಟಲೆ ಆ ನೋವು ನಮ್ಮನ್ನು ಕಾಡಿ, ಮಾನಸಿಕವಾಗಿ ದುರ್ಬಲಗೊಳಿಸಿಬಿಡುತ್ತದೆ. ಮಕ್ಕಳು, ಸಂಗಾತಿ, ಪೋಷಕರು ಅಥವಾ ಇನ್ಯಾವುದೇ ಕುಟುಂಬ ಸದಸ್ಯರನ್ನು ಕಳೆದುಕೊಂಡಾಗ ಖಿನ್ನತೆ ಆವರಿಸಿಬಿಡುತ್ತದೆ. ಆದರೆ ಕ್ರಮೇಣವಾಗಿ ಇದೆಲ್ಲದರಿಂದಲೂ ಹೊರಬರಲೇಬೇಕಿದೆ.
ಬಹಳಷ್ಟು ಮಂದಿ ಸ್ನೇಹಿತರೊಂದಿಗೆ, ಕುಟುಂಬ ಸದಸ್ಯರೊಂದಿಗೆ ಸಮಯ ಕಳೆದು ಸ್ವಲ್ಪ ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಾರೆ, ಇನ್ನೂ ಕೆಲವರು ಒಬ್ಬಂಟಿಯಾಗಿ ಒಂದು ಕೋಣೆಯಲ್ಲಿ ಕುಳಿತುಕೊಂಡು ದುಃಖವನ್ನು ಇಮ್ಮಡಿಗೊಳಿಸಿಕೊಳ್ಳುತ್ತಾರೆ.
ಈ ದುಃಖದಿಂದ ಹೊರಬರುವುದು ಹೇಗೆ ಎಂಬುದರ ಕುರಿತು ಇಲ್ಲಿ ವಿವರ ನೀಡಲಾಗಿದೆ
ವಾಸ್ತವವನ್ನು ಒಪ್ಪಿಕೊಳ್ಳಿ: ಹತ್ತಿರದವರನ್ನು ಕಳೆದುಕೊಂಡಾಗ ಅದೇ ಯೋಚನೆಯಲ್ಲೇ ಉಳಿದುಬಿಡುತ್ತೇವೆ, ಹಳೆಯ ನೆನಪುಗಳನ್ನೇ ಮೆಲುಕುಹಾಕುತ್ತಾ ಜೀವನ ಸಾಗಿಸುತ್ತೇವೆ, ಆದರೆ ಪದೇ ಪದೇ ಅದೇ ನೆನಪು ಕಾಡಿದಾಗ ಅವರಿಲ್ಲದ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ, ಆದರೆ ನೀವು ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು, ಅವರು ಇಲ್ಲ ಎಂಬುದನ್ನು ಒಪ್ಪಿಕೊಂಡು ಜೀವನ ಮುನ್ನಡೆಸಬೇಕು.
ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ: ಇಂತಹ ಸಮಯದಲ್ಲಿ ನಿಮ್ಮ ಆರೋಗ್ಯದ ಕಾಳಜಿವಹಿಸುವುದು ಬಹಳ ಮುಖ್ಯ. ದೈಹಿಕ ಆರೋಗ್ಯದ ಜತೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಪ್ರಮುಖವಾಗುತ್ತದೆ. ಉತ್ತಮ ಆಹಾರವನ್ನು ಸೇವಿಸಿ, ವ್ಯಾಯಾಮ, ಧ್ಯಾನ ಮಾಡಿ.
ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಸಮಯ ಕಳೆಯಿರಿ: ಕುಟುಂಬ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆಯಿರಿ, ಇದು ಬಹು ಸಮಯಗಳವರೆಗೆ ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೆಯೇ ನೀವು ಕಳೆದುಕೊಂಡ ವ್ಯಕ್ತಿಯ ಕುರಿತು ಅವರ ಜತೆ ಮಾತನಾಡಿ.
ಸಂತಸದ ಸಮಯವನ್ನು ನೆನಪಿಸಿಕೊಳ್ಳಿ: ನೋವಿನ ದಿನಗಳನ್ನು ನೆನಪಿಸಿಕೊಳ್ಳುವುದಕ್ಕಿಂತ ಆ ವ್ಯಕ್ತಿಯ ಜತೆ ಕಳೆದ ಸಂತಸದ ಸಮಯವನ್ನು ನೆನಪಿಸಿಕೊಳ್ಳಿ, ಅವರ ನೆನಪಿನಲ್ಲಿ ಚಾರಿಟಿ ತೆರೆಯಿರಿ, ಗಿಡಗಳನ್ನು ನೆಡಿ.
ವೈದ್ಯರನ್ನು ಭೇಟಿಯಾಗಿ: ನಿಮಗೆ ಈ ನೋವಿನಿಂದ ಹೊರಬರಲು ಸಾಧ್ಯವೇ ಆಗುತ್ತಿಲ್ಲ ಎಂದಾದಾಗ ನೀವು ಮನೋ ವೈದ್ಯರನ್ನು ಭೇಟಿಯಾಗಿ ಅವರ ಬಳಿ ಸಲಹೆ ಕೇಳಿದರೆ ಒಳಿತು.
Published On - 12:25 pm, Wed, 6 July 22