
ಏನು! ದಾಸವಾಳದ ಹೂವುಗಳಿಂದ (Hibiscus Flower) ಚಹಾ ಮಾಡುವುದಾ? ಎಂದು ಮೂಗುಮುರಿಯಬೇಡಿ. ಅದರಿಂದ ಆಗುವ ಅನೇಕ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದಿರೆ ನೀವು ಈಗಿಂದೀಗಲೆ ದಾಸವಾಳ ಹೂ ಚಹಾಗೆ ಆರ್ಡರ್ ಮಾಡ್ತೀರಿ! ಈ ಮಾರಿಗೋಲ್ಡ್ ದಾಸವಾಳ ಹೂವಿನಲ್ಲಿರುವ ಸಂಯುಕ್ತಗಳು ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಯನ್ನು ತಡೆಯುತ್ತದೆ. ಅಲ್ಲದೆ ದಾಸವಾಳ ಹೂ ಚಹಾವು (Hibiscus Tea) ನಾವು ಸೇವಿಸುವ ಆಹಾರದಲ್ಲಿನ ಕೊಬ್ಬನ್ನು ಸಣ್ಣ ಕರುಳು ಹೀರಿಕೊಳ್ಳದಂತೆ ತಡೆಯುತ್ತದೆ (Weight Loss). ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿಡುತ್ತದೆ. ಹಸಿವು ಕೂಡ ನಿಯಂತ್ರಣದಲ್ಲಿಡುತ್ತದೆ. ಇನ್ಸುಲಿನ್ ಪ್ರತಿರೋಧ ಕಡಿಮೆಯಾಗುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ತಗ್ಗಿಸುತ್ತದೆ. ಹೃದ್ರೋಗಗಳು ಮತ್ತು ವಯಸ್ಸಾದ ಮೇಲೆ ಚರ್ಮ ಕಳೆಗುಂದುವುದನ್ನು ತಡೆಯುತ್ತದೆ (Health).
ಹಳ್ಳಿಗಳಲ್ಲಿ ನೋಡಿದರೆ.. ಪ್ರತಿ ಮನೆಯಲ್ಲೂ ದಾಸವಾಳದ ಗಿಡ ಇರುವುದು ಖಚಿತ. ಇನ್ನು ಪಟ್ಟಣ ಪ್ರದೇಶಗಳಲ್ಲಿ ಅಲ್ಲೊಂದು ಇಲ್ಲೊಂದು ದಾಸವಾಳದ ಗಿಡಗಳು ಕಾಣಸಿಗುತ್ತವೆ. ಆದರೆ ನಗರಗಳಲ್ಲಿ ಮಾತ್ರ ದಿನದಿಂದ ದಿನಕ್ಕೆ ಇಂತಹ ಹಸಿರಿನ ಗಿಡಗಳು ಕಾಣೆಯಾಗುತ್ತಿವೆ. ಅದೆಲ್ಲ ಹಾಗಿರಲಿ, ನೀವು ತುಂಬಾ ಸುಲಭವಾಗಿ ದೇಹದ ತೂಕವನ್ನು ಕಳೆದುಕೊಳ್ಳಬೇಕು ಅಂದರೆ ಅದು ದಾಸವಾಳದ ಚಹಾದಿಂದ ಸಾಧ್ಯ.
* ಮೊದಲು ಒಂದು ಬೌಲ್ ನಲ್ಲಿ 400 ಮಿಲಿಲೀಟರ್ ನೀರು ಹಾಕಿ ಕುದಿಸಿ. ನೀರು ಸ್ವಲ್ಪ ಕುದಿಯುಯುತ್ತಿದ್ದಂತೆ ಒಲೆ ಆರಿಸಿ. ಅದರಲ್ಲಿ ಒಂದು ಚಮಚ ಒಣಗಿದ ಹೂವುಗಳನ್ನು ಸೇರಿಸಿ ಮತ್ತು 5 ನಿಮಿಷಗಳ ಕಾಲ ಮುಚ್ಚಿಡಿ.
* ಒಣಗಿದ ದಾಸವಾಳದ ಹೂವುಗಳ ಸಾರವನ್ನು ಕುದಿಯುವ ನೀರಿಗೆ ಸೇರಿಸಲಾಗುತ್ತದೆ. 5 ನಿಮಿಷಗಳ ನಂತರ ಮುಚ್ಚಳವನ್ನು ತೆಗೆದುಹಾಕಿ ಮತ್ತು ನೀರನ್ನು ಫಿಲ್ಟರ್ ಮಾಡಿ. ಅಷ್ಟೇ, ದಾಸವಾಳ ಹೂವಿನ ಟೀ ರೆಡಿ.
ಈ ಚಹಾವನ್ನು ದಿನಕ್ಕೆ ಮೂರು ಬಾರಿ ಕುಡಿಯಿರಿ. ಕುಡಿಯುವ ಮೊದಲು ಬಿಸಿ ಮಾಡಿ. ಸಕ್ಕರೆ ಸೇರಿಸಬೇಡಿ. ಬಯಸಿದಲ್ಲಿ ಸ್ವಲ್ಪ ಜೇನುತುಪ್ಪ ಅಥವಾ ಶುದ್ಧ ಬೆಲ್ಲವನ್ನು ಸೇರಿಸಬಹುದು. ಅಧಿಕ ತೂಕ ಹೊಂದಿರುವವರು ಊಟಕ್ಕೆ ಅರ್ಧ ಗಂಟೆ ಮೊದಲು ದಾಸವಾಳದ ಟೀ ಕುಡಿದರೆ ತುಂಬಾ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ನೀವು ಕನಿಷ್ಟ ಎರಡು ವಾರಗಳವರೆಗೆ ಈ ವಿಧಾನವನ್ನು ಅನುಸರಿಸಿದರೆ, ನಿಧಾನವಾಗಿ ನೀವು ಫಲಿತಾಂಶಗಳನ್ನು ಪಡೆಯುತ್ತೀರಿ.
ಹೆಚ್ಚಿನ ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ