Pregnancy Tips: ಗರ್ಭಧರಿಸಿದ ನಂತರ ಲೈಂಗಿಕ ಕ್ರಿಯೆ ನಡೆಸುವುದು ಸೂಕ್ತವೇ, ಇಲ್ಲಿದೆ ವೈದ್ಯರ ಸಲಹೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 23, 2024 | 5:29 PM

ಗರ್ಭಾವಸ್ಥೆ ಎನ್ನುವಂತದ್ದು ಜೀವನದ ಮುಖ್ಯ ಘಟ್ಟಗಳಲ್ಲಿ ಒಂದು. ಈ ಸಮಯದಲ್ಲಿ ಆಕೆಯನ್ನು ಆರೈಕೆ ಮಾಡಿದಷ್ಟು ಸಾಲುವುದಿಲ್ಲ. ಅದರಲ್ಲಿಯೂ ಮೊದಲ ಮೂರು ತಿಂಗಳು ಆಕೆಯ ದೇಹ ಬ್ರೂಣದ ಬೆಳವಣಿಗೆಯ ಜೊತೆಗೆ ಹೊಂದಿಕೊಳ್ಳುವುದರಿಂದ ದೈಹಿಕವಾಗಿ, ಮಾನಸಿಕವಾಗಿ ಅನೇಕ ಬದಲಾವಣೆಗಳಾಗುತ್ತವೆ. ಹಾಗಾಗಿ ಆಕೆಯ ಕಾಳಜಿ ಬಹಳ ಮುಖ್ಯವಾಗುತ್ತದೆ. ಇನ್ನು ಲೈಂಗಿಕತೆಯ ವಿಷಯಕ್ಕೆ ಬರುವುದಾದರೆ ಗರ್ಭಾವಸ್ಥೆಯಲ್ಲಿ ಲೈಂಗಿಕತೆ ನಡೆಸಬಹುದೇ? ಇದು ಸರಿಯೋ? ತಪ್ಪೋ? ಎನ್ನುವ ಪ್ರಶ್ನೆ ಮೂಡುತ್ತದೆ. ಕೆಲವರಲ್ಲಿ ಹಲವಾರು ರೀತಿಯ ಗೊಂದಲಗಳಿರುತ್ತವೆ. ಹಾಗಾದರೆ ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸಬಹುದೇ? ಇಲ್ಲಿದೆ ಮಾಹಿತಿ.

Pregnancy Tips: ಗರ್ಭಧರಿಸಿದ ನಂತರ ಲೈಂಗಿಕ ಕ್ರಿಯೆ ನಡೆಸುವುದು ಸೂಕ್ತವೇ, ಇಲ್ಲಿದೆ ವೈದ್ಯರ ಸಲಹೆ
ಸಾಂದರ್ಭಿಕ ಚಿತ್ರ
Follow us on

ಹೆಣ್ಣಿಗೆ ಗರ್ಭಾವಸ್ಥೆ ಎನ್ನುವಂತದ್ದು ಜೀವನದ ಮುಖ್ಯ ಘಟ್ಟಗಳಲ್ಲಿ ಒಂದು. ಈ ಸಮಯದಲ್ಲಿ ಆಕೆಯನ್ನು ಆರೈಕೆ ಮಾಡಿದಷ್ಟು ಸಾಲುವುದಿಲ್ಲ. ಅದರಲ್ಲಿಯೂ ಮೊದಲ ಮೂರು ತಿಂಗಳು ಆಕೆಯ ದೇಹ ಬ್ರೂಣದ ಬೆಳವಣಿಗೆಯ ಜೊತೆಗೆ ಹೊಂದಿಕೊಳ್ಳುವುದರಿಂದ ದೈಹಿಕವಾಗಿ, ಮಾನಸಿಕವಾಗಿ ಅನೇಕ ಬದಲಾವಣೆಗಳಾಗುತ್ತವೆ. ಹಾಗಾಗಿ ಆಕೆಯ ಕಾಳಜಿ ಬಹಳ ಮುಖ್ಯವಾಗುತ್ತದೆ. ಇನ್ನು ಲೈಂಗಿಕತೆಯ ವಿಷಯಕ್ಕೆ ಬರುವುದಾದರೆ ಗರ್ಭಾವಸ್ಥೆಯಲ್ಲಿ ಲೈಂಗಿಕತೆ ನಡೆಸಬಹುದೇ? ಇದು ಸರಿಯೋ? ತಪ್ಪೋ? ಎನ್ನುವ ಪ್ರಶ್ನೆ ಮೂಡುತ್ತದೆ. ಕೆಲವರಲ್ಲಿ ಹಲವಾರು ರೀತಿಯ ಗೊಂದಲಗಳಿರುತ್ತವೆ. ಹಾಗಾದರೆ ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸಬಹುದೇ? ಇಲ್ಲಿದೆ ಮಾಹಿತಿ.

*ವೈದ್ಯರು ಹೇಳುವ ಪ್ರಕಾರ ಗರ್ಭಧರಿಸಿದ ಮೇಲೆಯೂ ಲೈಂಗಿಕತೆ ನಡೆಸಬಹುದು. 9 ತಿಂಗಳಲ್ಲಿ ಯಾವಾಗ ಬೇಕಾದರೂ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ಆದರೆ ವೈದ್ಯರ ಸಲಹೆ ಮತ್ತು ವಿವಿಧ ಭಂಗಿಗಳಲ್ಲಿ ನಡೆಸಿದರೆ ತಾಯಿ ಮತ್ತು ಮಗು ಯಾರಿಗೂ ಹಾನಿಯಾಗುವುದಿಲ್ಲ.

*ಈಗಾಗಲೇ ಗರ್ಭಪಾತ ಅಥವಾ ಗರ್ಭದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಈ ವೇಳೆ ಮಿಲನಕ್ರಿಯೆ ನಡೆಸುವುದು ಒಳ್ಳೆಯದಲ್ಲ. ಹಾಗಾಗಿ ಎಚ್ಚರಿಕೆ ವಹಿಸಿ.

*ಗರ್ಭಿಣಿ ತಮ್ಮ ಮೊದಲ 16 ವಾರ (4 ತಿಂಗಳು) ಶಾರೀರಿಕ ಸಂಬಂಧ ಇಟ್ಟುಕೊಳ್ಳದಿರುವುದು ಒಳ್ಳೆಯದು. ಸಹಜ ಮಿಲನ ಕ್ರಿಯೆಗಾಗಿ 16 ವಾರದ ಬಳಿಕ ಗರ್ಭಿಣಿ ಆರೋಗ್ಯ ಗಮನಿಸಿ ಮತ್ತು ವೈದ್ಯರ ಸಲಹೆ ಪಡೆದ ಮೇಲೆ ಮಿಲನ ಕ್ರಿಯೆ ನಡೆಸಬಹುದು.

*ಗರ್ಭದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಗರ್ಭಿಣಿ ಹಾಗೂ ಮಗು ಸುರಕ್ಷಿತವಾಗಿರಲು ಲೈಂಗಿಕ ಕ್ರಿಯೆ ಮಾಡದಿರುವುದು ಸೂಕ್ತ.

*ಗರ್ಭಿಣಿ ಗರ್ಭಕಂಠದ ಸಮಸ್ಯೆ ಹೊಂದಿದ್ದರೆ ಅಥವಾ ಈ ಹಿಂದೆ ಮಗುವಿನ ಅಕಾಲಿಕ ಜನನದಂತಹ ಸಂದರ್ಭ ಇಂತಹ ಸಮಸ್ಯೆ ಎದುರಿಸಿದ್ದರೆ ಮತ್ತೆ ಗರ್ಭದರಿಸಿದ ವೇಳೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಬೇಡಿ. ಇದು ಒಳ್ಳೆಯದಲ್ಲ.

*ಯೋನಿಯಲ್ಲಿ ನೀರಿನ ಡಿಸ್ಚಾರ್ಜ್‌ ಹೆಚ್ಚಿರುವ ಸಂದರ್ಭದಲ್ಲಿ ಅಥವಾ ಜರಾಯುವಿನಲ್ಲಿ ಸಮಸ್ಯೆ ಇದ್ದಾಗ ಗರ್ಭಧರಿಸಿದಾಗ ಲೈಂಗಿಕ ಕ್ರಿಯೆ ಒಳ್ಳೆಯದಲ್ಲ.

ಇದನ್ನೂ ಓದಿ: ಲೈಂಗಿಕ ಆಸಕ್ತಿಗಾಗಿ ಈ ಆಹಾರ ಪದಾರ್ಥ ಸೇವನೆ ಮಾಡಿ

*ಯಾವ ತಿಂಗಳಿನಲ್ಲಾದರೂ ಲೈಂಗಿಕ ಕ್ರಿಯೆ ನಡೆಸಬಹುದು. ಆದರೆ ಭಂಗಿಗಳ ಅರಿವಿರಬೇಕು. ಏಕೆಂದರೆ ಮಗುವಿಗೆ ಮತ್ತು ತಾಯಿಗೆ ಕಷ್ಟವಾಗದ ರೀತಿಯಲ್ಲಿ ಇರುವುದು ಮುಖ್ಯವಾಗಿರುತ್ತದೆ. ಹಾಗಾಗಿ ಈ ಬಗ್ಗೆ ವೈದ್ಯರ ಸಲಹೆ ಪಡೆದುಕೊಳ್ಳಿ.

*ಗರ್ಭಾವಸ್ಥೆಯ ಲೈಂಗಿಕ್ರಿಯೆ ನಡೆಸುವುದರಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳಿವೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಲೈಂಗಿಕತೆಯು ಪ್ರಮುಖ ಪಾತ್ರ ವಹಿಸುತ್ತದೆ. ಗರ್ಭಾವಸ್ಥೆಯಲ್ಲಿ ಲೈಂಗಿಕತೆಯು ಒತ್ತಡದ ಮಟ್ಟವನ್ನು ಕಡಿಮೆ ಮಾಡುವ ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ, ಇದು ಮಗುವಿಗೆ ಮತ್ತು ತಾಯಿಗೆ ಆರೋಗ್ಯಕರ ವಾತಾವರಣವನ್ನು ಒದಗಿಸುತ್ತದೆ.

*ಯಾವುದೇ ಪೂರ್ವಪರ ಆರೋಗ್ಯ ಸಮಸ್ಯೆಗಳಿಲ್ಲದಿದ್ದರೆ ಲೈಂಗಿಕ ಕ್ರಿಯೆಯನ್ನು ನಡೆಸಲು ತೊಂದರೆಯಿಲ್ಲ. ಯಾವುದಕ್ಕೂ ಗರ್ಭಧಾರಣೆಯ ನಂತರ ಲೈಂಗಿಕ ಕ್ರಿಯೆ ನಡೆಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ